ಕನ್ನಡ ಸುದ್ದಿ  /  ಕ್ರಿಕೆಟ್  /  ಪಾಕಿಸ್ತಾನ ವಿರುದ್ಧ ಗೆದ್ದರೂ ರೋಹಿತ್​ ಶರ್ಮಾ ನಾಯಕತ್ವದ ತಂತ್ರಗಳನ್ನು ಪ್ರಶ್ನಿಸಿದ ಸುನಿಲ್ ಗವಾಸ್ಕರ್​

ಪಾಕಿಸ್ತಾನ ವಿರುದ್ಧ ಗೆದ್ದರೂ ರೋಹಿತ್​ ಶರ್ಮಾ ನಾಯಕತ್ವದ ತಂತ್ರಗಳನ್ನು ಪ್ರಶ್ನಿಸಿದ ಸುನಿಲ್ ಗವಾಸ್ಕರ್​

Sunil Gavaskar: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ 6 ವಿಕೆಟ್​​ಗಳಿಂದ ಗೆದ್ದರೂ ರೋಹಿತ್​ ಶರ್ಮಾ ನಾಯಕತ್ವದ ತಂತ್ರಗಳನ್ನು ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ಗೆದ್ದರೂ ರೋಹಿತ್​ ಶರ್ಮಾ ನಾಯಕತ್ವದ ತಂತ್ರಗಳನ್ನು ಪ್ರಶ್ನಿಸಿದ ಸುನಿಲ್ ಗವಾಸ್ಕರ್​
ಪಾಕಿಸ್ತಾನ ವಿರುದ್ಧ ಗೆದ್ದರೂ ರೋಹಿತ್​ ಶರ್ಮಾ ನಾಯಕತ್ವದ ತಂತ್ರಗಳನ್ನು ಪ್ರಶ್ನಿಸಿದ ಸುನಿಲ್ ಗವಾಸ್ಕರ್​

ಜೂನ್ 9ರ ಭಾನುವಾರ ನಡೆದ ಪಾಕಿಸ್ತಾನ (India vs Pakistan) ವಿರುದ್ಧದ ಹೈವೋಲ್ಟೇಜ್ ಟಿ20 ವಿಶ್ವಕಪ್ 2024 ಪಂದ್ಯದ ವೇಳೆ ಭಾರತದ ನಾಯಕ ರೋಹಿತ್ ಶರ್ಮಾ ಅವರ ಬೌಲಿಂಗ್ ತಂತ್ರಗಳನ್ನು ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದು, ಚರ್ಚೆಗೆ ಕಾರಣವಾಗಿದೆ. ಕಡಿಮೆ ಸ್ಕೋರನ್ನು ರಕ್ಷಿಸಿಕೊಳ್ಳಲು ಯಶಸ್ವಿಯಾದ ರೋಹಿತ್ ನಾಯಕತ್ವಕ್ಕೆ ನೆರೆಯ ದೇಶದ ಮಾಜಿ ಕ್ರಿಕೆಟರ್​ಗಳು ಸೇರಿದಂತೆ ಎಲ್ಲೆಡೆಯಿಂದ ದೊಡ್ಡ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಮೆಗಾ ಫೈಟ್​ನಲ್ಲಿ ಭಾರತ ಗೆಲ್ಲುತ್ತದೆ ಎಂದು ಅನೇಕರು ಭಾವಿಸಿರಲಿಲ್ಲ. ಅಲ್ಲದೆ, ಪ್ರೆಡಿಕ್ಷನ್ ಸಹ ಶೇ 8ರಷ್ಟು ಭಾರತ ಗೆಲ್ಲುತ್ತದೆ ಎಂದು ಹೇಳಿತ್ತು. ಆದರೆ, ಇದೆಲ್ಲವನ್ನೂ ತಲೆಕೆಳಗಾಗಿಸಿದ ಭಾರತ ಇತಿಹಾಸ ಸೃಷ್ಟಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 19 ಓವರ್​​​ಗಳಲ್ಲಿ 119 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ 20 ಓವರ್​​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತು. ಇದರೊಂದಿಗೆ 6 ರನ್​ಗಳಿಂದ ಭಾರತ ಗೆದ್ದು ಬೀಗಿತು.

