ಫೀಸ್ ಕಡಿಮೆ, ಪ್ರವೇಶ ಪರೀಕ್ಷೆ ಇಲ್ಲ; ಎಂಬಿಬಿಎಸ್ ಓದಲು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ಹೋಗಲು ಕಾರಣಗಳಿವು-education news why indian students prefer to travel ukraine low mbbs fees attracts medical students jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಫೀಸ್ ಕಡಿಮೆ, ಪ್ರವೇಶ ಪರೀಕ್ಷೆ ಇಲ್ಲ; ಎಂಬಿಬಿಎಸ್ ಓದಲು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ಹೋಗಲು ಕಾರಣಗಳಿವು

ಫೀಸ್ ಕಡಿಮೆ, ಪ್ರವೇಶ ಪರೀಕ್ಷೆ ಇಲ್ಲ; ಎಂಬಿಬಿಎಸ್ ಓದಲು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ಹೋಗಲು ಕಾರಣಗಳಿವು

MBBS in Ukraine: ಉಕ್ರೇನ್‌ನಲ್ಲಿರುವ ವೈದ್ಯಕೀಯ ವಿಶ್ವವಿದ್ಯಾಲಯಗಳು ಎಂಬಿಬಿಎಸ್ ಕೋರ್ಸ್‌ಗೆ ವಿಧಿಸುವ ಶುಲ್ಕವೆಷ್ಟು, ಅಲ್ಲಿನ ಶಿಕ್ಷಣ ಗುಣಮಟ್ಟ, ಅಂತಾರಾಷ್ಟ್ರೀಯ ಮಾನ್ಯತೆ ಹೇಗಿವೆ? ಭಾರತೀಯ ವಿದ್ಯಾರ್ಥಿಗಳಿಗೆ ಮೆಡಿಕಲ್‌ ಶಿಕ್ಷಣ ಪಡೆಯಲು ಉಕ್ರೇನ್‌ ನೆಚ್ಚಿನ ದೇಶವಾಗಲು ಕಾರಣಗಳಿವು.

ಎಂಬಿಬಿಎಸ್ ಓದಲು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ಹೋಗಲು ಕಾರಣಗಳಿವು
ಎಂಬಿಬಿಎಸ್ ಓದಲು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ಹೋಗಲು ಕಾರಣಗಳಿವು (Pixabay)

2022ರಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆದ ಸಂದರ್ಭದಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಲು ಪರದಾಡಿದ್ದರು. ಆಗ ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಭಾರತೀಯ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿರುವ ಕುರಿತು ಬಹುತೇಕ ಜನರಿಗೆ ಮನದಟ್ಟಾಯಿತು. ಸಣ್ಣ ದೇಶದ ವೈದ್ಯಕೀಯ ಸಂಸ್ಥೆಗಳು ಕಡಿಮೆ ಶುಲ್ಕದೊಂದಿಗೆ ಎಂಬಿಬಿಎಸ್ ಕೋರ್ಸ್ ನೀಡಿ ಭಾರತೀಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ಇದು ಭಾರತೀಯರು ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಉಕ್ರೇನ್‌ಗೆ ಹಾರಲು ಪ್ರಮುಖ ಕಾರಣ. ಹಾಗಿದ್ರೆ ಎಂಬಿಇಎಸ್‌ ಮಾಡಲು ಭಾರತೀಯರು ಉಕ್ರೇನ್‌ ಆಯ್ಕೆ ಮಾಡಬಹುದಾ ಎಂಬುದನ್ನು ನೋಡೋಣ.

ಉಕ್ರೇನ್ ದೇಶದಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳು ಎಂಬಿಬಿಎಸ್ ಕೋರ್ಸ್‌ಗೆ 30 ಲಕ್ಷದಿಂದ 35 ಲಕ್ಷ ರೂಪಾಯಿಯವರೆಗೆ ಶುಲ್ಕ ವಿಧಿಸುತ್ತವೆ. ಇದು ಭಾರತದ ಖಾಸಗಿ ಮೆಡಿಕಲ್‌ ಕಾಲೇಜು ಸೀಟ್‌ಗೆ ವಿಧಿಸಬೇಕಾದ ಶುಲ್ಕಕ್ಕೆ ಹೋಲಿಸಿದರೆ ಅರ್ಧಕ್ಕಿಂತ ಕಡಿಮೆ.

