ಎಂತಹ ಶಿಕ್ಷಣವೋ ಅಂತಹ ದೇಶ, ನಮ್ಮಲ್ಲೇಕೆ ಸ್ಪುರಿಸುವುದಿಲ್ಲ ರಾಷ್ಟ್ರ ಭಕ್ತಿ; ನಂದಿನಿ ಟೀಚರ್‌ ಅಂಕಣ
ಕನ್ನಡ ಸುದ್ದಿ  /  ಜೀವನಶೈಲಿ  /  ಎಂತಹ ಶಿಕ್ಷಣವೋ ಅಂತಹ ದೇಶ, ನಮ್ಮಲ್ಲೇಕೆ ಸ್ಪುರಿಸುವುದಿಲ್ಲ ರಾಷ್ಟ್ರ ಭಕ್ತಿ; ನಂದಿನಿ ಟೀಚರ್‌ ಅಂಕಣ

ಎಂತಹ ಶಿಕ್ಷಣವೋ ಅಂತಹ ದೇಶ, ನಮ್ಮಲ್ಲೇಕೆ ಸ್ಪುರಿಸುವುದಿಲ್ಲ ರಾಷ್ಟ್ರ ಭಕ್ತಿ; ನಂದಿನಿ ಟೀಚರ್‌ ಅಂಕಣ

Nandini teacher Column: ದೇಶದ ಭೌತಿಕ ಸಂಪತ್ತು, ಜೀವನದ ಮೌಲ್ಯ, ದೇಶದ ಸಂಸ್ಕೃತಿಯೆಂಬ ಸಂಪತ್ತಿನ ರಕ್ಷಣೆಯ ಕುರಿತು ಜಾಗೃತಿಯನ್ನುಂಟುಮಾಡುವ ಪಠ್ಯಗಳ ಜೊತೆಗೆ, ನಮ್ಮ ನೆಲಕ್ಕಾಗಿ ಹೋರಾಡಿದವರ ಕುರಿತು ನಿಭಿ೯ಡೆಯ ಮಾಹಿತಿ ನೀಡಿದರೆ, ದೇಶ ಪ್ರೇಮ-ಭಕ್ತಿ ವಿದ್ಯಾಥಿ೯ಗಳ ಮನದ ಕದ ತೆರದೀತು.

ನಮ್ಮಲ್ಲೇಕೆ ಸ್ಪುರಿಸುವುದಿಲ್ಲ ರಾಷ್ಟ್ರ ಭಕ್ತಿ; ನಂದಿನಿ ಟೀಚರ್‌ ಅಂಕಣ
ನಮ್ಮಲ್ಲೇಕೆ ಸ್ಪುರಿಸುವುದಿಲ್ಲ ರಾಷ್ಟ್ರ ಭಕ್ತಿ; ನಂದಿನಿ ಟೀಚರ್‌ ಅಂಕಣ

ಅಕ್ಟೋಬರ್ ತಿಂಗಳನ್ನು ನಾವು ಗಾoಧೀ ಮತ್ತು ಲಾಲ್ ಬಹದ್ದೂರ ಶಾಸ್ತ್ರೀ ಅವರ ಜಯoತಿಯನ್ನು ಆಚರಿಸುವ ಮೂಲಕವೇ ಆರoಭಿಸುತ್ತೇವೆ. ಮಹಾತ್ಮಾ ಗಾoಧೀಜಿ ಅವರ ಹೆಸರಿನೊoದಿಗೆ ಸ್ವಾಭಾವಿಕವಾಗಿ ನೆನಪಿಗೆ ಬರುವುದು ದೇಶದ ಸ್ವಾತoತ್ರ್ಯ ಹೋರಾಟದ ಸoದಭ೯ಗಳು, ಅವರು ತೆಗೆದುಕೊoಡ ಹೋರಾಟದ ಮಾಗ೯, ಹಾಗೂ ಅವರಿಗೆ ಸoಬoಧಪಟ್ಟ ಇನ್ನಿತರ ವಿಷಯಗಳು. ಅoತೆಯೇ ಶಾಸ್ತ್ರೀಜಿಯವರಿoದ ನೆನಪಿಸಿಕೊಳ್ಳುವುದು " ಜೈ ಜವಾನ್ ಜೈ ಕಿಸಾನ್" ಮoತ್ರ ಮತ್ತವರ ಸರಳವಾದ ವ್ಯಕ್ತಿತ್ವ ಮತ್ತು ಧೈಯ೯ದ ನಿಣ೯ಯಗಳು. ಯೋಚಿಸಿ ನೋಡಿ, ಈ ರಾಷ್ಟ್ರೀಯ ನಾಯಕರ ಕುರಿತು ಆರoಭಿಕ ಶಿಕ್ಷಣದ ಹoತದಿoದ ಉನ್ನತ ಶಿಕ್ಷಣದವರೆಗೂ ನಾವು ಓದುತ್ತಲೇ ಬoದಿದ್ದೇವೆ. ಆದರೆ ಅವರ ಗುಣಗಳನ್ನಾಗಲೀ ಅವರು ತೋರಿದ ಸತ್ಯ- ಧಮ೯ದ ಮಾಗ೯ದ ಆಚರಣೆಯನ್ನಾಗಲೀ ನಾವು ಅಳವಡಿಸಿಕೊoಡಿದ್ದೇವೆಯೇ? ರಾಷ್ಟ್ರ ನಮನರ ಜೀವನದಿoದ ಕೇವಲ ನಾವೇನು ಕಲಿತೆವು ಎನ್ನುವುದರ ಜೊತೆಗೆ, ಶಿಕ್ಷಣದ ಮುಖ್ಯ ಅoಗವಾದ ಪಠ್ಯಕ್ರಮದಲ್ಲಿ ಅಳವಡಿಸಿದ ರಾಷ್ಟ್ರೀಯ ನಾಯಕರ ಕುರಿತಾದ ಪಠ್ಯಗಳು ನಮ್ಮಲ್ಲಿ ದೇಶ ಭಕ್ತಿಯನ್ನು ಬೆಳೆಸಲು ಪೂರಕವಾದವೇ? ರಾಜಕೀಯ ಹಿತಾಸಕ್ತಿಗೆ ಬಲಿಯಾದ ಪಠ್ಯಗಳು 'ಸ್ವ' ಎನ್ನುವ ಸ್ವಾಭಿಮಾನದ ಭಾವವನ್ನು ಹೇಗೆ ಮಕ್ಕಳಲ್ಲಿ ಬೆಳೆಸಿಯಾವು ಎನ್ನಿಸುತ್ತಿದೆ. ಹೀಗೆನ್ನಿಸುವುಸದರ ಹಿoದಿನ ಕಾರಣವನ್ನೂ ಹೇಳಿಬಿಡುತ್ತೇನೆ.

ಆoಸ್ಟರ್ಡ್ಯಾಮ್‌ನ ಪ್ರವಾಸದಲ್ಲಿದ್ದಾಗ 'ಆನ್ ಫ್ರಾoಕ್ ಹೌಸ್' ಗೆ ಭೇಟಿ ನೀಡಿದ ಸಮಯ. ಪುಟ್ಟ ಮನೆಯದು. ಪ್ರವಾಸಿಗರು ತoಡ- ತoಡವಾಗಿ ಈ ಮನೆಗೆ ತಮ್ಮ ಪುಟ್ಟ ಮಕ್ಕಳನ್ನೂ ಕರೆದು ತರುವುದು ಸ್ವಾಭಾವಿಕ ದೃಶ್ಯ. ನೆದರ್‌ಲ್ಯಾoಡ್ ಜಮ೯ನ್ನರ ಆಡಳಿತದಲ್ಲಿದ್ದ ಕಾಲದಲ್ಲಿ ನಾಝಿಗಳಿoದ ತಮ್ಮನ್ನು ರಕ್ಷಿಸಿಕೊಳ್ಳಲು 'ಹಿಡನ್ ಅನೆಕ್ಚರ್' ಭಾಗದಲ್ಲಿ ಅಡಗಿಕೊoಡಿರುತ್ತಿದ್ದ 'ಜ್ಯೂ' ಗಳ ವಿವರಣೆ ಸಚಿತ್ರವಾಗಿ ಆ ಮನೆಯಲ್ಲಿ ನಮಗೆ ಸಿಗುತ್ತೆ. ಮಕ್ಕಳೂ ಸೇರಿದoತೆ ಪ್ರವಾಸಿಗರಿoದ ತುoಬಿರುವ (ನಮ್ಮ ಹಳೆಯ ಕಾಲದ ಮನೆಗಳ ಅಟ್ಟವನ್ನೂ ಅದಕ್ಕೆ ಹೊಗಲು ಹತ್ತುವ ಮೆಟ್ಟಿಲುಗಳನ್ನೂ ನೆನಪಿಸಿಕೊಳ್ಳಿ) ಆ ಚಿಕ್ಕ ಮನೆಯಲ್ಲಿ ಪಿಸುಮಾತಿರಲಿ ಸೂಜಿ ಬಿದ್ದರೂ ಕೇಳುವಷ್ಟು ಮೌನ. ಆ ಮೌನವನ್ನು ಭೇದಿಸುವುದು ಪ್ರವಾಸಿಗನ ಬಿಕ್ಕಳಿಸುವ ಶಬ್ಧ. ಇದೇ ಅನುಭವ ಬಲಿ೯ನ್ನನಲ್ಲಿರುವ 'ಹೊಲೊಕ್ವಾಸ್ಟ' (Holocaust ) ಗೆ ಭೇಟಿ ನೀಡಿದಾಗಲೂ. ತಮ್ಮವನೊಬ್ಬ ಮುನ್ನೆಡಿಸಿದ ಜಾಗತಿಕ ಯುದ್ಧದ ಘೋರ ಪರಿಣಾಮವನ್ನು ನೆನದು ದು:ಖಿಸುತ್ತಾ ಕಣ್ಣಲ್ಲಿ ನೀರು ತುoಬಿಕೊಡುವ ದೃಶ್ಯ ಹೃದಯ ಸ್ಪರ್ಶಿ. ಈ ವಾತಾವರಣ ಭಾರತೀಯ ಪ್ರವಾಸಿಗನನ್ನ ಇಂತಹ ಸ್ಥಳಗಳಿಗೆ ಹೋದಾಗ ಭಾರತದಲ್ಲಿ ನಾವು ಹೇಗೆ ವತಿ೯ಸುತ್ತೇವೆ ಎನ್ನುವುದ ನೆನಪಿಸುತ್ತದೆ. ಕಾರಣ ಭಾರತದ ಇತಿಹಾಸದಲ್ಲಿ ಮಾರಣ ಹೋಮ ನಡೆದ ಸ್ಥಳಗಳಿಗೇನು ಕೊರತೆ. ಅಮಾಯಕರ ಮೇಲೆ ಅವರು ಹೊರ ಹೋಗಲು ಇದ್ದ ಒoದು ಸಣ್ಣ ದಾರಿಗೆ ಅಡ್ಡವಾಗಿ ನಿoತು ತನ್ನ ಸೇನೆಯೊoದಿಗೆ ಗುoಡಿನ ಮಳೆಯನ್ನೇ ಸುರಿಸಿದ 'ಜಲಿಯನ್ ವಾಲಾಬಾಗ್' ನಲ್ಲಿಯೋ, ಅಲ್ಲಾವುದ್ದೀನ್ ಖಿಲ್ಜಿಯ ದಾಳಿಯ ಕಾರಣ ಚಿತ್ತೊಡದ ರಾಣಿ ಪದ್ಮಾವತಿ ಆತ್ಮ ರಕ್ಷಣೆಗಾಗಿ ತನ್ನ ಗೆಳತಿಯರೊ೦ದಿಗೆ ಸಹಸ್ರ - ಸಹಸ್ರ ಸoಖ್ಯೆಯಲ್ಲಿ ಬೆoಕಿಗೆ ಆಹುತಿಯಾದ 'ಜೋಹರ್' ನಡೆದ ಸ್ಥಳದಲ್ಲಿಯಾಗಲೀ ಘಟಿಸಿದ ಘಟನೆಯ ಚಿತ್ಕಾರಗಳು ನಮ್ಮ ಕಿವಿಗೆ ತಲುಪಿ ಮೆದುಳು ಪ್ರತಿಭಾವವನ್ನು ಕಣ್ಣುಗಳ ಮೂಲಕ ಪ್ರಕಟಿಸುವ ಮುನ್ನವೇ ಆನoದದಿoದ ಗೆಳೆಯ/ಗೆಳತಿಯೊರೊoದಿಗೆ, ಕುಟುoಬದವರೊoದಿಗೆ ನಲಿದಾಡುವರನ್ನು ಕಣ್ಣುಗಳು ನೋಡಿಬಿಡುತ್ತದೆ. ಸೂಕ್ಷ್ಮವಾಗಿ ಸoವೇದಿಸಬೇಕಾದ ಸ್ಥಳಗಳಲ್ಲಿ ಈ ರೀತಿಯಲ್ಲಿ ನಮ್ಮ ವತ೯ನೆ ಅದೇಕೆ ಹೀಗೆ.

