ಜೀವನ್ಮರಣ ಹೋರಾಟದಲ್ಲಿರುವ ನಮ್ಮ ಮನೆಯ ಲಕ್ಷ್ಮಿಯನ್ನು ಬದುಕಿಸಲು ನೆರವಾಗಿ; ಪತಿ ವಿಶ್ವನಾಥ ರೆಡ್ಡಿ ಮತ್ತು ಪುಟ್ಟ ಮಕ್ಕಳ ಮನವಿ
ಕನ್ನಡ ಸುದ್ದಿ  /  ಕರ್ನಾಟಕ  /  ಜೀವನ್ಮರಣ ಹೋರಾಟದಲ್ಲಿರುವ ನಮ್ಮ ಮನೆಯ ಲಕ್ಷ್ಮಿಯನ್ನು ಬದುಕಿಸಲು ನೆರವಾಗಿ; ಪತಿ ವಿಶ್ವನಾಥ ರೆಡ್ಡಿ ಮತ್ತು ಪುಟ್ಟ ಮಕ್ಕಳ ಮನವಿ

ಜೀವನ್ಮರಣ ಹೋರಾಟದಲ್ಲಿರುವ ನಮ್ಮ ಮನೆಯ ಲಕ್ಷ್ಮಿಯನ್ನು ಬದುಕಿಸಲು ನೆರವಾಗಿ; ಪತಿ ವಿಶ್ವನಾಥ ರೆಡ್ಡಿ ಮತ್ತು ಪುಟ್ಟ ಮಕ್ಕಳ ಮನವಿ

Helping Hand; ತೀವ್ರ ಶ್ವಾಸಕೋಶದ ಸೋಂಕಿನ ಕಾರಣ ಆಸ್ಪತ್ರೆಯ ಐಸಿಯುನಲ್ಲಿದ್ದುಕೊಂಡು ಜೀವನ್ಮರಣ ಹೋರಾಟ ನಡೆಸುತ್ತಿರುವ ನಮ್ಮ ಮನೆಯ ಲಕ್ಷ್ಮಿಯನ್ನು ಬದುಕಿಸಲು ನೆರವಾಗಿ ಎಂದು ಇಬ್ಬರು ಪುಟ್ಟ ಮಕ್ಕಳು ಮತ್ತು ಪತಿ ವಿಶ್ವನಾಥ ರೆಡ್ಡಿ ಹಣಕಾಸಿನ ನೆರವಿಗಾಗಿ ಸಮಾಜದ ಮೊರೆ ಹೋಗಿದ್ದಾರೆ.

ಪುಟ್ಟ ವಿಶ್ವನಾಥ್ ರೆಡ್ಡಿ-ಲಕ್ಷ್ಮಿ ದಂಪತಿ ತಮ್ಮ ಪುಟ್ಟ ಮಕ್ಕಳೊಂದಿಗೆ ಖುಷಿಯಲ್ಲಿದ್ದ ಸಮಯ. (ಎಡಚಿತ್ರ), ಅನಾರೋಗ್ಯಕ್ಕೀಡಾದ ಬಳಿಕ ಲಕ್ಷ್ಮಿ (ಎಡಚಿತ್ರ)
ಪುಟ್ಟ ವಿಶ್ವನಾಥ್ ರೆಡ್ಡಿ-ಲಕ್ಷ್ಮಿ ದಂಪತಿ ತಮ್ಮ ಪುಟ್ಟ ಮಕ್ಕಳೊಂದಿಗೆ ಖುಷಿಯಲ್ಲಿದ್ದ ಸಮಯ. (ಎಡಚಿತ್ರ), ಅನಾರೋಗ್ಯಕ್ಕೀಡಾದ ಬಳಿಕ ಲಕ್ಷ್ಮಿ (ಎಡಚಿತ್ರ)

