ಕನ್ನಡ ಸುದ್ದಿ  /  ಕ್ರಿಕೆಟ್  /  ವಾಂಖೆಡೆಯಲ್ಲಿ ಮೊಳಗಿದ ವಂದೇ ಮಾತರಂ, ಅಭಿಮಾನಿಗಳೊಂದಿಗೆ ದನಿಗೂಡಿದ ವಿರಾಟ್-ಹಾರ್ದಿಕ್; ರೋಮಾಂಚಕ ವಿಡಿಯೋ ನೋಡಿ

ವಾಂಖೆಡೆಯಲ್ಲಿ ಮೊಳಗಿದ ವಂದೇ ಮಾತರಂ, ಅಭಿಮಾನಿಗಳೊಂದಿಗೆ ದನಿಗೂಡಿದ ವಿರಾಟ್-ಹಾರ್ದಿಕ್; ರೋಮಾಂಚಕ ವಿಡಿಯೋ ನೋಡಿ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ 'ವಂದೇ ಮಾತರಂ' ಹಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ 30 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ವಾಂಖೆಡೆಯಲ್ಲಿ ಮೊಳಗಿದೆ ವಂದೇ ಮಾತರಂ, ಅಭಿಮಾನಿಗಳೊಂದಿಗೆ ದನಿಗೂಡಿದ ವಿರಾಟ್-ಹಾರ್ದಿಕ್
ವಾಂಖೆಡೆಯಲ್ಲಿ ಮೊಳಗಿದೆ ವಂದೇ ಮಾತರಂ, ಅಭಿಮಾನಿಗಳೊಂದಿಗೆ ದನಿಗೂಡಿದ ವಿರಾಟ್-ಹಾರ್ದಿಕ್

ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆಲುವು ಸಾಧಿಸಿ ಒಂದು ವಾರ ಸಮೀಪಿಸಿದೆ. ಇನ್ನೂ ಭಾರತೀಯರು ಆ ಕ್ಷಣವನ್ನು ನೆನೆದು ಸಂಭ್ರಮಿಸುತ್ತಿದ್ದಾರೆ. ಕಳೆದ ಶನಿವಾರ ಬಾರ್ಬಡೋಸ್‌ನಲ್ಲಿ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಕ್ರಿಕೆಟ್‌ ಇತಿಹಾಸದಲ್ಲಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ, ಕಪ್‌ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಗುರುವಾರ ತವರಿಗೆ ಮರಳಿತು. ದೇಶಕ್ಕೆ ಹೆಮ್ಮೆ ತಂದ ಭಾರತ ತಂಡದ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯ್ತು. ಬಳಿಕ ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಆಟಗಾರರನ್ನು ಸನ್ಮಾನಿಸಲಾಯಿತು. ಮೈದಾನದಲ್ಲಿ ಆಟಗಾರರು ಪ್ರೇಕ್ಷಕ ವಂದನೆ ಸಲ್ಲಿಸಿದರು. ಈ ವೇಳೆ ಮೈದಾನದಲ್ಲಿ ಜೋರಾಗಿ ವಂದೇ ಮಾತರಂ ಗೀತೆ ಮೊಳಗಿತು. ಈ ವೇಳೆ ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ ಕೂಡಾ ಅಭಿಮಾನಿಗಳ ಜೊತೆಗೆ ಜೋರಾಗಿ ಧ್ವನಿಗೂಡಿಸಿದರು.

2011ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯ ವೇಳೆ, ಇದೇ ವಾಂಖೆಡೆ ಮೈದಾನದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಫೈನಲ್‌ ಪಂದ್ಯ ನಡೆದಿತ್ತು. ಪಂದ್ಯದಲ್ಲಿ ಟೀಮ್‌ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯದಲ್ಲಿ ಭಾರತ ಗೆಲ್ಲುವ ಕೆಲವೇ ಕ್ಷಣಗಳಿಗಿಂತ ಮೊದಲು ಇದೇ ರೀತಿಯಾಗಿ ವಂದೇ ಮಾತರಂ ಗೀತೆ ಮೊಳಗಿತ್ತು. ಆ ಕ್ಷಣದ ಬಗ್ಗೆ ನಾಯಕ ಎಂಎಸ್ ಧೋನಿ ಕೂಡಾ ಹೇಳಿಕೊಂಡಿದ್ದರು. ಇದೀಗ ದಶಕದ ಬಳಿಕ ಆ ಕ್ಷಣ ಮರುಸೃಷ್ಟಿಯಾಗಿದೆ. ಅದೇ ಸ್ಥಳದಲ್ಲಿ ಎಆರ್ ರೆಹಮಾನ್ ಅವರ ಪ್ರಸಿದ್ಧ ಗೀತೆ 'ಮಾ ತುಜೆ ಸಲಾಮ್' ಹಾಡು ಮೊಳಗಿದೆ. ಈ ಹಾಡು ಹಾಡಿದ ಅಭಿಮಾನಿಗಳು ದೇಶಾಭಿಮಾನದಲ್ಲಿ ಮಿಂದೆದ್ದರೆ, ಕೇಳಿದ ಅಭಿಮಾನಿಗಳು ರೋಮಂಚನಗೊಂಡರು.