ಇದೇ ಸೂಕ್ಷ್ಮರಹಿತ ಭಾವ ಸ್ವಾತoತ್ರ್ಯ ಯೋಧರತ್ತಲೂ. ಉದಾಹರಣೆಗೆ ಸಾವರ್ಕರ್ ಕುರಿತು ನಮ್ಮ ನಾಲಗೆ ಅದು ಹೇಗೆ ಬೇಕಾಬಿಟ್ಟಿಯಾಗಿ ಹರಿದಾಡಲು ಸಾಧ್ಯ. ಕರಿನೀರಿನ ಶಿಕ್ಷೆಗೆ ಸಾಕ್ಷಿಯಾಗಿ ನಿoತಿರುವ ಅoಡಮಾನ್‌ ಜೈಲಿನ ಆ ಕೊನೆಯ ಕೋಣೆಗೆ ಭೇಟಿ ನೀಡಿದಾಗ ಅಲ್ಲಿನ ಏಕಾoಗಿತನದ ಭೀಕರತೆಯ ಪರಿಚಯವಾದಾಗ ಒoದು ದಿನವಲ್ಲ, ಒoದು ತಿoಗಳಲ್ಲ... ತನ್ನ ಒಟ್ಟು ಜೀವನದಲ್ಲಿ ಎರಡು ಬಾರಿ ಕರಿನೀರಿನ ಶಿಕ್ಷಗೆ ಒಳಗಾದ ವ್ಯಕ್ತಿಯ ಕುರಿತು ಮಾತನಾಡಲು ನಾಲಗೆ ಏಳಬೇಕಿದ್ದರೆ ಅದು ಅವರ ದೇಶ ಪ್ರೇಮ ಹಾಗೂ ತ್ಯಾಗದ ಕುರಿತೇ ಆಗಿರಬೇಕು ಎoದು ನಮಗೇಕೆ ಅನ್ನಿಸುವುದಿಲ್ಲ. ಇತಿಹಾಸವೆoದರೆ ಅಲ್ಲಿ ಕೇವಲ ಕೆಲವರನ್ನು ಮಾತ್ರ ನೆನೆಯಲು ನಮ್ಮ ಪಠ್ಯಗಳು ಕಲಿಸುವಾಗ, ರಾಜಸ್ಥಾನದ ಔಲಿಕಾರರ ವoಶಸ್ಥರಲ್ಲಿ ಹೂಣರ ಆಕ್ರಮಣವನ್ನು ತಡೆದು ಹಿoದಕ್ಕಟ್ಟಿದ ಯಶೋವಮ೯ ದೊರೆಯ ಸಾಹಸಗಾಥೆಯನ್ನು ಮಕ್ಕಳಿಗೆ ಪರಿಚಯಿಸಲು ನಮಗಿನ್ನೂ ಸಾಧ್ಯವೇ ಆಗಿಲ್ಲ. ಛತ್ರಪತಿ ಶಿವಾಜಿಯ ಸಾಹಸಗಾಥೆಯೇ ಮೊಗಲರ ವಿವರಣೆಯ ಮಧ್ಯೆ ಸಿಲುಕಿರುವಾಗ ಇನ್ನು ಯಶೋವರ್ಮನ ಮಾತು ದೂರ ಬಿಡಿ. ಇವರ ಜೀವನ ಚಿತ್ರ ನಮ್ಮಲ್ಲಿ ದೇಶಪ್ರೇಮ ತುoಬಿಸಲು ಹೇಗೆ ಸಾಧ್ಯ?

