Gruha Jyoti Updates: ಗೃಹ ಜ್ಯೋತಿ ಯೋಜನೆಗೆ ಮೊದಲ ದಿನವೇ ರಶ್, 70 ಸಾವಿರ ಅರ್ಜಿ ಸಲ್ಲಿಕೆ: ಅರ್ಜಿ ಸಲ್ಲಿಕೆಗೆ ಇನ್ನೂ ಇದೆ ಅವಕಾಶ
ಕರ್ನಾಟಕದ ವಿವಿಧ ಸೇವಾ ಕೇಂದ್ರಗಳ ಮೂಲಕ ಮೊದಲ ದಿನವೇ ಗೃಹ ಜೋತಿ ಯೋಜನೆಗೆ 70 ಸಾವಿರದಷ್ಟು ಅರ್ಜಿ ಸಲ್ಲಿಕೆಯಾಗಿವೆ. ಬಹಳಷ್ಟು ಮಂದಿಗೆ ಸೇವಾ ಸಿಂಧು ಸರ್ವರ್ ಡೌನ್‌ನಿಂದ ಅರ್ಜಿ ಸಲ್ಲಿಸಲು ಆಗಿಲ್ಲ. ಭಾನುವಾರ ರಜಾ ದಿನವಾದರೂ, ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ಯೋಜನೆ ನೋಂದಣಿಯ ಮೇಲುಸ್ತುವಾರಿವಹಿಸಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಂಡರು.
ಬೆಂಗಳೂರು: ಕರ್ನಾಟಕ ಸರ್ಕಾರ ಘೋಷಿಸಿರುವ ಉಚಿತ ವಿದ್ಯುತ್ ಯೋಜನೆ ಪಡೆಯಲು ಭಾರೀ ಸ್ಪಂದನೆ.
ರಾಜ್ಯದ ಎಲ್ಲಾ ಗೃಹ ಬಳಕೆ ಗ್ರಾಹಕರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಗೃಹ ಜ್ಯೋತಿ ಯೋಜನೆಯ ನೋಂದಣಿಯು ಸೇವಾ ಸಿಂಧು ಪೋರ್ಟಲ್ ನಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಆರಂಭಗೊಂಡು ರಾತ್ರಿವರೆಗು ಮುಂದುವರೆಯಿತು.
ಈ ಮೊದಲೇ ಘೋಷಿಸಿದಂತೆ ನೋಂದಣಿ ಪ್ರಕ್ರೀಯೆ ರಾಜ್ಯದ ಎಲ್ಲಾ ಕರ್ನಾಟಕ ಒನ್, ಗ್ರಾಮ ಒನ್ ಹಾಗು ಬೆಂಗಳೂರು ಒನ್ ಕೇಂದ್ರಗಳಲ್ಲಿ ಏಕಕಾಲದಲ್ಲಿ ಆರಂಭಗೊಂಡಿತು,
ಕರ್ನಾಟಕದ ವಿವಿಧ ಸೇವಾ ಕೇಂದ್ರಗಳ ಮೂಲಕ ಮೊದಲ ದಿನವೇ 70 ಸಾವಿರದಷ್ಟು ಅರ್ಜಿ ಸಲ್ಲಿಕೆಯಾಗಿವೆ. ಬಹಳಷ್ಟು ಮಂದಿಗೆ ಸೇವಾ ಸಿಂಧು ಸರ್ವರ್ ಡೌನ್‌ನಿಂದ ಅರ್ಜಿ ಸಲ್ಲಿಸಲು ಆಗಿಲ್ಲ.
ಭಾನುವಾರ ರಜಾ ದಿನವಾದರೂ, ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ಯೋಜನೆ ನೋಂದಣಿಯ ಮೇಲುಸ್ತುವಾರಿವಹಿಸಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಂಡರು.
ಮೊದಲನೇ ದಿನ ಬಹಳಷ್ಟು ಮಂದಿ ನೊಂದಣಿಗೆ ಮುಗಿಬಿದ್ದಿದ್ದರಿಂದ ಸಮಸ್ಯೆ ಉಂಟಾಗಿದ್ದು ನಿಜ. ಆದರೆ ಸೋಮವಾರ ಬೆಳಗ್ಗೆ 11ರ ನಂತರ ಎಲ್ಲವೂ ಸಹಜ ಸ್ಥಿತಿಯಲ್ಲಿ ಇರಲಿದೆ. ವಿದ್ಯುತ್ ಗ್ರಾಹಕರು ಅರ್ಜಿ ಸಲ್ಲಿಸಬಹುದು ಎನ್ನುತ್ತಾರೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ.
