IND vs NZ: ರೋಹಿತ್ ವೃತ್ತಿಜೀವನದಲ್ಲಿ ಅಳಿಸಲಾಗದ ಗುರುತು; ಭಾರತ ಟೆಸ್ಟ್ ಇತಿಹಾಸದಲ್ಲಿ ಮೊದಲ ಕಳಪೆ ನಾಯಕ!
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Nz: ರೋಹಿತ್ ವೃತ್ತಿಜೀವನದಲ್ಲಿ ಅಳಿಸಲಾಗದ ಗುರುತು; ಭಾರತ ಟೆಸ್ಟ್ ಇತಿಹಾಸದಲ್ಲಿ ಮೊದಲ ಕಳಪೆ ನಾಯಕ!

IND vs NZ: ರೋಹಿತ್ ವೃತ್ತಿಜೀವನದಲ್ಲಿ ಅಳಿಸಲಾಗದ ಗುರುತು; ಭಾರತ ಟೆಸ್ಟ್ ಇತಿಹಾಸದಲ್ಲಿ ಮೊದಲ ಕಳಪೆ ನಾಯಕ!

ನ್ಯೂಜಿಲೆಂಡ್ ತಂಡ 1955ರಿಂದ ಭಾರತ ಪ್ರವಾಸ ಮಾಡುತ್ತಿದೆ. ಅನೇಕ ಭಾರತೀಯ ನಾಯಕರು ಬಂದು ಹೋಗಿದ್ದಾರೆ. ಆದರೆ, ಈವರೆಗೆ ಸರಣಿಯನ್ನು ಸೋತಿಲ್ಲ. ಈ ಪಂದ್ಯದಲ್ಲಿ ಭಾರತ ತಂಡ ಸೋತರೆ ಇದು ರೋಹಿತ್ ವೃತ್ತಿ ಜೀವನಕ್ಕೆ ದೊಡ್ಡ ಕಳಂಕವಾಗಲಿದೆ. (ವರದಿ: ವಿನಯ್ ಭಟ್.)

ರೋಹಿತ್ ವೃತ್ತಿಜೀವನದಲ್ಲಿ ಅಳಿಸಲಾಗದ ಗುರುತು; ಭಾರತ ಟೆಸ್ಟ್ ಇತಿಹಾಸದಲ್ಲಿ ಮೊದಲ ಕಳಪೆ ನಾಯಕ
ರೋಹಿತ್ ವೃತ್ತಿಜೀವನದಲ್ಲಿ ಅಳಿಸಲಾಗದ ಗುರುತು; ಭಾರತ ಟೆಸ್ಟ್ ಇತಿಹಾಸದಲ್ಲಿ ಮೊದಲ ಕಳಪೆ ನಾಯಕ (AFP)

ಪುಣೆ: ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಸೋತ ನಂತರ ಟೀಮ್ ಇಂಡಿಯಾ ಒತ್ತಡದಲ್ಲಿದೆ. ಭಾರತ ತಂಡ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಪ್ರವೇಶಿಸುವ ಮೊದಲು ಪ್ಲೇಯಿಂಗ್ ಇಲೆವೆನ್​ನಲ್ಲಿ ಮೂರು ಮಹತ್ವದ ಬದಲಾವಣೆಗಳನ್ನು ಮಾಡಿತು. ಆದರೆ, ಇದು ಬ್ಯಾಟಿಂಗ್ ವಿಭಾಗದ ಮೇಲೆ ಪರಿಣಾಮ ಬೀಳಲಿಲ್ಲ. ಇದೀಗ ಪುಣೆಯಲ್ಲೂ ನ್ಯೂಜಿಲೆಂಡ್ 69 ವರ್ಷಗಳಲ್ಲಿ ಮಾಡದ ಸಾಧನೆಯತ್ತ ಸಾಗುತ್ತಿದೆ. ಸದ್ಯ ಕಿವೀಸ್‌ ವಿರುದ್ಧ ಗೆಲ್ಲಲು ಭಾರತಕ್ಕೆ 359 ರನ್‌ಗಳ ಗುರಿ ಸಿಕ್ಕಿದೆ. ಇದು ದೂರದ ಬೆಟ್ಟದಂತಿದೆ.

ಎರಡನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮೂರು ವರ್ಷಗಳ ಬಳಿಕ ಟೀಮ್ ಇಂಡಿಯಾ ಪರವಾಗಿ ಟೆಸ್ಟ್ ಆಡಲು ಬಂದಿದ್ದ ವಾಷಿಂಗ್ಟನ್ ಸುಂದರ್ ಅದ್ಭುತ ಬೌಲಿಂಗ್ ಮಾಡಿ ಏಳು ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು. ಟೀಮ್ ಇಂಡಿಯಾ ಅತ್ಯುತ್ತಮ ಬೌಲಿಂಗ್‌ನಿಂದ ನ್ಯೂಜಿಲೆಂಡ್‌‌ ತಂಡವನ್ನು 259 ರನ್‌ಗಳಿಗೆ ಸೀಮಿತಗೊಳಿಸಿತು. ಆದರೆ, ಬ್ಯಾಟ್ಸ್‌ಮನ್‌ಗಳ ವಿಷಯಕ್ಕೆ ಬಂದರೆ ಅದು ರೋಹಿತ್‌ ಆಗಿರಲಿ ಅಥವಾ ರನ್‌ ಮಷಿನ್‌ ಕೊಹ್ಲಿಯೇ ಆಗಿರಲಿ ಯಾರೂ ಘನತೆಗೆ ತಕ್ಕಂತೆ ಆಡಲಿಲ್ಲ. ಪ್ರವಾಸಿ ತಂಡದ ಸ್ಪಿನ್ನರ್‌ಗಳು ಇಡೀ ಭಾರತ ತಂಡವನ್ನು 156 ರನ್‌ಗಳಿಗೆ ನಿರ್ಬಂಧಿಸಿದರು.

