ಮುಂಬಯಿ, ಹೈದರಾಬಾದ್‌ ನಂತರ ಬೆಂಗಳೂರು ಹೊರ ವರ್ತುಲ ರಸ್ತೆ, ಹೆಬ್ಬಾಳ ರಸ್ತೆಗಳಲ್ಲಿ ಸಂಚರಿಸಲಿದೆಯೇ ಉಬರ್ ಷಟಲ್‌ ಬಸ್‌; ವಿಡಿಯೋ ನೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  ಮುಂಬಯಿ, ಹೈದರಾಬಾದ್‌ ನಂತರ ಬೆಂಗಳೂರು ಹೊರ ವರ್ತುಲ ರಸ್ತೆ, ಹೆಬ್ಬಾಳ ರಸ್ತೆಗಳಲ್ಲಿ ಸಂಚರಿಸಲಿದೆಯೇ ಉಬರ್ ಷಟಲ್‌ ಬಸ್‌; ವಿಡಿಯೋ ನೋಡಿ

ಮುಂಬಯಿ, ಹೈದರಾಬಾದ್‌ ನಂತರ ಬೆಂಗಳೂರು ಹೊರ ವರ್ತುಲ ರಸ್ತೆ, ಹೆಬ್ಬಾಳ ರಸ್ತೆಗಳಲ್ಲಿ ಸಂಚರಿಸಲಿದೆಯೇ ಉಬರ್ ಷಟಲ್‌ ಬಸ್‌; ವಿಡಿಯೋ ನೋಡಿ

ಮುಂಬಯಿ, ಹೈದರಾಬಾದ್‌ ನಂತರ ಬೆಂಗಳೂರು ಹೊರ ವರ್ತುಲ ರಸ್ತೆ, ಹೆಬ್ಬಾಳ ರಸ್ತೆಗಳಲ್ಲಿ ಸಂಚರಿಸಬೇಕಿತ್ತು ಉಬರ್ ಷಟಲ್‌ ಬಸ್‌ ಈಗಾಗಲೇ ಸಂಚರಿಸಬೇಕಾಗಿತ್ತು. ಉಬರ್ ಕಂಪನಿ ಇದಕ್ಕಾಗಿ ಬಹಳ ಪ್ರಯತ್ನ ನಡೆಸಿತ್ತು. ದೆಹಲಿ, ಕೋಲ್ಕತಗಳಲ್ಲಿ ಈಗಾಗಲೇ ಬಸ್ ಸಂಚರಿಸುತ್ತಿವೆ. ಉಬರ್ ಷಟಲ್ ಬಸ್ ಹೀಗಿದೆ ಈ ವಿಡಿಯೋ ನೋಡಿ.

ಮುಂಬಯಿ, ಹೈದರಾಬಾದ್‌ ನಂತರ ಬೆಂಗಳೂರು ಹೊರ ವರ್ತುಲ ರಸ್ತೆ, ಹೆಬ್ಬಾಳ ರಸ್ತೆಗಳಲ್ಲಿ ಸಂಚರಿಸಲಿದೆಯೇ ಉಬರ್ ಷಟಲ್‌ ಬಸ್‌. ದೆಹಲಿಯಲ್ಲಿ ಸಂಚರಿಸುತ್ತಿರುವ ಉಬರ್ ಷಟಲ್ ಬಸ್‌ ಹೀಗಿದೆ.
ಮುಂಬಯಿ, ಹೈದರಾಬಾದ್‌ ನಂತರ ಬೆಂಗಳೂರು ಹೊರ ವರ್ತುಲ ರಸ್ತೆ, ಹೆಬ್ಬಾಳ ರಸ್ತೆಗಳಲ್ಲಿ ಸಂಚರಿಸಲಿದೆಯೇ ಉಬರ್ ಷಟಲ್‌ ಬಸ್‌. ದೆಹಲಿಯಲ್ಲಿ ಸಂಚರಿಸುತ್ತಿರುವ ಉಬರ್ ಷಟಲ್ ಬಸ್‌ ಹೀಗಿದೆ. (@kgahlot)

