BBK 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಭಾಗ್ಯಲಕ್ಷ್ಮಿ ಸೀರಿಯಲ್‌ ನಟಿ? ಈ ಬಾರಿ ದೊಡ್ಮನೆಗೆ ಕಿರುತೆರೆ ಕಲಾವಿದರ ದಂಡು-televison news bigg boss kannada season 11 contestants tentative names bhagyalaxmi serial actress pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Bbk 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಭಾಗ್ಯಲಕ್ಷ್ಮಿ ಸೀರಿಯಲ್‌ ನಟಿ? ಈ ಬಾರಿ ದೊಡ್ಮನೆಗೆ ಕಿರುತೆರೆ ಕಲಾವಿದರ ದಂಡು

BBK 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಭಾಗ್ಯಲಕ್ಷ್ಮಿ ಸೀರಿಯಲ್‌ ನಟಿ? ಈ ಬಾರಿ ದೊಡ್ಮನೆಗೆ ಕಿರುತೆರೆ ಕಲಾವಿದರ ದಂಡು

Bigg boss kannada season 11 contestants: ಈ ವರ್ಷದ ಬಿಗ್‌ಬಾಸ್‌ ಕನ್ನಡ ರಿಯಾಲಿಟಿ ಶೋಗೆ ಯಾರೆಲ್ಲ ದೊಡ್ಮನೆಯೊಳಗೆ ಪ್ರವೇಶಿಸಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ. ಇದೇ ಸಮಯದಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್‌ ನಟಿಯೊಬ್ಬರು ಬಿಬಿಕೆ ಮನೆಗೆ ಹೋಗುವ ಸಾಧ್ಯತೆ ಕುರಿತು ವದಂತಿಗಳು ಕೇಳಿಬರುತ್ತಿವೆ.

BBK 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್‌ ನಟಿಯೊಬ್ಬರುವ ಭಾಗವಹಿಸುವ ಸಾಧ್ಯತೆ ಇದೆ.
BBK 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್‌ ನಟಿಯೊಬ್ಬರುವ ಭಾಗವಹಿಸುವ ಸಾಧ್ಯತೆ ಇದೆ.

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಇದೇ ಸೆಪ್ಟೆಂಬರ್‌ 3ನೇ ವಾರದಲ್ಲಿ (bigg boss kannada season 11 starting date) ಆರಂಭವಾಗಲಿದೆ. ಇತ್ತೀಚೆಗೆ ಬಿಗ್‌ಬಾಸ್‌ ಕನ್ನಡದ ಪ್ರಮೋ ಕುರಿತು ಅಪ್‌ಡೇಟ್‌ ದೊರಕಿತ್ತು. ಇದೇ ಸಮಯದಲ್ಲಿ ಬಿಗ್‌ಬಾಸ್‌ ಕನ್ನಡದ ಈ ಬಾರಿಯ ಸ್ಪರ್ಧಿಗಳು ಯಾರು (Bigg boss kannada season 11 contestants) ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ. ಆರಂಭದಲ್ಲಿ ಈ ಬಾರಿ ಕಿಚ್ಚ ಸುದೀಪ್‌ ಬಿಬಿಕೆ 11 ಹೋಸ್ಟ್‌ ಮಾಡುತ್ತಿಲ್ಲ ಎಂಬ ವದಂತಿ ಎದ್ದಿತ್ತು. ತಮಿಳಿನಲ್ಲಿ ಕಮಲ್‌ ಹಾಸನ್‌ ಬಿಗ್‌ಬಾಸ್‌ ನಿರೂಪಕ ಸ್ಥಾನಕ್ಕೆ ಟಾಟಾ ಹೇಳಿದ್ದರು. ಅದೇ ಸಮಯದಲ್ಲಿ ಕಿಚ್ಚ ಸುದೀಪ್‌ ಕೂಡ ಈ ಬಾರಿ ಬಿಗ್‌ಬಾಸ್‌ ಹೋಸ್ಟ್‌ ಮಾಡೋದಿಲ್ಲ ಎಂದು ಸುದ್ದಿಯಾಗಿತ್ತು. ಇದೀಗ ಬಿಗ್‌ಬಾಸ್‌ ಕನ್ನಡ ಸ್ಪರ್ಧಿಗಳ ಕುರಿತು ಗುಸುಗುಸು ಕೇಳಿಬರುತ್ತಿದೆ.

ದೊಡ್ಮನೆಗೆ ಕಿರುತೆರೆ ಕಲಾವಿದರ ದಂಡು

ಬಿಗ್‌ಬಾಸ್‌ ಕನ್ನಡ ರಿಯಾಲಿಟಿ ಶೋನಲ್ಲಿ ಸಾಕಷ್ಟು ಕಿರುತೆರೆ ಕಲಾವಿದರು ಭಾಗವಹಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದ ರೀತಿ. ವಿಶೇಷವಾಗಿ ಕಲರ್ಸ್‌ ಕನ್ನಡದ ಧಾರಾವಾಹಿಗಳಲ್ಲಿ ಜನಪ್ರಿಯತೆ ಪಡೆದವರು ಬಿಬಿಕೆಗೆ ಎಂಟ್ರಿ ನೀಡುತ್ತಿದ್ದರು. ಇದೇ ಸಮಯದಲ್ಲಿ ಹಾಸ್ಯ ಕಲಾವಿದರಿಗೂ ಅವಕಾಶ ನೀಡಲಾಗುತ್ತಿದೆ. ಬಿಗ್‌ಬಾಸ್‌ ಆರಂಭವಾಗುವ ವೇಳೆ ಈ ಬಾರಿ ಹಲವು ಸೀರಿಯಲ್‌ಗಳು ಮುಗಿಯುವ ಸೂಚನೆಯಿದೆ. ಈ ಸೀರಿಯಲ್‌ಗಳಿಂದಲೂ ಕೆಲವರಿಗೆ ಬಿಗ್‌ಬಾಸ್‌ ಮನೆಗೆ ಪ್ರವೇಶಿಸುವ ಅವಕಾಶ ದೊರಕಲಿದೆ ಎನ್ನಲಾಗಿದೆ. ಇದೇ ಸಮಯದಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್‌ನ ನಟಿಯೊಬ್ಬರು ದೊಡ್ಮನೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ವದಂತಿಯಿದೆ.

