ಕನ್ನಡ ಸುದ್ದಿ  /  ಕ್ರಿಕೆಟ್  /  25 ಡಾಲರ್ ಪಡೆದು ಅಮೆರಿಕದಲ್ಲಿ ಅಭಿಮಾನಿಗಳಿಗೆ ಡಿನ್ನರ್ ಆಯೋಜಿಸಿದ ಪಾಕಿಸ್ತಾನ; ತನ್ನವರಿಂದಲೇ ಪಿಸಿಬಿ ಟ್ರೋಲ್

25 ಡಾಲರ್ ಪಡೆದು ಅಮೆರಿಕದಲ್ಲಿ ಅಭಿಮಾನಿಗಳಿಗೆ ಡಿನ್ನರ್ ಆಯೋಜಿಸಿದ ಪಾಕಿಸ್ತಾನ; ತನ್ನವರಿಂದಲೇ ಪಿಸಿಬಿ ಟ್ರೋಲ್

ಪಾಕಿಸ್ತಾನ ತಂಡದಲ್ಲಿ ಆಗಾಗ ಖಾಸಗಿ ಭೋಜನ ಕೂಟಗಳು ಸಾಮಾನ್ಯವಾಗುತ್ತಿದೆ.‌ ಅಭಿಮಾನಿಗಳಿಂದ ಹಣ ಪಡೆದು ಡಿನ್ನರ್‌ ಆಯೋಜಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಹೇಳಿದ್ದಾರೆ.

25 ಡಾಲರ್ ಪಡೆದು ಅಮೆರಿಕದಲ್ಲಿ ಅಭಿಮಾನಿಗಳಿಗೆ ಡಿನ್ನರ್ ಆಯೋಜಿಸಿದ ಪಾಕಿಸ್ತಾನ
25 ಡಾಲರ್ ಪಡೆದು ಅಮೆರಿಕದಲ್ಲಿ ಅಭಿಮಾನಿಗಳಿಗೆ ಡಿನ್ನರ್ ಆಯೋಜಿಸಿದ ಪಾಕಿಸ್ತಾನ (PCB Image)

ಪಾಕಿಸ್ತಾನ ಕ್ರಿಕೆಟ್ ತಂಡ (Pakistan cricket team) ಹಾಗೂ ಪಿಸಿಬಿ ವಿರುದ್ಧ, ಪಾಕಿಸ್ತಾನದಿಂದಲೇ ಭಾರಿ ಆಕ್ರೋಶ ಹಾಗೂ ಟೀಕೆ ವ್ಯಕ್ತವಾಗುತ್ತಿದೆ. ಟಿ20 ವಿಶ್ವಕಪ್‌ನಲ್ಲಿ ಆಡುವ ಸಲುವಾಗಿ ಅಮೆರಿಕಕ್ಕೆ ತೆರಳಿರುವ ತಂಡವು, ಅಲ್ಲಿ ಖಾಸಗಿ ಔತಣ ಕೂಡಾ ಆಯೋಜಿಸಿ ತಮ್ಮದೇ ದೇಶದ ಜನತೆಯಿಂದ ಟೀಕೆಗೆ ಗುರಿಯಾಗಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಅಭಿಮಾನಿಗಳಿಗೆ ಖಾಸಗಿಯಾಗಿ ಪಿಸಿಬಿ ಔತಣಕೂಟ ಆಯೋಜಿಸಿದೆ. ಹಾಗಂತಾ ಇದು ಉಚಿತ ಔತಣ ಕೂಟವಾಗಿದ್ದರೆ ಟೀಕೆ ಇರುತ್ತಿರಲಿಲ್ಲವೇನೋ. ಬದಲಾಗಿ ಪ್ರತಿಯೊಬ್ಬ ಅಭಿಮಾನಿಗೂ ತಲಾ 25 ಡಾಲರ್‌ನಂತೆ ಚಾರ್ಜ್‌ ಮಾಡಿದೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಟ್ರೆಂಡಿಂಗ್​ ಸುದ್ದಿ

ಅಮೆರಿಕ ನೆಲದಲ್ಲಿ ಪಾಕ್‌ ಇನ್ನೂ ತನ್ನ ವಿಶ್ವಕಪ್‌ ಅಭಿಯಾನ ಆರಂಭಿಸಿಲ್ಲ. ಜೂನ್‌ 6ರಂದು ತಂಡ ಯುಎಸ್ಎ ವಿರುದ್ಧದ ಆರಂಭಿಕ ಪಂದ್ಯವಾಡಲಿದೆ. ಅದಕ್ಕೂ ಮುಂಚಿತವಾಗಿ ಈ ವಿವಾದ ಮುನ್ನೆಲೆಗೆ ಬಂದಿದ್ದು, ಪಾಕಿಸ್ತಾನ ತಂಡಕ್ಕೆ ಭಾರಿ ಹೊಡೆತ ನೀಡಿದೆ. ಮಾಜಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ರಶೀದ್ ಲತೀಫ್‌, ಅಭಿಮಾನಿಗಳಿಗೆ 25 ಡಾಲರ್‌ ಶುಲ್ಕ ಹಾಕಿ ಖಾಸಗಿ ಔತಣಕೂಟವನ್ನು ಆಯೋಜಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಲತೀಫ್ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಯುಎಸ್ಎಯಲ್ಲಿರುವ ಅಭಿಮಾನಿಗಳನ್ನು ಪಾಕಿಸ್ತಾನಿ ಆಟಗಾರರನ್ನು ಭೇಟಿಯಾಗಲು ಖಾಸಗಿ ಔತಣಕೂಟಕ್ಕೆ ಆಹ್ವಾನಿಸಲಾಗಿದೆ. ಇದು ಉಚಿತ ಅಥವಾ ಚಾರಿಟಿ ಕಾರ್ಯಕ್ರಮ ಅಲ್ಲ ಎಂದು ಅವರು ಟೀಕಿಸಿದ್ದಾರೆ. ಇಂಥಾ ಖಾಸಗಿ ಔತಣಕೂಟವನ್ನು ಆಯೋಜಿಸುವುದು ಪಿಸಿಬಿಯ ಭಯಾನಕ ಆಲೋಚನೆ ಎಂದು ಅವರು ಜರಿದಿದ್ದಾರೆ.

