Mysore Muda Scam: ಕುತೂಹಲ ಘಟ್ಟ ತಲುಪಿದ ಮೈಸೂರು ಮುಡಾ ನಿವೇಶನ ಹಗರಣ ಪ್ರಕರಣ; ಸೆ.12ಕ್ಕೆ ವಾದ ಮಂಡಿಸಲಿರುವ ಸಿಂಘ್ವಿ, ರವಿವರ್ಮ ಕುಮಾರ್‌-bangalore news karnakata highcourt postponed hearing of mysore muda scam case singhvi to attend on thursday mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mysore Muda Scam: ಕುತೂಹಲ ಘಟ್ಟ ತಲುಪಿದ ಮೈಸೂರು ಮುಡಾ ನಿವೇಶನ ಹಗರಣ ಪ್ರಕರಣ; ಸೆ.12ಕ್ಕೆ ವಾದ ಮಂಡಿಸಲಿರುವ ಸಿಂಘ್ವಿ, ರವಿವರ್ಮ ಕುಮಾರ್‌

Mysore Muda Scam: ಕುತೂಹಲ ಘಟ್ಟ ತಲುಪಿದ ಮೈಸೂರು ಮುಡಾ ನಿವೇಶನ ಹಗರಣ ಪ್ರಕರಣ; ಸೆ.12ಕ್ಕೆ ವಾದ ಮಂಡಿಸಲಿರುವ ಸಿಂಘ್ವಿ, ರವಿವರ್ಮ ಕುಮಾರ್‌

CM Siddaramaiah Case ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಮೈಸೂರು ಮುಡಾ ನಿವೇಶನ ವಿಚಾರವಾಗಿ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮದ ಕುರಿತು ಹೈಕೋರ್ಟ್‌ನಲ್ಲಿ(High Court) ದೂರು- ಪ್ರತಿದೂರಿನ ವಿಚಾರಣೆ ಮುಂದುವರಿದಿದೆ. ಗುರುವಾರಕ್ಕೆ ವಿಚಾರಣೆ ಮುಂದೆ ಹೋಗಿದ್ದು ಸಿದ್ದರಾಮಯ್ಯ ಪರ ವಕೀಲರು ಅಂದೇ ಹೇಳಿಕೆ ದಾಖಲಿಸಲಿದ್ದಾರೆ.

ಮೈಸೂರು ಮುಡಾ ನಿವೇಶನ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ದದ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ಮೂರು ದಿನ ಮುಂದೂಡಿದೆ,
ಮೈಸೂರು ಮುಡಾ ನಿವೇಶನ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ದದ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ಮೂರು ದಿನ ಮುಂದೂಡಿದೆ,

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಪ್ರಕರಣದಲ್ಲಿ ತಮ್ಮ ವಿರುದ್ಧ ವಿಚಾರಣೆ ನಡೆಸಲು ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ನಿರ್ಧಾರವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಸೋಮವಾರ ಸೆಪ್ಟಂಬರ್‌ 12ಕ್ಕೆ ಮುಂದೂಡಿದೆ. ಮುಂದಿನ ಆದೇಶ ನೀಡುವವರೆಗೆ ವಿಚಾರಣೆ ನಡೆಸದಂತೆ ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿರುವ ಹೈಕೋರ್ಟ್‌ ಆಗಸ್ಟ್‌ 19ರಂದು ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ.

ಈ ಪ್ರಕರಣದ 4ನೇ ದೂರುದಾರರಾಗಿರುವ ಸ್ನೇಹಮಯಿ ಕೃಷ್ಣ ಅವರ ವಕೀಲರಾದ ಲಕ್ಷ್ಮೀ ಅಯ್ಯಂಗಾರ್‌ ಅವರ ವಾದವನ್ನು ಹೈಕೋರ್ಟ್‌ ಸೋಮವಾರ ಅಲಿಸಿತು. ಈ ಮೂಲಕ ಪ್ರತಿವಾದಿಗಳ ವಾದ ಪೂರ್ಣಗೊಂಡಂತಾಗಿದೆ. ಅಡ್ವೋಕೇಟ್‌ ಜನರಲ್‌ ಅವರ ವಾದವೂ ಪೂರ್ಣಗೊಂಡಿದೆ.

ಹಿರಿಯ ನ್ಯಾಯವಾದಿಗಳಾದ ಅಭಿಷೇಕ್‌ ಮನು ಸಿಂಘ್ವಿ ಮತ್ತು ಪ್ರೊ. ರವಿವರ್ಮ ಕುಮಾರ್‌ ಅವರ ವಾದ ಆರಂಭವಾಗಬೇಕಿದೆ. ಪ್ರಕರಣದ ವಿಚಾರಣೆಯನ್ನು ಸೆ.12ರಂದು 12 ಗಂಟೆಗೆ ಮುಂದೂಡಿರುವುದಾಗಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಆದೇಶಿಸಿದ್ದಾರೆ. ಸೆ.12ರಂದು ನಿಮ್ಮ ವಾದವನ್ನು ಪೂರ್ಣಗೊಳಿಸಬೇಕು ಎಂದೂ ಅರ್ಜಿದಾರರ ವಕೀಲರಿಗೆ ತಿಳಿಸಿದ್ದಾರೆ.

ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿ 1996-99ರ ಅವಧಿಯಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಭೂ ಪರಿವರ್ತನೆ ಮಾಡಲಾಗಿದೆ. 2013-18ರ ಅವಧಿಯಲ್ಲಿ ಮುಖ್ಚಯಮಂತ್ರಿಗಳಾಗಿದ್ದ ಅವಧಿಯಲ್ಲಿ ಪರಿಹಾರದ ನಿವೇಶನಗಳಿಗಾಗಿ ಅರ್ಜಿ ಸಲ್ಲಿಸಲಾಗಿದೆ. 2018-22ರ ಅವಧಿಯಲ್ಲಿ ಶಾಸಕರಾಗಿದ್ದ ಅವಧಿಯಲ್ಲಿ ಸರ್ಕಾರಿ ಅತಿಥಿ ಗೃಹದಲ್ಲಿ ಸೇಲ್‌ ಡೀಡ್‌ ಮಾಡಿಕೊಡಲಾಗಿದೆ. ಹೀಗೆ ಅಧಿಕಾರ ದುರುಪಯೋಗವಾಗಿದೆ. .ಮುಖ್ಯಮಂತ್ರಿಗಳ ಪತ್ನಿ ತೆರಿಗೆ ಪಾವತಿಸುತ್ತಿಲ್ಲ. ಆದ್ದರಿಂದ ಪತ್ನಿಯ ಆಸ್ತಿಯನ್ನು ಪತಿಯದ್ದೇ ಎಂದು ಪರಿಗಣಿಸಬೇಕು. ಎಂದು ವಾದವನ್ನು ಪೂರ್ಣಗೊಳಿಸಿದರು.

ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿ ಇದು 22 ವರ್ಷಗಳ ಹಳೆಯ ಪ್ರಕರಣವಾಗಿದ್ದು, ಪ್ರಾಥಮಿಕ ತನಿಖೆ ನಡೆಸಬೇಕು. ಸರ್ಕಾರಕ್ಕೆ ನೋಟಿಸ್‌ ನೀಡುವ ಬದಲು ರಾಜ್ಯಪಾಲರು ತನಿಖಾಧಿಕಾರಿಯಿಂದ ವರದಿ ಪಡೆಯಬೇಕಿತ್ತು. 17ಎ ಅಡಿಯಲ್ಲಿ ಅನುಮತಿ ನೀಡುವಾಗ ಕೃತ್ಯ ಕರ್ತವ್ಯದ ಭಾಗವಾಗಿತ್ತೇ ಎಂದು ಪರಿಗಣಿಸಬೇಕು ಎಂದು ಚಂದ್ರಬಾಬು ನಾಯ್ಡು ಮತ್ತು ಆಂಧ್ರಪ್ರದೇಶದ ಪ್ರಕರಣವನ್ನು ಉಲ್ಲೇಖಿಸಿದರು. ಇಂತಹ ಪ್ರಕರಣಕ್ಕೆ ಅನುಮತಿ ನೀಡಿದರೆ ಪ್ರತಿದಿನವೂ ನೂರಾರು ಪ್ರಕಣಗಳು ದಾಖಲಾಗುತ್ತವೆ. ಇಂತಹ ಎಲ್ಲ ಪ್ರಕರಣಗಳನ್ನು ತನಿಖೆ ಮಾಡಲಾಗದು ಎಂದೂ ವಾದಿಸಿದರು.

1988ರ ಭ್ರಷ್ಟಾಚಾರ ನಿಗ್ರಹ ಕಾಯಿದೆ 17ಎ ಮತ್ತು ಭಾರತೀಯ ನ್ಯಾಯ ಸಂಹಿತೆ 2023ರ ಸೆ.218ರ ಅಡಿಯಲ್ಲಿ ರಾಜ್ಯಪಾಲರು ಆಗಸ್ಟ್‌ 16ರಂದು ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿದ್ದರು. ಮುಖದ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಭಾವ ಬಳಸಿ ತಮ್ಮ ಪತ್ನಿ ಪಾರ್ವತಿ ಅವರಿಗೆ ಬೆಳೆ ಬಾಳುವ 14 ನಿವೇಶನಗಳನ್ನು ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಪ್ರಬಾವ ಬೀರಿದ್ದಾರೆ. ಆದ್ದರಿಂದ ಅವರ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಬೇಕು ಎಂದು ಪ್ರದೀಪ್‌ ಕುಮಾರ್‌, ಟಿ.ಜೆ.ಅಬ್ರಹಾಂ ಮತ್ತು ಸ್ನೇಹಮಯಿ ಕೃಷ್ಣ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಆಗಸ್ಟ್‌ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರು ಪ್ರಾಸಿಕ್ಯೂಷನ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಅವರು ತಮ್ಮ ಅರ್ಜಿಯಲ್ಲಿ ಭಾರತೀಯ ಸಂವಿಧಾನದ 163ನೇ ವಿಧಿಯಲ್ಲಿ ದತ್ತವಾಗಿರುವ ಅಧಿಕಾರ ಬಳಸಿ ಸಚಿವ ಸಂಪುಟ ನೀಡಿರುವ ಸಲಹೆಯನ್ನು ನಿರ್ಲಕ್ಷಿಸಿ ನಿಯಮಗಳನ್ನು ಉಲ್ಲಂಘಿಸಿ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

(ವರದಿ: ಎಚ್.ಮಾರುತಿ, ಬೆಂಗಳೂರು)

mysore-dasara_Entry_Point