Children in Mansoon: ಮಳೆಗಾಲದಲ್ಲಿ ಮಕ್ಕಳು ಆರೋಗ್ಯವಂತರಾಗಿ, ಸಂತಸದಿಂದಿರಲು ತಜ್ಞರು ನೀಡಿದ ಟಿಪ್ಸ್‌ ಇಲ್ಲಿದೆ; ಈ ಸಲಹೆಗಳನ್ನು ಪಾಲಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Children In Mansoon: ಮಳೆಗಾಲದಲ್ಲಿ ಮಕ್ಕಳು ಆರೋಗ್ಯವಂತರಾಗಿ, ಸಂತಸದಿಂದಿರಲು ತಜ್ಞರು ನೀಡಿದ ಟಿಪ್ಸ್‌ ಇಲ್ಲಿದೆ; ಈ ಸಲಹೆಗಳನ್ನು ಪಾಲಿಸಿ

Children in Mansoon: ಮಳೆಗಾಲದಲ್ಲಿ ಮಕ್ಕಳು ಆರೋಗ್ಯವಂತರಾಗಿ, ಸಂತಸದಿಂದಿರಲು ತಜ್ಞರು ನೀಡಿದ ಟಿಪ್ಸ್‌ ಇಲ್ಲಿದೆ; ಈ ಸಲಹೆಗಳನ್ನು ಪಾಲಿಸಿ

Child Health in Rainy Season: ಮಳೆಗಾಲ ಆರಂಭವಾಗಿದೆ. ಮಳೆಗಾಲದೊಂದಿಗೆ ಕಾಯಿಲೆಗಳು ಜೊತೆಯಾಗುತ್ತವೆ. ಈ ಮಳೆಗಾಲದಲ್ಲಿ ನಿಮ್ಮ ಮಕ್ಕಳು ಆರೋಗ್ಯ ಹಾಗೂ ಸಂತೋಷದಿಂದಿರಲು ಈ ಟಿಪ್ಸ್‌ ಪಾಲಿಸಿ. ಮಳೆಗಾಲದಲ್ಲಿ ಮಕ್ಕಳ ಸರ್ವತೋಮುಖ ಯೋಗಕ್ಷೇಮಕ್ಕೆ ತಜ್ಞರು ನೀಡಿದ ಟಿಪ್ಸ್‌ ಇಲ್ಲಿದೆ.

ಮಳೆಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಇಲ್ಲಿದೆ ಟಿಪ್ಸ್‌
ಮಳೆಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಇಲ್ಲಿದೆ ಟಿಪ್ಸ್‌

ಬಿರುಬೇಸಿಗೆಯಿಂದ ಬಳಲಿ ಬೆಂಡಾದ ಜೀವಗಳಿಗೆ ಮಳೆ ಹನಿಯು ಸಾಂತ್ವನ ಹೇಳಿದ್ದು ಸುಳ್ಳಲ್ಲ. ಮುಂಗಾರಿನ ಋತು ಸಮೀಪಿಸುತ್ತಿದ್ದಂತೆ ನಿಮ್ಮ ಮಕ್ಕಳು ಸುರಕ್ಷಿತರಾಗಿದ್ದಾರಾ ಹಾಗೂ ಮಳೆಯನ್ನು ಎಂಜಾಯ್‌ ಮಾಡಲು ಸಿದ್ಧರಾಗಿದ್ದಾರಾ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಮಾನ್ಸೂನ್‌ ಸಂತೋಷ ತರುವ ಜೊತೆಗೆ ಸವಾಲಿಗೂ ಕಾರಣವಾಗುತ್ತದೆ. ಈ ಋತುವಿನಲ್ಲಿ ಮಕ್ಕಳು ಹಲವು ರೀತಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಜ್ವರ, ಉಸಿರಾಟದ ಸೋಂಕು, ಶಿಲೀಂಧ್ರಗಳ ಸೋಂಕು ಮತ್ತು ಹೊಟ್ಟೆಯ ಸೋಂಕಿನಂತಹ ಸಮಸ್ಯೆಗಳು ಕಾಡುವುದು ಹೆಚ್ಚು. ಆ ಕಾರಣಕ್ಕೆ ಮಕ್ಕಳನ್ನು ಅದಕ್ಕೆ ತಕ್ಕಂತೆ ಸಿದ್ಧಗೊಳಿಸುವುದು ಮುಖ್ಯವಾಗುತ್ತದೆ. ನೈರ್ಮಲ್ಯ ಅಭ್ಯಾಸದಿಂದ ಹಿಡಿದು ಒಳಾಂಗಣ ಚಟುವಟಿಕೆ, ಸುರಕ್ಷತಾ ಮುನ್ನೆಚ್ಚರಿಕೆಗಳವರೆಗೆ ಚಿಕ್ಕ ಮಕ್ಕಳನ್ನು ಸಂತೋಷ ಹಾಗೂ ಸುರಕ್ಷತೆಯಿಂದ ಕಳೆಯುವಂತೆ ಮಾಡಲು ಇಲ್ಲಿದೆ ಟಿಪ್ಸ್‌.

