Online Fraud: ಶುರುವಾಗಿದೆ ಬೈ ನೌ ಪೇ ಲೇಟರ್‌ ಆನ್‌ಲೈನ್‌ ವಂಚನೆ, ವಾಟ್ಸ್‌ ಆಪ್‌ ಸಂದೇಶಗಳ ಬಗ್ಗೆ ಹುಷಾರು
ಕನ್ನಡ ಸುದ್ದಿ  /  ಕರ್ನಾಟಕ  /  Online Fraud: ಶುರುವಾಗಿದೆ ಬೈ ನೌ ಪೇ ಲೇಟರ್‌ ಆನ್‌ಲೈನ್‌ ವಂಚನೆ, ವಾಟ್ಸ್‌ ಆಪ್‌ ಸಂದೇಶಗಳ ಬಗ್ಗೆ ಹುಷಾರು

Online Fraud: ಶುರುವಾಗಿದೆ ಬೈ ನೌ ಪೇ ಲೇಟರ್‌ ಆನ್‌ಲೈನ್‌ ವಂಚನೆ, ವಾಟ್ಸ್‌ ಆಪ್‌ ಸಂದೇಶಗಳ ಬಗ್ಗೆ ಹುಷಾರು

Cyber crime ವಾಟ್ಸ್‌ ಆಪ್‌ ಸಂದೇಶದ ಮೂಲಕ ಬೈ ನೌ ಪೇ ಲೇಟರ್‌ ಎನ್ನುವ ಹೊಸ ವಂಚನೆ ಜಾಲ ಹುಟ್ಟುಕೊಂಡಿದೆ. ಇದರ ವಿವರ ಇಲ್ಲಿದೆ.ವರದಿ: ಎಚ್.ಮಾರುತಿ,ಬೆಂಗಳೂರು

ವಾಟ್ಸ್‌ ಆಪ್‌ ಮೂಲಕ ವಂಚನೆ ಮಾಡುವ  ಜಾಲ ಹೆಚ್ಚುತ್ತಿದೆ.
ವಾಟ್ಸ್‌ ಆಪ್‌ ಮೂಲಕ ವಂಚನೆ ಮಾಡುವ ಜಾಲ ಹೆಚ್ಚುತ್ತಿದೆ.

ಬೆಂಗಳೂರು: ವಾಟ್ಸ್‌ ಆಪ್‌ ಮೂಲಕ ಬೈ ನೌ ಪೇ ಲೇಟರ್‌ ಎಂಬ ಹೆಸರಿನಲ್ಲಿ ಈ ವಂಚನೆ ಅವ್ಯಾಹತವಾಗಿ ನಡೆಯುತ್ತಿದೆ. ವಾಟ್ಸ್‌ ಆಪ್‌ ಮೂಲಕ ಸೀನಿಯರ್‌ ವೆರಿಫಕೇಷನ್‌ ಮ್ಯಾನೇಜರ್‌ ಗಳು ಎಂದು ಹೇಳಿಕೊಳ್ಳುವ ವಂಚಕರು ಸಂದೇಶ ಕಳುಹಿಸುತ್ತಾರೆ. ಈ ಸಂದೇಶದ ಸಾರಾಂಶ ಏನೆಂದರೆ ನಾನು ಬಿ ಎನ್‌ ಪಿ ಎಲ್‌ ಸೀನಿಯರ್‌ ವೆರಿಫಿಕೇಷನ್‌ ಮ್ಯಾನೇಜರ್‌ ಈ ಸಂದೇಶವನ್ನು ಕಳುಹಿಸುತ್ತಿದ್ದೇನೆ. ಕಳೆದ 75 ದಿನಗಳಿಂದ ನೀವು ಪಾವತಿಸಬೇಕಾದ ಭಾಕಿ ಉಳಿದುಕೊಂಡಿದೆ.

ಇಂದು 2 ಗಂಟೆಯೊಳಗೆ ಪಾವತಿಸಿದರೆ ನಿಮಗೆ ದಂಡ ವಿಧಿಸಲಾಗುವುದಿಲ್ಲ. ಒಂದು ವೇಳೆ ಪಾವತಿಸಲು ವಿಫಲರಾದರೆ ನಿಮ್ಮ ಬ್ಯಾಂಕ್‌ ಖಾತೆಯನ್ನು ಶಾಶ್ವತವಾಗಿ ಬ್ಲಾಕ್‌ಮಾಡಲಾಗುವುದು ಮತ್ತು ನಿಮಗೆ ನೋಟಿಸ್ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸಿ ಎಂದಿರುತ್ತದೆ. ಇಂತಹ ಸಂದೇಶಗಳಿಗೆ ಮಾರು ಹೋಗಬೇಡಿ. ನಿಮ್ಮ ಹತ್ತಿರದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವಂತೆ ಪೊಲೀಸರು ಕೋರಿದ್ದಾರೆ.

ಹೆತ್ತ ಅಪ್ಪನೇ ಮಗಳ ಖಾಸಗಿ ವಿಡಿಯೋಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡ

ಹೆತ್ತ ಅಪ್ಪನೇ ತನ್ನ ಮಗಳ ಖಾಸಗಿ ವಿಡಿಯೋಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡು ವಿಕೃತಿ ಮೆರದಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ತಮ್ಮ 18 ವರ್ಷದ ಪುತ್ರಿಯ ಖಾಸಗಿ ವಿಡಿಯೋಗಳನ್ನು ತಮ್ಮ ಪತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎಂದು ಇಲ್ನಿನ ಮಹಿಳೆಯೊಬ್ಬರು ದೂರು ಸಲ್ಲಿಸಿದ್ದಾರೆ.

