ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕನಿಷ್ಠ ಉಷ್ಣಾಂಶ 12.4 ಡಿಗ್ರಿ ಸೆಲ್ಶಿಯಸ್‌, ಒಳನಾಡಲ್ಲಿ ಮೈ ನಡುಕದ ಚಳಿ - ಕರ್ನಾಟಕ ಹವಾಮಾನ ಇಂದು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕನಿಷ್ಠ ಉಷ್ಣಾಂಶ 12.4 ಡಿಗ್ರಿ ಸೆಲ್ಶಿಯಸ್‌, ಒಳನಾಡಲ್ಲಿ ಮೈ ನಡುಕದ ಚಳಿ - ಕರ್ನಾಟಕ ಹವಾಮಾನ ಇಂದು

ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕನಿಷ್ಠ ಉಷ್ಣಾಂಶ 12.4 ಡಿಗ್ರಿ ಸೆಲ್ಶಿಯಸ್‌, ಒಳನಾಡಲ್ಲಿ ಮೈ ನಡುಕದ ಚಳಿ - ಕರ್ನಾಟಕ ಹವಾಮಾನ ಇಂದು

Karnataka Weather: ಕರ್ನಾಟಕದಲ್ಲಿ ವಿವಿಧೆಡೆ ಚಳಿ ಜೋರಾಗಿದ್ದು, ನಿನ್ನೆ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕನಿಷ್ಠ ಉಷ್ಣಾಂಶ 12.4 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿದೆ. ವಿಜಯಪುರ ಸೇರಿ ಒಳನಾಡು ಪ್ರದೇಶಗಳಲ್ಲಿ ಮೈ ನಡುಕದ ಚಳಿ ಕಂಡುಬಂದಿದ್ದು, ಕನಿಷ್ಠ ಉಷ್ಣಾಂಶ 12.2 ದಾಖಲಾಗಿದೆ. ಕರ್ನಾಟಕ ಹವಾಮಾನ ಇಂದು (ನವೆಂಬರ್ 22) ಹೀಗಿದೆ.

ಕರ್ನಾಟಕ ಹವಾಮಾನ ಇಂದು: ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕನಿಷ್ಠ ಉಷ್ಣಾಂಶ 12.4 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿದೆ. ವಿಜಯಪುರದಲ್ಲೂ ಮೈ ನಡುಕದ ಚಳಿ ಕಂಡುಬಂದಿದೆ. (ಸಾಂದರ್ಭಿಕ ಚಿತ್ರ)
ಕರ್ನಾಟಕ ಹವಾಮಾನ ಇಂದು: ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕನಿಷ್ಠ ಉಷ್ಣಾಂಶ 12.4 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿದೆ. ವಿಜಯಪುರದಲ್ಲೂ ಮೈ ನಡುಕದ ಚಳಿ ಕಂಡುಬಂದಿದೆ. (ಸಾಂದರ್ಭಿಕ ಚಿತ್ರ) (Pexels / IMD Mini Temp Map)

