Amruthadhaare: ಮಲ್ಲಿ, ಭೂಮಿಕಾ ತಲೆತಗ್ಗಿಸುವಂತೆ ಮಾಡಿದ್ಲು ಅಪೇಕ್ಷಾ ದಿವಾನ್; ಆನಂದ್ ಕೈಯಿಂದ ಪೆಟ್ಟುತಿಂದ ಜೈದೇವ್
Amruthadhare Serial Episode 290: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾಳ ಅಹಂ ಬೆಳೆದಿದೆ. ಶಕುಂತಲಾದೇವಿ ನಾಟಕ ತಿಳಿಯದೆ ಭೂಮಿಕಾ, ಮಲ್ಲಿ ತಲೆತಗ್ಗಿಸುವಂತೆ ಮಾಡುತ್ತಾಳೆ. ಇನ್ನೊಂದೆಡೆ ಜೈದೇವ್‌ನ ಕ್ರೂರತೆ ಕುರಿತು ಆನಂದ್ ದುಃಖದಲ್ಲಿದ್ದಾನೆ. ಈ ವಿಚಾರ ಗೌತಮ್‌ಗೆ ಹೇಳದೆ ಜೈದೇವ್ ಮುಂದೆ ಅಬ್ಬರಿಸಿದ್ದಾನೆ.
Zee Kannada Amruthadhare Serial Episode 290: ಆನಂದ್ ಮನೆಯಲ್ಲಿದ್ದಾನೆ. ಪಾರ್ಥ ಮತ್ತು ಅಪೇಕ್ಷಾನ ಬ್ರೇಕಿಂಗ್ ಸುದ್ದಿ ಬಗ್ಗೆ ಅಪರ್ಣಾ ಮಾತನಾಡುತ್ತ ಇದ್ದಾಳೆ. ಆದರೆ, ಆನಂದ್ ಡಿಸ್ಟರ್ಬ್ ಆಗಿದ್ದಾನೆ. ಆತನಿಗೆ ಜೈದೇವ್‌ನ ವಿಷಯ ತಿಳಿದಿದೆ. ಅಪೇಕ್ಷಾ ದಂಪತಿಗೆ ವಿಷ್ ಮಾಡೋಣ ಎಂದರೂ ಆನಂದ್ ಹೋಗಲು ರೆಡಿಯಿಲ್ಲ. ಯಾಕೆ ಇಷ್ಟೊಂದು ಟೆನ್ಷನ್‌ನಲ್ಲಿದ್ದೀಯ ಎಂದು ಪದೇಪದೇ ಅಪರ್ಣಾ ಕೇಳುತ್ತಾಳೆ. ಆನಂದ್ ಮನಸ್ಸಿನಲ್ಲಿ ರೌಡಿ ಹೇಳಿದ ಮಾತುಗಳೇ ಕೇಳುತ್ತಿದೆ.
ಇನ್ನೊಂದೆಡೆ ಶಕುಂತಲಾದೇವಿ ಜತೆ ಫ್ರೆಂಡ್ಸ್ ಮಾತನಾಡುತ್ತ ಇದ್ದಾರೆ. "ನನ್ನ ಹೊಸ ಸೊಸೆಯನ್ನು ಪರಿಚಯಿಸ್ತಿನಿ" ಎಂದು ಶಕುಂತಲಾ ಹೇಳ್ತಿನಿ. ತುಂಬಾ ಪ್ರೀತಿಯಿಂದ ಅಪೇಕ್ಷಾಳನ್ನು ಪರಿಚಯಿಸುತ್ತಾಳೆ. "ಸ್ಟೈಲಿಶ್ ಆಗಿ ನಿಮ್ಮ ರೀತಿ ಇದ್ದಾಳೆ" ಎಂದು ಫ್ರೆಂಡ್ಸ್ ಹೇಳುತ್ತಾರೆ. "ಇವಳು ನನ್ನ ಫೇವರಿಟ್" ಎಂದು ಶಕುಂತಲಾ ಹೇಳುತ್ತಾಳೆ. "ನಿಮಗೆಲ್ಲ ಟೀ ಕೊಡಲು ಮರೆತೆ. ಅಪೇಕ್ಷಾ, ಹೋಗಿ ಕೆಲಸದವರಿಗೆ ಕಾಫಿ ತರಲು ಹೇಳು" ಎಂದು ಅಪೇಕ್ಷಾ ಕಳುಹಿಸುತ್ತಾಳೆ. "ಇವಳು ಭೂಮಿಕಾನ ತಂಗಿ" ಎಂದೆಲ್ಲ ಮಾತನಾಡುತ್ತಾರೆ. "ಹಿರಿ ಸೊಸೆ ರೀತಿ ಎದುರು ಮಾತನಾಡುತ್ತಾಳ?" ಎಂದು ಕೇಳಿದಾಗ "ಇಲ್ಲ ನನ್ನ ಮಾತು ಕೇಳುವಂತಹ ಸೊಸೆ" ಎಂದು ಶಕುಂತಲಾ ಹೇಳುತ್ತಾರೆ.
