Kalaburagi News: ಕಲಬುರಗಿ ಜಿಲ್ಲೆಯಲ್ಲಿ ಚಿರತೆ ಪ್ರತ್ಯೇಕ್ಷ; ಆತಂಕದಲ್ಲಿ ಭಕ್ತರು
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಕಲಬುರಗಿ ಜಿಲ್ಲೆಯಲ್ಲಿ ಚಿರತೆ ಪ್ರತ್ಯೇಕ್ಷ; ಆತಂಕದಲ್ಲಿ ಭಕ್ತರು

Kalaburagi News: ಕಲಬುರಗಿ ಜಿಲ್ಲೆಯಲ್ಲಿ ಚಿರತೆ ಪ್ರತ್ಯೇಕ್ಷ; ಆತಂಕದಲ್ಲಿ ಭಕ್ತರು

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದ ಹತ್ತಿರದ ಗುಡ್ಡ ಒಂದರಲ್ಲಿ ಚಿರತೆ ಪ್ರತ್ಯಕ್ಷವಾದ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದ ಹತ್ತಿರದ ಗುಡ್ಡ ಒಂದರಲ್ಲಿ ಕಾಣಿಸಿಕೊಂಡ ಚಿರತೆ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದ ಹತ್ತಿರದ ಗುಡ್ಡ ಒಂದರಲ್ಲಿ ಕಾಣಿಸಿಕೊಂಡ ಚಿರತೆ

ಕಲಬುರಗಿ: ಜಿಲ್ಲೆಯ ಅಫಜಲನಪುರ ಮತ್ತು ಆಳಂದ ಗಡಿ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವ ಸುದ್ದಿ ಹರಡುತ್ತಿರುವ ಬೆನ್ನಲೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದ ಹತ್ತಿರದ ಗುಡ್ಡ ಒಂದರಲ್ಲಿ ಚಿರತೆ ಪ್ರತ್ಯಕ್ಷವಾದ ಘಟನೆ ಭಾನುವಾರ ನಡೆದಿದೆ.

ವಿದ್ಯಾನಂದ ಹಿರೇಮಠ ಎನ್ನುವವರು ತಮ್ಮ ಕುಟುಂಬದ ಜೊತೆಗೆ ಕಾರಿನಲ್ಲಿ ದಂಡಗುಂಡ ಗ್ರಾಮದ ಹೊರವಲಯದ ಗುಡ್ಡ ಹತ್ತಿರದಿಂದ ತೆರಳುತ್ತಿದ್ದ ಸಮಯದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಕೂಡಲೇ ತಮ್ಮ ಮೊಬೈಲ್ ನಲ್ಲಿ ವಿಡಿಯೋ ಸರೆ ಹಿಡಿದಿದ್ದಾರೆ. ಮೊಬೈಲ್‌ನಲ್ಲಿ ಚಿರತೆಯನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ವಿದ್ಯಾನಂದ ಹಿರೇಮಠ ಅವರ ಕುಟುಂಬಸ್ಥರು ಭಯಗೊಂಡು ಅಲ್ಲಿ ಚಿರತೆ ಕಾಣಿಸುತ್ತಿದೆ ಎಂದು ಮಾತನಾಡಿಕೊಳ್ಳುತ್ತಿರುವ ಧ್ವನಿ ಸಹ ವಿಡಿಯೋದಲ್ಲಿ ಕೇಳಿ ಬರುತ್ತಿದೆ.

ಶ್ರಾವಣ ಮಾಸದ ಮೂರನೇ ಸೋಮವಾರವಾದ ಇಂದು ಪ್ರಸಿದ್ಧ ದಂಡಗುಂಡ ಗ್ರಾಮದ ಬಸವೇಶ್ವರ ಜಾತ್ರೆಗೆ ಪಾದಯಾತ್ರೆ ಮೂಲಕ ಬರಲಿರುವ ಸಾವಿರಾರು ಭಕ್ತರಲ್ಲಿ ಚಿರತೆ ದಾಳಿ ಆತಂಕ ಮನೆ ಮಾಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

Whats_app_banner