ಕನ್ನಡ ಸುದ್ದಿ / ಕರ್ನಾಟಕ /
LokSabha Elections2024: ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಕರ್ನಾಟಕದ 10 ಸಚಿವರ ಕಣಕ್ಕಿಳಿಸಿಲು ಸಿದ್ದತೆ: ಯಾರು ಆ ಸಚಿವರು
Karnataka politics ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳ ತಯಾರಿ ನಡೆದಿದೆ. ಕಾಂಗ್ರೆಸ್‌ನಿಂದ ಸಚಿವರನ್ನು ಕಣಕ್ಕಿಳಿಸುವ ಪ್ರಯತ್ನ ನಿಂತಿಲ್ಲ.
ಈ ಬಾರಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಹಲವು ಸಚಿವರ ಹೆಸರನ್ನು ಅಭ್ಯರ್ಥಿಯಾಗಿಸಲು ಪರಿಗಣಿಸಿದೆ.
ಬೆಂಗಳೂರು: ಕರ್ನಾಟಕ ಬಜೆಟ್2024 ಮುಗಿಯಿತು. ಇನ್ನು ಲೋಕಸಭೆ ಚುನಾವಣೆಯತ್ತ ರಾಜಕೀಯ ಪಕ್ಷಗಳ ನಾಯಕರು, ಆಕಾಂಕ್ಷಿಗಳು ಪೂರ್ಣ ಪ್ರಮಾಣದಲ್ಲಿಯೇ ತೊಡಗಿಸಿಕೊಳ್ಳುತ್ತಾರೆ. ಅದರಲ್ಲೂ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಿರುಸಿನಿಂದಲೇ ಸಾಗಿದೆ. ಈ ಬಾರಿ ಹೆಚ್ಚು ಮಂದಿ ಉಸ್ತುವಾರಿ ಸಚಿವರನ್ನು ಕಣಕ್ಕಿಳಿಸಬೇಕು ಎಂದು ಕಾಂಗ್ರೆಸ್ ಬಯಸಿದೆ. ಈಗಾಗಲೇ ಹತ್ತು ಸಚಿವರ ಹೆಸರು ಹೈಕಮಾಂಡ್ ಪರಿಶೀಲನೆಯಲ್ಲಿದ್ದರೂ ಬಹುತೇಕರು ಆಸಕ್ತಿ ತೋರುತ್ತಿಲ್ಲ. ಸಚಿವ ಸ್ಥಾನದಲ್ಲೇ ಇನ್ನಷ್ಟು ದಿನ ಇರೋಣ ಎನ್ನುವ ಇರಾದೆಯೂ ಅವರಲ್ಲಿ ಇದ್ದಂತಿದೆ.
ಯಾವ ಸಚಿವರ ಹೆಸರು ಪಟ್ಟಿಯಲ್ಲಿದೆ
- ಬೀದರ್‌ನಿಂದ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಖಂಡ್ರೆ ಅವರನ್ನು ಕಣಕ್ಕಿಳಿಸುವ ಯೋಚನೆ ಪಕ್ಷದ ವರಿಷ್ಠರಲ್ಲಿದೆ. ಕೊಟ್ಟರೆ ಸ್ಪರ್ಧಿಸುವೆ, ನಂತರ ಮಗನಿಗೆ ಭಾಲ್ಕಿಯಲ್ಲಿ ಟಿಕೆಟ್ ಕೊಡಿ. ಇಲ್ಲದೇ ಇದ್ದರೆ ಮಗನಿಗೆ ಲೋಕಸಭೆಗೆ ಟಿಕೆಟ್ ಕೊಡಿ ಎನ್ನುವ ಬೇಡಿಕೆಯನ್ನೂ ಖಂಡ್ರೆ ಇರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಖಂಡ್ರೆ ಬೀದರ್‌ನಲ್ಲಿ ಸ್ಪರ್ಧಿಸಿ ಭಗವಂತ್ ಖೂಬಾ ವಿರುದ್ದ ಸೋತಿದ್ದರು.
- ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿ ಲಕ್ಷ್ಮಿ ಹೆಬ್ಬಾಳಕರ್ ಹೆಸರು ಪ್ರಸ್ತಾಪವಾಗಿದೆ. ಆದರೆ ಅವರು ತಮ್ಮ ಬದಲು ಮಗ ಮೃಣಾಳ್ ಹೆಬ್ಬಾಳಕರ್‌ಗೆ ಅವಕಾಶ ನೀಡುವಂತೆ ಕೋರಿದ್ಧಾರೆ.
