ಕನ್ನಡ ಸುದ್ದಿ  /  ಚುನಾವಣೆಗಳು  /  ಪಶ್ಚಿಮ ಬಂಗಾಳದಲ್ಲಿ 2019ರ ಎಕ್ಸಿಟ್‌ ಪೋಲ್‌ ಭವಿಷ್ಯವಾಣಿ ಏನಾಗಿತ್ತು; ಈ ಬಾರಿ ಹೇಗಿದೆ ಚುನಾವಣಾ ಟ್ರೆಂಡ್?

ಪಶ್ಚಿಮ ಬಂಗಾಳದಲ್ಲಿ 2019ರ ಎಕ್ಸಿಟ್‌ ಪೋಲ್‌ ಭವಿಷ್ಯವಾಣಿ ಏನಾಗಿತ್ತು; ಈ ಬಾರಿ ಹೇಗಿದೆ ಚುನಾವಣಾ ಟ್ರೆಂಡ್?

ಲೋಕಸಭಾ ಚುನಾವಣೆ 2024ರ ಎಕ್ಸಿಟ್‌ ಪೋಲ್‌ ಫಲಿತಾಂಶಕ್ಕಾಗಿ ದೇಶವೇ ಕಾಯುತ್ತಿದೆ. 2019ರಲ್ಲಿ ಪಶ್ಚಿಮ ಬಂಗಾಳ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಅಲ್ಪ ವ್ಯತ್ಯಾಸದೊಂದಿಗೆ ನಿಜವಾಗಿತ್ತು.‌ ಈ ಬಾರಿಯೂ ಇದೇ ನಿರೀಕ್ಷೆ ಇದೆ.

ಪಶ್ಚಿಮ ಬಂಗಾಳದಲ್ಲಿ 2019ರ ಎಕ್ಸಿಟ್‌ ಪೋಲ್‌ ಭವಿಷ್ಯವಾಣಿ ಏನಾಗಿತ್ತು; ಈ ಬಾರಿ ಹೇಗಿದೆ ಚುನಾವಣಾ ಟ್ರೆಂಡ್?
ಪಶ್ಚಿಮ ಬಂಗಾಳದಲ್ಲಿ 2019ರ ಎಕ್ಸಿಟ್‌ ಪೋಲ್‌ ಭವಿಷ್ಯವಾಣಿ ಏನಾಗಿತ್ತು; ಈ ಬಾರಿ ಹೇಗಿದೆ ಚುನಾವಣಾ ಟ್ರೆಂಡ್?

ಭಾರತದ ಗಮನ ಸೆಳೆಯು ಪಶ್ಚಿಮ ಬಂಗಾಳ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ ಎಕ್ಸಿಟ್‌ ಪೋಲ್‌ ಫಲಿತಾಂಶ ಗಮನ ಸೆಳೆಯುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಬಂಗಾಳ ಚುನಾವಣಾ ಅಖಾಡ ತುಸು ಭಿನ್ನವಾಗಿದೆ. ಸಂಸತ್ತಿಗೆ ಪ್ರವೇಶ ಪಡೆಯಲು ಒಟ್ಟು 42 ಸದಸ್ಯರನ್ನು ಪಶ್ಚಿಮ ಬಂಗಾಳದ ಜನರು ಆಯ್ಕೆ ಮಾಡಿ ಕಳುಹಿಸುತ್ತಾರೆ. ರಾಜ್ಯದಲ್ಲಿ ಪ್ರಮುಖ ಪಕ್ಷವಾಗಿರುವ ಟಿಎಂಸಿ ತನ್ನ ಪ್ರಾಬಲ್ಯ ಮುಂದುವರೆಸುವ ವಿಶ್ವಾಸ ಹೊಂದಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 2021ರ ವಿಧಾನಸಭೆ ಚುನಾವಣೆಯಲ್ಲೂ ಯಶಸ್ಸು ಸಾಧಿಸಿತ್ತು. ಇದೀಗ ಲೋಕಸಭೆ ಸಮರದಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ ನೀಡಿರುವ ತೃಣಮೂಲ ಕಾಂಗ್ರೆಸ್‌, ಈ ಬಾರಿಯೂ ಮೇಲುಗೈ ಸಾಧಿಸುವ ನಿರೀಕ್ಷೆ ವ್ಯಕ್ತಪಡಿಸಿದೆ.

