ಕನ್ನಡ ಸುದ್ದಿ  /  Karnataka  /  Bengaluru News Can You Guess Worst Traffic Days Peak Hours In Bengaluru Traffic Patterns Explained By Traffic Police Uks

ಬೆಂಗಳೂರಲ್ಲಿ ಅತಿಹೆಚ್ಚು ಟ್ರಾಫಿಕ್ ಇರುವ ದಿನ, ಟೈಮಿಂಗ್ಸ್ ಯಾವುದು, ಗೆಸ್‌ ಮಾಡಬಲ್ಲಿರಾ, ಸಂಚಾರ ಪೊಲೀಸರು ಕೊಟ್ಟಿದ್ದಾರೆ ನಿಖರ ಮಾಹಿತಿ

ಬೆಂಗಳೂರು ಟ್ರಾಫಿಕ್‌ಗೆ ನಿತ್ಯವೂ ಹಿಡಿಶಾಪ, ಗೊಣಗಾಟ ಇದ್ದೇ ಇದೆ. ಈ ಟ್ರಾಫಿಕ್ ಬಗ್ಗೆ ಎಂದಾದರೂ ಕುತೂಹಲ ಹುಟ್ಟಿದೆಯಾ?, ಸರಳವಾಗಿ ಕೇಳಬೇಕು ಎಂದರೆ ಬೆಂಗಳೂರಲ್ಲಿ ಅತಿಹೆಚ್ಚು ಟ್ರಾಫಿಕ್ ಇರುವ ದಿನ, ಟೈಮಿಂಗ್ಸ್ ಯಾವುದು, ಗೆಸ್‌ ಮಾಡಬಲ್ಲಿರಾ? ಬೆಂಗಳೂರು ಸಂಚಾರ ಪೊಲೀಸರು ನಿಖರ ಮಾಹಿತಿ ಕೊಟ್ಟಿದ್ದಾರೆ.

ಬೆಂಗಳೂರಲ್ಲಿ ಅತಿಹೆಚ್ಚು ಟ್ರಾಫಿಕ್ ಇರುವ ದಿನ, ಟೈಮಿಂಗ್ಸ್ ಯಾವುದು, ಗೆಸ್‌ ಮಾಡಬಲ್ಲಿರಾ? ಬೆಂಗಳೂರು ಸಂಚಾರ ಪೊಲೀಸರು ನಿಖರ ಮಾಹಿತಿ ಕೊಟ್ಟಿದ್ದಾರೆ. (ಸಾಂಕೇತಿಕ ಚಿತ್ರ)
ಬೆಂಗಳೂರಲ್ಲಿ ಅತಿಹೆಚ್ಚು ಟ್ರಾಫಿಕ್ ಇರುವ ದಿನ, ಟೈಮಿಂಗ್ಸ್ ಯಾವುದು, ಗೆಸ್‌ ಮಾಡಬಲ್ಲಿರಾ? ಬೆಂಗಳೂರು ಸಂಚಾರ ಪೊಲೀಸರು ನಿಖರ ಮಾಹಿತಿ ಕೊಟ್ಟಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಕುತೂಹಲದ ಆಗರ. ನಿತ್ಯವೂ ಒಂದಿಲ್ಲೊಂದು ವಿಷಯ ಗಮನಸೆಳೆಯುತ್ತಿರುತ್ತದೆ. ಕುತೂಹಲ ಕೆರಳಿಸುತ್ತಿರುತ್ತದೆ. ಅದರಲ್ಲೂ ಬೆಂಗಳೂರು ಟ್ರಾಫಿಕ್‌ಗೆ ನಿತ್ಯವೂ ಹಿಡಿಶಾಪ, ಗೊಣಗಾಟ ಇದ್ದೇ ಇದೆ. ಈ ಟ್ರಾಫಿಕ್ ಬಗ್ಗೆ ಎಂದಾದರೂ ಕುತೂಹಲ ಹುಟ್ಟಿದೆಯಾ?, ಸರಳವಾಗಿ ಕೇಳಬೇಕು ಎಂದರೆ ಬೆಂಗಳೂರಲ್ಲಿ ಅತಿಹೆಚ್ಚು ಟ್ರಾಫಿಕ್ ಇರುವ ದಿನ, ಟೈಮಿಂಗ್ಸ್ ಯಾವುದು, ಗೆಸ್‌ ಮಾಡಬಲ್ಲಿರಾ…