ಭಾಗ್ಯಲಕ್ಷ್ಮಿ ಸೀರಿಯಲ್‌ ನಟಿ ತನ್ವಿ ರಾವ್‌

ಭಾಗ್ಯಲಕ್ಷ್ಮಿ ಕನ್ನಡ ಸೀರಿಯಲ್‌ನಲ್ಲಿ ಕೀರ್ತಿ ಪಾತ್ರ ಮಾಡುತ್ತಿದ್ದ ತನ್ವಿ ರಾವ್‌ ಈ ಬಾರಿಯ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಭಾಗವಹಿಸಬಹುದು ಎಂದು ವರದಿಗಳು ತಿಳಿಸಿವೆ. ಡ್ಯಾನ್ಸರ್‌ ಮತ್ತು ಭರತನಾಟ್ಯ ಕಲಾವಿದೆಯಾಗಿರುವ ಇವರಿಗೆ ಈ ಮನೆಯ ದೊಡ್ಮನೆ ಬಾಗಿಲು ತೆರೆಯುವುದೇ ಎಂದು ಕಲರ್ಸ್‌ ಕನ್ನಡದ ಕಡೆಯಿಂದ ಯಾವುದೇ ಅಧಿಕೃತ ಅಪ್‌ಡೇಟ್‌ ಬಂದಿಲ್ಲ. ಕೊನೆಕ್ಷಣದವರೆಗೆ ಆ ಅಪ್‌ಡೇಟ್‌ ಬರೋದು ಇಲ್ಲ ಅನ್ನೋದು ಬೇರೆ ಮಾತು. ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ತನ್ವಿ ರಾವ್‌ ಅವರು ತನ್ನ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನೆ ಮಗಳಾಗಿದ್ದರು.

ಆದರೆ, ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಕೀರ್ತಿ ಪಾತ್ರಕ್ಕೆ ಕೊನೆ ಹಾಡಲಾಗಿತ್ತು. ಕೀರ್ತಿ ಸಾವಿನ ಬಳಿಕ ಈಕೆಯ ಪಾತ್ರ ಎಂಡ್‌ ಆಗಲಿದೆ. ಆದರೆ, ಈಕೆಯ ಪಾತ್ರವನ್ನು ಎಂಡ್‌ ಮಾಡಬೇಡಿ ಎಂದು ಸಾಕಷ್ಟು ಪ್ರೇಕ್ಷಕರು ಕೇಳಿಕೊಳ್ಳುತ್ತಿದ್ದಾರೆ. ಆದರೆ, ಇವರು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ತನ್ನ ಪಾತ್ರಕ್ಕೆ ಮಂಗಳಹಾಡಿ ಬಿಗ್‌ಬಾಸ್‌ ಮನೆಗೆ ಆಗಮಿಸುತ್ತಾರ ಎಂದು ಕಾದು ನೋಡಬೇಕಿದೆ. ಕೆಲವು ವದಂತಿಗಳ ಪ್ರಕಾರ ಭಾಗ್ಯಲಕ್ಷ್ಮಿ ಸೀರಿಯಲ್‌ನ ತನ್ವಿ ರಾವ್‌ ಬರುವ ಸಾಧ್ಯತೆಯಿದೆ. ಇದೇ ರೀತಿ ಬಿಗ್‌ಬಾಸ್‌ ಸಮಯದಲ್ಲಿ ಕೊನೆಗೊಳ್ಳುವ ಇನ್ನಿತರ ಕೆಲವು ಸೀರಿಯಲ್‌ಗಳಿಂದಲೂ ಕೆಲವು ಕಲಾವಿದರು ದೊಡ್ಮನೆಗೆ ಬಲಗಾಲಿಟ್ಟು ಪ್ರವೇಶಿಸುವ ನಿರೀಕ್ಷೆಯಿದೆ.

ಬಿಗ್‌ಬಾಸ್‌ ಕನ್ನಡಕ್ಕೆ ಜ್ಯೋತಿ ರೈ (ಜ್ಯೋತಿ ಪೂರ್ವಜ್‌)ರನ್ನು ಕಲರ್ಸ್‌ ವಾಹಿನಿಯು ಸಂಪರ್ಕಿಸಿತ್ತು. ಆದರೆ, ತಾನು ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದ್ದರು. ಈ ವರ್ಷ ತುಕಾಲಿ ಸಂತೋಷ್‌ ಅವರ ಪತ್ನಿ ಮಾನಸ ಭಾಗವಹಿಸುವ ಸಾಧ್ಯತೆ ಇದೆ. ಬೃಂದಾವನ ಸೀರಿಯಲ್‌ ನಟ ವರುಣ್‌ ಆರಾಧ್ಯ ಹೆಸರೂ ಕೇಳಿಬರುತ್ತಿದೆ. ಈಗಾಗಲೇ ಕಲರ್ಸ್‌ ವಾಹಿನಿಯು ಹಲವು ಕಲಾವಿದರನ್ನು ಸಂಪರ್ಕಿಸಿ ಫೈನಲ್‌ ಲಿಸ್ಟ್‌ ರೆಡಿ ಮಾಡಿಟ್ಟಿರುವ ಸೂಚನೆಯಿದೆ.