ಮೊದಲ ಓವರ್​​ನಲ್ಲೇ ಬುಮ್ರಾ ಬೌಲಿಂಗ್ ಮಾಡಬೇಕಿತ್ತು ಎಂದ ಗವಾಸ್ಕರ್​

ಪಾಕಿಸ್ತಾನದ ರನ್ ಚೇಸ್ ಸಮಯದಲ್ಲಿ ಗವಾಸ್ಕರ್ ಅವರು ರೋಹಿತ್ ಅವರ ಬೌಲಿಂಗ್ ತಂತ್ರದ ಮೇಲೆ ಕೇಂದ್ರೀಕರಿಸಿ ಚರ್ಚೆ ಹುಟ್ಟು ಹಾಕಿದ್ದಾರೆ. ವಿಶೇಷವಾಗಿ ಯಾರ್ಕರ್​ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾಗೆ ಮೊದಲ ಓವರ್​ ನೀಡದ ಕುರಿತು ತಕರಾರು ಎತ್ತಿದ್ದಾರೆ. ಅವರನ್ನು 3ನೇ ಓವರ್​​ವರೆಗೂ ಕಾಯಿಸುವುದೇಕೆ ಎಂದು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ಆರಂಭಿಕರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್​ಗೆ ಒತ್ತಡ ಹೆಚ್ಚಿಸಲು ಬುಮ್ರಾ ಆರಂಭದಲ್ಲೇ ಬೌಲಿಂಗ್ ಮಾಡಬೇಕಿತ್ತು ಎಂದು ಗವಾಸ್ಕರ್ ಹೇಳಿದ್ದಾರೆ.

ಜಸ್ಪ್ರೀತ್ ಬುಮ್ರಾಗೆ ಇನ್ನಿಂಗ್ಸ್​ ಆರಂಭದ ಓವರ್​​ನಲ್ಲೇ ಬೌಲಿಂಗ್ ಕೊಡಬೇಕಿತ್ತು. ಆದರೆ, ಮೂರನೇ ಓವರ್​ ಕೊಟ್ಟಿದ್ದೇಕೆ? ಆರಂಭದಲ್ಲೇ ಪ್ರಮುಖ ಬ್ಯಾಟರ್​​ಗಳ ಒತ್ತಡ ಹೇರಲು, ವಿಕೆಟ್ ಕಬಳಿಸಲು ಮೊದಲ ಓವರ್​ನಲ್ಲೇ ಗವಾಸ್ಕರ್ ಬೌಲಿಂಗ್ ಮಾಡಬೇಕು. ಅವನು ವಿಕರ್-ಟೇಕರ್ ಆಗಿರುವ ಕಾರಣ ಅವರನ್ನು ಹೆಚ್ಚು ಹೊತ್ತು ಕಾಯಿಸಬಾರದು ಎಂದು ಸುನಿಲ್ ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ. ಬುಮ್ರಾ ಅವರನ್ನು ಪವರ್​​ಪ್ಲೇ ಕೊನೆಯಲ್ಲೇ ಬಳಸಿಕೊಂಡಿದ್ದರು. ಆರಂಭಿಕ ಓವರ್​​​ ಕೊಟ್ಟಿರಲಿಲ್ಲ.

