Upcoming Cars: ಒಂದಲ್ಲ ಎರಡಲ್ಲ ಮುಂದಿನ ತಿಂಗಳು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ ಈ 4 ಹೊಸ ಕಾರುಗಳು
ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಈ ವಾಹನಗಳ ಪಟ್ಟಿಯು ಹೊಸ ಎಸ್‌ಯುವಿಗಳಿಂದ ಹಿಡಿದು ಹೊಸ ಇವಿಗಳವರೆಗೆ ಎಲ್ಲವನ್ನೂ ಒಳಗೊಂಡಿದೆ. ಮುಂದಿನ ತಿಂಗಳು, ಟಾಟಾ ಮೋಟಾರ್ಸ್, ಹ್ಯುಂಡೈ, ಎಂಜಿ ಮೋಟಾರ್ಸ್ ಮತ್ತು ಐಷಾರಾಮಿ ಕಾರು ತಯಾರಕ ಮರ್ಸಿಡಿಸ್-ಬೆನ್ಜ್‌ನಿಂದ ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ.(ಬರಹ: ವಿನಯ್ ಭಟ್)
ಹಬ್ಬದ ಸೀಸನ್‌ಗೂ ಮುನ್ನವೇ ವಾಹನ ಕಂಪನಿಗಳು ಸಜ್ಜಾಗಿದ್ದು, ಪ್ರತಿ ತಿಂಗಳು ಗ್ರಾಹಕರಿಗಾಗಿ ಹೊಸ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ನೀವು ಸಹ ಹೊಸ ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಸ್ವಲ್ಪ ಕಾಯುವುದು ಉತ್ತಮ. ಏಕೆಂದರೆ ಮುಂದಿನ ತಿಂಗಳು ಒಂದಲ್ಲ ಎರಡಲ್ಲ ನಾಲ್ಕು ಹೊಸ ಮಾದರಿಗಳು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ತಯಾರಾಗಿವೆ.
ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಈ ವಾಹನಗಳ ಪಟ್ಟಿಯು ಹೊಸ ಎಸ್‌ಯುವಿಗಳಿಂದ ಹಿಡಿದು ಹೊಸ ಇವಿಗಳವರೆಗೆ ಎಲ್ಲವನ್ನೂ ಒಳಗೊಂಡಿದೆ. ಮುಂದಿನ ತಿಂಗಳು, ಟಾಟಾ ಮೋಟಾರ್ಸ್, ಹ್ಯುಂಡೈ, ಎಂಜಿ ಮೋಟಾರ್ಸ್ ಮತ್ತು ಐಷಾರಾಮಿ ಕಾರು ತಯಾರಕ ಮರ್ಸಿಡಿಸ್-ಬೆನ್ಜ್‌ನಿಂದ ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ.
ಟಾಟಾ ಕರ್ವ್ ICE
ಟಾಟಾ ಮೋಟಾರ್ಸ್‌ನ ಹೊಸ ಕೂಪೆ ಎಸ್‌ಯುವಿ ಮುಂದಿನ ತಿಂಗಳು ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಬಿಡುಗಡೆಯಾಗಲಿದೆ. ಟಾಟಾ ಕರ್ವ್ ICE ಮಾದರಿಯನ್ನು ಮುಂದಿನ ತಿಂಗಳು ಸೆಪ್ಟೆಂಬರ್ 2 ರಂದು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಕಾರನ್ನು 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 1.2 ಲೀಟರ್ ಟಿಜಿಡಿಐ ಟರ್ಬೊ ಎಂಜಿನ್‌ನೊಂದಿಗೆ ಅನಾವರಣ ಆಗಲಿದೆ.
ಇದಲ್ಲದೆ, ಈ ವಾಹನವನ್ನು 1.5 ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬರಬಹುದು. ನೀವು 6 ಸ್ಪೀಡ್ ಮ್ಯಾನುವಲ್ ಮತ್ತು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳನ್ನು ಪಡೆಯುತ್ತೀರಿ.
ಹುಂಡೈ ಅಲ್ಕಾಜರ್
ಮುಂದಿನ ತಿಂಗಳು, ಸೆಪ್ಟೆಂಬರ್ 9 ರಂದು ಗ್ರಾಹಕರಿಗಾಗಿ ಹ್ಯುಂಡೈ ಅಲ್ಕಾಜರ್ ಬಿಡುಗಡೆ ಆಗಲಿದೆ. ಅಲ್ಕಾಜಾರ್‌ನ ಹೊಸ ಅವತಾರವು ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯಗಳಿಂದ ಕೂಡಿದೆ. ಕಾರಿನ ಕ್ಯಾಬಿನ್ ಅನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ ಮತ್ತು ಹೊಸ ಅವತಾರ್‌ಗೆ ಡ್ಯುಯಲ್ 10.25 ಇಂಚಿನ ಡಿಸ್ಪ್ಲೇ, ಹೊಸ ಸೀಟುಗಳು, ಮುಂಭಾಗ ಮತ್ತು ಎರಡನೇ ಸಾಲಿನಲ್ಲಿ ಗಾಳಿಯಾಡುವ ವಿಶೇಷ ಸೀಟುಗಳನ್ನು ಒದಗಿಸಲಾಗಿದೆ. 2024 ರ ಅಲ್ಕಾಜರ್‌ನಲ್ಲಿ ಸುರಕ್ಷತೆಗಾಗಿ ಹಂತ 2 ADAS ವೈಶಿಷ್ಟ್ಯಗಳನ್ನು ಸೇರಿಸಬಹುದು.
