ಕನ್ನಡ ಸುದ್ದಿ  /  Cricket  /  Our Journey Has Been Full Of Question How Gautam Gambhir Reacted To Ms Dhoni Retirement In 2020 Gambhir Praises Mahi Prs

ಧೋನಿಯನ್ನು ಹಾಡಿ ಹೊಗಳಿದ ಗೌತಮ್ ಗಂಭೀರ್; ಮಾಹಿಯನ್ನು ಸದಾ ಟೀಕಿಸುತ್ತಿದ್ದ ಗೌತಿ ಪೋಸ್ಟ್ ಕಂಡು ಫ್ಯಾನ್ಸ್ ಅಚ್ಚರಿ

Gautam Gambhir on MS Dhoni : ಒಂದಿಲ್ಲೊಂದು ವಿಷಯಕ್ಕೆ ಎಂಎಸ್ ಧೋನಿ ಅವರನ್ನು ಸದಾ ಟೀಕಿಸುತ್ತಿದ್ದ ಗೌತಮ್ ಗಂಭೀರ್ ಇದೀಗ ಕೊಂಡಾಡುವ ಪೋಸ್ಟ್​ವೊಂದನ್ನು ಹಾಕಿದ್ದಾರೆ.

ಧೋನಿಯನ್ನು ಹಾಡಿ ಹೊಗಳಿದ ಗೌತಮ್ ಗಂಭೀರ್
ಧೋನಿಯನ್ನು ಹಾಡಿ ಹೊಗಳಿದ ಗೌತಮ್ ಗಂಭೀರ್

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರನ್ನು ಸದಾ ಟೀಕಿಸುತ್ತಿದ್ದ ಮಾಜಿ ಕ್ರಿಕೆಟಗ ಗೌತಮ್ ಗಂಭೀರ್ (Gautam Gambhir) ಈಗ ಬಹುಪರಾಕ್ ಹೇಳಿದ್ದಾರೆ. ಆಗಸ್ಟ್ 15, 2020ರಂದು ತಮ್ಮ ಸುಪ್ರಸಿದ್ಧ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದರು. ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮೂಲಕ ಆಟದಿಂದ ನಿವೃತ್ತಿ ಘೋಷಿಸಿದ್ದರು. ಧೋನಿ ನಿವೃತ್ತಿ ಅತ್ಯಂತ ದೊಡ್ಡ ಚರ್ಚೆಯಾಗಿತ್ತು.

ಧೋನಿಯನ್ನು ಹೊಗಳಿದ ಗಂಭೀರ್​

ಭಾರತೀಯ ದಂತಕಥೆಗೆ ತಮ್ಮ ಶುಭಾಶಯ ಕಳುಹಿಸಿದ ಮಾಜಿ ಸಹ ಆಟಗಾರರಲ್ಲಿ ಗೌತಮ್ ಗಂಭೀರ್ ಕೂಡ ಒಬ್ಬರು. ಭಾರತ ಎ ಕ್ರಿಕೆಟ್ ತಂಡದಲ್ಲಿದ್ದ ಸಮಯದಲ್ಲಿ ಧೋನಿಯೊಂದಿಗೆ ಡ್ರೆಸ್ಸಿಂಗ್ ರೂಮ್​ ಹಂಚಿಕೊಂಡಿದ್ದನ್ನು ನೆನಪಿಸಿಕೊಂಡಿರುವ ಗೌತಮ್ ಗಂಭೀರ್, ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ. ಅಲ್ಲದೆ, ಮೂರು ಐಸಿಸಿ ಟ್ರೋಫಿ ಗೆದ್ದ ಧೋನಿಯನ್ನು ಹಾಡಿ ಹೊಗಳಿದ್ದಾರೆ.

ಧೋನಿ ಅವರ ಕುರಿತು ಗಂಭೀರ್ ಅವರ ಈ ಪೋಸ್ಟ್​​ ಕಂಡು ಕ್ರಿಕೆಟ್ ಪ್ರಿಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಂದು ಬಾರಿಯೂ ಮಾಹಿಯನ್ನು ಹೊಗಳದ ಗೌತಿ ಈ ಗುಣಗಾನ ಮಾಡಿದ್ದಾರೆ. ತಮ್ಮಿಬ್ಬರ ಜರ್ನಿಯನ್ನು ಇದೇ ವೇಳೆ ನೆನಪಿಸಿಕೊಂಡಿದ್ದಾರೆ. ಆದರೆ ಈ ಹಿಂದೆ ಧೋನಿಯನ್ನು ಸಾಕಷ್ಟು ಬಹಿರಂಗವಾಗಿಯೇ ಬಾರಿ ಟೀಕಿಸಿದ್ದಾರೆ. ಹಾಗಾದರೆ ಮಾಜಿ ಕ್ಯಾಪ್ಟನ್ ಬಗ್ಗೆ ಮಾಜಿ ಆಟಗಾರ ಹೇಳಿದ್ದೇನು? ಬನ್ನಿ ನೋಡೋಣ.

ಪೋಸ್ಟ್​ನಲ್ಲಿ ಏನಿದೆ?