ಈ ಕುರಿತು ಎಂಬಿಬಿಎಸ್ ವಿದ್ಯಾರ್ಥಿನಿ ಧನಶ್ರೀ ಮೆಹ್ತಾ ಮಾತನಾಡಿ, “ನಾನು ಪಿಯುಸಿ ಮುಗಿಸಿದ ನಂತರ, ನೀಟ್ ಪರೀಕ್ಷೆಗೆ ತಯಾರಿ ಮಾಡಲು ಆರಂಭಿಸಿದೆ. ಆದರೆ ನನ್ನ ಅಂಕಗಳು ಸಾಧಾರಣವಾಗಿದ್ದರಿಂದ, ಭಾರತದ ಹೊರಗಡೆ ಇರುವ ಆಯ್ಕೆಗಳನ್ನು ಹುಡುಕಲು ಪ್ರಾರಂಭಿಸಿದೆ. ನನ್ನ ಸ್ನೇಹಿತರೊಬ್ಬರು ಉಕ್ರೇನ್ ವೈದ್ಯಕೀಯ ವಿಶ್ವವಿದ್ಯಾಲಯಗಳ ಕುರಿತು ಹೇಳಿದರು. ಹೀಗಾಗಿ ನಾನು ಇಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಅಡ್ಮಿಶನ್ ಪಡೆಯಲು ಸಾಧ್ಯವಾಯಿತು. ನನಗೆ ಭಾರತದಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಅಲ್ಲದೆ ಖಾಸಗಿ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಮೊತ್ತ ಡೊನೇಶನ್‌ ನೀಡಬೇಕಿತ್ತು. ನಮ್ಮಂಥ ಮಧ್ಯಮ ವರ್ಗದ ಕುಟುಂಬಕ್ಕೆ ಹೆಚ್ಚಿನ ಡೊನೇಶನ್ ಪಾವತಿಸಲು ಸಾಧ್ಯವಿಲ್ಲ. ಆದರೆ ಉಕ್ರೇನ್‌ನಲ್ಲಿ ಅಧ್ಯಯನ ಮಾಡುವ ವೆಚ್ಚವು ಭಾರತಕ್ಕಿಂತ ತುಲನಾತ್ಮಕವಾಗಿ ಕಡಿಮೆ” ಎಂದು ಅವರು ಹೇಳಿದ್ದಾರೆ.

ಗುಣಮಟ್ಟದ ವೈದ್ಯಕೀಯ ಶಿಕ್ಷಣ

ಭಾರತೀಯ ವೈದ್ಯಕೀಯ ಸಂಘದ (FMAI) ಅಧ್ಯಕ್ಷ ಡಾ.ಸುದರ್ಶನ್ ಘೆರಾಡೆ ಮಾತನಾಡಿ, "ರಷ್ಯಾ ಮತ್ತು ಉಕ್ರೇನ್ ದೇಶಗಳು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಆಯ್ಕೆಯ ಅತ್ಯಂತ ಜನಪ್ರಿಯ ಶೈಕ್ಷಣಿಕ ತಾಣಗಳಾಗಿವೆ. ಇದಕ್ಕೆ ಕಾರಣ ಸ್ಪಷ್ಟ. ಭಾರತದ ಕಾಲೇಜುಗಳಿಗೆ ಹೋಲಿಸಿದರೆ ರಷ್ಯಾ ಮತ್ತು ಉಕ್ರೇನ್‌ನ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶುಲ್ಕ ಕಡಿಮೆ. ಉಕ್ರೇನ್ ಮತ್ತು ರಷ್ಯಾದ ವೈದ್ಯಕೀಯ ಕಾಲೇಜುಗಳು ವಿಶ್ವ ಆರೋಗ್ಯ ಸಂಸ್ಥೆ (WHO)ಯಿಂದ ಮಾನ್ಯತೆ ಪಡೆದಿವೆ. ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಸಹ ಅವುಗಳನ್ನು ಗುರುತಿಸುವುದರಿಂದ ಅಲ್ಲಿನ ಪದವಿಗಳು ಭಾರತದಲ್ಲಿ ಮಾನ್ಯವಾಗಿವೆ. ಈ ವೈದ್ಯಕೀಯ ಪದವಿಗಳು ವಿಶ್ವಾದ್ಯಂತ ಗುರುತಿಸಲ್ಪಟ್ಟಿದೆ. ವಿಶೇಷವಾಗಿ ಯುರೋಪಿಯನ್ ಕೌನ್ಸಿಲ್ ಆಫ್ ಮೆಡಿಸಿನ್, ಇತರ ಜಾಗತಿಕ ಸಂಸ್ಥೆಗಳು ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಜನರಲ್ ಮೆಡಿಕಲ್ ಕೌನ್ಸಿಲ್ ಕೂಡಾ ಈ ದೇಶಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡಿ ಸಹಾಯ ಮಾಡುತ್ತದೆ. ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ಅಥವಾ ರಷ್ಯಾವನ್ನು ಆಯ್ಕೆ ಮಾಡಲು ಮತ್ತೊಂದು ಕಾರಣವೆಂದರೆ ಅಲ್ಲಿ ಪ್ರವೇಶ ಪಡೆಯಲು ಯಾವುದೇ ಪ್ರವೇಶ ಪರೀಕ್ಷೆಗಳು ಇರುವುದಿಲ್ಲ.