MG ವಿಂಡ್ಸರ್ EV
MG ಕಾಮೆಟ್ ಮತ್ತು MG ZS ನಂತರ ಇದು MG ಮೋಟರ್‌ನ ಮೂರನೇ ಎಲೆಕ್ಟ್ರಿಕ್ ಕಾರು ಆಗಿದ್ದು, ಈ ವಾಹನವು ಮುಂದಿನ ತಿಂಗಳು 11 ರಂದು ಬಿಡುಗಡೆಯಾಗಲಿದೆ. ಗಾಜಿನ ಮೇಲ್ಛಾವಣಿ, ಸ್ವಯಂಚಾಲಿತ ಎಲ್ಇಡಿ ಹೆಡ್ಲೈಟ್ಗಳು, ಎಲೆಕ್ಟ್ರಿಕ್ ಟೈಲ್ಗೇಟ್, 360 ಡಿಗ್ರಿ ಕ್ಯಾಮೆರಾ, 18 ಇಂಚಿನ ಅಲಾಯ್ ಚಕ್ರಗಳು ಮತ್ತು ಎಲ್ಲಾ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ಗಳಂತಹ ವೈಶಿಷ್ಟ್ಯಗಳನ್ನು ಈ ವಾಹನದಲ್ಲಿ ಕಾಣಬಹುದು.
ಇದರ ಹೊರತಾಗಿ, 15.6 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6-ವೇ ಎಲೆಕ್ಟ್ರಿಕಲ್ ಅಡ್ಜಸ್ಟಬಲ್ ಡ್ರೈವರ್ ಸೀಟ್, 8.8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 4-ವೇ ಅಡ್ಜಸ್ಟಬಲ್ ಪವರ್ಡ್ ಫ್ರಂಟ್ ಪ್ಯಾಸೆಂಜರ್ ಸೀಟ್ ಅನ್ನು ವಾಹನದ ಕ್ಯಾಬಿನ್ ಒಳಗೆ ನೀಡಲಾಗಿದೆ. ಹಿಂಬದಿಯ ಸೀಟುಗಳು 135 ಡಿಗ್ರಿಗಳವರೆಗೆ ಒರಗಿಕೊಳ್ಳಲು ಸಾಧ್ಯವಾಗುವುದರಿಂದ ಹಿಂಬದಿಯ ಆಸನಗಳಲ್ಲಿ ಕುಳಿತುಕೊಳ್ಳುವವರಿಗೆ ಆರಾಮದಾಯಕವಾಗಿದೆ. ಈ ಕಾರಿಗೆ 50.3kWh ಬ್ಯಾಟರಿಯನ್ನು ಒದಗಿಸಬಹುದು, ಇದು ಒಂದು ಸಂಪೂರ್ಣ ಚಾರ್ಜ್‌ನಲ್ಲಿ 460 ಕಿಲೋಮೀಟರ್‌ಗಳವರೆಗೆ ಚಾಲನಾ ವ್ಯಾಪ್ತಿಯನ್ನು ನೀಡುತ್ತದೆ.
ಮರ್ಸಿಡಿಸ್ ಮೇಬ್ಯಾಕ್ EQS SUV
ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್ ಬೆನ್ಜ್ನ ಈ ಪ್ರಮುಖ ಎಲೆಕ್ಟ್ರಿಕ್ SUV ಮುಂದಿನ ತಿಂಗಳು ಸೆಪ್ಟೆಂಬರ್ 5 ರಂದು ಬಿಡುಗಡೆಯಾಗಲಿದೆ. ಈ ವಾಹನದ ಟಾಪ್ 680 ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು, ಇದು ಅವಳಿ ಮೋಟಾರ್‌ಗಳೊಂದಿಗೆ 108.4kWh ಬ್ಯಾಟರಿಯೊಂದಿಗೆ ಬರಲಿದೆ. ವರದಿಗಳ ಪ್ರಕಾರ, ಈ ಎಲೆಕ್ಟ್ರಿಕ್ ಎಸ್‌ಯುವಿಯೊಂದಿಗೆ, ಗ್ರಾಹಕರು ಪೂರ್ಣ ಚಾರ್ಜ್‌ನಲ್ಲಿ 600 ಕಿಲೋಮೀಟರ್‌ಗಳವರೆಗೆ ಚಾಲನಾ ವ್ಯಾಪ್ತಿಯನ್ನು ಪಡೆಯಬಹುದು.