“ಅಧಿಕೃತ ಡಿನ್ನರ್‌ ಆಯೋಜಿಸುವುದು ಸಾಮಾನ್ಯ. ಆದರೆ ಇದು ಖಾಸಗಿ ಔತಣ ಕೂಟ. ಇದು ನಿಜಕ್ಕೂ ಭಯಾನಕವಾಗಿದೆ. ಅಂದರೆ ಅಭಿಮಾನಿಗಳು ನಮ್ಮ ಆಟಗಾರರನ್ನು 25 ಡಾಲರ್ ಕೊಟ್ಟು ಭೇಟಿಯಾದರು. ದೇವರೇ, ಆಟಗಾರರು ಹಣ ಮಾಡುತ್ತಿದ್ದಾರೆ ಎಂದು ಜನರು ಹೇಳಿರಬಹುದು” ಎಂದು ಲತೀಫ್ ವಿಡಿಯೋದಲ್ಲಿ ಹೇಳಿದ್ದಾರೆ.

ಪಿಸಿಬಿ ಇಂಥ ತಪ್ಪು ಮಾಡಬರದು

ಹಣಸಂಗ್ರಹ ಕಾರ್ಯಕ್ರಮ ಅಥವಾ ಚಾರಿಟಿ ಡಿನ್ನರ್‌ನಲ್ಲಿ ಭಾಗವಹಿಸುವುದು ವಿಭಿನ್ನ ವಿಷಯ. ಆದರೆ 25 ಡಾಲರ್‌ಗೆ (ಅಂದಾಜು 2084 ರೂಪಾಯಿ) ಅಭಿಮಾನಿಗಳನ್ನು ಭೇಟಿ ಮಾಡುವುದು ಪಿಸಿಬಿಯ ತಪ್ಪು ನಿರ್ಧಾರ ಎಂದು ಹಿರಿಯ ವಿಕೆಟ್ ಕೀಪರ್ ಸಲಹೆ ನೀಡಿದ್ದಾರೆ. ವಾಣಿಜ್ಯ ದೃಷ್ಟಿಕೋನವಿಲ್ಲದೆ ಡಿನ್ನರ್‌ ಮಾಡಬಹುದು. ಚಾರಿಟಿ ಡಿನ್ನರ್ ಮತ್ತು ಫಂಡ್ ರೈಸ್‌ ಮಾಡಬಹುದು. ಆದರೆ ಇದು ನಿಧಿಸಂಗ್ರಹವಾಗಲಿ ಅಥವಾ ಚಾರಿಟಿ ಡಿನ್ನರ್ ಆಗಲಿಅಲ್ಲ. ಇದು ಪಾಕಿಸ್ತಾನ ಮತ್ತು ಪಾಕಿಸ್ತಾನ ಕ್ರಿಕೆಟ್ ಹೆಸರಿನ ಖಾಸಗಿ ಸಮಾರಂಭ. ಇಂಥ ತಪ್ಪು ಮಾಡಬಾರದು" ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನ ತಂಡವು ಸತತ ಸೋಲಿನೊಂದಿಗೆ ವಿಶ್ವಕಪ್‌ ಟೂರ್ನಿಗೆ ಎಂಟ್ರಿ ಕೊಟ್ಟಿದೆ. ಇಂಗ್ಲೆಂಡ್ ವಿರುದ್ಧ 0-2 ಅಂತರದ ಸರಣಿ ಸೋತು ತಂಡ ನ್ಯೂಯಾರ್ಕ್‌ಗೆ ಪ್ರಯಾಣಿಸಿತ್ತು. ಅದಕ್ಕೂ ಹಿಂದೆ ಐರ್ಲೆಂಡ್ ವಿರುದ್ಧವೂ ಟಿ20 ಪಂದ್ಯವನ್ನು ಸೋತಿತ್ತು. ಸದ್ಯ ತಂಡದ ಆತ್ಮವಿಶ್ವಾಸ ಕುಗ್ಗಿದ್ದು, ಟೂರ್ನಿಯಲ್ಲಿ ತಂಡದ ಪ್ರದರ್ಶನ ಕುತೂಹಲ ಮೂಡಿಸಿದೆ.

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