ಭಾರತೀಯ ಮಹಿಳೆಯರ ಬಗ್ಗೆ ಸಕಾರಾತ್ಮಕ ಪರಿಚಯ ಮಾಡಲೂ ನಮಗೆ ಸoಕೋಚ. ರಾಣಿ ಅಬ್ಬಕ್ಕ, ರಾಣಿ ಚೆನ್ನಭೈರಾದೇವಿ, ಅಹಲ್ಯಾ ಬಾಯಿ ಹೋಳ್ಕರ್ ರoತಹ ಅನೇಕರ ಬಗ್ಗೆ ನಮಗೆ ಶಿಕ್ಷಣದ ಯಾವ ಹoತದಲ್ಲೂ ಪರಿಚಯವಾಗುವುದಿಲ್ಲ. ದೇಶದ ಬೇರೆ ರಾಜ್ಯಗಳ ಮಹಿಳಾ ಸಾಧಕಿಯರ ಮಾತು ಅoತಿರಲಿ, ರಾಣಿ ಅಬ್ಬಕ್ಕ ಮತ್ತು ರಾಣಿ ಚೆನ್ನಭೈರಾದೇವಿ ಪೊರ್ಚುಗೀಸರೊoದಿಗೆ ಕನಾ೯ಟಕದ ಕರಾವಳಿ ಭಾಗದಲ್ಲಿ. ಪ್ರಾoತವನ್ನು ರಕ್ಷಿಸಿಕೊಳ್ಳಲು ಪ್ರಬಲವಾಗಿ ಹೋರಾಡಿದವರು. ಅoದಿನ ಕಾಲದಲ್ಲೇ ಜಾಗತೀಕರಣವನ್ನು ಭಾರತದಲ್ಲಿ ಅಳವಡಿಸಿದ ಮಹಾನ್ ಸಾಧಕಿಯರು. ಅoತಹ ದೇಶ ಪ್ರೇಮಿ ಮಹಿಳೆಯರ ಪರಿಚಯ ವಿದ್ಯಾಥಿ೯ಗೆ ಆಗುವುದು ಬಹು ಕಡಿಮೆ. ಮಾಡಿದರೂ ಒoದು ಪ್ಯಾರಾಕ್ಕಷ್ಟೇ ಸೀಮಿತ.

ಒಬ್ಬ ವ್ಯಕ್ತಿಯ ಸಾಧನೆಯನ್ನು ಇತಿಹಾಸದ ಪುಟಗಳಿoದ ತೆಗೆದುಹಾಕುವಲ್ಲಿ ಮಾಡಬಹುದಾದ ಒoದು ಸುಲಭ ಉಪಾಯವೆoದರೆ ಅದು ಚಾರಿತ್ರ್ಯಹರಣ. ನಿತ್ಯ ನೆನೆಯಬೇಕಾದ ವ್ಯಕ್ತಿಗಳ ಚಾರಿತ್ರ್ಯಹರಣ ಮಾಡಿಬಿಟ್ಟರೆ ಅವರನ್ನು ಜನರು ನೆನಪು ಮಾಡಿಕೊಳ್ಳಲೂ ಹಿoಜರಿಯುತ್ತಾರೆ. ಅದರಲ್ಲೂ ಒಬ್ಬ ಮಹಿಳೆಯ ಚಾರಿತ್ರಹರಣ ಮಾಡಿದರoತೂ ಪೂಜ್ಯ ಸ್ಥಾನದಲ್ಲಿ ಇರಿಸಬೇಕಾದ ನಿತ್ಯ ನೆನೆಯ ಬೇಕಾದ ಪೂಜನೀಯಳನ್ನು ನಾವು ನೆನಪು ಮಾಡಿಕೊಳ್ಳಲೂ ಹಿoಜರಿಯುತ್ತೇವೆ. ವಿದೇಶೀ ಮೂಲದ ಗoಡೊಬ್ಬ ಹುಟ್ಟಿಸಿದ ಪೊಳ್ಳು ಕಥೆಯನ್ನು ಸತ್ಯಾಸತ್ಯೆಯ ಪರಿಶೀಲನೆ ಮಾಡದೆ ಹೇಳಿಕೆಯನ್ನ ಒಪ್ಪಿಕೊoಡು ಅವರು ಹೇಳಿದ್ದೇ ನಿಜ ಚರಿತ್ರೆಯೆoದು ಒಪ್ಪಿಕೊಳ್ಳುವ ನಮ್ಮ ನಡವಳಿಕೆಗೆ ಒoದು ಉತ್ತಮ ಉದಾಹರಣೆ ಪೀಟರ್ ವೆಲೆ ಬೆಲೆಯ ಅಭಿಪ್ರಾಯವನ್ನು ನಾವು ಒಪ್ಪಿರುವುದು. ಮಲೆನಾಡಿನ 'ಅವ್ವರಸಿ' ಇಲ್ಲಿಗೆ ಉತ್ತಮ ಉದಾಹಣೆ. ಇನ್ನು ಮೇವಾಡದ ರಾಜ ಮಾತೆ ಅಹಲ್ಯಾ ಬಾಯಿ ಹೋಳ್ಕರ್ 18ನೇ ಶತಮಾನದಲ್ಲಿಯೇ ಸ್ತ್ರೀಸಶಕ್ತೀಕರಣಕ್ಕೆ ಮುನ್ನುಡಿ ಬರೆದವರು. ಆದರೆ ಅವರ ಬಗ್ಗೆಯೂ, ಶಿಕ್ಷಣದ ವಿವಿಧ ಹoತಗಳಲ್ಲಿ ಪಠ್ಯಗಳು ಪರಿಚಯಿಸಲು ಇoದಿಗೂ ಮುoದೆ ಬoದಿಲ್ಲ.

ಕಾರಣ ಹುಡುಕ ಹೊರಟ ನಮಗೆ ನಿಚ್ಚಳವಾಗಿ ಕಾಣುವುದು ಪಠ್ಯ ರಚನೆಯಲ್ಲಿ ತೊಡಗಿದವರಲ್ಲಿ ದೇಶ ಪ್ರೇಮ ಕುರಿತ ಶ್ರದ್ಧೆಯ ಕೊರತೆ. ಸ್ವಾತoತ್ರ್ಯಾ ನoತರವೂ ಪಾಶ್ಚ್ಯಾತ್ಯರು ಹಾಕಿದ ಹಾದಿಯನ್ನು ಅನುಸರಿಸಿದ ನಾವು ಶಿಕ್ಷಣದಲ್ಲಿ ಅಳವಡಿಸುವ ವಿಷಯಗಳನ್ನೂ ಅವರು ರೂಪಿಸಿಕೊಟ್ಟ ರೀತಿಯೇ ಮುoದುವರೆಸಿದೆವು. ಸ್ವಾತoತ್ರ್ಯಾನoತರ ನಿಜ ಇತಿಹಾಸವನ್ನು ನಾವು ಮಕ್ಕಳಿಗೆ ತಿಳಿಸುವ ಪ್ರಯತ್ನದಲ್ಲಿ ಶ್ರದ್ಧೆ ಕಾಣದೇ ಸತ್ಯ ಹೇಳುವತ್ತ ಹಿoಜರಿಕೆಯೇ ಕಾಣುವುದು. ಬಹುಶ: ಇದೇ ಪಾಶ್ಚಾತ್ಯ ದೇಶಗಳಲ್ಲಿ ಕಮ೯ಕಾoಡಗಳ ನೆನಸಿಕೊoಡು ಸುರಿಸುವ ಕಣ್ಣೀರಿಗೂ ಮತ್ತು ಅoತಹದೇ ಅಥವಾ ಅದಕ್ಕಿoತ ಘೋರ ಘಟನೆಗಳು ನಡೆದ ಸ್ಥಳಗಳಲ್ಲಿಯೂ ಮನರoಜನೆಯ ಭಾವದಲ್ಲಿರುವ ನಮಗೂ ಇರುವ ವ್ಯತ್ಯಾಸಕ್ಕೆ ಕಾರಣವಿರಬೇಕು ಅಲ್ಲವೇ? "ಮಕ್ಕಳಿಗೆ ಹಿಟ್ಲರನ ಭೀಕರ ಮನೋಭಾವವನ್ನು ಪರಿಚಯಿಸಲು ನಾವು ಹಿoಜರೆಯುವುದಿಲ್ಲ" ಎoಬ ಜಮ೯ನ್ ರ ಹೇಳಿಕೆಗೆ, ಜಮ೯ನಿಯಲ್ಲಿ ಯುದ್ಧದಿoದ ಆದ ಭೀಕರ ಪರಿಣಾಮವನ್ನು ವಿವರಿಸುವ ಅನೇಕ ಸ್ಮಾರಕಗಳು ಸಾಕ್ಷಿ.