ಹೋದರೆ ಒಂದು ಕಲ್ಲು, ಬಿದ್ದರೆ ಹಣ್ಣು ಎಂದುಕೊಂಡು ಗಾಳಿಯಲ್ಲಿ ಗುಂಡು ಹೊಡೆದಂತೆ, ಸೋಮವಾರ, ಶುಕ್ರವಾರ ಅತಿ ಹೆಚ್ಚು ಟ್ರಾಫಿಕ್ ಇರುವ ದಿನ ಎಂದು ಥಟ್ ಅಂತ ಹೇಳಿಬಿಡಬಹುದು. ಆದರೆ ವಾಸ್ತವ ಅದಲ್ಲ ಅಂತ ಬೆಂಗಳೂರು ಸಂಚಾರ ಪೊಲೀಸರು ಹೇಳಿದ್ದಾರೆ.

ಬುಧವಾರ, ಗುರುವಾರ ಬೆಂಗಳೂರು ಟ್ರಾಫಿಕ್ ಅತಿಹೆಚ್ಚು

ಬೆಂಗಳೂರಿನ ಸಂಚಾರ ದಟ್ಟಣೆಯನ್ನು ವಿವಿಧ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ನಿರ್ವಹಿಸುತ್ತಿರುವ ಬೆಂಗಳೂರು ಸಂಚಾರ ಪೊಲೀಸರ ಬಳಿಕ ನಿಖರ ಮಾಹಿತಿ ಇದೆ.

ಬೆಂಗಳೂರು ಸಂಚಾರ ಪೊಲೀಸರ ಪ್ರಕಾರ, ಬುಧವಾರ ಮತ್ತು ಗುರುವಾರಗಳಂದು ಅತಿಹೆಚ್ಚು ಸಂಚಾರ ದಟ್ಟಣೆ (worst-traffic days). ಹೌದಾ... ಯಾಕೆ ಎಂಬ ಕುತೂಹಲ ಸಹಜ. ಕರೋನಾ ಸಂಕಷ್ಟ ಕಡಿಮೆಯಾದ ಬಳಿಕ ಬಹುತೇಕ ಐಟಿ/ ಬಿಟಿ ಕಂಪನಿಗಳು ವಾರದಲ್ಲಿ ಮೂರು ದಿನ ವರ್ಕ್‌ ಫ್ರಂ ಆಫೀಸ್ ಕಡ್ಡಾಯ ಮಾಡಿದೆ. ಆದ್ದರಿಂ ಇವರೆಲ್ಲರೂ ಕಚೇರಿಗೆ ಹೋಗುವ ಕಾರಣ ಬುಧವಾರ ಮತ್ತು ಗುರುವಾರ ಎಲ್ಲರೂ ಕಚೇರಿಗೆ ಹೋಗುವ ಧಾವಂತದಲ್ಲಿರುತ್ತಾರೆ. ಆಗ ಸಂಚಾರ ದಟ್ಟಣೆ ಸಹಜವಾಗಿಯೇ ಉಂಟಾಗುತ್ತಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಆಯುಕ್ತ ಎಂಎನ್ ಅನುಚೇತ್ ಸಂದರ್ಶನ ಆಧರಿಸಿದ ಮನಿ ಕಂಟ್ರೋಲ್ ವರದಿ ಹೇಳಿದೆ.

