ಕನ್ನಡ ಸುದ್ದಿ  /  ಕರ್ನಾಟಕ  /  ಜೂ 20ಕ್ಕೆ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಉದ್ಘಾಟನೆ, ಹಲವು ವಿಶೇಷ

ಜೂ 20ಕ್ಕೆ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಉದ್ಘಾಟನೆ, ಹಲವು ವಿಶೇಷ

ಬೆಂಗಳೂರಿನ ಸಂಚಾರ ದಟ್ಟಣೆ ನಿರ್ವಹಣೆ ಮತ್ತು ಪಾರ್ಕಿಂಗ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಹತ್ವದ ಪರಿಹಾರ ಕ್ರಮಕ್ಕೆ ಗುರುವಾರ ಚಾಲನೆ ಸಿಕ್ಕಲಿದೆ. ಹೌದು, ಜೂ 20ಕ್ಕೆ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಉದ್ಘಾಟನೆಯಾಗಲಿದ್ದು, ಇದರಲ್ಲಿ ಹಲವು ವಿಶೇಷಗಳಿವೆ.

ಜೂ 20ಕ್ಕೆ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಉದ್ಘಾಟನೆ ನಿಗದಿಯಾಗಿದ್ದು, ಹಲವು ವಿಶೇಷಗಳ ಮೂಲಕ ಗಮನಸೆಳದಿದೆ.
ಜೂ 20ಕ್ಕೆ ಬೆಂಗಳೂರು ಸ್ವಾತಂತ್ರ್ಯ ಉದ್ಯಾನದ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಉದ್ಘಾಟನೆ ನಿಗದಿಯಾಗಿದ್ದು, ಹಲವು ವಿಶೇಷಗಳ ಮೂಲಕ ಗಮನಸೆಳದಿದೆ.

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಮಹಾನಗರದ ಹೃದಯ ಭಾಗದಲ್ಲಿರುವ ಫ್ರೀಡಂ ಪಾರ್ಕ್‌ನಲ್ಲಿ ಬಿಬಿಎಂಪಿ ನಿರ್ಮಿಸಿರುವ ಬಹುಮಹಡಿಯ ಪೇ ಆ್ಯಂಡ್ ಪಾರ್ಕ್ ಸೌಲಭ್ಯ ಗುರುವಾರ (ಜೂನ್ 20) ಉದ್ಘಾಟನೆಗೆ ಸಜ್ಜಾಗಿದೆ.

ಬಿಬಿಎಂಪಿಯು ಈ ವರ್ಷದ ಆರಂಭದಲ್ಲಿ, ಬೆಂಗಳೂರು ಮೂಲದ ಪ್ರಿನ್ಸ್ ರಾಯಲ್ ಪಾರ್ಕಿಂಗ್ ಸೊಲ್ಯೂಷನ್ ಬಿಸಿನೆಸ್ ಪ್ರೈವೇಟ್ ಲಿಮಿಟೆಡ್‌ಗೆ ವರ್ಷಕ್ಕೆ 1.55 ಕೋಟಿ ರೂಪಾಯಿಗೆ ಇದರ ನಿರ್ವಹಣೆಯ ಹೊಣೆಗಾರಿಕೆಯನ್ನು ನೀಡಿದೆ. ನಿಖರವಾಗಿ ಹೇಳಬೇಕು ಎಂದರೆ, ರೈಟ್ ಪಾರ್ಕಿಂಗ್ ಹೆಸರಿನಲ್ಲಿ ಬಹುಮಹಡಿ ಪಾರ್ಕಿಂಗ್ ಸಂಕೀರ್ಣದ ನಿರ್ವಹಣೆಯನ್ನು ಪ್ರಿನ್ಸ್ ರಾಯಲ್ ಪಾರ್ಕಿಂಗ್ ಸೊಲ್ಯೂಷನ್ ಮಾಡಲಿದೆ. 10 ವರ್ಷಗಳ ಅವಧಿಗೆ ಈ ಗುತ್ತಿಗೆ ಚಾಲ್ತಿಯಲ್ಲಿರಲಿದ್ದು, ವಾರ್ಷಿಕವಾಗಿ ಪಾಲಿಕೆಗೆ 1.5 ಕೋಟಿ ವರಮಾನ ಬರಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 8 ಬಾರಿ ಟೆಂಡರ್‌ ಕರೆದ ಬಳಿಕವೂ ಯಾವುದೇ ಖಾಸಗಿ ಆಪರೇಟರ್‌ಗಳು ಆಸಕ್ತಿ ತೋರದ ಕಾರಣ 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಬಹುಮಹಡಿ ಪಾರ್ಕಿಂಗ್ ಸೌಲಭ್ಯವು 2021ರ ನವೆಂಬರ್‌ನಿಂದ ಖಾಲಿ ಇತ್ತು.