ಬೆಂಗಳೂರು: ಹೊರ ವರ್ತುಲ ರಸ್ತೆ, ಹೆಬ್ಬಾಳ ಭಾಗ ಐಟಿ ಬಿಟಿ ಪಾರ್ಕ್‌ಗಳ ಉದ್ಯೋಗಿಗಳಿಗೆ ಖುಷಿ ಕೊಡುವ ಸುದ್ದಿ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುರುವಾಗಿರುವ ಉಬರ್ ಷಟಲ್ ಬಸ್ ಸೇವೆ ಶೀಘ್ರವೇ ಬೆಂಗಳೂರಿನಲ್ಲೂ ಸಿಗಲಿದೆ. ಅತ್ಯಾಧುನಿಕ ಇವಿ ಬಸ್‌ ಇದಾಗಿದ್ದು, ಹೊರ ವರ್ತುಲ ರಸ್ತೆ, ಹೆಬ್ಬಾಳ ರಸ್ತೆಗಳಲ್ಲೇ ಸಂಚರಿಸಲಿದೆ. ಕೋಲ್ಕತ, ದೆಹಲಿಯಲ್ಲಿ ಈಗಾಗಲೇ ಉಬರ್ ಷಟಲ್ ಬಸ್‌ಗಳು ಸೇವೆ ಒದಗಿಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಉಬರ್ ಕಂಪನಿ ಹೇಳಿಕೊಂಡಿದೆ. ಶೀಘ್ರದಲ್ಲೇ ಪ್ರಾಯೋಗಿಕವಾಗಿ ಹೈದರಾಬಾದ್ ಮತ್ತು ಮುಂಬಯಿಗಳಲ್ಲೂ ಉಬರ್ ಷಟಲ್ ಸೇವೆ ಶುರುವಾಗಲಿದೆ ಎಂದು ವಿವರಿಸಿರುವ ಉಬರ್, ದೇಶದ ಐಟಿ ರಾಜಧಾನಿಯಲ್ಲೂ ಉಬರ್ ಷಟಲ್ ಬಸ್ ಸಂಚಾರಕ್ಕೆ ಹಸಿರು ನಿಶಾನೆ ಪಡೆಯುವುದಕ್ಕಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದೆ.

ಬೆಂಗಳೂರಲ್ಲಿ ಉಬರ್ ಷಟಲ್‌ ಶುರುಮಾಡಬೇಕಿತ್ತು…

ಉಬರ್ ಷಟಲ್ ಬಸ್‌ ಸಂಚಾರ ಸೇವೆಯನ್ನು ಕೋಲ್ಕತ್ತ ಮತ್ತು ದೆಹಲಿ ಶುರುಮಾಡಲಾಗಿದೆ. ಇನ್ನೂ ಎರಡು ನಗರಗಳನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ. ಆ ಎರಡು ನಗರಗಳ ಪೈಕಿ ಬೆಂಗಳೂರು ಕೂಡ ಒಂದಾಗಬೇಕಾಗಿತ್ತು. ಹೌದು, ಬೆಂಗಳೂರಲ್ಲಿ ಉಬರ್ ಷಟಲ್‌ ಶುರುಮಾಡಬೇಕಿತ್ತು… ಆದರೆ, ದುರದೃಷ್ಟವಶಾತ್‌ ಮುಂದಿನ ಎರಡು ನಗರಗಳ ಪಟ್ಟಿಯಲ್ಲಿ ಬೆಂಗಳೂರು ಇಲ್ಲ. ನಾವು ಹೈದರಾಬಾದ್ ಮತ್ತು ಮುಂಬಯಿಯಲ್ಲಿ ಮುಂದಿನ ಹಂತದಲ್ಲಿ ಪ್ರಾಯೋಗಿಕವಾಗಿ ಉಬರ್ ಷಟಲ್ ಬಸ್ ಶುರುಮಾಡುತ್ತಿದ್ದೇವೆ ಎಂದು ಉಬರ್ ಇಂಡಿಯಾ ಮತ್ತು ಸೌತ್ ಏಷ್ಯಾ ಅಧ್ಯಕ್ಷ ಪ್ರಭ್‌ಜೀತ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಬೆಂಗಳೂರಿಗೆ ಉಬರ್ ಷಟಲ್ ಬಸ್‌ ತರುವ ಸಿದ್ಧತೆಯಲ್ಲಿ ನಾವು ಇದ್ದೇವೆ. ಆದರೆ ಸರ್ಕಾರದ ಕಡೆಯಿಂದ ನಮಗೆ ಇನ್ನೂ ಹಸಿರು ನಿಶಾನೆ ಸಿಗಬೇಕಿದೆ. ಇದು ಆಯಿತೆಂದರೆ ಸ್ಥಳೀಯ ಪ್ರಯಾಣದ ದಿಶೆ ಬದಲಾಗಲಿದೆ. ಪ್ರಯಾಣಿಕರಿಗೆ ಹೊಸ ಅನುಭವ ಸಿಗಲಿದೆ ಎಂದು ಸಿಂಗ್ ವಿವರಿಸಿದರು.

