ಬೆಂಗಳೂರು ಮಳೆ; ನೀರು ತುಂಬಿದ ರಸ್ತೆಗಳಲ್ಲಿ ಬೋಟ್ ಸಂಚಾರ, ಕೋಗಿಲು ಜಂಕ್ಷನ್‌ನಲ್ಲಿ ಪ್ರವಾಹ ಪರಿಸ್ಥಿತಿ- ವೈರಲ್ ವಿಡಿಯೋ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಮಳೆ; ನೀರು ತುಂಬಿದ ರಸ್ತೆಗಳಲ್ಲಿ ಬೋಟ್ ಸಂಚಾರ, ಕೋಗಿಲು ಜಂಕ್ಷನ್‌ನಲ್ಲಿ ಪ್ರವಾಹ ಪರಿಸ್ಥಿತಿ- ವೈರಲ್ ವಿಡಿಯೋ

ಬೆಂಗಳೂರು ಮಳೆ; ನೀರು ತುಂಬಿದ ರಸ್ತೆಗಳಲ್ಲಿ ಬೋಟ್ ಸಂಚಾರ, ಕೋಗಿಲು ಜಂಕ್ಷನ್‌ನಲ್ಲಿ ಪ್ರವಾಹ ಪರಿಸ್ಥಿತಿ- ವೈರಲ್ ವಿಡಿಯೋ

ಬೆಂಗಳೂರು ಕೋಗಿಲು ಪ್ರದೇಶದಲ್ಲಿ ನೆರೆಪರಿಸ್ಥಿತಿ ಉಂಟಾಗಿದ್ದು, ಕೋಗಿಲು ಜಂಕ್ಷನ್‌ನಲ್ಲಿ ಬೋಟ್‌ ಮೂಲಕ ರಕ್ಷಣಾ ಪರಿಹಾರ ಕಾರ್ಯ ಶುರುವಾಗಿದೆ. ಇದಲ್ಲದೆ, ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ಪ್ರದೇಶದಲ್ಲಿ ಸಮಸ್ಯೆ ಆಗಿದೆ.

ಬೆಂಗಳೂರು ಮಳೆ; ನೀರು ತುಂಬಿದ ರಸ್ತೆಗಳಲ್ಲಿ ಬೋಟ್ ಸಂಚಾರ ಗಮನಸೆಳೆದಿದೆ. ಕೋಗಿಲು ಜಂಕ್ಷನ್‌ನಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ. (ವೈರಲ್ ವಿಡಿಯೋದ ದೃಶ್ಯ)
ಬೆಂಗಳೂರು ಮಳೆ; ನೀರು ತುಂಬಿದ ರಸ್ತೆಗಳಲ್ಲಿ ಬೋಟ್ ಸಂಚಾರ ಗಮನಸೆಳೆದಿದೆ. ಕೋಗಿಲು ಜಂಕ್ಷನ್‌ನಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ. (ವೈರಲ್ ವಿಡಿಯೋದ ದೃಶ್ಯ) (X)

ಬೆಂಗಳೂರು: ಸ್ಥಿರವಾಗಿ ಸುರಿಯುತ್ತಿರುವ ಮಳೆಯ ಕಾರಣ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದರೆ, ಇನ್ನು ಕೆಲವು ಕಡೆ ರಸ್ತೆಗಳಲ್ಲೇ ನೀರು ಹರಿಯುತ್ತಿದ್ದು ತೊರೆ ಹಳ್ಳಗಳಂತಾಗಿವೆ. ಸೋಮವಾರ ತಡರಾತ್ರಿ ಸುರಿದ ಮಳೆಗೆ ಕೋಗಿಲು ಕೆರೆ ಭರ್ತಿಯಾಗಿ ಕೋಡಿ ಹರಿದಿದೆ. ಇದರಿಂದಾಗಿ ಕೋಗಲು ಜಂಕ್ಷನ್ ಸುತ್ತಮುತ್ತಲಿನ ಪ್ರದೇಶದಲ್ಲೂ ನೀರು ತುಂಬಿಕೊಂಡಿದ್ದು, ವಾಹನ ಸಂಚಾರ, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬಹುತೇಕ ಪ್ರದೇಶಗಳಲ್ಲಿ ಮೊಣಕಾಲು ಮಟ್ಟ ನೀರು ತುಂಬಿಕೊಂಡಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಂದ ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಕೆಲಸ ಶುರುವಾಗಿದ್ದು, ರಕ್ಷಣಾ ಪಡೆ ಸಿಬ್ಬಂದಿ ಬೋಟ್‌ಗಳನ್ನು ನೀರು ತುಂಬಿದ ರಸ್ತೆಗೆ ಇಳಿಸಿದ್ದಾರೆ. ಕೋಗಿಲು ಜಂಕ್ಷನ್‌ನಿಂದ ಭಾರತೀಯ ವಾಯುಪಡೆ ಕೇಂದ್ರಕ್ಕೆ ಹೋಗುವ ಸರ್ವೀಸ್‌ ರಸ್ತೆಯನ್ನು ಮುಚ್ಚಿ ರಕ್ಷಣಾಕಾರ್ಯಕ್ಕೆ ಒದಗಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕೋಗಿಲು ಜಂಕ್ಷನ್‌ನಲ್ಲಿ ಬೋಟ್‌ ಮೂಲಕ ರಕ್ಷಣಾ ಕಾರ್ಯಾಚರಣೆ

ಕರ್ನಾಟಕದ ಮಳೆಯ ವಿವರವನ್ನು ಎಕ್ಸ್‌ ಖಾತೆ ಬಳಕೆದಾರರೊಬ್ಬರು ಶೇರ್ ಮಾಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 17.65 ಸೆಂಟಿ ಮೀಟರ್, ಬೆಂಗಳೂರು ನಗರ ಜಿಲ್ಲೆಯಲ್ಲಿ 15.7 ಸೆಂಟಿ ಮೀಟರ್ ಮಳೆ ದಾಖಲಾಗಿರುವುದು ಅದರಲ್ಲಿ ನಮೂದಾಗಿದೆ.