ಟ್ರೆಂಡಿಂಗ್​ ಸುದ್ದಿ

ಜೂನ್ 20 ರಂದು ಫ್ರೀಡಂ ಪಾರ್ಕ್‌ನ ಬಹುಮಹಡಿಯ ಪೇ ಆ್ಯಂಡ್ ಪಾರ್ಕ್ ಉದ್ಘಾಟನೆ

ಬೆಂಗಳೂರಿನ ಫ್ರೀಡಂ ಪಾರ್ಕ್‌ನ ಬಹುಮಹಡಿಯ ಪೇ ಆ್ಯಂಡ್ ಪಾರ್ಕ್ ಜೂನ್ 20 ರಂದು ಉದ್ಘಾಟನೆಯಾಗಲಿದೆ. ಅದೇ ದಿನ, ಡ್ರಾಪ್-ಇನ್ ಮತ್ತು ಪಿಕ್-ಅಪ್ ಸೌಲಭ್ಯದೊಂದಿಗೆ ಗುರುವಾರ ಸೌಲಭ್ಯವನ್ನು ತೆರೆಯಲು ಬಿಬಿಎಂಪಿ ಯೋಜಿಸಿದೆ. ಪ್ರತಿ 15 ನಿಮಿಷಗಳಿಗೊಮ್ಮೆ ಡ್ರಾಪ್-ಇನ್ ಮತ್ತು ಪಿಕ್-ಅಪ್ ಸೌಲಭ್ಯ ವಾಹನವು ಮೂರು ಮಾರ್ಗಗಳಲ್ಲಿ ಚಲಿಸಲಿದೆ.

1) ಸಿಟಿ ಸಿವಿಲ್ ಕೋರ್ಟ್, ಕೆಆರ್ ಸರ್ಕಲ್, ವಿಧಾನ ಸೌಧ, ಎಂಎಸ್ ಬಿಲ್ಡಿಂಗ್ ಮತ್ತು ಕರ್ನಾಟಕ ಹೈ ಕೋರ್ಟ್.

2) ಪೋಥಿಸ್ ಸರ್ಕಲ್, ಚಿಕ್ಕಪೇಟೆ ಮೆಟ್ರೋ ಸ್ಟೇಷನ್, ಬಿವಿಕೆ ಅಯ್ಯಂಗಾರ್ ರಸ್ತೆ, ಟಿಸಿಎಂ ರಾಯನ್ ಸರ್ಕಲ್.

3) ಪೋಥಿಸ್ ಸರ್ಕಲ್, ಉಪ್ಪಾರಪೇಟೆ ಪೊಲೀಸ್ ಠಾಣೆ, ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ಕೆಎಸ್ಆರ್ ಬೆಂಗಳೂರು (ನಗರ) ರೈಲು ನಿಲ್ದಾಣ.