ಟ್ರೆಂಡಿಂಗ್​ ಸುದ್ದಿ

ಜೂನ್‌ 1ರಂದು ಕೊನೆಯ ಹಂತದ ಮತದಾನ ನಡೆಯುತ್ತಿದ್ದು, ಸಂಜೆ 6ರ ನಂತರ ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರಬೀಳಲಿದೆ. ಕಳೆದ ಬಾರಿಯ ಎಕ್ಸಿಟ್‌ ಪೋಲ್‌ ಫಲಿತಾಂಶಕ್ಕೂ ಅಂತಿಮ ಫಲಿತಾಂಶಕ್ಕೂ ಬಹುತೇಕ ತಾಳೆಯಾಗಿತ್ತು. ನಿವ್ಸ್‌ 24- ಟುಡೇಸ್‌ ಚಾಣಕ್ಯ, ಇಂಡಿಯಾ ಟುಡೆ ಹಾಗೂ ಎಬಿಪಿ ಭವಿಷ್ಯವಾಣಿ ಸರಿಯಾಗಿತ್ತು. ಎಲ್ಲಾ ಎಕ್ಸಿಟ್‌ ಪೋಲ್‌ಗಳು ಟಿಎಂಸಿ ಮುನ್ನಡೆಯನ್ನು ಸೂಚಿಸಿದರೆ, ಬಿಜೆಪಿ ಸ್ಥಾನ ಹೆಚ್ಚಿಸಿಕೊಳ್ಳುತ್ತದೆ ಎಂದಿದ್ದವು. ಅದು ನಿಜವೂ ಆಯ್ತು.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್‌ 2 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ದೇಶದಲ್ಲಿ ನಮೋ ಹವಾ ನಡುವೆಯೂ ಬಂಗಾಳದಲ್ಲಿ ಟಿಎಂಸಿ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ 22 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಆದರೆ, ಬಿಜೆಪಿ ಅಬ್ಬರದಿಂದಾಗಿ 2014ರ ಚುನಾವಣೆಯಲ್ಲಿ ಗೆದ್ದಿದ್ದ 12 ಕ್ಷೇತ್ರಗಳನ್ನು ಕಳೆದುಕೊಂಡಿತ್ತು. ಅತ್ತ ಏಕಾಏಕಿ 16 ಕ್ಷೇತ್ರಗಳನ್ನು ಹೆಚ್ಚಿಸಿಕೊಂಡ ಬಿಜೆಪಿ 18ರಲ್ಲಿ ಗೆದ್ದಿತು. ಇದೀಗ ಈ ಬಾರಿಯೂ ಇದೇ ಚಿತ್ರಣ ಇರಲಿದೆ ಎಂದು ಹೇಳುವುದು ಕಷ್ಟಸಾಧ್ಯ. ಕಳೆದ ಬಾರಿ ಗೆದ್ದ ಸ್ಥಾನಗಳನ್ನು ಉಳಿಸಿಕೊಳ್ಳುಬಹುದು ಎಂಬ ಭರವಸೆ ಖುದ್ದು ಬಿಜೆಪಿಗಿಲ್ಲ.

ಕಾಂಗ್ರೆಸ್‌ ಪಕ್ಷವು ದೀದಿ ತವರಲ್ಲಿ 12 ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿದ್ದು, ಉಳಿದೊಂದಿಗೆ ಮೈತ್ರಿಕೂಟದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಮತಾ ಬ್ಯಾನರ್ಜಿ ಅವರು ಇಂಡಿಯಾ ಮೈತ್ರಿಕೂಟದಿಂದ ದೂರ ಉಳಿದಿದ್ದಾರೆ. ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರದಿಂದ ಕಿತ್ತೊಗೆಯುವ ಸಲುವಾಗಿ ಮೈತ್ರಿಗೆ ಬಾಹ್ಯ ಬೆಂಬಲ ನೀಡುವುದಾಗಿ ಮಮತಾ ಘೋಷಿಸಿದ್ದಾರೆ. ಬಿಜೆಪಿಯು ಸ್ವತಂತ್ರವಾಗಿ ಎಲ್ಲಾ 42 ಕ್ಷೇತ್ರದಲ್ಲಿ ಕಣಕ್ಕಿಳಿದರೆ, ಸಹಜವಾಗಿ ಟಿಎಂಸಿ ಕೂಡಾ ತನ್ನದೇ ಅಭ್ಯರ್ಥಿಗಳನ್ನು ಕಣದಲ್ಲಿ ಇರಿಸಿದೆ.