ವಿಶ್ವಕಪ್‌ ಗೆದ್ದ ಬಳಿಕ ಗುರುವಾರ ಮೊದಲ ಬಾರಿಗೆ ಮುಂಬೈಗೆ ಬಂದ ಭಾರತ ತಂಡದ, ಮುಂಬೈನಲ್ಲಿ ಅದ್ಧೂರಿ ವಿಜಯಯಾತ್ರೆ ನಡೆಸಿತು. ಭಾರತ ತಂಡಕ್ಕೆ ಶುಭಕೋರಲು ಸಾವಿರಾರು ಜನರು ಮರೈನ್‌ ಡ್ರೈವ್‌ನಲ್ಲಿ ಸೇರಿದ್ದರು.

ಟ್ರೆಂಡಿಂಗ್​ ಸುದ್ದಿ

ಭಾರತ ತಂಡವು 2007ರಲ್ಲಿ ಮೊದಲ ಟಿ20 ವಿಶ್ವಕಪ್‌ ಗೆದ್ದಿತ್ತು. ಅದಾದ ನಂತರ ಇದು ಎರಡನೇ ವಿಶ್ವ ಪ್ರಶಸ್ತಿ ಗೆದ್ದಿದೆ. ವೆಸ್ಟ್‌ ಇಂಡೀಸ್‌ನಲ್ಲಿ ಪಂದ್ಯ ನಡೆದಿದ್ದರಿಂದ ಭಾರತೀಯ ಅಭಿಮಾನಿಗಳು ತವರಿನಲ್ಲಿ ಆ ಕ್ಷಣವನ್ನು ಕಣ್ತುಂಬಿಕೊಳ್ಳುವ ಅವಕಾಶ ಕಳೆದುಕೊಂಡಿದ್ದರು. ಆದರೆ, ಆಟಗಾರರು ಅಭಿಮಾನಿಗಳಿಗೆ ನಿರಾಶೆ ಮಾಡಿಲ್ಲ. ವಾಂಖೆಡೆ ಪ್ರೇಕ್ಷಕರು ಒಗ್ಗಟ್ಟಿನಿಂದ 'ಮಾ ತುಜೆ ಸಲಾಮ್' ಹಾಡಲು ಪ್ರಾರಂಭಿಸಿದ್ದಾರೆ. ಅವರ ಜೊತೆಗೆ ಆಟಗಾರರು ಕೂಡ ಅಧ್ವನಿಗೂಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

3 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಣೆ

'ವಂದೇ ಮಾತರಂ' ಎಂಬ ಕ್ಯಾಪ್ಷನ್‌ನೊಂದಿದೆ ಬಿಸಿಸಿಐ ಈ ವಿಡಿಯೋವನ್ನು ಹಂಚಿಕೊಂಡಿದೆ. ಇದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈಗಾಗಲೇ 3 ಮಿಲಿಯನ್‌ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಬೆರಿಲ್ ಚಂಡಮಾರುತದಿಂದಾಗಿ ಬಾರ್ಬಡೋಸ್‌ನಲ್ಲಿ ಸಿಲುಕಿದ್ದ ಟೀಮ್ ಇಂಡಿಯಾ, ಅಂತಿಮವಾಗಿ ಚಾರ್ಟರ್ ವಿಮಾನದಲ್ಲಿ ಗುರುವಾರ ಮುಂಜಾನೆ ನವದೆಹಲಿಗೆ ಬಂದಿಳಿಯಿತು. ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ತಂಡ ಅವರೊಂದಿಗೆ ಚಹಾ ಕೂಟದಲ್ಲಿ ಭಾಗಿಯಾದರು. ದೆಹಲಿಯಿಂದ ಮುಂಬೈಗೆ ಬಂದ ತಂಡವನ್ನು ಸ್ವಾಗತಿಸಲು ಸಾವಿರಾರು ಅಭಿಮಾನಿಗಳು ಮರೈನ್ ಡ್ರೈವ್‌ನಲ್ಲಿ ಸೇರಿದ್ದರು.