ಕನ್ನಡ ಸುದ್ದಿ  /  ಕ್ರಿಕೆಟ್  /  ಜೊತೆಯಾಗಿ 5 ವರ್ಷ ಪೂರೈಸಿದ ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್; ಕೇಕ್ ಕತ್ತರಿಸಿ ಸಂಭ್ರಮಿಸಿದ ಆರ್‌ಸಿಬಿ ನಾಯಕಿ

ಜೊತೆಯಾಗಿ 5 ವರ್ಷ ಪೂರೈಸಿದ ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್; ಕೇಕ್ ಕತ್ತರಿಸಿ ಸಂಭ್ರಮಿಸಿದ ಆರ್‌ಸಿಬಿ ನಾಯಕಿ

ಆರ್‌ಸಿಬಿ ವನಿತೆಯರ ತಂಡದ ನಾಯಕಿ ಸ್ಮೃತಿ ಮಂಧಾನ ಹಾಗೂ ಪಲಾಶ್ ಮುಚ್ಚಲ್ ವಿಶೇಷ ಸಂಭ್ರಮಾಚರಣೆ ನಡೆಸಿದ್ದಾರೆ. ಸ್ಮೃತಿ ಕೇಕ್‌ ಕತ್ತರಿಸುವ ಫೋಟೋಗಳನ್ನು ಪಲಾಶ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಜೊತೆಯಾಗಿ 5 ವರ್ಷ ಪೂರೈಸಿದ ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್
ಜೊತೆಯಾಗಿ 5 ವರ್ಷ ಪೂರೈಸಿದ ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ (instagram)

ಭಾರತ ವನಿತೆಯರ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನಗೆ ಅಪಾರ ಅಭಿಮಾನಿಗಳಿದ್ದಾರೆ. ಮೈದಾನಲ್ಲಿ ತಮ್ಮ ಅಮೋಘ ಆಟದಿಂದ ಹೆಸರು ಗಳಿಸಿರುವ ಸ್ಮೃತಿ, ತಮ್ಮ ಸೌಂದರ್ಯದಿಂದಲೂ ಕೋಟ್ಯಾಂತರ ಫ್ಯಾನ್ಸ್‌ ಸಂಪಾದಿಸಿದ್ದಾರೆ. ಇದೀಗ ಸ್ಮೃತಿ ಅವರೊಂದಿಗೆ ಕೇಕ್‌ ಕತ್ತರಿಸುತ್ತಿರುವ ಫೋಟೋಗಳನ್ನು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಯಲ್ಲಿ ಬಿದ್ದು 5 ವರ್ಷಗಳನ್ನು ಪೂರೈಸಿದ್ದಾರೆ. ಈ ಖುಷಿಗೆ ಸಂಭ್ರಮಾಚರಣೆ ನಡೆಸಿರುವ ಫೋಟೋಗಳು ಇವು ಎಂದು ಅಭಿಮಾನಿಗಳ ನಡುವೆ ಚರ್ಚೆ ನಡೆಯುತ್ತಿವೆ. ಇಬ್ಬರೂ ಕೇಕ್ ಕತ್ತರಿಸುವ ಮೂಲಕ ತಮ್ಮ ಜೀವನದ ವಿಶೇಷ ದಿನವನ್ನು ಆಚರಿಸಿಕೊಂಡಿದ್ದಾರೆ.

ಭಾರತೀಯ ಮಹಿಳಾ ಟಿ20 ತಂಡದ ನಾಯಕಿಯೊಂದಿಗೆ ಫೋಟೋಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿರುವ ಪಲಾಶ್, ಕ್ಯಾಪ್ಷನ್‌ನಲ್ಲಿ ಯಾವುದೇ ವಾಕ್ಯಗಳನ್ನು ಬರೆದಿಲ್ಲ. ಬದಲಾಗಿ ಸಂಖ್ಯೆ 5 ಮತ್ತು ಹೃದಯದ ಇಮೋಜಿ ಮಾತ್ರವೇ ಹಾಕಿದ್ದಾರೆ. ಇದು ಅಭಿಮಾನಿಗಳಿಗೆ ಸುಲಭವಾಗಿ ಅರ್ಥವಾಗಿದೆ.