'ಇಂಡಿಯಾ ಎ' ನಿಂದ 'ದಿ ಇಂಡಿಯಾ' ವರೆಗೆ ನಮ್ಮ ಪ್ರಯಾಣವು ಪ್ರಶ್ನಾರ್ಥಕ ಚಿಹ್ನೆಗಳು, ಅಲ್ಪವಿರಾಮಗಳು, ಬ್ಲ್ಯಾಂಕ್ಸ್ ಮತ್ತು ಆಶ್ಚರ್ಯಸೂಚಕಗಳಿಂದ ತುಂಬಿತ್ತು. ಈಗ ನೀವು ನಿಮ್ಮ ಅಧ್ಯಾಯಕ್ಕೆ ಪೂರ್ಣವಿರಾಮ ಹಾಕುತ್ತಿದ್ದಂತೆ, ಹೊಸ ಹಂತವು ರೋಚಕವಾಗಿದೆ. ಇಲ್ಲಿ ಡಿಆರ್​​ಎಸ್​ಗೆ ಯಾವುದೇ ಮಿತಿ ಇಲ್ಲ ಎಂದು ನಾನು ನಿಮಗೆ ಅನುಭವದಿಂದ ಹೇಳಬಲ್ಲೆ! ಚೆನ್ನಾಗಿ ಆಡಿದೆ ಎಂಎಸ್ ಧೋನಿ ಎಂದು ಗೌತಮ್ ಗಂಭೀರ್​ ಬರೆದಿದ್ದಾರೆ.

ಹಿಂದೆ ಧೋನಿಯನ್ನು ಟೀಕಿಸಿದ್ದ ಗಂಭೀರ್​

2011ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಶತಕವನ್ನು ತಪ್ಪಿಸಿದ್ದೇ ಧೋನಿ ಎಂದು ಹೇಳಿದ್ದ ಗಂಭೀರ್, ನನ್ನ ಮತ್ತು ಅವರ ನಡುವೆ ತುಂಬಾ ಭಿನ್ನಾಭಿಪ್ರಾಯಗಳಿವೆ ಎಂದಿದ್ದರು. ಅಲ್ಲದೆ, ವಿಶ್ವಕಪ್ ಗೆಲ್ಲಿಸಿದ್ದು ಧೋನಿ ಒಬ್ಬರೇ ಅಲ್ಲ, ತಂಡದ ಎಲ್ಲರು. ಒಬ್ಬರಿಂದ ವಿಶ್ವಕಪ್ ಗೆಲ್ಲೋಕೆ ಆಗುತ್ತಾ ಹೇಳಿ ಎಂದು ಗಂಭೀರ್ ಹೇಳಿದ್ದರು.

ಭಾರತ-ಎ ಪರ ಆಡಿದ್ದ ಇಬ್ಬರು

ಭಾರತಕ್ಕೆ ಪದಾರ್ಪಣೆ ಮಾಡುವ ಮೊದಲು ಗಂಭೀರ್ ಮತ್ತು ಧೋನಿ ಭಾರತ ಎ ಪರ ಒಟ್ಟಿಗೆ ಆಡಿದ್ದರು. ಗಂಭೀರ್ ಏಪ್ರಿಲ್ 2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆದರೆ, ಧೋನಿ 2004ರಲ್ಲಿ ತಮ್ಮ ಮೊದಲ ಭಾರತ ಕ್ಯಾಪ್ ಪಡೆದರು. ಇಬ್ಬರು ಸಹ ಅದ್ಭುತ ಪ್ರದರ್ಶನ ನೀಡುವ ಮೂಲಕ ಮುಂದಿನ ವರ್ಷಗಳಲ್ಲಿ ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.

2007ರಲ್ಲಿ ನಾಯಕನಾಗಿ ನೇಮಕ

2007ರ ಟಿ20 ವಿಶ್ವಕಪ್‌ ಟೂರ್ನಿಗೆ ಧೋನಿ ಭಾರತದ ಚುಟುಕು ಕ್ರಿಕೆಟ್ ತಂಡದ ನಾಯಕನಾಗಿ ನೇಮಕಗೊಂಡರು. ಆ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ. ತದನಂತರ ಏಕದಿನ ನಾಯಕರಾಗಿಯೂ ಅಧಿಕಾರ ವಹಿಸಿಕೊಂಡರು. 2008ರಲ್ಲಿ ಅನಿಲ್ ಕುಂಬ್ಳೆ ನಿವೃತ್ತಿಯ ನಂತರ ಭಾರತದ ಟೆಸ್ಟ್ ನಾಯಕರಾಗಿ ಅಧಿಕಾರಕ್ಕೆ ಬಂದರು. ಧೋನಿ ನಾಯಕತ್ವದಲ್ಲಿ ಭಾರತದ ಪರ ಗಂಭೀರ್, ದೀರ್ಘಕಾಲ ಆಡಿದ್ದರು.

ಗಂಭೀರ್ ಪಾತ್ರ ದೊಡ್ಡದು

ಅಲ್ಲದೆ, ಧೋನಿ ಉಪನಾಯಕನಾಗಿಯೂ ಗಂಭೀರ್​ ಸೇವೆ ಸಲ್ಲಿಸಿದ್ದರು. 2007ರ ಟಿ20 ವಿಶ್ವಕಪ್​ ಮತ್ತು 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಗಂಭೀರ್ ಪ್ರಮುಖ ಪಾತ್ರವಹಿಸಿದ್ದರು. ಗಂಭೀರ್ ಕೊನೆಯದಾಗಿ 2012 ರಲ್ಲಿ ಧೋನಿ ನಾಯಕತ್ವದಲ್ಲಿ ಆಡಿದ್ದರು. 2016ರಲ್ಲಿ ಗಂಭೀರ್ ತಂಡಕ್ಕೆ ಮರಳಿದಾಗ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕರಾಗಿದ್ದರು. ಗೌತಿ 2018 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು.

IPL_Entry_Point