ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಸಂಭಾವ್ಯ ತಂಡ; ರೇಸ್​ನಲ್ಲಿದೆ ಯುವ ಕ್ರಿಕೆಟಗರ ಜೊತೆಗೆ ಹಿರಿಯರ ದಂಡು!
ಕನ್ನಡ ಸುದ್ದಿ  /  ಕ್ರಿಕೆಟ್  /  ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಸಂಭಾವ್ಯ ತಂಡ; ರೇಸ್​ನಲ್ಲಿದೆ ಯುವ ಕ್ರಿಕೆಟಗರ ಜೊತೆಗೆ ಹಿರಿಯರ ದಂಡು!

ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಸಂಭಾವ್ಯ ತಂಡ; ರೇಸ್​ನಲ್ಲಿದೆ ಯುವ ಕ್ರಿಕೆಟಗರ ಜೊತೆಗೆ ಹಿರಿಯರ ದಂಡು!

ICC Champions Trophy 2025: ಮುಂದಿನ ವರ್ಷ ಏಕದಿನ ಕ್ರಿಕೆಟ್ ಮಾದರಿಯಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಹೇಗಿರಲಿದೆ? ಯಾವೆಲ್ಲಾ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇಲ್ಲಿದೆ ಒಂದು ಅಂದಾಜು ಚಿತ್ರಣ.

ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಸಂಭಾವ್ಯ ತಂಡ; ರೇಸ್​ನಲ್ಲಿದೆ ಯುವ ಕ್ರಿಕೆಟಗರ ಜೊತೆಗೆ ಹಿರಿಯರ ದಂಡು!
ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಸಂಭಾವ್ಯ ತಂಡ; ರೇಸ್​ನಲ್ಲಿದೆ ಯುವ ಕ್ರಿಕೆಟಗರ ಜೊತೆಗೆ ಹಿರಿಯರ ದಂಡು!

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಗೆ ಸಂಬಂಧಿಸಿ ಬಿಸಿಸಿಐ ವರ್ಸಸ್ ಪಿಸಿಬಿ ನಡುವಿನ ಹಗ್ಗಜಗ್ಗಾಟಕ್ಕೆ ತೆರೆಬಿದ್ದಿದೆ ಎಂದೇ ಹೇಳಬಹುದು. ಪಾಕಿಸ್ತಾನಕ್ಕೆ ಪ್ರಯಾಣಿಸದ ಕಾರಣ ಭಾರತ ತಂಡದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಐಸಿಸಿ ನಿರ್ಧಾರ ತೆಗೆದುಕೊಂಡಿದೆ. ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ ಒಪ್ಪಿಗೆ ಸೂಚಿಸಿದೆ. ಆದರೆ ಭಾರತದ ಪಂದ್ಯಗಳು ಎಲ್ಲಿ ನಡೆಯುತ್ತವೆ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಸ್ಥಳ ಅಂತಿಮಗೊಳಿಸುವ ಕೆಲಸದಲ್ಲಿರುವ ಐಸಿಸಿ, ವೇಳಾಪಟ್ಟಿ ಸಿದ್ಧಪಡಿಸುತ್ತಿದೆ. ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ಭಾರತ ತಂಡ ನಿರಾಕರಿಸಿತ್ತು. ಹೀಗಾಗಿ ಕಟ್ಟುನಿಟ್ಟಾದ ನಿಲುವು ತೆಗೆದುಕೊಂಡಿದ್ದ ಪಿಸಿಬಿ, ಹೈಬ್ರಿಡ್ ಮಾದರಿ ಒಪ್ಪುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ಟೂರ್ನಿಯು ಹಲವು ಹಿನ್ನಡೆ ಎದುರಿಸಿತ್ತು. ಸುಮಾರು ಒಂದು ತಿಂಗಳ ಮಾತುಕತೆಯ ನಂತರ, ಅಂತಿಮ ಹಂತ ತಲುಪಿದವು. ವರದಿಗಳ ಪ್ರಕಾರ, ಮುಂದಿನ 3 ವರ್ಷಗಳವರೆಗೆ ಎಲ್ಲಾ ಭಾರತ-ಪಾಕಿಸ್ತಾನದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲು ಪಿಸಿಬಿ, ಐಸಿಸಿಗೆ ಒತ್ತಾಯಿಸಿದೆ. ಮೇಲಾಗಿ, ದುಬೈನಲ್ಲಿ ಆಯೋಜಿಸಲು ಐಸಿಸಿ ಒಪ್ಪಿಕೊಳ್ಳುವ ಸಾಧ್ಯತೆ ಇದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19ರಿಂದ ಮಾರ್ಚ್ 9ರ ತನಕ ನಡೆಯಲಿದೆ. ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯ ಮೂರು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಪಾಕಿಸ್ತಾನ ವಿರುದ್ಧದ ಪಂದ್ಯಗಳು, ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಭಾರತದ ಪಂದ್ಯಗಳು, ಮೆನ್ ಇನ್ ಬ್ಲೂ ನಾಕೌಟ್‌ಗೆ ತಲುಪಿದರೆ, ದುಬೈನಲ್ಲಿ, ಉಳಿದಂತೆ ಪಾಕಿಸ್ತಾನದಲ್ಲಿ ಆಡಲಾಗುತ್ತದೆ ಎಂದು ವರದಿಯಾಗಿದೆ. ಹಾಗಾದರೆ ಏಕದಿನ ಮಾದರಿಯ ಈ ಟೂರ್ನಿಗೆ ಭಾರತ ತಂಡ ಹೇಗಿರಲಿದೆ? ಯಾರೆಲ್ಲಾ ಅವಕಾಶ ಪಡೆಯುವ ಸಾಧ್ಯತೆ ಇದೆ? ಇಲ್ಲಿದೆ ಮಾಹಿತಿ.

