Kalaburagi News: ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ ಬಾವಿಗೆ ಜಿಗಿದು ಅತ್ಮಹತ್ಯೆ
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಯಳಸಂಗಿ ಗ್ರಾಮದ ಸದ್ಯ ಕಲಬುರಗಿಯ ಹೀರಾಪುರ ಬಡಾವಣೆ ನಿವಾಸಿಯಾಗಿರುವ ವಿಜಯಕುಮಾರ ತಂದೆ ಶಿವಪುತ್ರಪ್ಪ ಗೋಗನ್ (38) ಎಂಬಾತನೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಕಲಬುರಗಿ: ಪತಿಯಿಂದ ಕಿರುಕುಳಕ್ಕೆ ಬೇಸತ್ತು ಪತ್ನಿಯರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ನಡೆದಿವೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಪತ್ನಿಯ ಕಿರುಕುಳನಿಂದ ಪತಿ ಬೇಸತ್ತು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೀರಾಪುರದಲ್ಲಿ ಭಾನುವಾರ ನಡೆದಿದೆ.
ಮೂಲತಃ ಆಳಂದ ತಾಲೂಕಿನ ಯಳಸಂಗಿ ಗ್ರಾಮದ ಸದ್ಯ ಕಲಬುರಗಿಯ ಹೀರಾಪುರ ಬಡಾವಣೆ ನಿವಾಸಿಯಾಗಿರುವ ವಿಜಯಕುಮಾರ ತಂದೆ ಶಿವಪುತ್ರಪ್ಪ ಗೋಗನ್ (38) ಎಂಬಾತನೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಕ್ಷುಲ್ಲಕ ವಿಷಯಕ್ಕೆ ಪತ್ನಿ ಪತಿ ವಿಜಯಕುಮಾರನೊಂದಿಗೆ ಪದೇ ಪದೇ ಜಗಳ ತೆಗೆಯುತ್ತಿದ್ದಳು.ಭಾನುವಾರ ಸಹ ಪತ್ನಿ ವಿಜಯಕುಮಾರನೊಂದಿಗೆ ಜಗಳ ತೆಗೆದು ಗಲಾಟೆ ಮಾಡಿದ್ದಳು. ಇದರಿಂದ ಬೇಸತ್ತ ವಿಜಯಕುಮಾರ ಬೆಳಗ್ಗೆ ತಮ್ಮ ಬಡಾವಣೆಯ ಹೀರಾಪುರದಲ್ಲಿರುವ ಬಾವಿಗೆ ಜಿಗಿದು ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಈಜು ತಜ್ಞರು, ಅಶೋಕ ನಗರದ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳವನ್ನು ಪರಿಶೀಲಿಸಿ ಮೃತ ದೇಹವನ್ನು ಬಾವಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿ ಬಳಿಕ ಕುಟುಂಬಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಮೃತ ವಿಜಯಕುಮಾರ ಅವರ ಕುಟುಂಬದವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)