ಹೃದಯವಿದ್ರಾವಕ ಸೋಲಿನ ನಂತರ ಕಣ್ಣೀರಿಟ್ಟ ಸ್ಮೃತಿ ಮಂಧಾನ; ರಿಚಾ ಘೋಷ್ ಸಾಂತ್ವನದ ವೇಳೆ ಜಿನುಗುತ್ತಿತ್ತು ಕಣ್ಣಲ್ಲಿ ಹನಿ-smriti mandhana heartbreaking reaction after rcbs 1 run defeat against dcw in wpl 2024 goes viral richa ghosh tears prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಹೃದಯವಿದ್ರಾವಕ ಸೋಲಿನ ನಂತರ ಕಣ್ಣೀರಿಟ್ಟ ಸ್ಮೃತಿ ಮಂಧಾನ; ರಿಚಾ ಘೋಷ್ ಸಾಂತ್ವನದ ವೇಳೆ ಜಿನುಗುತ್ತಿತ್ತು ಕಣ್ಣಲ್ಲಿ ಹನಿ

ಹೃದಯವಿದ್ರಾವಕ ಸೋಲಿನ ನಂತರ ಕಣ್ಣೀರಿಟ್ಟ ಸ್ಮೃತಿ ಮಂಧಾನ; ರಿಚಾ ಘೋಷ್ ಸಾಂತ್ವನದ ವೇಳೆ ಜಿನುಗುತ್ತಿತ್ತು ಕಣ್ಣಲ್ಲಿ ಹನಿ

Smriti Mandhana : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1 ರನ್ನಿಂದ ವಿರೋಚಿತ ಸೋಲು ಅನುಭವಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಕಣ್ಣೀರು ಹಾಕಿದ್ದಾರೆ.

ಹೃದಯವಿದ್ರಾವಕ ಸೋಲಿನ ನಂತರ ಕಣ್ಣೀರಿಟ್ಟ ಸ್ಮೃತಿ ಮಂಧಾನ
ಹೃದಯವಿದ್ರಾವಕ ಸೋಲಿನ ನಂತರ ಕಣ್ಣೀರಿಟ್ಟ ಸ್ಮೃತಿ ಮಂಧಾನ

ಭಾನುವಾರ (ಮಾರ್ಚ್ 10) ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) 2024ರ ತಮ್ಮ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1 ರನ್ನಿಂದ ವಿರೋಚಿತ ಸೋಲು ಅನುಭವಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ನಾಯಕಿ ಸ್ಮೃತಿ ಮಂಧಾನ (Smriti Mandhana) ಕಣ್ಣಲ್ಲಿ ಹನಿಗಳು ಜಿನುಗುತ್ತಿತ್ತು. ಆದರೆ ಹನಿಗಳು ಹೊರಗೆ ಬರದಂತೆ ನೋಡಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಟೂರ್ನಿಯ 17ನೇ ಪಂದ್ಯದಲ್ಲಿ ಡೆಲ್ಲಿ ಮೊದಲು ಬ್ಯಾಟಿಂಗ್ ನಡೆಸಿತು. 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಕೇವಲ 1 ರನ್ ಅಂತರದಿಂದ ಸೋಲನುಭವಿಸಿತು. ಕೊನೆ 1 ಎಸೆತದಲ್ಲಿ ಬೆಂಗಳೂರು ಗೆಲ್ಲಲು 2 ರನ್ ಬೇಕಿತ್ತು. ಆದರೆ ರಿಚಾ ರನ್ ಕದಿಯಲು ವಿಫಲರಾದರು. 29 ಎಸೆತಗಳಲ್ಲಿ 51 ರನ್ ಚಚ್ಚಿದ 20 ವರ್ಷದ ಯುವ ಆಟಗಾರ್ತಿ ಪಂದ್ಯದ ಕೊನೆಯ ಎಸೆತದಲ್ಲಿ ರನ್ ಔಟ್ ಆದರು.

ಔಟಾದ ಬೆನ್ನಲ್ಲೇ ಕ್ಯಾಮೆರಾಗಳನ್ನು ಸ್ಮೃತಿ ಮಂಧಾನ ಕಡೆ ತಿರುಗಿಸಿದರು. ತೀವ್ರ ನಿರಾಸೆಗೊಂಡ ಮಂಧಾನ ಭಾವುಕರಾಗಿದ್ದರು. ಮತ್ತೊಂದೆಡೆ ಕೊನೆಯವರೆಗೂ ಹೋರಾಡಿದ ರಿಚಾ ಘೋಷ್, ಪಂದ್ಯ ಗೆಲ್ಲಿಸಲು ಸಾಧ್ಯವಾಗದ ಕಾರಣ ಕಣ್ಣೀರಿಟ್ಟರು. ಎದುರಾಳಿ ತಂಡದ ಆಟಗಾರ್ತಿಯರು ಸಹ ರಿಚಾಗೆ ಧೈರ್ಯ ತುಂಬಿದರು. ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಹ್ಯಾಂಡ್​ಶೇಕ್​ ಮಾಡುವಾಗ ರಿಚಾರನ್ನು ಸ್ಮೃತಿ ಮಂಧಾನ ಅಪ್ಪಿಕೊಂಡು ಸಾಂತ್ವನ ಹೇಳಿದರು. ಆದರೆ, ಈ ವೇಳೆ ಮಂಧಾನ ಕಣ್ಣಲ್ಲೂ ನೀರು ಜಿನುಗುತಿತ್ತು.