ಬೆಂಗಳೂರು: ಅನಾರೋಗ್ಯ ಮತ್ತು ಚಿಕಿತ್ಸೆ ವಿಚಾರಗಳು ಬಂದಾಗ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವವರು ಸಮಾಜದ ಮೊರೆ ಹೋಗುವುದು ಸಾಮಾನ್ಯ. ಸಮಾಜವೂ ಅಷ್ಟೆ ಸಹಜವಾಗಿ ಸ್ಪಂದಿಸುತ್ತದೆ ಕೂಡ. ಇದೂ ಅಂಥದ್ದೇ ಒಂದು ಪ್ರಕರಣ. ಬಳ್ಳಾರಿ ಮೂಲದವರಾದ ವಿಶ್ವನಾಥ ರೆಡ್ಡಿ ತಮ್ಮ ಪತ್ನಿ ಲಕ್ಷ್ಮಿಯನ್ನು ಉಳಿಸುವುದಕ್ಕಾಗಿ, ಅದೇ ರೀತಿ ಮೂರನೇ ತರಗತಿ ಓದುವ ಮತ್ತು ನರ್ಸರಿ ಓದುವ ಪುಟಾಣಿ ಮಕ್ಕಳು ತಮ್ಮ ತಾಯಿಯನ್ನು ಉಳಿಸುವುದಕ್ಕಾಗಿ ಸಮಾಜದ ನೆರವಿಗಾಗಿ ಎದುರು ನೋಡುತ್ತಿದ್ದಾರೆ.

ವಿಶ್ವನಾಥ ರೆಡ್ಡಿ ಅವರು ಮೂಲತಃ ಬಳ್ಳಾರಿಯವರಾಗಿದ್ದು ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಿಂದ ಸೇಲ್ಸ್‌ ಮ್ಯಾನೇಜರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬನಶಂಕರಿ ಆರನೇ ಹಂತದಲ್ಲಿರುವ ಮನೆಯಲ್ಲಿ ವಾಸವಿದ್ದಾರೆ. ಅವರ ಪತ್ನಿ ಲಕ್ಷ್ಮಿಗೆ ತೀವ್ರ ಶ್ವಾಸಕೋಶದ ಸೋಂಕು ತಗುಲಿದ್ದು, 25 ದಿನಗಳ ಹಿಂದೆ ಚಿಕಿತ್ಸೆಗಾಗಿ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದಿನೇದಿನೆ ಸೋಂಕು ಬಿಗಡಾಯಿಸಿದ್ದು, ಅವರೀಗ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಆರ್ಥಿಕ ಸಂಕಷ್ಟದ ಕಾರಣ ವಿಶ್ವನಾಥ ರೆಡ್ಡಿ ಅವರು ತಮ್ಮ ಫೇಸ್‌ಬುಕ್‌ ಮತ್ತು ಇಂಪ್ಯಾಕ್ಟ್‌ ಗುರು ಖಾತೆ (www.impactguru.com/fundraiser/please-help-lakshmi-n) ಯಲ್ಲಿ ಆರ್ಥಿಕ ನೆರವಿಗಾಗಿ ಸಮಾಜದ ಮೊರೆ ಹೋಗಿದ್ದಾರೆ.

ನಮ್ಮ ಮನೆಯ ಲಕ್ಷ್ಮಿಯನ್ನು ಉಳಿಸಲು ನೆರವಾಗಿ- ವಿಶ್ವನಾಥ ರೆಡ್ಡಿ ಸೋಷಿಯಲ್ ಮೀಡಿಯಾ ಪೋಸ್ಟ್

"ಈ ನಿಧಿಸಂಗ್ರಹವು ನನ್ನ ಹೆಂಡತಿಯನ್ನು ಉಳಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ." ಎಂಬ ಶೀರ್ಷಿಕೆಯೊಂದಿಗೆ ವಿಶ್ವನಾಥ ರೆಡ್ಡಿ ಮನವಿ ಮಾಡಿದ್ದಾರೆ.

ನಮಸ್ಕಾರ, ನನ್ನ ಹೆಸರು ಪುಟ್ಟ ವಿಶ್ವನಾಥ ರೆಡ್ಡಿ ಮತ್ತು ನಾನು ತೀವ್ರ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಮತ್ತು ವೆಂಟಿಲೇಟರ್ ಬೆಂಬಲದ ಅಡಿಯಲ್ಲಿ ಐಸಿಯುನಲ್ಲಿ ಜೀವನ್ಮರಣ ಹೋರಾಟದಲ್ಲಿರುವ ನನ್ನ ಪತ್ನಿ ಲಕ್ಷ್ಮಿ ಎನ್ ಅವರಿಗೆ ಹಣವನ್ನು ಸಂಗ್ರಹಿಸುತ್ತಿದ್ದೇನೆ.

