ಬೆಂಗಳೂರು ರಸ್ತೆ ಅಗಲೀಕರಣ; ಸಂಚರಿಸಲು ಗಂಟೆ ಬೇಕಿದ್ದ ಈ ರಸ್ತೆಯಲ್ಲಿ ಸಾಗಲು ಇನ್ಮುಂದೆ 5-8 ನಿಮಿಷ ಸಾಕು-bengalurus traffic woes set to ease major road widening to reduce travel time from mg road to bellandur to 5 8 mins prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ರಸ್ತೆ ಅಗಲೀಕರಣ; ಸಂಚರಿಸಲು ಗಂಟೆ ಬೇಕಿದ್ದ ಈ ರಸ್ತೆಯಲ್ಲಿ ಸಾಗಲು ಇನ್ಮುಂದೆ 5-8 ನಿಮಿಷ ಸಾಕು

ಬೆಂಗಳೂರು ರಸ್ತೆ ಅಗಲೀಕರಣ; ಸಂಚರಿಸಲು ಗಂಟೆ ಬೇಕಿದ್ದ ಈ ರಸ್ತೆಯಲ್ಲಿ ಸಾಗಲು ಇನ್ಮುಂದೆ 5-8 ನಿಮಿಷ ಸಾಕು

Bengalurus Traffic Issues: ಬೆಂಗಳೂರಿನ ಲೋವರ್​​ ಅಗರಂನಿಂದ ಸರ್ಜಾಪುರ ತನಕ ರಸ್ತೆ ಅಗಲೀಕರಣ ಗುರಿ ಹೊಂದಿರುವ ಕಾರಣ ರಕ್ಷಣಾ ಇಲಾಖೆಯು 12.34 ಎಕರೆ ಭೂಮಿಯನ್ನು ಬಿಬಿಎಂಪಿಗೆ ವರ್ಗಾಯಿಸಿದೆ.

ಎಂಜಿ ರಸ್ತೆ
ಎಂಜಿ ರಸ್ತೆ

ಬೆಂಗಳೂರು: ನಗರದ ಟ್ರಾಫಿಕ್ (Bengalurus Traffic Issues) ಕುರಿತು ವಿಶೇಷವಾಗಿ ಹೇಳುವಂತಿಲ್ಲ. ಕೆಲವೊಂದು ರಸ್ತೆಗಳಲ್ಲಿ ಸಂಚರಿಸಲು ವಾಹನ ಸವಾರರು, ಒಂದಲ್ಲ, ನಾಲ್ಕೈದು ಬಾರಿ ಯೋಚನೆ ಮಾಡುತ್ತಾರೆ. ಅಂತಹ ರಸ್ತೆಗಳಲ್ಲಿ ಒಂದು ಎಂಜಿ ರೋಡ್​​-ಬೆಳ್ಳಂದೂರು ರಸ್ತೆ (MG Road to Bellandur). ಇದೀಗ ಈ ರಸ್ತೆಯ ಸಂಚರಿಸುವ ವಾಹನ ಸವಾರರಿಗೆ ಸರ್ಕಾರದಿಂದ ಗುಡ್​ನ್ಯೂಸ್ ಸಿಕ್ಕಿದೆ. ಪ್ರಸ್ತುತ ಈ ರಸ್ತೆಯಲ್ಲಿ ಸಂಚರಿಸಲು ಕನಿಷ್ಠ ಒಂದು ಗಂಟೆಯ ಪ್ರಯಾಣವನ್ನು ಕೇವಲ 7-8 ನಿಮಿಷಗಳಿಗೆ ಇಳಿಸಲು ಯೋಜನೆ ರೂಪಿಸಿದೆ.

ಲೋವರ್​​ ಅಗರಂನಿಂದ ಸರ್ಜಾಪುರ ತನಕ ರಸ್ತೆ ಅಗಲೀಕರಣ ಗುರಿ ಹೊಂದಿರುವ ಕಾರಣ 12.34 ಎಕರೆ ಭೂಮಿಯನ್ನು ಬಿಬಿಎಂಪಿಗೆ ವರ್ಗಾಯಿಸಲು ರಕ್ಷಿಣಾ ಇಲಾಖೆ ನೀಡಿದೆ. ಅಲ್ಲದೆ, ಇನ್ನೂ 10 ಎಕರೆಗೂ ಹೆಚ್ಚಿನ ಭೂಮಿಯನ್ನು ನೀಡಲು ಸಹ ಒಪ್ಪಿದೆ. ಎಂಜಿ ರೋಡ್​ನಿಂದ ಬೆಳ್ಳಂದೂರು ಭಾಗಕ್ಕೆ ಸುಮಾರು ಗಂಟೆ ಸಮಯ ಬೇಕಾಗುತ್ತದೆ. ಈ ರಸ್ತೆ ನಿರ್ಮಾಣವಾದರೆ 5 ರಿಂದ 8 ನಿಮಿಷಗಳಲ್ಲಿ ಗಮ್ಯಸ್ಥಾನ ಸೇರಬಹುದು ಎಂದು ಉಪಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಪ್ರಕಟಿಸಿದ್ದಾರೆ.