ಎರಡನೇ ದಿನವೂ ಮೇಲುಗೈ

ಎರಡನೇ ದಿನವೂ ನ್ಯೂಜಿಲೆಂಡ್ ತನ್ನ ಪ್ರಾಬಲ್ಯವನ್ನು ಮುಂದುವರೆಸಿತು. ನಾಯಕ ಟಾಮ್ ಲ್ಯಾಥಮ್ 86 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ಟೀಮ್ ಇಂಡಿಯಾ ಮೇಲೆ ಹೆಚ್ಚಿನ ಹೊರೆ ಹಾಕಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಕಿವೀಸ್ 255 ರನ್‌ ಗಳಿಸಿದೆ. ಕೇವಲ 5 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿದೆ. ಭಾರತಕ್ಕೆ 359 ರನ್‌ಗಳ ಗುರಿ ನೀಡಿದೆ. ಈ ಪಂದ್ಯದಲ್ಲೂ ಟೀಮ್ ಇಂಡಿಯಾ ಸೋತರೆ, ನ್ಯೂಜಿಲೆಂಡ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಲಿದೆ. ಈ ಗೆಲುವಿನೊಂದಿಗೆ ಕಿವೀಸ್ ತಂಡ ಇತಿಹಾಸ ಸೃಷ್ಟಿಸಲಿದೆ.

ಟೀಮ್ ಇಂಡಿಯಾ ಪುನರಾಗಮನ ಬಹುತೇಕ ಅಸಾಧ್ಯ

ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 103 ರನ್‌ಗಳ ಮುನ್ನಡೆ ಸಾಧಿಸಿದೆ. ಪಂದ್ಯ ಗೆಲ್ಲಲು ಪುಣೆಯ ಟರ್ನಿಂಗ್ ಪಿಚ್‌ನಲ್ಲಿ 200 ರನ್ ಗಳ ಗುರಿ ಸಾಕು. ನ್ಯೂಜಿಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 200 ರನ್ ಗಳಿಸಿದರೂ, ಭಾರತಕ್ಕೆ ಗೆಲ್ಲಲು ಕಷ್ಟವಾಗುವಂತಿತ್ತು. ಪುಣೆಯ ಟರ್ನಿಂಗ್ ಪಿಚ್‌ನಲ್ಲಿ 250 ರಿಂದ 300 ರನ್ ಗಳ ಗುರಿ ಸಾಧಿಸುವುದೆಂದರೆ ಬೆಟ್ಟವನ್ನೇರಿದಂತೆ. ಇಲ್ಲಿಂದ ಪುನರಾಗಮನವು ಟೀಮ್ ಇಂಡಿಯಾಗೆ ಬಹುತೇಕ ಅಸಾಧ್ಯವಾಗಿದೆ.

ರೋಹಿತ್ ನಾಯಕತ್ವಕ್ಕೆ ಕಳಂಕ

ಬೆಂಗಳೂರು ಟೆಸ್ಟ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಗುಮಾನಿ ಎಬ್ಬಿತ್ತು. ಭಾರತದ ಪಿಚ್‌ನಲ್ಲಿ ಅತಿ ಕಡಿಮೆ ಸ್ಕೋರ್ 46 ಸೇರಿದಂತೆ ಹಲವಾರು ಅವಮಾನಕರ ದಾಖಲೆಗಳು ದಾಖಲಾಗಿವೆ. ಇನ್ನು ಈ ಸರಣಿಯಲ್ಲಿ ಟೀಮ್ ಇಂಡಿಯಾ ಸೋತರೆ ಹಿಟ್‌ಮ್ಯಾನ್ ನಾಯಕತ್ವ ಇನ್ನಷ್ಟು ಕಳೆಗುಂದಲಿದೆ. ನ್ಯೂಜಿಲೆಂಡ್ ತಂಡ 1955ರಿಂದ ಭಾರತ ಪ್ರವಾಸ ಮಾಡುತ್ತಿದೆ. ಅನೇಕ ಭಾರತೀಯ ನಾಯಕರು ಬಂದು ಹೋಗಿದ್ದಾರೆ. ಆದರೆ, ಈವರೆಗೆ ಸರಣಿಯನ್ನು ಸೋತಿಲ್ಲ. ಈ ಪಂದ್ಯದಲ್ಲಿ ಭಾರತ ತಂಡ ಸೋತರೆ ಇದು ರೋಹಿತ್ ವೃತ್ತಿ ಜೀವನಕ್ಕೆ ದೊಡ್ಡ ಕಳಂಕವಾಗಲಿದೆ.

Whats_app_banner