ಕಿಂಗ್ ಕೊಹ್ಲಿ ಕಮ್​ಬ್ಯಾಕ್, ಸರ್ಫರಾಜ್​ ಹೊರಕ್ಕೆ: ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತದ ಪ್ಲೇಯಿಂಗ್ XI-team india likely playing xi for first test match vs bangladesh m chidambaram stadium kohli return sarfaraz out vbt ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಕಿಂಗ್ ಕೊಹ್ಲಿ ಕಮ್​ಬ್ಯಾಕ್, ಸರ್ಫರಾಜ್​ ಹೊರಕ್ಕೆ: ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತದ ಪ್ಲೇಯಿಂಗ್ Xi

ಕಿಂಗ್ ಕೊಹ್ಲಿ ಕಮ್​ಬ್ಯಾಕ್, ಸರ್ಫರಾಜ್​ ಹೊರಕ್ಕೆ: ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತದ ಪ್ಲೇಯಿಂಗ್ XI

Team India Likely Playing XI: ಭಾರತ-ಬಾಂಗ್ಲಾದೇಶ ನಡುವಣ ಮೊದಲ ಟೆಸ್ಟ್ ಪಂದ್ಯ ಸೆಪ್ಟೆಂಬರ್​ 19 ರಿಂದ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಶುರುವಾಗಲಿದೆ. ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಹೇಗಿರಬಹುದು ಎಂಬುದನ್ನು ನೋಡುವುದಾದರೆ…

ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತದ ಪ್ಲೇಯಿಂಗ್ XI
ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತದ ಪ್ಲೇಯಿಂಗ್ XI

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಸೋಲಿನ ನಂತರ, ಭಾರತ ಕ್ರಿಕೆಟ್ ತಂಡವು ಒಂದು ತಿಂಗಳ ದೀರ್ಘ ವಿರಾಮ ಪಡೆದುಕೊಂಡಿದೆ. ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಸೆಪ್ಟೆಂಬರ್ 19 ರಿಂದ ಶುರುವಾಗಲಿದ್ದು, ಈ ಮೂಲಕ ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ನಂತರ ಭಾರತ ಆಡುತ್ತಿರುವ ಮೊದಲ ಟೆಸ್ಟ್ ಸರಣಿ ಇದಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಭಾರತ ತನ್ನ ಅಗ್ರಸ್ಥಾನ ಗಟ್ಟಿಗೊಳಿಸಲು ಇದು ಮಹತ್ವದ ಸರಣಿಯಾಗಿದೆ. ಅಲ್ಲದೆ, ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಮೇಲ್ವಿಚಾರಣೆ ನಡೆಸುತ್ತಿರುವ ಮೊದಲ ಟೆಸ್ಟ್ ಸರಣಿ ಇದಾಗಿದೆ. ಚೆನ್ನೈನ ಎಂ. ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ಆಯೋಜಿಸಲಾಗಿದೆ. ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬುದನ್ನು ನೋಡುವುದಾದರೆ...

ಟಾಪ್​-4ನಲ್ಲಿ ಯಾರ್ಯಾರಿಗೆ ಅವಕಾಶ

ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ಸರಣಿಯ ನಂತರ ಯಶಸ್ವಿ ಜೈಸ್ವಾಲ್ ಭರವಸೆ ಮೂಡಿಸಿದ್ದು ಓಪನರ್ ಆಗಿ ಬ್ಯಾಟಿಂಗ್ ಶುರುಮಾಡುವುದು ಖಚಿತ. ಇವರ ಜೊತೆಗ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಶುಭ್ಮನ್ ಗಿಲ್ ಅವರು ಹೊಸದಾಗಿ ಕಂಡುಕೊಂಡಿರುವ ಟೆಸ್ಟ್ ಸ್ಥಾನದಲ್ಲಿ ನಂ.3 ರಲ್ಲಿ ಆಡಲಿದ್ದಾರೆ. ವಿರಾಟ್ ಕೊಹ್ಲಿ ಸುದೀರ್ಘ ವಿರಾಮದ ನಂತರ ಟೆಸ್ಟ್ ತಂಡಕ್ಕೆ ಮರಳಲು ಸಿದ್ಧರಾಗಿದ್ದು, ನಂ.4 ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ.

ತಂಡಕ್ಕೆ ಮರಳಲಿದ್ದಾರೆ ರಿಷಭ್ ಪಂತ್

ಸಾಕಷ್ಟು ಕುತೂಹಲ ಕೆರಳಿಸಿರುವ 5ನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್‌ ಮಾಡಬಹುದು. ಏಕೆಂದರೆ ಈ ಕ್ರಮಾಂಕದಲ್ಲಿ ಇವರ ಸಾಧನೆ ಅದ್ಭುತವಾಗಿದೆ. ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್-ಬ್ಯಾಟರ್ ಆಗಿ ಟೆಸ್ಟ್ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಇವರು ನಂ.6 ರಲ್ಲಿ ಆಡಲಿದ್ದಾರೆ.

ಸ್ಪಿನ್ ಆಲ್​ರೌಂಡರ್​ಗಳೇ ಮೂವರು ಕಣಕ್ಕೆ

ತಂಡದಲ್ಲಿರುವ ಇಬ್ಬರು ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳೆಂದರೆ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರು ನಂ.7 ಮತ್ತು 8 ರಲ್ಲಿ ಕಣಕ್ಕಿಳಿಯಲಿದ್ದಾರೆ. ಇದರರ್ಥ ಸರ್ಫರಾಜ್ ಖಾನ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರೂ ಆಡುವ XI ನಲ್ಲಿ ಈ ಬಾರಿ ಸ್ಥಾನ ಪಡೆದುಕೊಳ್ಳುವುದು ಅನುಮಾನ.

ಸರಣಿಗೆ ಬುಮ್ರಾ ಅಲಭ್ಯ

ಜಡ್ಡು ಮತ್ತು ಅಕ್ಷರ್ ಜೊತೆಗೆ ರವಿಚಂದ್ರನ್ ಅಶ್ವಿನ್ ನಂ.9 ರಲ್ಲಿ ಆಡಲಿದ್ದಾರೆ. ಇವರು ಬ್ಯಾಟಿಂಗ್​ನಲ್ಲೂ ಕೊಡುಗೆ ನೀಡಲಿದ್ದಾರೆ. ತಂಡದಲ್ಲಿರುವ ಇಬ್ಬರು ವೇಗಿಗಳು ಮೊಹಮ್ಮದ್ ಸಿರಾಜ್ ಮತ್ತು ಅರ್ಶ್‌ದೀಪ್ ಸಿಂಗ್. ಕೆಲಸದ ಹೊರೆ ನಿರ್ವಹಣೆಯಿಂದಾಗಿ ಜಸ್ಪ್ರೀತ್ ಬುಮ್ರಾ ಅವರು ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ.

ಭಾರತದ ಸಂಭಾವ್ಯ ಪ್ಲೇಯಿಂಗ್ XI Vs ಬಾಂಗ್ಲಾದೇಶ

ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್​ ಪಂತ್ (ವಿಕೆಟ್-ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಅರ್ಶ್ದೀಪ್ ಸಿಂಗ್.