ಎಷ್ಟು ಅರ್ಜಿ ಸಲ್ಲಿಕೆ ಎಲ್ಲೆಲ್ಲಿ
ಬೆಂಗಳೂರು ಒನ್‌ನಲ್ಲಿ 2355 ಮಂದಿ, ಗ್ರಾಮ ಒನ್‌ನಲ್ಲಿ 62174 ಮಂದಿ, ಜನಸೇವಕದಲ್ಲಿ7 ಮಂದಿ, ಕರ್ನಾಟಕ ಒನ್‌ನಲ್ಲಿ1447 ಮಂದಿ, ಕರ್ನಾಟಕ ಒನ್‌ನ ಪ್ರಾಂಚೈಸ್‌ಗಳಲ್ಲಿ 2966 ಗ್ರಾಹಕರು ಸೇರಿದಂತೆ ಒಟ್ಟು 68949 ಮಂದಿ ಭಾನುವಾರ ಒಂದೇ ದಿನ ನೊಂದಣಿ ಮಾಡಿಸಿಕೊಂಡಿದ್ದಾರೆ.
ಬೆಂಗಳೂರು ಒನ್‌ನ 98 , ಗ್ರಾಮ ಒನ್‌ನ 3979 ಜನಸೇವಕನ 4 ಕರ್ನಾಟಕ ಒನ್‌ನ 52 ಕರ್ನಾಟಕ ಒನ್‌ನ ಪ್ರಾಂಚೈಸ್‌ಗಳ 219 ಸೇರಿದಂತೆ ಒಟ್ಟು 43 52 ಕೇಂದ್ರಗಳಲ್ಲಿ ನೊಂದಣಿಗೆ ಅವಕಾಶವಿದೆ.
ಯೋಜನೆಗೆ ನೋಂದಣಿಯನ್ನು ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ಮಾಡಲು ಅವಕಾಶವಿದೆ.
ದಾಖಲೆ ಕೊಡಬೇಡಿ
ಇ-ಆಡಳಿತ ಇಲಾಖೆ ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದ್ದು, ಗ್ರಾಹಕರು ವಿದ್ಯುತ್ ಬಿಲ್ ನಲ್ಲಿರುವ ಖಾತೆ ಸಂಖ್ಯೆ, ತಮ್ಮ ಆಧಾರ್ ಸಂಖ್ಯೆ ಹಾಗು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಗ್ರಾಹಕರು ನೊಂದಣಿ ಸಮಯದಲ್ಲಿ ಬರೀ ಮಾಹಿತಿ ನೀಡಿದರೆ ಸಾಕು. ಯಾವುದೇ ದಾಖಲೆ ಸಲ್ಲಿಸುವ ಅಗತ್ಯವಿಲ್ಲ ಎಂದು ಇಂಧನ ಇಲಾಖೆ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ. ಗ್ರಾಹಕರು ಮನೆಯಲ್ಲಿಯೇ ಕುಳಿತು ಮೊಬೈಲ್ ಅಥವಾ ಲ್ಯಾಪ್ ಟಾಪ್ ಮೂಲಕವೂ ನೊಂದಾಯಿಸಿಕೊಳ್ಳಬಹುದು. ಇಲ್ಲದೇ ಇದ್ದರೆ ಒನ್ ಸೇವೆಗಳನ್ನು ಬಳಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಈ ಕುರಿತು ಯಾವುದೇ ಅನುಮಾನ ಅಥವಾ ಗೊಂದಲಗಳಿದ್ದರೆ ಹತ್ತಿರದ ವಿದ್ಯುತ್ ಕಚೇರಿ, ಅಥವಾ ಸಹಾಯವಾಣಿ ಸಂಖ್ಯೆ 1912 ಸಂಪರ್ಕಿಸುವಂತೆಯೂ ಕೋರಲಾಗಿದೆ.
ಇದನ್ನೂ ಓದಿರಿ
ವಿಭಾಗ