ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಟ್ರೈಕ್​ರೇಟ್ ಟೀಕಿಸಿ ವಿವಾದ ಸೃಷ್ಟಿಸಿದ್ದ ಬಳಿಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕ ಆರಿಸಿದ ಸುನಿಲ್ ಗವಾಸ್ಕರ್

ಸ್ಟ್ರೈಕ್​ರೇಟ್ ಟೀಕಿಸಿ ವಿವಾದ ಸೃಷ್ಟಿಸಿದ್ದ ಬಳಿಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕ ಆರಿಸಿದ ಸುನಿಲ್ ಗವಾಸ್ಕರ್

Virat Kohli: ಟಿ20 ಕ್ರಿಕೆಟ್​ನಲ್ಲಿ ಸ್ಟ್ರೈಕ್​ರೇಟ್ ಬಗ್ಗೆ ವಿರಾಟ್ ಕೊಹ್ಲಿ ಅವರೊಂದಿಗೆ ಹಿಂದೆ ಮುಂದೆ ಮಾತನಾಡಿದ ಕೆಲವು ವಾರಗಳ ನಂತರ ಸುನಿಲ್ ಗವಾಸ್ಕರ್ ಈ ಹೇಳಿಕೆ ನೀಡಿದ್ದಾರೆ

ಸ್ಟ್ರೈಕ್​ರೇಟ್ ಟೀಕಿಸಿ ವಿವಾದ ಸೃಷ್ಟಿಸಿದ್ದ ಬಳಿಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕ ಆರಿಸಿದ ಸುನಿಲ್ ಗವಾಸ್ಕರ್
ಸ್ಟ್ರೈಕ್​ರೇಟ್ ಟೀಕಿಸಿ ವಿವಾದ ಸೃಷ್ಟಿಸಿದ್ದ ಬಳಿಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕ ಆರಿಸಿದ ಸುನಿಲ್ ಗವಾಸ್ಕರ್

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ವೇಳೆ ಭಾರತ ತಂಡದ ಬ್ಯಾಟಿಂಗ್ ಸೂಪರ್ ಸ್ಟಾರ್​ ವಿರಾಟ್ ಕೊಹ್ಲಿ ಸ್ಟ್ರೈಕ್​ರೇಟ್ ಕುರಿತು ಟೀಕಿಸಿದ್ದ ಸುನಿಲ್ ಗವಾಸ್ಕರ್ ಇದೀಗ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆತನ ಬ್ಯಾಟಿಂಗ್ ಕ್ರಮಾಂಕವನ್ನು ಆರಿಸಿದ್ದಾರೆ. ವಿಶ್ವಕಪ್​ನಲ್ಲಿ ವಿರಾಟ್, ಟೀಮ್ ಇಂಡಿಯಾ ಓಪನರ್ ಆಗಬೇಕೇ? ಇದು ಸದ್ಯ ದೊಡ್ಡ ಮಟ್ಟದ  ಚರ್ಚೆಯ ವಿಷಯವಾಗಿ ಮಾರ್ಪಟ್ಟಿರುವ ಬೆನ್ನಲ್ಲೇ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್​ ಪ್ರತಿಕ್ರಿಯೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಟಿ20 ವಿಶ್ವಕಪ್​​ ಟೂರ್ನಿಯಲ್ಲಿ ಎಡ-ಬಲ ಸಂಯೋಜನೆಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯಬೇಕು. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಹಲವರು ಬಯಸಿದ್ದಾರೆ. ಅದರಂತೆ ಸಾಕಷ್ಟು ಮಂದಿ ರೋಹಿತ್​-ವಿರಾಟ್ ಇನ್ನಿಂಗ್ಸ್ ಆರಂಭಿಸಬೇಕು ಎಂದು ಬೆಂಬಲಿಸಿದ್ದಾರೆ. ಐಪಿಎಲ್​​ನಲ್ಲಿ ಸ್ಟ್ರೈಕ್​ರೇಟ್ ವಿವಾದದ ನಂತರ ಗವಾಸ್ಕರ್, ವಿರಾಟ್ ಕೊಹ್ಲಿ ಐಪಿಎಲ್ ಅಭಿಯಾನ ಶ್ಲಾಘಿಸಿದ್ದಾರೆ. ವಿರಾಟ್ 15 ಇನ್ನಿಂಗ್ಸ್​​ಗಳಲ್ಲಿ 741 ರನ್ ಗಳಿಸಿದ್ದರು.

ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂಭಾಷಣೆಯಲ್ಲಿ 74 ವರ್ಷದ ಗವಾಸ್ಕರ್ ಅವರು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ವಿರಾಟ್ ಟೀಮ್ ಇಂಡಿಯಾ ಆರಂಭಿಕರಾಗಿ ಆಡಬೇಕು. ನಂತರ ಯಶಸ್ವಿ ಜೈಸ್ವಾಲ್ 3ನೇ ಮತ್ತು ಸೂರ್ಯಕುಮಾರ್ ಯಾದವ್ 4 ನೇ ಕ್ರಮಾಂಕದಲ್ಲಿ ಆಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ಟ್ರೈಕ್​ರೇಟ್ ವಿಚಾರವಾಗಿ ಕೊಹ್ಲಿಯನ್ನು ಟೀಕಿಸಿದ್ದ ಗವಾಸ್ಕರ್​, ಇದೀಗ ಅವರನ್ನು ಹೊಗಳುವ ಮೂಲಕ ಗಮನ ಸೆಳೆದಿದ್ದಾರೆ. ಅವರನ್ನೇ ಓಪನಿಂಗ್ ಮಾಡಿಸಬೇಕು ಎಂದು ಹೇಳಿದ್ದಾರೆ.

'ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿಬೇಕು. ಕೊಹ್ಲಿ ಬ್ಯಾಟಿಂಗ್ ಮಾಡಿದ ರೀತಿ, ಅದರಲ್ಲೂ ವಿಶೇಷವಾಗಿ ಐಪಿಎಲ್​​ ಸೆಕೆಂಡ್​ ಆಫ್​​ನಲ್ಲಿ ಕೊಹ್ಲಿ ಆಟ ಅದ್ಭುತವಾಗಿತ್ತು. ಹಾಗಾಗಿ ಮಾಜಿ ನಾಯಕ, ನಾಯಕ ರೋಹಿತ್ ಅವರೊಂದಿಗೆ ಬ್ಯಾಟಿಂಗ್ ಆರಂಭಿಸಲು ಅರ್ಹರು. ಅವರು ಉತ್ತಮ ಆಟಗಾರರು. ಅವರು ಎಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡಬಹುದು ಎಂದು ಗವಾಸ್ಕರ್ ಹೇಳಿದ್ದಾರೆ. ಆ ಮೂಲಕ ಎಡ-ಬಲ ಸಂಯೋಜನೆಯನ್ನು ತಳ್ಳಿಹಾಕಿದ್ದಾರೆ.

ಫಾರ್ಮ್​ನಲ್ಲಿರುವ ವಿರಾಟ್ ಅವರನ್ನು ಮೂರನೇ ಕ್ರಮಾಂಕದವರೆಗೂ ಕಾಯಿಸಲು ಬಯಸುವುದಿಲ್ಲ. ಎಡಗೈ-ಬಲಗೈ ಸಂಯೋಜನೆಯ ಬಗ್ಗೆ ಟವಿಯಲ್ಲಿ ಕೂತು ಮಾತನಾಡಲು ಚೆನ್ನಾಗಿರುತ್ತದೆ. ಆದರೆ, ಮೈದಾನದಲ್ಲಿ ಸಾಧ್ಯವಿಲ್ಲ. ನಾವು ರೋಹಿತ್ ಮತ್ತು ವಿರಾಟ್ ಇಬ್ಬರು ಅದ್ಭುತ ಆಟಗಾರರನ್ನು ಹೊಂದಿದ್ದೇವೆ. ಐಪಿಎಲ್​ನಲ್ಲಿ ಕೊಹ್ಲಿ ಯಾವ ರೀತಿಯ ಫಾರ್ಮ್ ಹೊಂದಿದ್ದಾರೆ ಎಂಬುದನ್ನುನಾವು ನೋಡಿದ್ದೇವೆ. ಹಾಗಾಗಿ ಅವರು, ಆರಂಭಿಕರಾಗಿ ಕಣಕ್ಕಿಳಿಯಬೇಕು ಎಂದು ಅವರು ಹೇಳಿದ್ದಾರೆ.

ಅವನು ಆ ಹರಿವಿನಲ್ಲಿರುವುದರಿಂದ, ಅವನು ಆ ಲಯದಲ್ಲಿದ್ದಾನೆ. ಕೊಹ್ಲಿ ಬ್ಯಾಟಿಂಗ್​ಗೆ ಕಾಯಬಾರದು ಎಂದು ಗವಾಸ್ಕರ್​ ಹೇಳಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಸ್ಟ್ರೈಕ್ ರೇಟ್ ಬಗ್ಗೆ ಕೊಹ್ಲಿ ಕುರಿತು ಟೀಕಿಸಿದ್ದ ನಂತರ ಗವಾಸ್ಕರ್ ಇದೀಗ ಹೊಗಳಿದ್ದಾರೆ. ತನ್ನ ಸ್ಟ್ರೈಕ್​ರೇಟ್ ಟೀಕಿಸಿದ್ದ ಮಾಜಿ ಆಟಗಾರರಿಗೆ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದರು. ಕಾಮೆಂಟರಿ ಬಾಕ್ಸ್​​ನಲ್ಲಿ ಕೂತು ನನ್ನ ಆಟ ಮತ್ತು ಸ್ಟ್ರೈಕ್​ರೇಟ್ ಬಗ್ಗೆ ಮಾತನಾಡುವುದು ಸುಲಭ ಎಂದು ಗವಾಸ್ಕರ್ ಸೇರಿ ಹಲವರಿಗೆ ತಿರುಗೇಟು ನೀಡಿದ್ದರು.

ಇನ್ನಷ್ಟು ಟಿ20 ವಿಶ್ವಕಪ್​​​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ವರ್ಲ್ಡ್‌ಕಪ್ 2024