ಸ್ಮೃತಿ ಮಂಧಾನ ಶತಕ, ಶಫಾಲಿ ವರ್ಮಾ ದ್ವಿಶತಕ; ಮಹಿಳಾ ಟೆಸ್ಟ್ ಕ್ರಿಕೆಟ್​ನಲ್ಲಿ ವಿಶ್ವದಾಖಲೆ, ಪಾಕಿಸ್ತಾನ ದಾಖಲೆಯೂ ಧ್ವಂಸ
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಮೃತಿ ಮಂಧಾನ ಶತಕ, ಶಫಾಲಿ ವರ್ಮಾ ದ್ವಿಶತಕ; ಮಹಿಳಾ ಟೆಸ್ಟ್ ಕ್ರಿಕೆಟ್​ನಲ್ಲಿ ವಿಶ್ವದಾಖಲೆ, ಪಾಕಿಸ್ತಾನ ದಾಖಲೆಯೂ ಧ್ವಂಸ

ಸ್ಮೃತಿ ಮಂಧಾನ ಶತಕ, ಶಫಾಲಿ ವರ್ಮಾ ದ್ವಿಶತಕ; ಮಹಿಳಾ ಟೆಸ್ಟ್ ಕ್ರಿಕೆಟ್​ನಲ್ಲಿ ವಿಶ್ವದಾಖಲೆ, ಪಾಕಿಸ್ತಾನ ದಾಖಲೆಯೂ ಧ್ವಂಸ

India Women vs South Africa Women: ಸೌತ್ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಸ್ಮೃತಿ ಮಂಧಾನ ಶತಕ, ಶಫಾಲಿ ವರ್ಮಾ ದ್ವಿಶತಕ ಸಿಡಿಸಿ ಮಹಿಳಾ ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಸ್ಮೃತಿ ಮಂಧಾನ ಶತಕ, ಶಫಾಲಿ ವರ್ಮಾ ದ್ವಿಶತಕ; ಮಹಿಳಾ ಟೆಸ್ಟ್ ಕ್ರಿಕೆಟ್​ನಲ್ಲಿ ವಿಶ್ವದಾಖಲೆ, ಪಾಕಿಸ್ತಾನ ದಾಖಲೆಯೂ ಧ್ವಂಸ
ಸ್ಮೃತಿ ಮಂಧಾನ ಶತಕ, ಶಫಾಲಿ ವರ್ಮಾ ದ್ವಿಶತಕ; ಮಹಿಳಾ ಟೆಸ್ಟ್ ಕ್ರಿಕೆಟ್​ನಲ್ಲಿ ವಿಶ್ವದಾಖಲೆ, ಪಾಕಿಸ್ತಾನ ದಾಖಲೆಯೂ ಧ್ವಂಸ

ಸೌತ್ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡದ (India Women vs South Africa Women) ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅವರು (Smriti Mandhana and Shafali Verma) ವನಿತೆಯರ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. 3-0 ಅಂತರದಿಂದ ಏಕದಿನ ಸರಣಿ ಕಳೆದುಕೊಂಡಿದ್ದ ದ. ಆಫ್ರಿಕಾ, ಟೆಸ್ಟ್​ ಪಂದ್ಯದಲ್ಲೂ ನಿರೀಕ್ಷೆಯಂತೆ ಆರಂಭ ಪಡೆದಿಲ್ಲ. ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದೆ.

ಏಕೈಕ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತದ ಪರ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಇಬ್ಬರೂ ಸೆಂಚುರಿ ಬಾರಿಸಿದ್ದಾರೆ. ಅಲ್ಲದೆ, ಮೊದಲ ವಿಕೆಟ್​ಗೆ ವಿಶ್ವದಾಖಲೆಯ ಜೊತೆಯಾಟವಾಡಿದ್ದಾರೆ. ಈ ಜೋಡಿ ಮೊದಲ ವಿಕೆಟ್​ಗೆ 292 ರನ್​ಗಳ ಪಾಲುದಾರಿಕೆ ಒದಗಿಸಿತು. ಇದು ಭಾರತದ ಪರ ಯಾವುದೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟ ಮಾತ್ರವಲ್ಲದೆ, ಇವರಿಬ್ಬರು ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆರಂಭಿಕ ಪಾಲುದಾರಿಕೆ ಒದಗಿಸಿದ ದಾಖಲೆ ಬರೆದಿದ್ದಾರೆ.