ಮಲ್ಲಿಗೆ ಅವಮಾನ ಮಾಡಿದ ಅಪೇಕ್ಷಾ
ಅಪೇಕ್ಷಾ ಕೆಲಸದವರನ್ನು ಹುಡುಕುತ್ತಾ ಅಡಿಗೆಕೋಣೆಗೆ ಬರುತ್ತಾಳೆ. ಅಲ್ಲಿ ಗರ್ಭಿಣಿ ಮಲ್ಲಿ ಒಬ್ಬರೇ ಏನೋ ಮಾಡುತ್ತ ಇರುತ್ತಾರೆ. "ಮಲ್ಲಿಯವರೇ ಕೆಲಸದವರು ಎಲ್ಲಿ" ಎಂದು ಕೇಳುತ್ತಾಳೆ. "ಅವರು ತಿಂಡಿ ಮಾಡಲು ಹೋಗಿದ್ದಾರೆ" ಎನ್ನುತ್ತಾಳೆ. "ಅತ್ತೆ ಕಾಫಿ ತರಲು ಹೇಳಿದ್ದಾರೆ. ಮಲ್ಲಿಯವರೇ ಕಾಫಿ ಮಾಡಿಕೊಂಡು ಬನ್ನಿ" ಎಂದು ಅಪೇಕ್ಷಾ ಹೇಳಿದಾಗ ಮಲ್ಲಿಗೆ ಇರಿಸುಮುರಿಸಾಗುತ್ತದೆ.
ಆನಂದ್‌ಗೆ ಗೌತಮ್ ಕಾಲ್ ಮಾಡುತ್ತಾನೆ. ಆದರೆ, ಜೈದೇವ್ ವಿಷಯನ ಹೇಳಲು ಧೈರ್ಯ ಸಾಲುತ್ತಿಲ್ಲ. "ಗೆಳೆಯ ಪ್ರಾಬ್ಲಂ ಏನೂ ಇಲ್ಲ. ಅವನು ತಪ್ಪಿಸಿಕೊಂಡು ಹೋಗಿದ್ದಾನೆ" ಎಂದು ಸುಳ್ಳು ಹೇಳುತ್ತಾನೆ. ತಪ್ಪಿಸಿಕೊಂಡು ಹೋಗಿರುವ ವಿಚಾರವನ್ನು ನಂಬಲು ಗೌತಮ್ ಸಿದ್ಧರಿಲ್ಲ. ಒಂದಿಷ್ಟು ಬೈಗುಳ ಇರುತ್ತದೆ. "ನನಗೆ ಗೊತ್ತಾದ ಸತ್ಯ ನಿನಗೆ ಗೊತ್ತಾದರೆ ನಿನ್ನ ಎದೆ ಒಡೆಯುತ್ತದೆ. ಅದಕ್ಕೆ ಹೇಳಲಿಲ್ಲ" ಎಂದು ಆನಂದ್ ಮನಸ್ಸಲ್ಲಿ ನೊಂದುಕೊಳ್ಳುತ್ತಾನೆ. "ಒಂದಲ್ಲ ಒಂದು ದಿನ ಈ ಸತ್ಯ ಹೇಳಿಯೇ ಹೇಳುತ್ತೇನೆ" ಎಂದುಕೊಳ್ಳುತ್ತಾನೆ.
