ಅರುಣ್ ಕುಮಾರ್ ಪುತ್ತಿಲಗೆ ಮತ್ತೊಮ್ಮೆ ಸಂಕಷ್ಟ; ಪುತ್ತೂರು ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲು-dakshina kannada crime news fir filed at puttur womens police station against arun kumar puthila bjp jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಅರುಣ್ ಕುಮಾರ್ ಪುತ್ತಿಲಗೆ ಮತ್ತೊಮ್ಮೆ ಸಂಕಷ್ಟ; ಪುತ್ತೂರು ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲು

ಅರುಣ್ ಕುಮಾರ್ ಪುತ್ತಿಲಗೆ ಮತ್ತೊಮ್ಮೆ ಸಂಕಷ್ಟ; ಪುತ್ತೂರು ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲು

ಹಿಂದೂ ಮುಖಂಡ ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಿಳಾ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಅರುಣ್ ಕುಮಾರ್ ಪುತ್ತಿಲಗೆ ಮತ್ತೊಮ್ಮೆ ಸಂಕಷ್ಟ; ಪುತ್ತೂರು ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲು
ಅರುಣ್ ಕುಮಾರ್ ಪುತ್ತಿಲಗೆ ಮತ್ತೊಮ್ಮೆ ಸಂಕಷ್ಟ; ಪುತ್ತೂರು ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲು (X)

ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಬಂಡಾಯವಾಗಿ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತು ಸುದ್ದಿ ಮಾಡಿದ್ದ ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ, ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಂದೂ ಮುಖಂಡ, ಪುತ್ತಿಲ ಪರಿವಾರ ಸಂಸ್ಥಾಪಕ ಅರುಣ್ ಕುಮಾ‌ರ್ ಪುತ್ತಿಲ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಿಳಾ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಮಹಿಳೆ ನೀಡಿದ ದೂರಿನ ಪ್ರಕಾರ, 2023ರ ಜೂನ್ ತಿಂಗಳಲ್ಲಿ ಬೆಂಗಳೂರಿನ ಹೋಟೆಲ್‌ಗೆ ಕರೆಸಿಕೊಂಡು ಇಚ್ಛೆಗೆ ವಿರುದ್ಧವಾಗಿ ಅರುಣ್‌ ಕುಮಾರ್ ಲೈಂಗಿಕ ದೌರ್ಜನ್ಯ ನಡೆಸಿದ್ದಾರಂತೆ. ಅಲ್ಲದೆ ನಂಬಿಕೆ ದ್ರೋಹ, ಮಾನಹಾನಿ, ಬ್ಲಾಕ್ ಮೇಲಿಂಗ್, ಶಾರೀರಿಕ ಮತ್ತು ಮಾನಸಿಕ ಪೀಡನೆ, ಕೊಲೆ ಬೆದರಿಕೆ ಹಾಕುತ್ತಿರುವ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರುಣ್ ಕುಮಾರ್ ಪುತ್ತಿಲ ವಿರುದ್ಧ ಮಹಿಳಾ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 417, 354A, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

2023ರ ಜೂನ್‌ ತಿಂಗಳಲ್ಲಿ ಬೆಂಗಳೂರಿನ ಹೋಟೆಲ್ ಒಂದಕ್ಕೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಆ ಬಳಿಕ ಬ್ಲಾಕ್ ಮೇಲ್ ಮಾಡಿಕೊಂಡು ಅವರಿರುವ ಪ್ರದೇಶಕ್ಕೆ ಕರೆಸಿಕೊಳ್ಳುತ್ತಿದ್ದರು. ಅಬಲೆಯಾದ ತನ್ನ ಪುತ್ರಿಗೆ ಜೀವನ ಪೂರ್ತಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ನಂಬಿಸಿ ನನ್ನನ್ನು ದೈಹಿಕ ಹಾಗೂ ಮಾನಸಿಕವಾಗಿ ಬಳಸಿಕೊಳ್ಳುತ್ತಿದ್ದರು. ಅವರೊಂದಿಗೆ ಇದ್ದ ಕ್ಷಣಗಳ ಛಾಯಾಚಿತ್ರ, ಸೆಲ್ಫಿ, ಆಡಿಯೋ, ವಿಡಿಯೋಗಳು ಇದೆಯೆಂದು ಹೇಳಿಕೊಂಡು ಬೆದರಿಸಿ ಅವರ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ಆಪಾದಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು‌. ಆದರೆ, ಟಿಕೆಟ್ ಕೈತಪ್ಪಿದ ಕಾರಣದಿಂದ ಹಿಂದುತ್ವದ ಹೆಸರಿನಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗಮನ ಸೆಳೆದಿದ್ದರು. ಅಲ್ಪ ಮತಗಳ ಅಂತರದಿಂದ ಸೋತರೂ ಜನರ ಬೆಂಬಲ ಪಡೆದಿದ್ದರು. ಪುತ್ತಿಲರ ಹಿಂದುತ್ವದ ಪ್ರತಿಪಾದನೆಗೆ ಅಭಿಮಾನಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಫಾಲೋ ಮಾಡುತ್ತಿದ್ದುದಾಗಿ ದೂರು ನೀಡಿದ ಮಹಿಳೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆಡಿಯೋ ಸ್ಫೋಟ

ಇತ್ತೀಚೆಗಷ್ಟೇ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಆಡಿಯೋ ಒಂದು ಸ್ಫೋಟಗೊಂಡಿತ್ತು. ಪುತ್ತಿಲ ಅವರೇ ಮಹಿಳೆಯೊಬ್ಬರ ಜೊತೆ ಮಾತನಾಡಿದ್ದ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಆಡಿಯೋದಲ್ಲಿ ರಾಜಕೀಯದ ಬಗ್ಗೆ, ಅವಕಾಶಗಳ ಮಹಿಳೆ ವ್ಯಂಗ್ಯವಾಡಿದ್ದರು. ರಾಜಕೀಯದಲ್ಲಿ ಇರಬೇಕಾದ್ರೆ ಮಾನ ಮರ್ಯಾದೆ ಬಿಡಬೇಕು ಎಂದು ಅರುಣ್‌ ಕುಮಾರ್‌ ಎನ್ನಲಾದ ವ್ಯಕ್ತಿ ಹೇಳಿದ್ದಾರೆ. ಜೊತೆಗೆ ಕಳೆದ ಚುನಾವಣೆಯಲ್ಲಿ ಎದುರಾಳಿ ಆಶಾ ತಿಮ್ಮಪ್ಪ ಆದ ಕಾರಣ ಓಟ್ ಹೆಚ್ಚಿಗೆ ಸಿಕ್ಕಿದೆ ಎಂದು ಚರ್ಚೆಯಾಗಿದೆ. ಇದೇ ವೇಳೆ ಆಡಿಯೋದಲ್ಲಿ 3.5 ಕೋಟಿ ರೂಪಾಯಿ ಹಣ ಪಡೆದಿರುವ ಬಗ್ಗೆಯೂ ಪ್ರಸ್ತಾಪವಾಗಿತ್ತು.