ತನ್ನ ಎಕ್ಸ್‌ಪ್ರೆಸ್ ವೇಗ ಮತ್ತು ವಿಕೆಟ್-ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಬುಮ್ರಾ, ನಿರ್ಣಾಯಕ ಪವರ್‌ಪ್ಲೇ ಓವರ್‌ಗಳಲ್ಲಿ ರನ್‌ಗಳನ್ನು ನಿರ್ಬಂಧಿಸಲು ಮತ್ತು ಆರಂಭಿಕ ವಿಕೆಟ್‌ ಪಡೆಯುತ್ತಾರೆ. ಪಾಕಿಸ್ತಾನ ವಿರುದ್ಧದ ರನ್ ಚೇಸಿಂಗ್ ಅವಧಿಯಲ್ಲಿ ಅವರಿಗೆ ತಡವಾಗಿ ಬೌಲಿಂಗ್ ಕೊಟ್ಟಿದ್ದು ಕೆಲವು ಅಭಿಮಾನಿಗಳು, ಕ್ರಿಕೆಟ್ ಪಂಡಿತರನ್ನು ಗೊಂದಲಕ್ಕೀಡುಮಾಡಿತು. ಈ ಪಂದ್ಯದ ಜಸ್ಪ್ರೀತ್ ಬುಮ್ರಾ ತನ್ನ 4 ಓವರ್​ಗಳ ಬೌಲಿಂಗ್ ಕೋಟಾದಲ್ಲಿ ಕೇವಲ 14 ರನ್ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಉರುಳಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಕಡಿಮೆ ಸ್ಕೋರಿಂಗ್ ಥ್ರಿಲ್ಲರ್‌ನಂತಹ ಹೆಚ್ಚಿನ ಒತ್ತಡದ ಆಟದಲ್ಲಿ ಆರಂಭಿಕ ವಿಕೆಟ್‌ಗಳು ನಿರ್ಣಾಯಕವಾದ ಕಾರಣ ಗವಾಸ್ಕರ್ ಈ ಅಂಶವನ್ನು ಪ್ರತಿಪಾದಿಸಿದ್ದಾರೆ. ಆರಂಭದಲ್ಲಿ ಬುಮ್ರಾಗೆ ಅವಕಾಶ ನೀಡದಿದ್ದರೂ ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಅದ್ಭುತ ಪ್ರದರ್ಶನ ನೀಡುವುದರೊಂದಿಗೆ ಪಾಕ್ ತಂಡಕ್ಕೆ ನಿರ್ಬಂಧ ಹೇರಿ ಪ್ರಮುಖ ಪಾತ್ರವಹಿಸಿದರು. ಮಧ್ಯಮ ಓವರ್​​ಗಳಲ್ಲೂ ಬುಮ್ರಾ ಜೊತೆ ಉಳಿದ ಬೌಲರ್ಸ್ ಅತ್ಯುತ್ತಮವಾಗಿ ಸಾಥ್ ಕೊಟ್ಟರು.

ಸಂತಸ ವ್ಯಕ್ತಪಡಿಸಿದ ಜಸ್ಪ್ರೀತ್ ಬುಮ್ರಾ

ಪಂದ್ಯದ ನಂತರ ಮಾತನಾಡಿದ ಬುಮ್ರಾ ಸಂತಸ ವ್ಯಕ್ತಪಡಿಸಿದ್ದಾರೆ. ಇದು ನಿಜವಾಗಿಯೂ ಉತ್ತಮವಾಗಿದೆ. ನಾವು ಆರಂಭದಲ್ಲಿ ಕಷ್ಟವಾಗುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ, ಮೋಡ ಕವಿದ ವಾತಾವರಣ ಸರಿದು ಸೂರ್ಯ ಹೊರಬಂದ ನಂತರ ವಿಕೆಟ್ ಸ್ವಲ್ಪ ಉತ್ತಮವಾಯಿತು. ನಾವು ನಿಜವಾಗಿಯೂ ಶಿಸ್ತುಬದ್ಧರಾಗಿ ದಾಳಿ ನಡೆಸಿದೆವು. ಆದ್ದರಿಂದ ನಾನು ಸಾಧ್ಯವಾದಷ್ಟು ಸೀಮ್ ಅನ್ನು ಹೊಡೆಯಲು ಪ್ರಯತ್ನಿಸಿದೆ ಎಂದು ಹೇಳಿದ್ದಾರೆ.

ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಬುಮ್ರಾ, ನಾವು ಭಾರತದಲ್ಲಿ ಆಡುತ್ತಿರುವಂತೆ ಭಾಸವಾಯಿತು. ಈ ಬೆಂಬಲದಿಂದ ನನಗೆ ನಿಜವಾಗಿಯೂ ಸಂತೋಷವಾಗಿದೆ. ಇದು ಮೈದಾನದಲ್ಲಿ ನಮಗೆ ಶಕ್ತಿಯನ್ನು ನೀಡುತ್ತದೆ. ನಾವೀಗ ಮುಂದಿನ ಪಂದ್ಯಕ್ಕೆ ಗಮನ ಹರಿಸುತ್ತೇವೆ. ನಿಜವಾಗಿಯೂ ಚೆನ್ನಾಗಿ ಆಡಿದ್ದೇವೆ ಎಂದು ಬುಮ್ರಾ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ವರ್ಲ್ಡ್‌ಕಪ್ 2024