“ನಾವು ಪಾರ್ಕಿಂಗ್ ಸೌಲಭ್ಯದಲ್ಲಿ ಸುಧಾರಿತ ಸ್ಮಾರ್ಟ್ ಪಾರ್ಕಿಂಗ್ ತಂತ್ರಜ್ಞಾನವನ್ನು ಸ್ಥಾಪಿಸಿದ್ದೇವೆ, ಅದು ದಿನದ ಸುತ್ತಿನಲ್ಲೂ ತೆರೆದಿರುತ್ತದೆ. ಶೌಚಾಲಯಗಳು, ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್, ಗಾಲಿಕುರ್ಚಿಗಳು ಮತ್ತು ಆಂಬ್ಯುಲೆನ್ಸ್ ಸೇವೆಗಳು ಕಟ್ಟಡದಲ್ಲಿ ಲಭ್ಯವಿದೆ. ಯಾವುದೇ ಸಮಯದಲ್ಲಿ 600 ಕಾರುಗಳು ಮತ್ತು 750 ಬೈಕ್‌ಗಳನ್ನು ನಿಲುಗಡೆ ಮಾಡಬಹುದು ” ಎಂದು ಬಿಬಿಎಂಪಿ ಇಂಜಿನಿಯರ್-ಇನ್-ಚೀಫ್ ಬಿಎಸ್ ಪ್ರಹ್ಲಾದ್ ಹೇಳಿದ್ದಾಗಿ ವರದಿ ವಿವರಿಸಿದೆ.

ಬಹುಮಹಡಿಯ ಪೇ ಆ್ಯಂಡ್ ಪಾರ್ಕ್- ವಿಶೇಷ

ಭೂಗತ ಮೆಟ್ರೋ ನಿಲ್ದಾಣಗಳಂತೆ, ಪಾರ್ಕಿಂಗ್ ಸೌಲಭ್ಯವು ಕಲಾತ್ಮಕ ಸ್ಪರ್ಶವನ್ನು ಹೊಂದಿದೆ. ಇದರಲ್ಲಿ ವಿಧಾನ ಸೌಧದ ವರ್ಣಚಿತ್ರಗಳು, ಯಕ್ಷಗಾನ ಪ್ರದರ್ಶನಗಳು ಮತ್ತು ಮೈಸೂರು ದಸರಾದ ಜಂಬೂ ಸವಾರಿ ಚಿತ್ರಗಳು ಗಮನಸೆಳೆದಿವೆ.

ಈ ಬಹುಮಹಡಿಯ ಪೇ ಆಂಡ್ ಪಾರ್ಕ್‌ ಪಾರ್ಕಿಂಗ್ ವ್ಯವಸ್ಥೆಯಲ್ಲಿ, ಮೊದಲ 1 ಗಂಟೆವರೆಗೂ ದ್ವಿಚಕ್ರ ವಾಹನಕ್ಕೆ 15 ರೂಪಾಯಿ, ಕಾರುಗಳಿಗೆ 25 ರೂಪಾಯಿ. 1-2 ಗಂಟೆವರೆಗೆ ಬೈಕ್​ಗಳಿಗೆ 25 ರೂಪಾಯಿ, ಕಾರುಗಳಿಗೆ 40 ರೂಪಾಯಿ, 2-4 ಗಂಟೆ ಅವಧಿಗೆ ಬೈಕ್​ಗೆ 40 ರೂಪಾಯಿ, ಕಾರುಗಳಿಗೆ 65 ರೂಪಾಯಿ, 4-6 ಗಂಟೆಗೆ ಬೈಕ್​ಗಳಿಗೆ 55 ರೂಪಾಯಿ, ಕಾರುಗಳಿಗೆ 90 ರೂಪಾಯಿ, 6-10 ಗಂಟೆವರೆಗೆ ಬೈಕ್​ಗಳಿಗೆ 85 ರೂಪಾಯಿ, ಕಾರುಗಳಿಗೆ 110 ರೂಪಾಯಿ, 10-12 ಗಂಟೆಗೆ ಬೈಕ್​ಗೆ 100 ರೂಪಾಯಿ, ಕಾರುಗಳಿಗೆ 165 ರೂಪಾಯಿ ದರ ನಿಗದಿಯಾಗಿದೆ. ಪಾರ್ಕಿಂಗ್‌ಗೆ ಮಾಸಿಕ ಪಾಸ್ ಸೌಲಭ್ಯವೂ ಇದ್ದು, ದರ ಅಂತಿಮವಾಗಬೇಕಷ್ಟೆ ಎಂದು ವರದಿ ಹೇಳಿದೆ.