35 ಕೋಟಿ ವೆಚ್ಚದ ಟೆಂಡರ್

ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿ ಭೂಮಿ ನೀಡುವಂತೆ ನಾನು ಮತ್ತು ಸಿಎಂ ಸಿದ್ದರಾಮಯ್ಯ ಅವರು ರಕ್ಷಣಾ ಇಲಾಖೆಗೆ ಮನವಿ ಸಲ್ಲಿಸಿದ್ದೆವು. ಈಗ ಮನವಿ ಉತ್ತಮ ಸ್ಪಂದನೆ ಸಿಕ್ಕಿದ್ದು, ರಕ್ಷಣಾ ಇಲಾಖೆ ಈಗ ಒಟ್ಟು 22 ಎಕರೆ ಭೂಮಿ ವರ್ಗಾಯಿಸಲು ಅನುಮೋದನೆ ನೀಡಿದೆ. ಯೋಜನೆಯ ಭಾಗವಾಗಿ, 3.5 ಕಿಲೋಮೀಟರ್ ಆರಂಭಿಕ ವಿಸ್ತರಣೆಗೆ ಟೆಂಡರ್ ಕರೆಯಲಾಗಿದ್ದು, ಅಂದಾಜು ವೆಚ್ಚ 35 ಕೋಟಿ ರೂಪಾಯಿ. ಇದು ನಗರ ಕೇಂದ್ರದಿಂದ ಐಟಿ ಹಬ್​ಗೆ ಸಂಚರಿಸಲು ಇನ್ನಷ್ಟು ಸುಲಭವಾಗಲಿದೆ ಎಂದಿದ್ದಾರೆ.

ದಿನಕ್ಕೆ 8-10 ಇಮೇಲ್​​ಗಳು ಬರ್ತಿದ್ವು

ಬೆಂಗಳೂರಿನ ನಿವಾಸಿಗಳಿಗೆ ವಿಶೇಷವಾಗಿ ನಗರದ ಪೂರ್ವ ಭಾಗದ ಜನರಿಗೆ ಈ ಯೋಜನೆಯಿಂದ ಆಗುವ ಲಾಭವನ್ನು ಶಿವಕುಮಾರ್ ಒತ್ತಿ ಹೇಳಿದ್ದಾರೆ. ಅಭಿವೃದ್ಧಿ ಸಚಿವನಾದ ನಂತರ ಬೆಳ್ಳಂದೂರು ಮತ್ತು ಸುತ್ತಮುತ್ತಲಿನ ಐಟಿ ಹಬ್ ಪ್ರದೇಶದ ಜನರ ಸಮಸ್ಯೆಗಳನ್ನು ಆಲಿಸಿದ್ದೆ. ಸಂಚಾರ ಸಮಸ್ಯೆಯ ದಟ್ಟಣೆಯ ಸಮಸ್ಯೆಗಳ ಬಗ್ಗೆ ದಿನಕ್ಕೆ 8-10 ಇಮೇಲ್​​ಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಈ ಪ್ರದೇಶದ ಸಂಚಾರ ಸಮಸ್ಯೆ ಪರಿಶೀಲಿಸಿದ್ದೆ. ಇದೀಗ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.

ಸುರಂಗ ರಸ್ತೆ ನಿರ್ಮಾಣಕ್ಕೆ ಹೆಬ್ಬಾಳದ ಮಿಲಿಟರಿ ಡೈರಿ ಫಾರ್ಮ್ ಬಳಿ 2 ಎಕರೆ ಭೂಮಿ ನೀಡುವಂತೆ ರಕ್ಷಣಾ ಇಲಾಖೆಗೆ ಮನವಿ ಸಲ್ಲಿಸಿದ್ದೇನೆ. ಭೂಮಿಗೆ ಬದಲಾಗಿ ಕೆಲವು ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ರಕ್ಷಣಾ ಸಚಿವಾಲಯ ವಿನಂತಿಸಿದೆ. ಅದನ್ನು ಪೂರೈಸಲು ಸರ್ಕಾರ ಸಿದ್ಧವಾಗಿದೆ ಎಂದು ಶಿವಕುಮಾರ್ ಹೇಳಿದ್ದಾರೆ. ಈ ಬೆಳವಣಿಗೆಗಳೊಂದಿಗೆ, ಬೆಂಗಳೂರು ನಿವಾಸಿಗಳು ಸುಗಮ ಪ್ರಯಾಣ ಮತ್ತು ಹೆಚ್ಚು ಪರಿಣಾಮಕಾರಿ ರಸ್ತೆ ಜಾಲವನ್ನು ಎದುರು ನೋಡಬಹುದು.

mysore-dasara_Entry_Point