ಮುಂಗಾರಿನಲ್ಲಿ ಮಕ್ಕಳನ್ನು ಸಿದ್ಧಪಡಿಸಲು ಸಹಾಯ ಮಾಡುವ ಕೆಲವು ಸರಳ, ಆದರೆ ಪರಿಣಾಮ ಕಾರಿ ಸಲಹೆಗಳು ಇಲ್ಲಿವೆ.

ಶಿಶುರೋಗ ಮತ್ತು ಮಕ್ಕಳ ತಜ್ಞೆ ಡಾ. ಪೌಲಾ ಗೋಯೆಲ್‌ ಮಳೆಗಾಲದಲ್ಲಿ ಮಕ್ಕಳ ಮಾನ್ಸೂನ್‌ ಸಿದ್ಧತೆಯ ಬಗ್ಗೆ ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ.

* ಮಕ್ಕಳಿಗೆ ಕಾಲ ಕಾಲಕ್ಕೆ ಹಾಗೂ ವಯಸ್ಸಿಗೆ ಅನುಗುಣವಾಗಿ ನೀಡುವ ಲಸಿಕೆಗಳನ್ನು ತಪ್ಪಿಸಬೇಡಿ. ವರ್ಷಕೊಮ್ಮೆ ಇನ್ಫುಯೆಂಜಾ ಲಿಸಿಕೆ ನೀಡಲು ಮರೆಯದಿರಿ.

* ಕರಿದ, ಸಂಸ್ಕರಿತ ಹಾಗೂ ರಸ್ತೆಬದಿಯ, ಕಚ್ಚಾ ಹಾಗೂ ಬೇಯಿಸದ ಆಹಾರ ಸೇವನೆಯನ್ನು ತಪ್ಪಿಸಿ. ನಿಮ್ಮ ಮಗುವಿಗೆ ಪೌಷ್ಟಿಕ ಮತ್ತು ಸಮತೋಲಿತ ಆಹಾರ ಸೇವನೆಗೆ ಉತ್ತೇಜನ ನೀಡಿ.

* ಮಳೆಗಾಲದಲ್ಲಿ ನಿಮ್ಮ ಮಗು ಶುದ್ಧೀಕರಿಸಿದ ಹಾಗೂ ಕುದಿಸಿದ ಆರಿಸಿದ ನೀರನ್ನು ಕುಡಿಯುವಂತೆ ನೋಡಿಕೊಳ್ಳಿ.

* ಮಲೇರಿಯಾ, ಡೆಂಗಿ ಹಾಗೂ ಇತರ ರೋಗಗಳು ಹರಡುವುದನ್ನು ತಪ್ಪಿಸಲು ಹಾಗೂ ಸೊಳ್ಳೆಗಳಿಂದ ರಕ್ಷಣೆ ಪಡೆಯಲು, ಸೊಳ್ಳೆಗಳ ಸಂತಾನೋತ್ಪತ್ತಿ ತಪ್ಪಿಸಲು ನಿಮ್ಮ ಮನೆಯ ಪರಿಸರವನ್ನು ಸ್ವಚ್ಛವಾಗಿರಿಸಿ.

* ಶೀಲಿಂಧ್ರಗಳ ಸೋಂಕನ್ನು ತಡೆಗಟ್ಟಲು ಒದ್ದೆಯಾದ ಬಟ್ಟೆ ಹಾಗೂ ಬೂಟಗಳನ್ನು ಮನೆಯ ಹೊರಗೆ ಒಣಗಿಸಿ.

* ಮಕ್ಕಳು ಊಟ, ತಿಂಡಿ ಮಾಡುವ ಮುಂಚೆ ಕೈಗಳನ್ನು ಚೆನ್ನಾಗಿ ತೊಳೆದಿವೆಯೇ ಗಮನಿಸಿ.

* ಸ್ಕಿಪ್ಪಿಂಗ್‌, ಟೇಬಲ್‌ ಟೆನ್ನಿಸ್‌, ಹೊಪಿಂಗ್‌ನಂತರ ಒಳಾಂಗಣ ಕ್ರೀಡೆಯಲ್ಲಿ ತೊಡಗುವಂತೆ ನೋಡಿಕೊಳ್ಳಿ. ದೈಹಿಕವಾಗಿ ಅವರು ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳಿ.

* ತೇವಾಂಶ ಉಳಿಯುವ ಬಟ್ಟೆಗಳನ್ನು ತೊಡಿಸಬೇಡಿ. ಮಳೆಗಾಲಕ್ಕೆ ಹೊಂದುವ ಬಟ್ಟೆ ತೊಡಿಸುವುದು ಮುಖ್ಯವಾಗುತ್ತದೆ.

