Kalaburagi News: ಲೋಕಾ ಬಲೆಗೆ ಬಿದ್ದ ತಹಸೀಲ್ದಾರ್‌, ಕಂದಾಯ ಅಧಿಕಾರಿ
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಲೋಕಾ ಬಲೆಗೆ ಬಿದ್ದ ತಹಸೀಲ್ದಾರ್‌, ಕಂದಾಯ ಅಧಿಕಾರಿ

Kalaburagi News: ಲೋಕಾ ಬಲೆಗೆ ಬಿದ್ದ ತಹಸೀಲ್ದಾರ್‌, ಕಂದಾಯ ಅಧಿಕಾರಿ

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕು ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ತಹಸೀಲ್ದಾರ್‌ ಮತ್ತು ರೆವಿನ್ಯೂ ಇನ್ಸ್‌ಪೆಕ್ಟರ್‌ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

 ಆಳಂದ ತಾಲ್ಲೂಕು ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಸೀಲ್ದಾರ್‌ ಮತ್ತು ರೆವಿನ್ಯೂ ಇನ್ಸ್‌ಪೆಕ್ಟರ್‌.
ಆಳಂದ ತಾಲ್ಲೂಕು ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಸೀಲ್ದಾರ್‌ ಮತ್ತು ರೆವಿನ್ಯೂ ಇನ್ಸ್‌ಪೆಕ್ಟರ್‌.

ಕಲಬುರಗಿ: ಲಂಚ ಸ್ವೀಕರಿಸುವಾಗ ತಹಸೀಲ್ದಾರ್‌ ಮತ್ತು ರೆವಿನ್ಯೂ ಇನ್ಸಪೆಕ್ಟರ್‌ ಲೋಕಾಯುಕ್ತರ ಬಲೆ ಬಿದ್ದಿದ್ದಾರೆ. 12,000 ರೂ. ಲಂಚ ಸ್ವೀಕರಿಸುವಾಗ ತಹಸೀಲ್ದಾರ್ ಮತ್ತು ರೆವಿನ್ಯೂ ಇನ್ಸಪೆಕ್ಟರ್‌ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ಜಿಲ್ಲೆಯ ಆಳಂದ ತಾಲೂಕು ಕಚೇರಿಯಲ್ಲಿ ಗುರುವಾರ ನಡೆದಿದೆ.

ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್, ಆರ್‌ಐ ರಾಜಶೇಖರ್ ಬಲೆಗೆ ಬಿದ್ದಿರುವ ಅಧಿಕಾರಿಗಳು. ಜಮೀನಿಗೆ ಕೃಷಿಯೇತರ ಪ್ರಮಾಣಪತ್ರ ನೀಡಲು ಮೆಹಬೂಬ್ ಪಟೇಲ್ ಎನ್ನುವವರಿಂದ ಆರ್‌ಐ ರಾಜಶೇಖರ್ ಮೂಲಕ 12,000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಮಹೆಬೂಬ್ ಪಟೇಲ್ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದು, ಲೋಕಾಯುಕ್ತ ಸಿಪಿಐ ನಾನಾಗೌಡ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ ಲಂಚ ಪಡೆಯುವಾಗ ಬಂಧಿಸಿದ್ದಾರೆ.

Whats_app_banner