Entertainment News in Kannada Live September 7, 2024: ಸ್ಯಾಂಡಲ್‌ವುಡ್‌ನಲ್ಲೂ ಲೈಂಗಿಕ ದೌರ್ಜನ್ಯದ ಸದ್ದು, ಸೆ. 16ಕ್ಕೆ ಮಹತ್ವದ ಸಭೆ ಕರೆದ ಚಲನಚಿತ್ರ ವಾಣಿಜ್ಯ ಮಂಡಳಿ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sat, 07 Sep 202410:19 AM IST
- ಸೆಪ್ಟೆಂಬರ್ 16ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಕರೆದಿದೆ. ಈ ಸಭೆಯಲ್ಲಿ ಸ್ಯಾಂಡಲ್‌ವುಡ್‌ನ ಹಿರಿಯ ನಟ-ನಟಿಯರು, ನಿರ್ಮಾಪಕರು ಹಾಗೂ ನಿರ್ದೇಶಕರು ಭಾಗವಹಿಸಲಿದ್ದಾರೆ. ಚಿತ್ರರಂಗದಲ್ಲಿ ಕಲಾವಿದೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಚರ್ಚೆ ನಡೆಯಲಿದೆ. ವರದಿ: (ಎಚ್. ಮಾರುತಿ)
Sat, 07 Sep 202408:14 AM IST
ದೃಶ್ಯಂ ಸಿನಿಮಾ ಖ್ಯಾತಿಯ ಜೀತು ಜೋಸೆಫ್ ಕ್ರೈಂ ಥ್ರಿಲ್ಲರ್ ಸ್ಪೆಷಲಿಸ್ಟ್ ಎಂದೇ ಫೇಮಸ್. ಈಗ ಅವರು ಆ ಹಣೆಪಟ್ಟಿಯಿಂದ ಹೊರ ಬಂದು ಕ್ರೈಂ ಕಾಮಿಡಿ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಸಿನಿಮಾ ಆಗಸ್ಟ್ 15 ರಂದು ಥಿಯೇಟರ್‌ನಲ್ಲಿ ರಿಲೀಸ್ ಆಗಿತ್ತು. ಈಗ ಒಟಿಟಿಯಲ್ಲಿ ಸ್ಟ್ರೀಮ್ ಆಗಲು ಸಜ್ಜಾಗಿದೆ.
Sat, 07 Sep 202405:51 AM IST
ಗುರುವಾರ ತೆರೆ ಕಂಡ ವಿಜಯ್ ಅಭಿನಯದ ಗೋಟ್ ಸಿನಿಮಾ ಎರಡು ದಿನಗಳಲ್ಲಿ ಒಟ್ಟು 67 ಕೋಟಿ ರೂ. ಲಾಭ ಮಾಡಿದೆ. ಆದರೆ ಮೊದಲ ದಿನಕ್ಕೆ ಹೋಲಿಸಿದರೆ ಎಡರನೇ ದಿನ ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿದೆ. ವೀಕೆಂಡ್‌ವರೆಗೂ ಕಾದು ನೋಡಬೇಕು ಎಂದು ಸಿನಿ ವಿಮರ್ಶಕ ತರಣ್ ಆದರ್ಶ್ ಹೇಳಿದ್ದಾರೆ.
Sat, 07 Sep 202403:49 AM IST
Bhagyalakshmi Kannada Serial: ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಸೆಪ್ಟೆಂಬರ್ 6ರ ಎಪಿಸೋಡ್‌ನಲ್ಲಿ ತಾಂಡವ್ ಕಿಟಕಿ ಸರಳುಗಳನ್ನು ತೆಗೆದು ತಪ್ಪಿಸಿಕೊಂಡ ವಿಚಾರ ತಿಳಿದು ಕುಸುಮಾ ಶಾಕ್ ಆಗುತ್ತಾಳೆ. ಇತ್ತ ಸುಂದ್ರಿ ಹಾಗೂ ಹಿತಾ, ಪೂಜಾಳನ್ನು ಹುಡುಕಲು ಆರಂಭಿಸುತ್ತಾರೆ.
Sat, 07 Sep 202403:07 AM IST
- Shravani Subramanya Kannada Serial Today Episode September 6th: ಪಂಕ್ಚರ್ ರಿಪೇರಿ ಮಾಡಿಸಿಕೊಂಡು ಹೊರಟ್ರು ಶ್ರಾವಣಿ–ಸುಬ್ರಹ್ಮಣ್ಯ. ಸಾಲಿಗ್ರಾಮದ ರಂಗಣ್ಣನ ಟೀ ಅಂಗಡಿಯಲ್ಲಿ ವಿಜಯಾಂಬಿಕಾ ಬದುಕಿನ ಮೊದಲ ಸತ್ಯ ಬಯಲು. ತಾಯಿಗೆ ಊರಿಗೆ ಕಾಲಿಟ್ಟ ಶ್ರಾವಣಿ ಕಣ್ಣಲ್ಲಿ ನೀರು. ವೀರೇಂದ್ರ ಕುಟುಂಬಕ್ಕೆ ಸಾಲಿಗ್ರಾಮದಲ್ಲಿ ಅದ್ಧೂರಿ ಸ್ವಾಗತ.