* ದೇಹಕ್ಕೆ ಟಾಲ್ಕಂ ಪೌಡರ್‌ ಹಚ್ಚುವುದನ್ನು ಮರೆಯದಿರಿ.

* ರೇನ್‌ಕೋಟ್‌, ಛತ್ರಿ ಹಾಗೂ ಬೂಟ್ಸ್‌ಗಳನ್ನು ತೊಡಿಸುವುದನ್ನು ಮರೆಯದಿರಿ.

* ಮಕ್ಕಳ ಡಯೆಟ್‌ ಕ್ರಮದಲ್ಲಿ ಬಾಸಿಲ್‌, ದಾಲ್ಚಿನ್ನಿ, ನಿಂಬೆರಸ, ಶುಂಠಿ ಹಾಗೂ ಇತರ ಮಸಾಲೆ ಪದಾರ್ಥಗಳು ಇರುವಂತೆ ನೋಡಿಕೊಳ್ಳಿ. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ತುಂಬಿದ್ದು ಇದು ಜ್ವರ ಹಾಗೂ ಜ್ವರದ ಲಕ್ಷಣಗಳಿಂದ ದೇಹವನ್ನು ರಕ್ಷಿಸುತ್ತದೆ.

* ನಿಮ್ಮ ಮಗುವಿಗೆ ಅಲರ್ಜಿಯಾಗುತ್ತಿದ್ದರೆ ಗೋಡೆ, ಕಾರ್ಪೆಟ್‌, ಕರ್ಟನ್‌ಗಳನ್ನು ತೊಳೆದು ಹಾಕಿ. ಇವುಗಳಲ್ಲಿ ಸೋಂಕು ಉಂಟು ಮಾಡುವ ಸೂಕ್ಷ್ಣಾಣುಗಳ ಬೆಳವಣಿಗೆಗೆ ಕಾರಣವಾಗುತ್ತವೆ.

* ಅನಾರೋಗ್ಯ ಪೀಡಿತರ ಬಳಿ ಮಕ್ಕಳು ಹೋಗದಂತೆ ನೋಡಿಕೊಳ್ಳಿ.

* ಮಕ್ಕಳನ್ನು ಮಾನಸಿಕವಾಗಿ ಉತ್ತೇಜಿಸಲು ವಿವಿಧ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಿ. ಅವರು ಆನಂದಿಸುವ ಹವ್ಯಾಸಗಳಲ್ಲಿ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿ.

* ಕತ್ತರಿಸಿ ಇಟ್ಟ ಹಣ್ಣು, ತರಕಾರಿಗಳನ್ನು ನೀಡದಿರಿ.

* ಕಲುಷಿತ ನೀರಿನಿಂದ ಮಕ್ಕಳನ್ನು ದೂರ ಇರಿಸಿ.

* ಉದ್ದ ತೋಳು, ಪಾದದವರೆಗೂ ಮುಚ್ಚಿರುವ ಪ್ಯಾಂಟ್‌ ತೊಡಿಸಿ.

* ಸೊಳ್ಳೆಗಳ ಕಾಟ ಹೆಚ್ಚಿದ್ದರೆ ಸೊಳ್ಳೆ ಪರದೆ ಬಳಸಿ.

* ಮಕ್ಕಳು ಹೊರಗಡೆಯಿಂದ ಮನೆಗೆ ಬಂದ ಮೇಲೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸುವುದನ್ನು ಮರೆಯದಿರಿ.

* ಪ್ಲಾಸ್ಟಿಕ್‌ ಲೆದರ್‌, ಕ್ಯಾನ್‌ವಾಸ್‌ ಶೂಗಳನ್ನು ತೊಡಿಸಬೇಡಿ.

* ಮಳೆಗಾಲದಲ್ಲಿ ಸ್ಯಾಂಡಲ್‌ ಅಥವಾ ಸ್ಪಿಪರ್‌ ಬಳಕೆ ಉತ್ತಮ.

* ಚಪ್ಪಲಿ ಧರಿಸುವು ಮೊದಲು ಸೋಂಕು ನಿರೋಧಕ ಪೌಡರ್‌ ಹಚ್ಚಿ.

ಈ ಅಭ್ಯಾಸಗಳು ಮಳೆಗಾಲದಲ್ಲಿ ಮಕ್ಕಳ ಆರೋಗ್ಯವಂತರಾಗಿ, ಸಂತಸದಿಂದಿರಲು ಈ ಟಿಪ್ಸ್‌ಗಳು ನೆರವಾಗುತ್ತವೆ, ಅಲ್ಲದೆ ಹದಿವಯಸ್ಸಿಗೆ ಬಂದ ಮೇಲೆ ಅವರು ಈ ಟಿಪ್ಸ್‌ಗಳನ್ನು ಫಾಲೋ ಮಾಡುತ್ತಾರೆ.

Whats_app_banner