ಬೆಂಗಳೂರು: ಕರ್ನಾಟಕದ ಒಳನಾಡು ಭಾಗದಲ್ಲಿ ವಿವಿಧೆಡೆ ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಂಟಿಗ್ರೇಡ್‌ಗಿಂತ ಕೆಳಗಿದ್ದು, ಮೈ ನಡುಗಿಸುವ ಚಳಿಯ ಅನುಭವ ಇಂದು (ನವೆಂಬರ್‌ 22) ಕೂಡ ಮುಂದುವರಿಯಲಿದೆ. ವಿಶೇಷವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ರಾಯಚೂರು, ಕಲಬುರಗಿಯ ಕೆಲವು ಪ್ರದೇಶಗಳಲ್ಲಿ ಕನಿಷ್ಠ ಉಷ್ಣಾಂಶ 12 ಡಿಗ್ರಿ ಸೆಲ್ಶಿಯಸ್‌ವರೆಗೂ ಇಳಿಕೆಯಾಗಬಹುದು. ಕರ್ನಾಟಕದ ಉದ್ದಗಲಕ್ಕೂ ಒಣ ಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ. ಸಿನೊಪ್ಟಿಕ್ ಹವಾಮಾನ ಲಕ್ಷಣ ವಿವರಿಸಿರುವ ಹವಾಮಾನ ಇಲಾಖೆಯ ವರದಿ, ಕೊಮೊರಿನ್ ಪ್ರದೇಶ ಮತ್ತು ನೆರೆಹೊರೆಯಲ್ಲಿ ಚಂಡಮಾರುತದ ಪರಿಚಲನೆಯು ಸಮುದ್ರ ಮಟ್ಟದಿಂದ 0.9 ಕಿಮೀ ಎತ್ತರದಲ್ಲಿ ಮುಂದುವರಿಯುತ್ತದೆ ಎಂದು ಹೇಳಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಹವಾಮಾನ ಇಂದು; ಸದ್ಯ ಒಣಹವೆ, ವಿವಿಧೆಡೆ ಚಳಿ

ಸುಮಾತ್ರಾ ಕರಾವಳಿಯ ಈಕ್ವಟೋರಿಯಲ್ ಹಿಂದೂ ಮಹಾಸಾಗರ ಮತ್ತು ಪಕ್ಕದ ದಕ್ಷಿಣ ಅಂಡಮಾನ್ ಸಮುದ್ರದ ಮೇಲಿನ ವಾಯು ಚಂಡಮಾರುತವು ನಿನ್ನೆ (ನವೆಂಬರ್ 21) ಬೆಳಗ್ಗೆ 08.30ಕ್ಕೆ ಕಡಿಮೆ ಉಷ್ಣವಲಯದ ಮಟ್ಟದಲ್ಲಿ ರೂಪುಗೊಂಡಿದೆ. ಇದರ ಪ್ರಭಾವದಿಂದ ನವೆಂಬರ್ 23 ರ ಸುಮಾರಿಗೆ ಆಗ್ನೇಯ ಬಂಗಾಳ ಕೊಲ್ಲಿಯ ಮೇಲೆ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ. ಅದರ ನಂತರ, ಇದು ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆಯಿದೆ ಮತ್ತು ಮುಂದಿನ 2 ದಿನಗಳಲ್ಲಿ ದಕ್ಷಿಣ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಲ್ಲಿ ವಾಯುಭಾರ ಕುಸಿತ ತೀವ್ರಗೊಳ್ಳುತ್ತದೆ. ಆಗ್ನೇಯ ಅರೇಬಿಯನ್ ಸಮುದ್ರದ ಕೇರಳ ಕರಾವಳಿಯಲ್ಲಿ ಸಮುದ್ರ ಮಟ್ಟದಿಂದ 0.9 ಕಿಮೀ ಎತ್ತರದಲ್ಲಿ ಚಂಡಮಾರುತದ ಪರಿಚಲನೆ ಕಡಿಮೆಯಾಗಿದೆ. ಆದಾಗ್ಯೂ, ಕರ್ನಾಟಕದ ವಿವಿಧೆಡೆ ಚಳಿಯ ವಾತಾವರಣ ಮತ್ತು ಒಣಹವೆ ಇಂದು (ನವೆಂಬರ್ 22) ಕೂಡ ಮುಂದುವರಿಯಲಿದೆ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಎನ್ ಪುವಿಯರಸನ್ ತಿಳಿಸಿದ್ದಾರೆ.