ಆಹಾರ ಮತ್ತು ವಸತಿ ಬೆಲೆ ಕಡಿಮೆ

ರಷ್ಯಾ ಮತ್ತು ಉಕ್ರೇನ್‌ನಲ್ಲಿ ಎಂಬಿಬಿಎಸ್ ಕೋರ್ಸ್ ಅವಧಿ ಆರು ವರ್ಷಗಳು. ಇಲ್ಲಿನ ಹವಾಮಾನ ತಂಪಾಗಿರುತ್ತದೆ. ಶಿಕ್ಷಣ ವ್ಯವಸ್ಥೆಯು ಯುರೋಪ್ ಮಾದರಿಯನ್ನು ಆಧರಿಸಿದೆ. ಇಂಗ್ಲಿಷ್ ಬೋಧನಾ ಮಾಧ್ಯಮವಾಗಿರುವುದರಿಂದ,‌ ಭಾರತೀಯ ವಿದ್ಯಾರ್ಥಿಗಳು ಆಯಾ ದೇಶಗಳ ಭಾಷೆಯನ್ನು ಕಲಿಯುವ ಬಗ್ಗೆ ಚಿಂತಿಸಬೇಕಾಗಿಲ್ಲ. ಒಂದು ವೇಳೆ ಬೇರೆ ದೇಶದಲ್ಲಿದ್ದರೆ ಅಲ್ಲಿನ ಭಾಷೆ ಕಲಿಯಬೇಕಾಗುತ್ತದೆ. ಇಲ್ಲಿನ ಹಾಸ್ಟೆಲ್‌ಗಳು ಕೂಡಾ ಉತ್ತಮವಾಗಿವೆ. ಆಹಾರ ಹೆಚ್ಚು ಕೈಗೆಟುಕುವಂತಿದೆ. ಪರಿಸರ, ವಾತಾವರಣ ಆರೋಗ್ಯಕರವಾಗಿದೆ. ವಿದ್ಯಾರ್ಥಿಗಳು ರಾಷ್ಟ್ರೀಯ ಬ್ಯಾಂಕುಗಳಿಂದ ಶಿಕ್ಷಣ ಸಾಲಗಳನ್ನು ಪಡೆಯಬಹುದು. ಇದರೊಂದಿಗೆ ವಿದ್ಯಾರ್ಥಿಗಳು ಕ್ಲಿನಿಕಲ್ ಮಾನ್ಯತೆ ಮತ್ತು ಆಧುನಿಕ ವೈದ್ಯಕೀಯ ಉಪಕರಣಗಳೊಂದಿಗೆ ಅಭ್ಯಾಸವನ್ನು ಪಡೆಯಬಹುದು.

mysore-dasara_Entry_Point