ಕರ್ನಾಟಕ ಸಿಎಂ ಬದಲಾವಣೆ ಬಗ್ಗೆ ಮತ್ತೆ ಮಾರ್ಮಿಕ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ: ಯಾರಾಗ್ತಾರೆ ಕರ್ಣ ಅನ್ನೋದು ಈ ಕ್ಷಣದ ಪ್ರಶ್ನೆ-kodi mutt swamiji prediction on karnataka politics change of cm anticipated compares karna of mahabharata to characters ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಸಿಎಂ ಬದಲಾವಣೆ ಬಗ್ಗೆ ಮತ್ತೆ ಮಾರ್ಮಿಕ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ: ಯಾರಾಗ್ತಾರೆ ಕರ್ಣ ಅನ್ನೋದು ಈ ಕ್ಷಣದ ಪ್ರಶ್ನೆ

ಕರ್ನಾಟಕ ಸಿಎಂ ಬದಲಾವಣೆ ಬಗ್ಗೆ ಮತ್ತೆ ಮಾರ್ಮಿಕ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ: ಯಾರಾಗ್ತಾರೆ ಕರ್ಣ ಅನ್ನೋದು ಈ ಕ್ಷಣದ ಪ್ರಶ್ನೆ

Kodi Mutt Swamiji prediction: ಕರ್ನಾಟಕದ ಮುಖ್ಯಮಂತ್ರಿ ಬದಲಾವಣೆ ಮತ್ತು ಮಳೆಯಿಂದ ಜಗತ್ತಿನಲ್ಲಿ ಆಗುವ ಅನಾಹುತಗಳ ಕುರಿತು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ

ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು
ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು

ಹಾಸನ: ಪ್ರಸ್ತುತ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವೇ ಹೆಚ್ಚು ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಅವರು ಮೂಡಾ ಪ್ರಕರಣದಲ್ಲಿ ಸಿಲುಕಿಕೊಂಡ ಕ್ಷಣದಿಂದಲೂ ಸಿಎಂ ಬದಲಾವಣೆ ಮಾತು ಚಾಲ್ತಿಯಲ್ಲಿದೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ಮುಂದಿನ ಚೀಫ್ ಮಿನಿಸ್ಟರ್​ ಯಾರಾಗಬಹುದು ಎಂಬುದನ್ನು ಕೋಡಿಮಠದ ಶ್ರೀಗಳು ಮಾರ್ಮಿಕವಾಗಿ ಭವಿಷ್ಯ ನುಡಿದಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಸಿಎಂ ಬದಲಾವಣೆ ವಿಚಾರ ಪ್ರಸ್ತುತ ನ್ಯಾಯಾಲಯದ ಅಂಗಳದಲ್ಲಿದೆ. ಅದರ ಕುರಿತು ಹೆಚ್ಚು ಮಾತನಾಡುವುದು ಬೇಡ ಎಂದು ಹೇಳಿದ್ದಾರೆ. ಇದೇ ವೇಳೆ ಕರ್ನಾಟಕ ಸರ್ಕಾರವನ್ನು ಮಹಾಭಾರತಕ್ಕೆ ಹೋಲಿಸಿದ್ದಾರೆ.

ಮೂರು ತಿಂಗಳ ಮೊದಲೇ ಹೇಳಿದ್ದೆ. ಅಭಿಮನ್ಯುವಿನ ಬಿಲ್ಲನ್ನು ಕರ್ಣನ ಕೈಯಿಂದ ಮೋಸದಲ್ಲಿ ದಾರ ಕಟ್ಟು ಮಾಡಿಸ್ತಾರೆ. ಮಹಾಭಾರತದಲ್ಲಿ ಕೃಷ್ಣ ಇದ್ದ ಗಧಾಯುದ್ದದಲ್ಲಿ ಭೀಮ ಗೆದ್ದ. ಈಗ ಕೃಷ್ಣ ಇಲ್ಲ. ದುರ್ಯೋಧನ ಗೆಲ್ತಾನೆ. ಅದರರ್ಥ ಏನೆಂಬುದನ್ನು ಮುಂದೆ ಹೇಳುತ್ತೇನೆ ಎಂದು ಹೇಳಿದ್ದಾರೆ. ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುತ್ತದೆ. ಆದರೆ ಸರ್ಕಾರಕ್ಕೇನು ತೊಂದರೆ ಅಗಲ್ಲ ಎಂಬುದನ್ನು ಮೊದಲು ಹೇಳಿದ್ದೆ ಎಂದು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.

ಇದೇ ವೇಳೆ ಜಗತ್ತಿನಲ್ಲಿ ಮಳೆಯ ಭೀಕರತೆಯ ಕುರಿತು ಮಾತನಾಡಿದ್ದು, ಜನರು ಇದ್ದಂಗೆ ಸಾಯ್ತಾರೆ ಎಂದಿದ್ದೆ. ಜಗತ್ತಿನ ಹಲವು ಭಾಗ ಮುಳುಗುತ್ತದೆ ಅಂತ ಹೇಳಿದ್ದೆ. ಅದರಂತೆ ಎಲ್ಲವೂ ಆಗುತ್ತದೆ. ಇನ್ನು ಮಳೆ ಇದೆ. ಪ್ರಾಕೃತಿಕ ದೋಷ ಹೆಚ್ಚಾಗುತ್ತದೆ. ಐದು ವಿಧದಿಂದ ತೊಂದರೆ ಎದುರಾಗುತ್ತದೆ. ಭೂಮಿ ಅಗ್ನಿ ವಾಯು ಎಲ್ಲದರಿಂದ ತೊಂದರೆ ಎದುರಾಗುತ್ತದೆ. ಇನ್ನು ಒಂದು ಆಕಾಶದಲ್ಲಿ ಆಗೋ ದೊಡ್ಡ‌ಸುದ್ದಿ‌ಇದೆ. ಒಂದು ಆಕಾಶ ಥ್ವ ಪ್ರಕಾರ ತೊಂದರೆ ಆಗಬಹುದು. ಅದು ರಾಜ್ಯ ಮೇಲೆ ಪರಿಣಾಮ ಬೀರುತ್ತದೆ ಎಂದು ಭವಿಷ್ಯ ಹೇಳಿದ್ದಾರೆ.

mysore-dasara_Entry_Point