ಮಲ್ಲಿಯೇ ಎಲ್ಲರಿಗೂ ಕಾಫಿ ಕೊಡುತ್ತಾಳೆ. ಮಲ್ಲಿ ಕಾಫಿ ಕೊಡುವಾಗ ಫ್ರೆಂಡ್ಸ್ ಒಬ್ಬಳ ಬಟ್ಟೆಗೆ ಕಾಫಿ ಚೆಲ್ಲುತ್ತದೆ. "ಮಲ್ಲಿಯವರೇ ನೋಡಿಕೋಡೋದಲ್ಲ. ಕ್ಷಮಿಸಿ ಇವರೇ" ಎಂದು ಕ್ಷಮೆ ಕೇಳುತ್ತಾರೆ. "ಅಪೇಕ್ಷಾ ಅವರೇ ನೀವು ಯಾವುದೇ ರೀತಿಯಲ್ಲೂ ಭೂಮಿಕಾ ರೀತಿ ಕಾಣಿಸೋದಿಲ್ಲ" ಎಂದು ಅಪೇಕ್ಷಾ ಹೇಳುವುದು ದೂರದಲ್ಲಿರುವ ಭೂಮಿಕಾಳಿಗೆ ಕೇಳಿಸುತ್ತದೆ. ಆಕೆ ನೊಂದುಕೊಳ್ಳುತ್ತಾಳೆ. "ಅತ್ತೆ ಸೊಸೆ ಎಷ್ಟು ಅನ್ಯೋನ್ಯವಾಗಿದ್ದಾರೆ" ಎಂದು ಹೆಂಗಳೆಯರ ಮಾತು ಇರುತ್ತದೆ. ಒಟ್ಟಾರೆ ಅಪ್ಪಿ ಬದಲಾಗಿದ್ದಾಳೆ.
ಜೈದೇವ್ ಕೆನ್ನೆಗೆ ಹೊಡೆದ ಆನಂದ್
ಜೈದೇವ್ ತನ್ನ ಗೆಳತಿ ಮನೆಯಲ್ಲಿದ್ದಾನೆ. ಆತ ಏನೋ ಗಾಢವಾಗಿ ಯೋಚಿಸುತ್ತ ಇದ್ದಾನೆ. ಆಗ ಕಾಲ್ ಬರುತ್ತದೆ. ರೌಡಿ ಲೋಕಿ ಕಾಲ್ ಮಾಡುತ್ತಾನೆ. "ನಾನು ತಪ್ಪಿಸಿಕೊಂಡು ಬಂದೆ" ಎಂದು ಹೇಳುತ್ತಾನೆ. "ನಿಮ್ಮ ಹೆಸರು ಅವರಲ್ಲಿ ಹೇಳಲಿಲ್ಲ ಅಣ್ಣಾ" ಎಂದು ಸುಳ್ಳು ಹೇಳುತ್ತಾನೆ. "ಸ್ವಲ್ಪ ದಿನ ಎಲ್ಲಾದರೂ ತಲೆ ಮರೆಸಿಕೊಂಡಿರು" ಎಂದು ಹೇಳಿ ಜೈದೇವ್ ಒಂದಿಷ್ಟು ಹಣ ನೀಡುತ್ತಾನೆ. ಇದಾದ ಬಳಿಕ ತನ್ನ ಗೆಳತಿ ದಿಯಾಳ ಜತೆ ಕಾಲ ಕಳೆಯುತ್ತಾನೆ. ಆ ಸಮಯದಲ್ಲಿ ಆನಂದ್ ಜೈದೇವ್‌ಗೆ ಕಾಲ್ ಮಾಡುತ್ತಾನೆ. ಆನಂದ್ ಹೇಳಿದ ಸ್ಥಳಕ್ಕೆ ಹೋಗುತ್ತಾನೆ.