ಖಚಿತವಾಗಿ ಆಡುವ ಆಟಗಾರರು ಇವರು

ಭಾರತ ಖಂಡಿತವಾಗಿಯೂ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅತ್ಯುತ್ತಮ ತಂಡ ಕಣಕ್ಕಿಳಿಸಲಿದೆ. ಕೊನೆಯದಾಗಿ 2017ರಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ ಟೀಮ್ ಇಂಡಿಯಾ, ರನ್ನರ್​ಅಪ್ ಆಗಿತ್ತು. ಅದು ಕೂಡ ಪಾಕಿಸ್ತಾನದ ವಿರುದ್ಧವೇ ಸೋತಿತ್ತು. ಇದೀಗ ಟ್ರೋಫಿಯನ್ನು ಮರಳಿ ಪಡೆಯಲು ವಿಶ್ವಾಸದಲ್ಲಿದೆ. ಆದರೆ ಅದಕ್ಕಾಗಿ ಭಾರತ ತಂಡವು 2023ರಲ್ಲಿ ಏಕದಿನ ವಿಶ್ವಕಪ್‌ ಆಡಿದಂತೆಯೇ ಇರಬೇಕು. ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಟೂರ್ನಿಗೆ ಅವಕಾಶ ಪಡೆಯುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಉಳಿದ ಸ್ಲಾಟ್​ಗಳಿಗೆ ಈ ಆಟಗಾರರಿಗೆ ಅವಕಾಶ ಸಾಧ್ಯತೆ

ಆದರೆ ಉಳಿದ ಸ್ಲಾಟ್​ಗಳಿಗೆ ಯುವ ಆಟಗಾರರ ನಡುವೆ ಪೈಪೋಟಿ ಇದೆ. ಈಗಾಗಲೇ ತಂಡದಲ್ಲಿ ಸಾಬೀತುಪಡಿಸಿರುವ ಯಶಸ್ವಿ ಜೈಸ್ವಾಲ್​ಗೆ ಅವಕಾಶ ನೀಡುವ ನಿರೀಕ್ಷೆ ಇದೆ. ಆದರೆ ವಿಕೆಟ್ ಕೀಪಿಂಗ್ ರೇಸ್​​ನಲ್ಲಿ ಸಂಜು ಸ್ಯಾಮ್ಸನ್ ಇರುವುದಿಲ್ಲ. ಏಕೆಂದರೆ ಏಕದಿನ ಕ್ರಿಕೆಟ್​ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ನಿಭಾಯಿಸುತ್ತಾರೆ. ಹೀಗಾಗಿ ಅವರೇ ಮೊದಲ ಆಯ್ಕೆಯಾಗಿರುತ್ತಾರೆ. ಏಕದಿನ ವಿಶ್ವಕಪ್​​ನಲ್ಲಿ ಅವರ ಪ್ರದರ್ಶನವೇ ಸಾಕ್ಷಿ. ಆದರೆ ಸಂಜು ಸ್ಯಾಮ್ಸನ್ ಟಿ20ಐ ಕ್ರಿಕೆಟ್​​ನಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ತಿಲಕ್ ವರ್ಮಾ ಸಹ ಅವಕಾಶ ಪಡೆಯುವುದು ಖಚಿತ ಎಂದು ಹೇಳಲಾಗುತ್ತಿದೆ. ಆದರೆ ಶ್ರೇಯಸ್ ಅಯ್ಯರ್ ಅವಕಾಶ ವಂಚಿತರಾಗಬಹುದು ಎಂದು ಕ್ರಿಕೆಟ್​ ತಜ್ಞರ ಮಾತಾಗಿದೆ. ಮತ್ತೊಂದೆಡೆ ನಿತೀಶ್ ಕುಮಾರ್ ರೆಡ್ಡಿ ಆಲ್​ರೌಂಡರ್ ಕೋಟಾಗೆ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಪರಿಗಣಿಸುವ ಸಾಧ್ಯತೆ ಕಡಿಮೆ. ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್ ಸ್ಪಿನ್ ಆಲ್​ರೌಂಡರ್​ಗಳಾಗಿದ್ದರೆ, ಕುಲ್ದೀಪ್ ಯಾದವ್ ಭಾರತದ ಸ್ಪೆಷಲಿಸ್ಟ್ ಸ್ಪಿನ್ನರ್​​ಗಳಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಜೊತೆಗೆ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಹರ್ಷಿತ್ ರಾಣಾ ತಂಡದಲ್ಲಿ ವೇಗಿಗಳಾಗುವ ಸಾಧ್ಯತೆ ಇದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತದ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ ಅಕ್ಷರ್​ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ , ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್.

Whats_app_banner