ಹೊರ ವರ್ತುಲ ರಸ್ತೆ, ಹೆಬ್ಬಾಳ ರಸ್ತೆಗಳಲ್ಲಿ ಸಂಚರಿಸಲಿದೆ ಉಬರ್ ಷಟಲ್‌

ಸರ್ಕಾರದಿಂದ ಅನುಮತಿ ಸಿಕ್ಕರೆ ಬೆಂಗಳೂರು ಹೊರ ವರ್ತುಲ ರಸ್ತೆ ಮತ್ತು ಹೆಬ್ಬಾಳ ರಸ್ತೆಗಳಲ್ಲಿ ಉಬರ್ ಷಟಲ್ ಬಸ್‌ಗಳು ಸಂಚರಿಸಲಿವೆ. ಪೂರ್ಣ ಪ್ರಮಾಣದಲ್ಲಿ ಏರ್‌ಕಂಡಿಷನ್ಡ್ ಆಗಿರುವ, ಮುಂಚಿತವಾಗಿ ಬುಕ್‌ ಮಾಡಿಕೊಂಡು ಪ್ರಯಾಣಿಸಬಹುದಾದ ಬಸ್‌ ಸೇವೆ ಇದಾಗಿರಲಿದೆ. ಬೆಂಗಳೂರು ಮಹಾನಗರದಲ್ಲಿ ಸಾರ್ವಜನಿಕ ಸಾರಿಗೆ ಪರ್ಯಾಯವಾಗಿ ಇಂತಹ ಸೇವೆ ಸಿಕ್ಕರೆ ಅದರ ಚಿತ್ರಣವೇ ಬದಲಾಗಲಿದೆ. ಉಬರ್ ಷಟಲ್ ಸೇವೆ ಬಳಸಿಕೊಳ್ಳುವುದಕ್ಕೆ ನಗರದಲ್ಲಿ ಅನೇಕ ಕಂಪನಿಗಳು ಮುಂದಾಗಿವೆ. ನಾಗರಿಕರು ಕೂಡ ಉತ್ಸಾಹ ತೋರಬಹುದು ಎಂದು ಸಿಂಗ್ ಆಶಾವಾದ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಉಬರ್ ಷಟಲ್ ಸೇವೆ ಒದಗಿಸುವುದಕ್ಕಾಗಿ ವಿಭಿನ್ನ ಪಾಲುದಾರರ ಜೊತೆಗೆ ಸಕ್ರಿಯವಾಗಿ ಮಾತುಕತೆ ಮುಂದುವರಿದಿದೆ. ಸರ್ಕಾರದ ಕಡೆಯಿಂದ ಅನುಮತಿ ಸಿಕ್ಕರೆ ಈ ಸೇವೆ ಶುರುಮಾಡಬಹುದು. ಆದರೆ ಇದುವರೆಗೂ ಸಿಕ್ಕಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಅಂಥದ್ದೊಂದು ಸಾಧ್ಯತೆ ಕಾಣುತ್ತಿಲ್ಲ. ಸಾರ್ವಜನಿಕ ಸಾರಿಗೆಗೆ ಪರ್ಯಾಯವಾಗಿ ಖಾಸಗಿ ಸಾರಿಗೆ ಕೂಡ ಬೇಕು ಎಂದು ಜನರು ಒತ್ತಡ ಹೇರಿದರೆ ಒಪ್ಪಿಗೆ ಸಿಗಬಹುದೇನೋ ಎಂದು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ. ನೀತಿ ನಿರೂಪಕರು ಮತ್ತು ಜನರು ಕೂಡ ಹೊಸತನಕ್ಕೆ ತೆರೆದುಕೊಳ್ಳಬೇಕು ಎಂಬ ಆಶಯವನ್ನು ಸಿಂಗ್ ಇದೇ ವೇಳೆ ವ್ಯಕ್ತಪಡಿಸಿದರು.

ಉಬರ್ ಷಟಲ್ ಬಸ್ ಹೀಗಿದೆ ನೋಡಿ

ದೆಹಲಿಯ ಸಚಿವ ಕೈಲಾಶ್ ಗೆಹ್ಲೋಟ್ ಅವರು ಕಳೆದ ತಿಂಗಳು ಉಬರ್ ಷಟಲ್ ಬಸ್‌ನ ಟೆಸ್ಟ್ ಡ್ರೈವ್ ಮಾಡಿದ್ದರು. ಅದರ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, ಬಸ್‌ನ ಒಳನೋಟ ಮತ್ತು ಇತರೆ ವಿವರಗಳನ್ನು ಅದರಲ್ಲಿ ಹಂಚಿಕೊಂಡಿದ್ದಾರೆ.

Whats_app_banner