ಭೂಮಿಕಾ ಅಪೇಕ್ಷಾ ಮಾತನಾಡುತ್ತಾ ಇದ್ದಾರೆ. "ಇತರರಲ್ಲಿ ಮಾತನಾಡುವಾಗ ವಿನಯ ಗೌರವ ಇರಬೇಕು. ಬೇಸಿಕಲಿ ಅಪ್ಪಿ ಎಲ್ಲರಲ್ಲೂ ಮನಸ್ಸು ಇರುತ್ತದೆ. ನಾವು ಅವರ ಮನಸ್ಸಿಗೆ ನೋವು ಮಾಡಿದವರಿಗೆ ನೋವು ಇರುತ್ತದೆ" ಎಂದು ಭೂಮಿಕಾ ಹೇಳುತ್ತಾಳೆ. "ಅದ್ಯಾಕೆ ಈಗ" ಎನ್ನುತ್ತಾಳೆ ಅಪೇಕ್ಷಾ. "ಅತ್ತೆ ಗೆಳತಿಯರ ಮುಂದೆ ಮಲ್ಲಿಗೆ ಅವಮಾನವಾಗುವ ಹಾಗೆ ಮಾತನಾಡಿದೆ. ಅದು ಸರಿನಾ?" ಎಂದು ಕೇಳುತ್ತಾಳೆ. "ನಿನ್ನ ತರಹ ಅವಳೂ ಈ ಮನೆಯ ಸೊಸೆ. ಅವಳ ಜತೆ ಹಗುರವಾಗಿ ಮಾತನಾಡಬೇಡ" ಎನ್ನುತ್ತಾಳೆ. "ಯಾರಿಗೆ ಎಷ್ಟು ರೆಸ್ಪೆಕ್ಟ್ ಕೊಡಬೇಕು. ಯಾರನ್ನು ಎಲ್ಲಿ ಇಡಬೇಕು ಎಂದು ನನಗೆ ಗೊತ್ತು" ಎಂದು ಅಪೇಕ್ಷಾ ಧಿಮಾಕಿನಿಂದ ಮಾತನಾಡುತ್ತಾಳೆ. "ಪ್ರತಿಯೊಬ್ಬರಿಗೂ ಅವರದ್ದೇ ಆದ ಐಡೆಂಟೆಟಿ ಇರುತ್ತದೆ. ಇದು ಕೋಚಿಂಗ್ ಸೆಂಟರ್ ಅಲ್ಲ. ಮನೆ. ಯಾರು ಹೇಗೆ ಇರುತ್ತಾರೋ ನನಗೆ ಗೊತ್ತಿಲ್ಲ. ನಾನು ಮೊದಲಿನಂತೆ ಇರುತ್ತೇನೆ. ನನಗೆ ಚಿಕ್ಕಮಕ್ಕಳ ರೀತಿ ಬುದ್ಧಿಹೇಳಬೇಡ" ಎಂದು ಅಪೇಕ್ಷಾ ಹೇಳುತ್ತಾಳೆ. ಭೂಮಿಕಾ ತಲೆತಗ್ಗಿಸುತ್ತಾಳೆ.
ಸದಾಶಿವ ಮನೆಯಲ್ಲಿ "ಅವರಿಬ್ಬರನ್ನೂ ಕ್ಷಮಿಸೋದಿಲ್ಲ" ಎಂದು ಹೇಳುತ್ತಾರೆ. "ಅವರ ವಿಷಯದಲ್ಲಿ ನನ್ನ ಯೋಚನೆ ಬದಲಾವಣೆಯಾಗೋಲ್ಲ" ಎಂದು ಹೇಳಿದಾಗ ಮಂದಾಕಿನಿ ಬೇಸರ ವ್ಯಕ್ತಪಡಿಸುತ್ತಾರೆ. "ಊಟ ಎಲ್ಲಾ ಬಿಡುವಷ್ಟು ಅಪೇಕ್ಷಾ ಬದಲಾಗಿದ್ದಾಳೆ ಎಂದುಕೊಳ್ಳಬೇಡ. ಅವಳು ನಮ್ಮ ವಿಷಯದಲ್ಲಿ ಪಶ್ಚಾತಾಪ ಏನೂ ಇರೋಲ್ಲ. ಅವೆಲ್ಲ ಇದ್ದರೆ ಹೀಗೆ ಮದುವೆಯಾಗ್ತಾ ಇರಲಿಲ್ಲ" ಎಂದು ಹೇಳುತ್ತಾರೆ ಸದಾಶಿವ.