ಪಲಾಶ್‌ ಪೋಸ್ಟ್‌ಗೆ ಸ್ಮೃತಿ ಮಂಧಾನ ಕೂಡ ಪ್ರತಿಕ್ರಿಯಿಸಿದ್ದಾರೆ. ಆಟಗಾರ್ತಿ ಮೂರು ಹೃದಯಗಳನ್ನು ಪೋಸ್ಟ್‌ ಮಾಡುವ ಮೂಲಕ ಕಾಮೆಂಟ್‌ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪಲಾಶ್‌ನಿಂದ ಪೋಸ್ಟ್‌ಗೆ ಅವರ ಸಹೋದರಿ ಪಲಾಕ್ ಮುಚ್ಚಲ್, “ಮೈ ಕ್ಯೂಟೀಸ್” ಎಂದು ಬರೆದಿದ್ದಾರೆ. ನಟ ಪಾರ್ಥ್ ಸಮತಾನ್ ಹೃದಯದ ಎಮೋಜಿ ಹಾಕಿದ್ದಾರೆ. ಮತ್ತೊಂದೆಡೆ, ರುಬಿನಾ ದಿಲೈಕ್ ಕೂಡಾ ಕಾಮೆಂಟ್‌ ಮಾಡಿದ್ದಾರೆ.

ಮಂಧಾನ ಹಾಗೂ ಪಲಾಶ್‌ ಪ್ರೀತಿ ಕುರಿತು ಈಗಾಗಲೇ ವ್ಯಾಪಕ ವದಂತಿಗಳಿವೆ. ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಲವು ಸಮಯದಿಂದ ಇದೆ. ಆದರೆ ಇದೇ ಮೊದಲ ಬಾರಿಗೆ ಅವರು ತಮ್ಮ 5ನೇ ಪ್ರೇಮ ವಾರ್ಷಿಕೋತ್ಸವದ ಪೋಸ್ಟ್‌ ಮಾಡುವ ಮೂಲಕ ಅದಕ್ಕೆ ಪೂರ್ಣವಿರಾಮ ನೀಡಿದ್ದಾರೆ.

ಪಲಾಶ್ ಮುಚ್ಚಲ್ ಯಾರು?

ಪಲಾಶ್ ಮುಚ್ಚಲ್ ಅವರು ಸಂಗೀತ ಸಂಯೋಜಕ ಹಾಗೂ ಚಲನಚಿತ್ರ ನಿರ್ಮಾಪಕ. 29 ವರ್ಷದ ಅವರು 27 ವರ್ಷದ ಆಟಗಾರ್ತಿ ಸ್ಮೃತಿ ಮಂಧಾನಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಪಲಾಶ್ ಅಕ್ಕ ಪಲಾಕ್ ಮುಚ್ಚಲ್ ಬಾಲಿವುಡ್ ಗಾಯಕಿ. ಪಲಾಶ್ ಅವರು ಟಿ ಸೀರೀಸ್‌, ಝೀ ಸಂಗೀತ ಕಂಪನಿ ಹೀಗೆ ಹಲವು ವೇದಿಕೆ ಮೂಲಕ 40ಕ್ಕೂ ಹೆಚ್ಚು ಸಂಗೀತ ವಿಡಿಯೋಗಳನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ರಿಕ್ಷಾ ಎಂಬ ವೆಬ್‌ಸರಣಿಯನ್ನು ನಿರ್ದೇಶಿಸಿರುವ ಪಲಾಶ್‌, "ಅರ್ಧ್" ಎಂಬ ಚಲನಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ.

ಅತ್ತ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಎರಡು ಶತಕ ಸಹಿತ ಸ್ಮೃತಿ ಮಂಧಾನ ಭರ್ಜರಿ ಫಾರ್ಮ್‌ನಲ್ಲಿದ್ದರು. ಸರಣಿಯಲ್ಲಿ 300ಕ್ಕೂ ಅಧಿಕ ರನ್‌ ಪೇರಿಸಿ ಸರಣಿ ಶ್ರೇಷ್ಠರಾದರು. ಆ ಬಳಿಕ ನಡೆದ ಏಕೈಕ ಟೆಸ್ಟ್‌ ಪಂದ್ಯದಲ್ಲಿಯೂ ಶತಕ ಸಿಡಿಸಿದ್ದರು.