ತಂದೆಯ ಈ ವರ್ತೆನಯಿಂದ ಯುವತಿಯು ಆತ್ಮಹತ್ಯೆ ಮಾಡಿಕೊಳ್ಳಲು ನಡೆಸಿದ ಯತ್ನ ವಿಫಲವಾಗಿದೆ. ಮನೆಯಲ್ಲಿದ್ದ ಫಿನಾಯಿಲ್‌ ಕುಡಿದಿದ್ದಾಳೆ. ಆಕೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ ಎಂದು ಆಕೆಯ ತಾಯಿ ಹೇಳಿದ್ದಾರೆ.

ತಮ್ಮ ಸಂಬಂಧಿಯೇ ಆಗಿರುವ ತೀರ್ಥಹಳ್ಳಿಯ ಯುವಕನೊಬ್ಬನನ್ನು ಪ್ರೀತಿಸುತ್ತಿರುತ್ತಾಳೆ. ಇದನ್ನು ಸಹಿಸದ ಯುವತಿಯ ಅಪ್ಪ ಯುವಕನನ್ನು ಮನೆಗೆ ಕರೆಸಿಕೊಂಡು ಹೊಡೆದಿದ್ದಾರೆ. ನಂತರ ಆತನ ಮೊಬೈಲ್‌ ನಲ್ಲಿದ್ದ ಯುವತಿಯ ಖಾಸಗಿ ವಿಡಿಯೋಗಳನ್ನು ತನ್ನ ಮೊಬೈಲ್‌ ಗೆ ವರ್ಗಾಯಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾನೆ ಎಂದು ಯುವತಿಯ ತಾಯಿ ತಿಳಿಸಿದ್ದಾರೆ.

ನಂತರ ಇಷ್ಟಕ್ಕೇ ಸುಮ್ಮನಾಗದ ಆತ ತನ್ನ ಪತ್ನಿ ಮತ್ತು ಪುತ್ರಿ ಇಬ್ಬರನ್ನೂ ಹೊಡೆಯಲು ಆರಂಭಿಸಿದ್ಸಾನೆ. ಮತ್ತೊಂದು ಕಡೆ ಅಪ್ಪ ಹಂಚಿಕೊಂಡ ವಿಡಿಯೋಗಳು ಎಲ್ಲೆಡೆ ವೈರಲ್‌ ಆಗಿದ್ದು, ಯುವತಿಯನ್ನು ಮುಜಗರಕ್ಕೀಡು ಮಾಡಿವೆ. ಈ ಅವಮಾನವನ್ನು ಸಹಿಸಲಾಗದೆ ಆಕೆ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

2 ಲಕ್ಷ ಹಣವಿದ್ದ ಮಹಿಳೆಯ ಬ್ಯಾಗ್‌ ಲಪಟಾಯಿಸಿದ ದುಷ್ಕರ್ಮಿಗಳು

ಮಹಿಳೆಯೊಬ್ಬರು ಬ್ಯಾಂಕ್‌ ನಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ಹೋಗುತ್ತಿದ್ದಾಗ ಆಕೆಯನ್ನು ಅನುಸರಿಸಿದ ಇಬ್ಬರು ದುಷ್ಕರ್ಮಿಗಳು ಬ್ಯಾಗ್‌ ನಲ್ಲಿದ್ದ 2 ಲಕ್ಷ ರೂ ನಗದುಮತ್ತು ಮೊಬೈಲನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಉತ್ತರ ಭಾಗದ ಭುವನೇಶ್ವರಿ ನಗರದಲ್ಲಿ ಈ ಪ್ರಕರಣ ನಡೆದಿದೆ. ಶ್ರುತಿ ಎಂಬುವರು ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಭುನೇಶ್ವರಿನಗರದ ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ನಿಂದ ಹಣವನ್ನು ಡ್ರಾ ಮಾಡಿಕೊಡು ಮನೆಗೆ ಮರಳುತ್ತಿದ್ದಾಗ ಹಣವನ್ನು ದೋಚಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಶ್ರುತಿ ಅವರು ಹಣವನ್ನು ಮತ್ತು ಮೊಬೈಲನ್ನು ಪ್ಲಾಸ್ಟಿಕ್‌ ಬ್ಯಾಗ್‌ ನಲ್ಲಿಟ್ಟುಕೊಂಡು ಬೆಳಗ್ಗೆ 10.45 ರ ಸುಮಾರಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದವೇಗವಾಗಿ ಬೈಕ್‌ ವೊಂದು ಆಗಮಿಸಿತು. ಅದರಲ್ಲಿ ಹಿಂದೆ ಕುಳಿತಿದ್ದ ವ್ಯಕ್ತಿ ಹಣದ ಬ್ಯಾಗ್‌ ಕಸಿದುಕೊಡು ವೇಗವಾಗಿ ಪರಾರಿಯಾಗಿದ್ದಾರೆ. ಬ್ಯಾಂಕ್ ನಿಂದ ಆಕೆಯನ್ನು ಅನುಸರಿಸಿಕೊಂಡು ಬಂದವರೇ ಈ ಕೆಲಸ ಮಾಡಿದ್ದಾರೆ ಎಂದು ಶಂಕಿಸಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶಿಲಿಸುತ್ತಿದ್ದಾರೆ.

ವರದಿ: ಎಚ್.ಮಾರುತಿ, ಬೆಂಗಳೂರು

Whats_app_banner