ಆನಂದ್ ಹೇಳಿದ ಸ್ಥಳಕ್ಕೆ ಜೈದೇವ್ ಬರುತ್ತಾನೆ. ಎದುರು ನಿಂತ ಜೈದೇವ್‌ಗೆ "ನಿನ್ನತ್ರ ಒಂದು ಪ್ರಮುಖ ವಿಷಯ ಮಾತನಾಡಬೇಕಿತ್ತು" ಎಂದು ಕೆನ್ನೆಗೆ ಚಟೀರ್ ಎಂದು ಹೊಡೆಯುತ್ತಾನೆ. "ಅಮಾಯಕನ ರೀತಿ ಪೋಸ್ ನೀಡ್ತಾ ಇದ್ದೀಯ. ನಿನ್ನ ಬಗ್ಗೆ ಎಲ್ಲಾ ತಿಳಿದುಕೊಂಡು ಬಂದಿದ್ದೇನೆ" ಎಂದು ಅಬ್ಬರಿಸುತ್ತಾನೆ. "ಸ್ವಲ್ಪವಾದರೂ ಮನುಷ್ಯತ್ವ ಬೇಡ್ವ. ಹುಡುಗಾಟ ಆಡ್ತಾ ಇದ್ದೀಯ. ನಿನ್ನ ಅಣ್ಣ ಬೆಟ್ಟದ್ದಷ್ಟು ಜೀವ ಇಟ್ಟುಕೊಂಡಿದ್ದಾನೆ. ಪಾರ್ಥ ಮತ್ತು ಅಪೇಕ್ಷಾರನ್ನು ಸುಪಾರಿ ಕೊಟ್ಟು ಕೊಲ್ಲಲು ಹೊರಟಿದ್ದೀಯಲ್ವ. ನಿನಗೆ ಹೇಗೆ ಮನಸ್ಸು ಬಂತು?" ಎಂದು ಕೇಳಿದಾಗ ಜೈದೇವ್‌ಗೆ ಶಾಕ್ ಆಗುತ್ತದೆ. "ಕೊಲ್ಲೋ ಕೈಗಿಂತ ಕಾಯೋ ಕೈಗೆ ಪವರ್ ಜಾಸ್ತಿ. ಅದು ಒಂದಲ್ಲ ರೀತಿ ನಮ್ಮನ್ನು ಕಾಡುತ್ತದೆ" ಎಂದು ಆನಂದ್ ಹೇಳುತ್ತಾನೆ. ಲೋಕಿನೇ ಬಾಯಿಬಿಟ್ಟ ವಿಚಾರ ಜೈದೇವ್‌ಗೆ ತಿಳಿಯುತ್ತದೆ. ಈ ವಿಷಯ ಬಿಗ್‌ಬ್ರದರ್‌ಗೆ ಗೊತ್ತಿಲ್ಲ ಕಣೋ. ಅವನು ಎದೆ ಹೊಡೆದು ಸಾಯ್ತಾನೆ. ಆದರೆ, ಇದೇ ರೀತಿ ಮುಂದುವರೆದ್ರೆ ಒಂದಲ್ಲ ಒಂದು ದಿನ ಹೇಳ್ತಿನಿ ಎಂದು ಎಚ್ಚರಿಕೆ ನೀಡುತ್ತಾನೆ. ಸೀರಿಯಲ್ ಮುಂದುವರೆಯುತ್ತದೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)
ವಿಭಾಗ