ಚಿಕಿತ್ಸೆಯ ಒಟ್ಟು ವೆಚ್ಚ 25 ಲಕ್ಷ ರೂ. ದುರದೃಷ್ಟವಶಾತ್, ನಾವು ಸಾಕಷ್ಟು ಖರ್ಚು ಮಾಡಿದ್ದೇವೆ ಮತ್ತು ನಮ್ಮಲ್ಲಿರುವ ಪ್ರತಿ ಪೈಸೆಯನ್ನು ಖಾಲಿ ಮಾಡಿದ್ದೇವೆ ಮತ್ತು ಸಹಾಯದ ಅಗತ್ಯವಿರುವುದರಿಂದ ನಾವು ಅಂತಹ ಅಪಾರ ಮೊತ್ತವನ್ನು ಭರಿಸಲಾಗುವುದಿಲ್ಲ.

ನನ್ನ ಹೆಂಡತಿ ಯಾವಾಗಲೂ ತನ್ನ ರೀತಿಯ ಮತ್ತು ಪ್ರೀತಿಯ ಸ್ವಭಾವದಿಂದ ಎಲ್ಲರಿಗೂ ಸ್ಫೂರ್ತಿಯಾಗಿದ್ದಾಳೆ. ಮಾರ್ಗದರ್ಶನ ಮತ್ತು ಸಹಾಯಕ್ಕಾಗಿ ನಾನು ಯಾವಾಗಲೂ ಅವಳ ಕಡೆಗೆ ನೋಡುತ್ತಿದ್ದೆ ಆದರೆ ಈಗ ಆಕೆಗೆ ಚೇತರಿಸಿಕೊಳ್ಳಲು ನಿಮ್ಮ ಬೆಂಬಲದ ಅಗತ್ಯವಿದೆ!

ಅವಳ ಗಂಡನಾದ ನನಗೆ ಅವಳನ್ನು ಅಂತಹ ವಿಷಮ ಸ್ಥಿತಿಯಲ್ಲಿ ನೋಡುವುದು ತುಂಬಾ ಕಷ್ಟ. ಅವಳು ತುಂಬಾ ನೋವಿನಿಂದ ಬಳಲುತ್ತಿರುವುದೇ ಇದಕ್ಕೆ ಕಾರಣ. ಇದು ನನಗೆ ಒಂದು ರೀತಿಯ ವಿನಾಶಕಾರಿಯಾಗಿದೆ. ನೀವು ಮಾಡಬಹುದಾದ ಯಾವುದೇ ಸಾಮರ್ಥ್ಯದಲ್ಲಿ ಕೊಡುಗೆ ನೀಡುವಂತೆ ನಾನು ನಿಮ್ಮೆಲ್ಲರನ್ನು ಕೋರುತ್ತೇನೆ ಮತ್ತು ಇದನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಿಮ್ಮ ಒಂದು ಕೊಡುಗೆ ಜೀವ ಉಳಿಸುವ ಬದಲಾವಣೆಯನ್ನು ಮಾಡುತ್ತದೆ.

ಬ್ಯಾಂಕ್ ವಿವರ

ಹೆಸರು – ಪುಟ್ಟ ವಿಶ್ವನಾಥ ರೆಡ್ಡಿ,

ಐಸಿಐಸಿಐ ಬ್ಯಾಂಕ್,

ಅಕೌಂಟ್ ನಂ. – 058301508408,

IFSC – ICIC0000583,

ಮೊಬೈಲ್ ಸಂಖ್ಯೆ - 99864 47326

| ಪುಟ್ಟ ವಿಶ್ವನಾಥ ರೆಡ್ಡಿ, ಬೆಂಗಳೂರು.