ಒಂದು ರನ್ನಿಂದ ಸೋತ ನಂತರ ಆರ್​​ಸಿಬಿ ಪ್ಲೇಆಫ್‌ಗೆ ಪ್ರವೇಶಿಸುವ ಹಾದಿ ಇನ್ನಷ್ಟು ಸಂಕಷ್ಟದಲ್ಲಿದೆ. ಪಾಯಿಂಟ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ ಯುಪಿ ವಾರಿಯರ್ಸ್ ತನ್ನ ಮುಂದಿನ ಪಂದ್ಯ ಗೆದ್ದರೆ, ಆರ್​ಸಿಬಿ ಕೂಡ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯ. ಕೊನೆಯ ಪಂದ್ಯದಲ್ಲಿ ಜಯಿಸಿದ್ದೇ ಆದರೆ ಆರ್​ಸಿಬಿ 8 ಅಂಕಗಳೊಂದಿಗೆ ನಾಕೌಟ್ ಪಂದ್ಯಕ್ಕೆ ಪ್ರವೇಶ ಪಡೆಯುತ್ತದೆ. ಆಗ ಯುಪಿ ವಾರಿಯರ್ಜ್ ಮತ್ತು ಗುಜರಾತ್ ಜೈಂಟ್ಸ್ ಹೊರಬೀಳಲಿದೆ.

ಕೊನೆಯ ಓವರ್​ನಲ್ಲಿ ಏನಾಯಿತು?

ಕೊನೆಯ ಓವರ್​​ನಲ್ಲಿ ಆರ್​ಸಿಬಿಗೆ 17 ರನ್ ಬೇಕಿತ್ತು. ಜೆಸ್ ಜೊನಾಸನ್ ಬೌಲಿಂಗ್​ ಮಾಡಲು ಬಂದರು. ಸ್ಟ್ರೈಕ್​ನಲ್ಲಿದ್ದ ರಿಚಾ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್​ ಬಾರಿಸಿದರು. ಬಳಿಕ ಎರಡನೇ ಎಸೆತ ಡಾಟ್ ಆಯಿತು. ಮೂರನೇ ಎಸೆತದಲ್ಲಿ ಎರಡು ರನ್ ಕದಿಯಲು ಯತ್ನಿಸಿದರು. ಆದರೆ ದಿಸಾ ಕಸತ್ ರನೌಟ್ ಆದರು. ಹಾಗಾಗಿ ಆರ್​​ಸಿಬಿ ಖಾತೆಗೆ 1 ರನ್ ಸೇರ್ಪಡೆಯಾಯಿತು. 4ನೇ ಎಸೆತದಲ್ಲಿ 2 ರನ್ ಗಳಿಸಿದ ರಿಚಾ, ಐದನೇ ಎಸೆತವನ್ನು ಸಿಕ್ಸರ್​​ಗಟ್ಟಿದರು. ಇದರಿಂದ ಕೊನೆಯ ಬಾಲ್​ಗೆ 2 ರನ್ ಬೇಕಿತ್ತು.

ಪಂದ್ಯದ ಕೊನೆಯ ಎಸೆತದಲ್ಲಿ ಬಿಗ್ ಹಿಟ್ ಮಾಡಿದ ರಿಚಾ ಬಾರಿಸಿದ ಚೆಂಡು ಬ್ಯಾಕ್​ವರ್ಡ್ ಪಾಯಿಂಟ್​ನಲ್ಲಿದ್ದ ಶಫಾಲಿ ವರ್ಮಾಗೆ ಹೋಯಿತು. ಜೆಸ್ ಜೊನಾಸೆನ್‌ಗೆ ಅವರು ಚೆಂಡನ್ನು ತ್ವರಿತವಾಗಿ ಚೆಂಡನ್ನು ಎಸೆದರು. ಆದರೆ ರಿಚಾ ರನ್​ ಕದಿಯಲು ಯತ್ನಿಸಿದರಾದರೂ ರನೌಟ್ ಆದರು. ಗುರಿ ಬೆನ್ನಟ್ಟಲು ಆರ್‌ಸಿಬಿ ವಿಫಲವಾದ ಬಳಿಕ ಕ್ಯಾಮರಾಮನ್ ಆರ್‌ಸಿಬಿ ಡಗೌಟ್‌ನತ್ತ ಗಮನ ಹರಿಸಿದ್ದು, ತಂಡದ ನಾಯಕಿ ಸ್ಮೃತಿ ಅವರ ನಿರಾಸೆಯ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆಯಿತು.

mysore-dasara_Entry_Point