ಗರಿಷ್ಠ ಉಷ್ಣಾಂಶ ಕಾರವಾರದಲ್ಲಿ, ಕನಿಷ್ಠ ಉಷ್ಣಾಂಶ ವಿಜಯಪುರದಲ್ಲಿ ದಾಖಲು

ಕರ್ನಾಟಕದಲ್ಲಿ ಚಳಿಗಾಲದ ಪ್ರಭಾವ ವ್ಯಾಪಿಸಿದ್ದು, ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 35.5 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ 12.2 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಇದಕ್ಕೆ ಹೊರತಾಗಿ, ಭಾರತೀಯ ಹವಾಮಾನ ಇಲಾಖೆಯ ತಾಣದಲ್ಲಿರುವ ಮಾಹಿತಿ ಪ್ರಕಾರ ನಿನ್ನೆ (ನವೆಂಬರ್ 21) ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಶಿಯಸ್‌ ಮತ್ತು ಅದಕ್ಕಿಂತ ಕಡಿಮೆ ದಾಖಲಾಗಿರುವ ಪ್ರದೇಶಗಳ ವಿವರ ಹೀಗಿದೆ -ರಾಯಚೂರು (15 ಡಿ.ಸೆ.), ಗದಗ (14.4 ಡಿ.ಸೆ.), ಬಾದಾಮಿ ಮತ್ತು ಬಾಗಲಕೋಟೆ (14.3 ಡಿ.ಸೆ.), ಧಾರವಾಡ (13.8 ಡಿ.ಸೆ.), ಕಲಬುರಗಿ (13.7 ಡಿ.ಸೆ.) ಬೆಳಗಾವಿ (13.4 ಡಿ.ಸೆ.), ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ (12.4 ಡಿ.ಸೆ.).

ಇನ್ನು ತೇವಾಂಶದ ವಿಚಾರಕ್ಕೆ ಬಂದರೆ ಕಲಬುರಗಿಯಲ್ಲಿ ತೇವಾಂಶ 51, ಕಾರವಾರದಲ್ಲಿ 62, ಬೆಳಗಾವಿ 83ರ ಆಸುಪಾಸಿನಲ್ಲಿತ್ತು.

ಬೆಂಗಳೂರು ಹವಾಮಾನ ಇಂದು; ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕನಿಷ್ಠ ಉಷ್ಣಾಂಶ 12.4 ಡಿಗ್ರಿ ಸೆಲ್ಶಿಯಸ್‌

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಾಳೆ (ನವೆಂಬರ್ 23) ಬೆಳಗ್ಗೆ ತನಕ ಒಣ ಹವೆ ಇರಲಿದ್ದು, ಮುಂಜಾನೆ ಮಂಜು, ಇಬ್ಬನಿ ಇರಲಿದೆ. ಸಾಮಾನ್ಯವಾಗಿ ಮೋಡ ಮುಸುಕಿದ ವಾತಾವರಣ ಕಾಣಬಹುದಾಗಿದ್ದು, ವಿವಿಧೆಡೆ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಶಿಯಸ್‌ಗಿಂತಲೂ ಕಡಿಮೆ ಇರಲಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಬಾಗದಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಶಿಯಸ್ ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವರದಿ ಹೇಳಿದೆ.

ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ಬೆಂಗಳೂರು ನಗರದಲ್ಲಿ ನಿನ್ನೆ (ನವೆಂಬರ್‌ 22) ಕನಿಷ್ಠ ಉಷ್ಣಾಂಶ 18.7 ದಾಖಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಕೇಂದ್ರದಲ್ಲಿ ಕನಿಷ್ಠ ಉಷ್ಣಾಂಶ 12.4 ಡಿಗ್ರಿ ಸೆಲ್ಶಿಯಸ್‌, ಗೋಪಾಲ್‌ ನಗರ ಕೇಂದ್ರದಲ್ಲಿ ಕನಿಷ್ಠ ಉಷ್ಣಾಂಶ 21.5 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಕೂಡ ಚಳಿ ಮುನ್ನೆಚ್ಚರಿಕೆ ನೀಡಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸ್ಥಳೀಯವಾಗಿ ಜನರನ್ನು ಎಚ್ಚರಿಸಿದ್ದಾರೆ.

Whats_app_banner