ಏನಿದು ತೀವ್ರ ಶ್ವಾಸಕೋಶದ ಸೋಂಕು; ಪಲ್ಮನರಿ ಫ್ರೈಬ್ರೋಸಿಸ್‌

ತೀವ್ರ ಶ್ವಾಸಕೋಶದ ಸೋಂಕು ಕೆಲವು ಸಂದರ್ಭಗಳಲ್ಲಿ ವಿವಿಧ ಅಪಾಯಗಳನ್ನು ಉಂಟುಮಾಡಿ ಪ್ರಾಣಕ್ಕೆ ಸಂಚಕಾರ ಒಡ್ಡುವಂಥದ್ದು. ಇದರಲ್ಲೂ ಕೆಲವು ಮಾದರಿಗಳಿದ್ದು, ನ್ಯುಮೋನಿಯಾ, ಟ್ಯೂಬರ್‌ಕ್ಯುಲೋಸಿಸ್ (ಟಿಬಿ), ತೀವ್ರ ಉಸಿರಾಟದ ಸಮಸ್ಯೆ (ಎಆರ್‌ಡಿಎಸ್‌), ಬ್ರಾಂಕೈಟಿಸ್‌ ಪ್ರಮುಖವಾದವು.

ನ್ಯುಮೋನಿಯಾ: ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಶಿಲೀಂಧ್ರಗಳಿಂದ ಉಂಟಾಗುವ ಶ್ವಾಸಕೋಶದ ಸೋಂಕು. ಬ್ಯಾಕ್ಟೀರಿಯಾದ ನ್ಯುಮೋನಿಯಾ ಸಾಮಾನ್ಯವಾಗಿ ತೀವ್ರ ಸ್ವರೂಪದ್ದಾಗಿದ್ದು, ವಿಶೇಷವಾಗಿ ದುರ್ಬಲ ಆರೋಗ್ಯದವರ ಜೀವಕ್ಕೆ ಅಪಾಯಕಾರಿಯಾಗಬಹುದು.

ಕ್ಷಯರೋಗ (ಟಿಬಿ): ಮೈಕೋಬ್ಯಾಕ್ಟೀರಿಯಂ ಟ್ಯುಬರ್‌ಕ್ಯುಲೋಸಿಸ್‌ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕು. ಇದು ನೇರವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ನಂತರ ದೇಹದ ಇತರ ಭಾಗಗಳಿಗೆ ಹರಡಬಹುದು.

ತೀವ್ರ ಉಸಿರಾಟದ ತೊಂದರೆ ಸಿಂಡ್ರೋಮ್ (ARDS): ಶ್ವಾಸಕೋಶದ ಸೋಂಕು ವಿವಿಧ ರೂಪಗಳಿಗೆ ತೀವ್ರವಾದ ಪ್ರತಿಕ್ರಿಯೆ, ಇದು ಶ್ವಾಸಕೋಶದಲ್ಲಿ ವ್ಯಾಪಕವಾದ ಉರಿಯೂತ ಮತ್ತು ದ್ರವದ ಶೇಖರಣೆಗೆ ಕಾರಣವಾಗುತ್ತದೆ.

ಬ್ರಾಂಕೈಟಿಸ್: ಶ್ವಾಸನಾಳದ ಉರಿಯೂತ ಇದಾಗಿದ್ದು, ತೀವ್ರಗೊಂಡರೆ ಕ್ರಾನಿಕ್ ಬ್ರಾಂಕೈಟಿಸ್‌ಗೆ ಕಾರಣವಾಗಬಹುದು.

ಪಲ್ಮನರಿ ಫೈಬ್ರೋಸಿಸ್: ಇದು ಒಂದು ರೀತಿಯ ಶ್ವಾಸಕೋಶದ ಕಾಯಿಲೆಯಾಗಿದ್ದು, ಇದು ಶ್ವಾಸಕೋಶದ ಅಂಗಾಂಶದ ಸಮಸ್ಯೆಗೆ ಕಾರಣವಾಗುತ್ತದೆ. ಉಸಿರಾಟದ ತೊಂದರೆ ಮತ್ತು ಶ್ವಾಸಕೋಶದ ಕಾರ್ಯವನ್ನು ಕಡಿಮೆ ಮಾಡುತ್ತದೆ.

Whats_app_banner