ಬೆಂಗಳೂರು ಮಳೆ; ಎಲ್ಲಿ ಏನಾಗಿದೆ

ಬೆಂಗಳೂರಿನ ಸರ್ಜಾಪುರ ಪ್ರದೇಶದಲ್ಲಿ 56 ವರ್ಷ ವಯಸ್ಸಿನ ಮಹಿಳೆಯೊಬ್ಬರು ರಸ್ತೆ ಗುಂಡಿಗೆ ಬಿದ್ದು ಗಾಯಗೊಂಡು ಸೋಮವಾರ ಮೃತಪಟ್ಟಿದ್ಧಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಮೃತ ಮಹಿಳೆಯನ್ನು ಮಲ್ಲಿಕಾ ಎಂದು ಗುರುತಿಸಲಾಗಿದೆ. ಅವರು ತಮ್ಮ ಪತಿ ಮುನಿರಾಜು ಅವರೊಂದಿಗೆ ಸ್ಕೂಟರ್‌ನಲ್ಲಿ ಹಿಂಬದಿ ಸವಾರರಾಗಿ ಸಂಚರಿಸುತ್ತಿದ್ದಾಗ ರಸ್ತೆ ಗುಂಡಿ ತಪ್ಪಿಸಲು ನಿಧಾನ ಮಾಡಿದಾಗ ಹಿಂಬದಿಯಲ್ಲಿದ್ದ ಮಿನಿ ಟ್ರಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು ಎಂದು ವರದಿ ವಿವರಿಸಿದೆ.

ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದು, ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಿರಾಶೆಗೊಂಡ ನಿವಾಸಿಗಳು ಪಾಲಿಕೆ ಅಧಿಕಾರಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಜಲಾವೃತ ರಸ್ತೆಗಳು, ಸಂಚಾರ ದಟ್ಟಣೆ, ಪ್ರವಾಹ ಪರಿಸ್ಥಿತಿ ಎಲ್ಲವೂ ಜನರ ಅಸಮಾಧಾನವನ್ನು ಹೆಚ್ಚು ಮಾಡಿದ್ದು, ಬಿಬಿಎಂಪಿ ಚುನಾವಣೆ ಯಾವಾಗ ನಡೆಸುತ್ತೀರಿ ಎಂಬ ಪ್ರಶ್ನೆಯನ್ನು ಸರ್ಕಾರದ ಮುಂದಿಡಲಾರಂಭಿಸಿದ್ದಾರೆ. ಅನೇಕರು ನಗರದ ಮೂಲಸೌಕರ್ಯವನ್ನು ನಿರ್ವಹಿಸುವಲ್ಲಿ ವಿಫಲವಾದ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ದೂಷಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಭಾರೀ ಮಳೆಯಿಂದಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೂಡ ಅವ್ಯವಸ್ಥೆ ಉಂಟಾಗಿದ್ದು, ಕನಿಷ್ಠ 20 ವಿಮಾನಗಳು ವಿಳಂಬಗೊಂಡವು. ಹಲವಾರು ವಿಮಾನಗಳ ಮಾರ್ಗ ಬದಲಾವಣೆ ಮಾಡಿ ಸಂಚರಿಸಿವೆ. ಸೋಮವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಬೇಕಾಗಿದ್ದ ಇಪ್ಪತ್ತಕ್ಕೂ ಹೆಚ್ಚು ವಿಮಾನಗಳು ತಡವಾಗಿ ಬಂದಿಳಿದಿವೆ. ದೆಹಲಿಯಿಂದ ಏರ್ ಇಂಡಿಯಾ ವಿಮಾನ ಮತ್ತು ನಾಲ್ಕು ಇಂಡಿಗೋ ವಿಮಾನಗಳನ್ನು ಚೆನ್ನೈಗೆ ತಿರುಗಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿದೆ.

ನಗರದಲ್ಲಿ ಭಾರೀ ಮಳೆಗೆ ತತ್ತರಿಸಿದ್ದು, ವಾರದಲ್ಲಿ ಎರಡನೇ ಬಾರಿಗೆ ಸೋಮವಾರ ಶಾಲೆಗಳಿಗೆ ರಜೆ ಘೋ‍ಷಿಸಲಾಗಿತ್ತು. ಆದರೆ ತಡವಾಗಿ ರಜೆ ಘೋಷಿಸಿದ ಕಾರಣ, ಖಾಸಗಿ ಶಾಲೆಗಳು ಶಾಲೆ ನಡೆಸಿದ್ದು, ಪಾಲಕರ ಆಕ್ರೋಶಕ್ಕೂ ಕಾರಣವಾಯಿತು.

Whats_app_banner