292 ರನ್​ಗಳ ಪಾಲುದಾರಿಕೆಯೊಂದಿಗೆ 20 ವರ್ಷಗಳ ಹಿಂದೆ ಪಾಕಿಸ್ತಾನ ತಂಡದ ಮಹಿಳಾ ಆಟಗಾರ್ತಿಯರು ನಿರ್ಮಿಸಿದ್ದ ದಾಖಲೆಯನ್ನು ಪುಡಿಗಟ್ಟಿದ್ದಾರೆ. 2004ರಲ್ಲಿ ವೆಸ್ಟ್ ಇಂಡೀಸ್ ಮಹಿಳೆಯರ ವಿರುದ್ಧ ಕರಾಚಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಕಿರಣ್ ಬಲೂಚ್ ಮತ್ತು ಸಜ್ಜಿದಾ ಶಾ ಅವರು ಆರಂಭಿಕ ವಿಕೆಟ್‌ಗೆ 241 ರನ್ ಸೇರಿಸಿದ್ದರು. ಇದೀಗ 20 ವರ್ಷಗಳ ಹಳೆಯ ವಿಶ್ವದಾಖಲೆ ಮುರಿದು ಮಂಧಾನ ಮತ್ತು ಶಫಾಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಸ್ಮೃತಿ-ಶಫಾಲಿ ಜೋಡಿಯು ಕೇವಲ 18 ರನ್​ಗಳ ಅಂತರದಿಂದ ಮಹಿಳಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟದ ಸಾರ್ವಕಾಲಿಕ ದಾಖಲೆಯನ್ನು ಕಳೆದುಕೊಂಡಿತು. ಆಸ್ಟ್ರೇಲಿಯಾದ ಲಿಂಡ್ಸೆ ರೀಲರ್ ಮತ್ತು ಡೆನಿಸ್ ಆನೆಟ್ಸ್ 37 ವರ್ಷಗಳ ಹಿಂದೆ ವೆದರ್‌ಬಿಯಲ್ಲಿ ಇಂಗ್ಲೆಂಡ್ ಮಹಿಳೆಯರ ವಿರುದ್ಧ 4ನೇ ವಿಕೆಟ್‌ಗೆ 309 ರನ್ ಸೇರಿಸಿದ್ದರು. ಸ್ಮೃತಿ ಮತ್ತು ಶಫಾಲಿ ಚೆನ್ನೈನಲ್ಲಿ 292 ರನ್‌ಗಳನ್ನು ಒಟ್ಟಿಗೆ ಸೇರಿಸುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ.

ಸ್ಮೃತಿ ಮಂಧಾನ ಶತಕ

ಸ್ಮೃತಿ ಮಂಧಾನ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಶತಕ ಮತ್ತು 1 ಅರ್ಧಶತಕ ಸಿಡಿಸಿದ್ದ ಸ್ಮೃತಿ ಮಂಧಾನ, ಟೆಸ್ಟ್​​ನಲ್ಲೂ ಮೂರಂಕಿ ದಾಟಿದ್ದಾರೆ. ಇದು ಅವರ ಎರಡನೇ ಟೆಸ್ಟ್ ಶತಕವಾಗಿದೆ. 161 ಎಸೆತಗಳಲ್ಲಿ 27 ಬೌಂಡರಿ, 1 ಸಿಕ್ಸರ್ ಸಹಿತ 149 ರನ್ ಬಾರಿಸಿ ಔಟಾದರು. ಮಂಧಾನ ತನ್ನ ಮೊದಲ ಸೆಂಚುರಿಯನ್ನು ಆಸ್ಟ್ರೇಲಿಯಾ ವಿರುದ್ಧ ಸಿಡಿಸಿದ್ದರು.

ಶಫಾಲಿ ವರ್ಮಾ ದ್ವಿಶತಕ

ಲೇಡಿ ಸೆಹ್ವಾಗ್ ಎಂದೇ ಕರೆಸಿಕೊಳ್ಳುವ ಶಫಾಲಿ ವರ್ಮಾ ಚೊಚ್ಚಲ ಟೆಸ್ಟ್ ಶತಕವನ್ನು ಚಚ್ಚಿದರು. ತಮ್ಮ ಮೊಚಲ ಟೆಸ್ಟ್ ಸೆಂಚುರಿಯನ್ನೇ ದ್ವಿಶತಕವನ್ನಾಗಿ ಪರಿವರ್ತಿಸಿದರು. ಅತಿ ವೇಗವಾಗಿ ದ್ವಿಶತಕ ಸಿಡಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಮಿಥಾಲಿ ರಾಜ್ (19 ವರ್ಷ, 254 ದಿನ) ನಂತರ ದ್ವಿಶತಕ ಬಾರಿಸಿದ ಭಾರತದ ಎರಡನೇ ಕಿರಿಯ ಆಟಗಾರ್ತಿ (ಶಫಾಲಿ 20 ವರ್ಷ, 152 ದಿನ)ಎನಿಸಿದ್ದಾರೆ. 197 ಎಸೆತಗಳಲ್ಲಿ 23 ಬೌಂಡರಿ, 8 ಸಿಕ್ಸರ್ ಸಹಿತ 205 ರನ್ ಬಾರಿಸಿದರು. ಟೆಸ್ಟ್​ ಇನ್ನಿಂಗ್ಸ್​ವೊಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ದಾಖಲೆಗೂ ಶಫಾಲಿ ಪಾತ್ರರಾಗಿದ್ದಾರೆ.

Whats_app_banner