"ಸಾಂಪ್ರದಾಯಿಕ ಕಚೇರಿ ಕೆಲಸ ಮತ್ತು ದಿನನಿತ್ಯದ ವ್ಯಾಪಾರ ಚಟುವಟಿಕೆಗಳ" ಕಾರಣ ಈ ಸಂಚಾರ ದಟ್ಟಣೆ ಉಂಟಾಗಿದೆ. ಬುಧವಾರದಂದು ಅತಿ ಹೆಚ್ಚು ಟ್ರಾಫಿಕ್ ದಟ್ಟಣೆ ಕಂಡುಬರುತ್ತದೆ, ಟೆಕ್ ಪಾರ್ಕ್‌ಗಳಲ್ಲಿ ಸಿಬ್ಬಂದಿ ಉಪಸ್ಥಿತಿ ಕೂಡ ಈ ದಿನದಲ್ಲಿ ಅತಿ ಹೆಚ್ಚು ಎಂದು ಅನುಚೇತ್ ಹೇಳಿದ್ದಾಗಿ ವರದಿ ವಿವರಿಸಿದೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಮಾದರಿಗಳು ಶನಿವಾರ ಮತ್ತು ಭಾನುವಾರಗಳಿಗೆ ಹೋಲಿಸಿದರೆ ಸೋಮವಾರದಿಂದ ಶುಕ್ರವಾರದವರೆಗೆ ಬದಲಾಗುತ್ತವೆ. ಸಾಮಾನ್ಯವಾಗಿ, ವಾರದ ದಿನಗಳಲ್ಲಿ ಬೆಳಗ್ಗೆ 7:30 ರಿಂದ 11 ರವರೆಗೆ ಮತ್ತು ಸಂಜೆ 4:30 ರಿಂದ 8:30 ರವರೆಗೆ ಪೀಕ್ ಅವರ್ ಸಂಭವಿಸುತ್ತದೆ. ವಾರಾಂತ್ಯದಲ್ಲಿಜನರು ಬಿಡುವಿನ ಚಟುವಟಿಕೆಗಳಿಗಾಗಿ ಹೊರಗೆ ಹೋಗುವ ಕಾರಣ, ಪೀಕ್ ಅವರ್‌ಗಳು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಮತ್ತು ಸಂಜೆ 6:30 ರಿಂದ ರಾತ್ರಿ 11 ರ ಅವಧಿಗೆ ಬದಲಾಗುತ್ತವೆ ಎಂದು ಅನುಚೇತ್ ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.

ಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ ಎಐ ತಂತ್ರಜ್ಞಾನ ಬಳಕೆ

ಬೆಂಗಳೂರು ಹೊರ ವರ್ತುಲ ರಸ್ತೆ (ಒಆರ್‌ಆರ್‌) ಮತ್ತು ಸರ್ಜಾಪುರ ರಸ್ತೆ ಸೇರಿ 33 ಪ್ರಮುಖ ಟೆಕ್ ಪಾರ್ಕ್‌ಗಳ ಡೇಟಾವನ್ನು ಸಂಚಾರ ಪೊಲೀಸರು ಸಂಗ್ರಹಿಸಿದ್ದಾರೆ. ಈಗ ಈ ಡೇಟಾವನ್ನು ಟ್ರಾಫಿಕ್ ನಿರ್ವಹಣೆಗಾಗಿ ಸಂಚಾರ ಪೊಲೀಸರು ಬಳಸುತ್ತಿದ್ದಾರೆ. ಈ ಡೇಟಾವು ಈ ಟೆಕ್ ಪಾರ್ಕ್‌ಗಳಿಂದ ಒದಗಿಸಲಾದ ಗಂಟೆಗನುಗುಣವಾದ ಒಳಬರುವ ಮತ್ತು ಹೊರಹೋಗುವ ಟ್ರಾಫಿಕ್ ಮಾಹಿತಿಯನ್ನು ಒಳಗೊಂಡಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಆಧಾರಿತ ಕ್ಯಾಮೆರಾಗಳನ್ನು ಈಗ ಇರುವ 50 ಜಂಕ್ಷನ್‌ಗಳಿಂದ 500ಕ್ಕೆ ವಿಸ್ತರಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಎಐ ಆಧಾರಿತ ಕ್ಯಾಮೆರಾಗಳು ಕಾಂಟ್ಯಾಕ್ಟ್‌ ಲೆಸ್ ಆಗಿಯೇ 13 ಪ್ರಮುಖ ಸಂಚಾರ ನಿಯಮ ಉಲ್ಲಂಘನೆಯನ್ನು ಗುರುತಿಸುವ ಯೋಜನೆ ಕೂಡ ಚಾಲ್ತಿಯಲ್ಲಿದೆ.

ಇದಲ್ಲದೆ, ಅಸ್ತಿತ್ವದಲ್ಲಿರುವ 50 ಪ್ರತಿಶತ ಟ್ರಾಫಿಕ್ ಸಿಗ್ನಲ್‌ಗಳನ್ನು ವಾಹನಗಳ ಹರಿವಿನ ಆಧಾರದ ಮೇಲೆ ನೈಜ ಸಮಯದಲ್ಲಿ ಸಿಗ್ನಲ್ ಅವಧಿಯನ್ನು ಲೆಕ್ಕಾಚಾರ ಮಾಡಲು ಅಡಾಪ್ಟಿವ್‌ಗೆ ಅಪ್‌ಗ್ರೇಡ್ ಮಾಡಲಾಗುವುದು ಎಂದು ಅನುಚೇತ್ ವಿವರಿಸಿದ್ದಾಗಿ ವರದಿ ಹೇಳಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point