- ಬೆಳಗಾವಿ ಕ್ಷೇತ್ರ ಹಾಗೂ ಚಿಕ್ಕೋಡಿಯಲ್ಲಿ ಒಂದು ಕಡೆ ಸ್ಪರ್ಧಿಸುವಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸ್ಪರ್ಧಿಸುವಂತಹ ಸೂಚನೆಯಿದೆ. ಆದರೆ ಸತೀಶ್ ಜಾರಕಿಹೊಳಿ ಕೂಡ ಆಸಕ್ತಿ ತೋರುತ್ತಿಲ್ಲ. ತಮ್ಮ ಮಗಳು ಪ್ರಿಯಾಂಕ ಹೆಸರನ್ನು ಅವರು ಪ್ರಸ್ತಾಪಿಸಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಲಕ್ಷ್ಮಿ ಹೆಬ್ಬಾಳಕರ ಹಾಗೂ ಸತೀಶ್ ಜಾರಕಿಹೊಳಿ ಈ ಹಿಂದೆ ಸ್ಪರ್ಧಿಸಿದರೂ ಗೆಲ್ಲಲು ಆಗಿಲ್ಲ.
- ದಾವಣಗೆರೆಯಲ್ಲಿ ಗಣಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ದಾವಣಗೆರೆ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ಬಯಸಿದೆ. ಆದರೆ ಸ್ಪರ್ಧಿಸುವ ಬದಲು ತಮ್ಮ ಪತ್ನಿ ಪ್ರಭಾ ಅವರಿಗೆ ಟಿಕೆಟ್ ನೀಡುವ ಬೇಡಿಕೆ ಇಟ್ಟಿದ್ದಾರೆ. ಈ ಹಿಂದೆಯೂ ಲೋಕಸಭೆ ಚುನಾವಣೆಗೆ ನಿಂತು ಮಲ್ಲಿಕಾರ್ಜುನ ಸೋತಿದ್ದಾರೆ. ಅವರ ತಂದೆ ಶಾಮನೂರು ಶಿವಶಂಕರಪ್ಪ ಅವರೂ ಒಮ್ಮೆ ಲೋಕಸಭೆಗೆ ಗೆದ್ದಿದ್ದರು.
ಇದನ್ನೂ ಓದಿರಿ: Jaggesh: ಯಾರೋ ಕಿತ್ತೋದ್ ನನ್ಮಗ ಮಾಡೋದಿರ್ಲಿ, ನನ್ನ ಬುಡಕ್ಕೆ ಬಂತು; ಹುಲಿ ಉಗುರಿನ ಬಗ್ಗೆ ಜಗ್ಗೇಶ್ ಮಾತು - ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಹೆಸರು ಪ್ರಸ್ತಾವನೆಯಲ್ಲಿದೆ. ಆದರೆ ಅವರು ತಮಗೆ ಟಿಕೆಟ್ ಬೇಡ ಎಂದು ಹೇಳಿದ್ದಾರೆ. ತಮ್ಮ ಮಗ ಸುನಿಲ್ ಬೋಸ್‌ಗೆ ಅವಕಾಶ ಮಾಡಿಕೊಡಿ ಎನ್ನುವ ಬೇಡಿಕೆ ಮಂಡಿಸಿದ್ದಾರೆ. ಮೂರು ದಶಕದ ಹಿಂದೆಯೇ ಮಹದೇವಪ್ಪ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು.
- ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರನ್ನು ಲೋಕಸಭೆ ಚುನಾವಣೆ ಅಭ್ಯರ್ಥಿಯಾಗಿಸುವ ಪ್ರಯತ್ನ ನಡೆದಿವೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಮಧು ಅವರ ಹೆಸರನ್ನೇ ಹೇಳಿದ್ದಾರೆ. ಆದರೆ ಮಧು ತಮ್ಮ ಸಹೋದರಿ ಗೀತ ಶಿವರಾಜಕುಮಾರ್ ಅವರಿಗೆ ಟಿಕೆಟ್ ಕೊಡುವಂತೆ ಕೋರಿದ್ದಾರೆ. ಗೀತಾ ಈಗಾಗಲೇ ಮೂರು ಬಾರಿ ಸೋತಿರುವುದರಿಂದ ನಟ ಶಿವರಾಜಕುಮಾರ್ ಮನ ಒಲಿಸುವಂತೆ ಮಧುಗೆ ಅವರಿಗೆ ಹೇಳಿದೆ. ಆದರೆ ತೀರ್ಮಾನ ಆಗಿಲ್ಲ.
- ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ, ತುಮಕೂರು ಜಿಲ್ಲೆ ಮಧುಗಿರಿ ಶಾಸಕ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹೆಸರನ್ನು ತುಮಕೂರಿನಿಂದ ಪರಿಶೀಲಿಸಲಾಗುತ್ತಿದೆ. ಅವರೂ ಕೂಡ ನನಗೆ ಬೇಡ. ಮಾಜಿ ಸಂಸದ ಮುದ್ದ ಹನುಮೇಗೌಡ ಅವರಿಗೆ ಅವಕಾಶ ಮಾಡಿಕೊಡಿ ಎನ್ನುವ ದನಿಯಲ್ಲೇ ಮಾತನಾಡಿದ್ದಾರೆ.
- ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಹೆಸರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಇದೆ. ಇಲ್ಲಿ ಅವರ ತಂದೆ , ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಒಮ್ಮೆ ಗೆದ್ದು ಲೋಕಸಭೆ ಪ್ರವೇಶಿಸಿದ್ದರು. ಅವರ ತಾಯಿ ವರಲಕ್ಷ್ಮಿ ಗುಂಡೂರಾವ್ ಸೋತಿದ್ದರು. ಆದರೆ ದಿನೇಶ್ ತಮ್ಮ ಬದಲು ಪತ್ನಿ ಟಬೂರಾವ್‌ಗೆ ಬೆಂಗಳೂರು ಕೇಂದ್ರದಲ್ಲಿ ಅವಕಾಶ ನೀಡುವ ಪ್ರಸ್ತಾವನೆ ಇಟ್ಟಿದ್ದಾರೆ.
ಇದನ್ನೂ ಓದಿರಿ: Palm Astrology: ಅಂಗೈಯಲ್ಲಿದೆ ನಮ್ಮ ಗುಣಧರ್ಮ; ಹಸ್ತ ಸಮತಟ್ಟಾಗಿರುವವರು ಜೀವನದಲ್ಲಿ ಹೇಗೆ ಬದುಕುತ್ತಾರೆ? ಇಲ್ಲಿದೆ ವಿವರ - ಹಾವೇರಿ ಜಿಲ್ಲಾ ಉಸ್ತುವಾರಿ ಹಾಗೂ ಎಪಿಎಂಸಿ, ಜವಳಿ ಹಾಗೂ ಸಕ್ಕರೆ ಸಚಿವ ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ಶಿವಾನಂದ ಪಾಟೀಲ್ ಅವರ ಹೆಸರು ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ಪರಿಗಣನೆಯಲ್ಲಿದೆ. ಹಿಂದಿನ ಬಾರಿಯೂ ಅವರು ಸ್ಪರ್ಧಿಸುವ ಚರ್ಚೆಯಾಗಿದ್ದರೂ ಕೊನೆ ಕ್ಷಣದಲ್ಲ ಹಿಂದೆ ಸರಿದಿದ್ದರು. ಈ ಬಾರಿಯೂ ಬಾಗಲಕೋಟೆಯಿಂದ ಸ್ಪರ್ಧಿಸಿದರೆ ಬಾಗೇವಾಡಿಯಲ್ಲಿ ಪುತ್ರ ಸಂಯುಕ್ತ ಪಾಟೀಲ್ ಇಲ್ಲವೇ ಪುತ್ರ ಸತ್ಯಜೀತ್ ಪಾಟೀಲ್‌ಗೆ ಅವಕಾಶ ಮಾಡಿಕೊಡುವ ಪ್ರಸ್ತಾವವನ್ನು ಹೈಕಮಾಂಡ್ ಇರಿಸಿದೆ. ಆದರೆ ಶಿವಾನಂದ ಪಾಟೀಲ್ ತೀರ್ಮಾನ ಅಂತಿಮಗೊಳಿಸಿಲ್ಲ.
- ಮಂಡ್ಯದಲ್ಲಿ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಹೆಸರನ್ನು ಪರಿಗಣಿಸಲಾಗಿದ್ದರೂ ಅವರು ನಾನು ರಾಜ್ಯ ಕಾರಣದಲ್ಲೇ ಇರುವೆ. ಲೋಕಸಭೆಗೆ ಬೇಡ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಒಂದು ಬಾರಿ ಜೆಡಿಎಸ್‌ನಿಂದ ಅವರು ಲೋಕಸಭೆ ಸದಸ್ಯರು ಕೂಡ ಆಗಿದ್ದರು.