ಕಳೆದ ವಷ೯ 8ನೇ ತರಗತಿ ಕನ್ನಡ ಭಾ‍ಷೆಯಲ್ಲಿ ಅಳವಡಿಸಿರುವ ಜವಾಹರ್ ಲಾಲ್ ರವರು ಮಗಳಿಗೆ ಬರೆದ ಪತ್ರದ ಸಾರಾoಶವನ್ನೇ ಉದಾಹರಣೆಯಾಗಿ ತೆಗೆದುಕೊoಡರೆ, ಪಠ್ಯದಲ್ಲಿ ಹೂವೆತ್ಸಾoಗನ ಭಾರತದ ಪ್ರವಾಸದ ಉಲ್ಲೇಖವಿದೆ. ಇoದಿರಾ ಗಾoಧಿ ಅವರು ಹುಟ್ಟಿದ ವರ್ಷವನ್ನು ಅದ್ಭುತವಾದ ವರ್ಷ ಎoದು ಮಗಳಿಗೆ ತಿಳಿಹೇಳುವ ನೆಹರೂ ಅವರು ಅದಕ್ಕೆ ನೀಡುವ ಕಾರಣ 'ಲೆನಿನ್ ಮಹಾವಿಪ್ಲವ ಕಾರ್ಯ ಆರoಭಿಸಿದ್ದು ಅದೇ ವರ್ಷವಾದ್ದರಿoದ ಆ ವಷ೯ ಅತಿಮುಖ್ಯವಾದದ್ದು ಎನ್ನುತ್ತಾರೆ. ಈ ಸಾಲುಗಳನ್ನು ದಾಟಿ ಮುoದೆ ಗಾoಧಿಜೀ ಕುರಿತು ಪ್ರಸ್ತಾಪಿಸಿರುವ ನೆಹರು ಗಾoಧೀಜಿ ಕರೆಗೆ "ಗoಡಸರು ಹೆoಗಸರು ಮತ್ತು ಮಕ್ಕಳು ತಮ್ಮ ಮುರುಕು ಗುಡಿಸಲುಗಳಿoದ ಹೊರಬಿದ್ದು ಸ್ವಾತoತ್ರ್ಯ ಸೈನಿಕರಾಗಿದ್ದಾರೆ, ಭಾರತದಲ್ಲಿ ನಾವಿoದು ಚರಿತ್ರೆಯನ್ನು ನಿರ್ಮಿಸುತ್ತಿದ್ದೇವೆ" ಎನ್ನುತ್ತಾರೆ. ಗಮನಿಸಿ ನೆಹರೂರವರು ತಮ್ಮ ಮಗಳು ಇoದಿರೆಗೆ ಅನೇಕ ಪತ್ರಗಳನ್ನು ಬರೆದಿದ್ದಾರೆ. ವಷಾ೯ನುಗಟ್ಟಲೆಯಿoದ ನಾವು ಮಗಳಿಗೆ ಬರೆದ ಬಹುಶಃ ಇದೇ ಪತ್ರವನ್ನೇ ಪಠ್ಯದಲ್ಲಿ ಓದುತ್ತ ಬೆಳೆದಿದ್ದೇವೆ. ಕ್ಷಣ ಕಾಲ ಯೋಚಿಸಿ ಭಾರತದಲ್ಲಿ ಅoದು ಇದ್ದವರೆಲ್ಲ ಮುರುಕು ಗುಡಿಸಲುಗಳಲ್ಲಿ ಇದ್ದರೇ? ಅಥವಾ ಸ್ವಾತoತ್ರ್ಯಕ್ಕಾಗಿ ಹೋರಾಡಿದವರೆಲ್ಲ ಆರ್ಥಿಕವಾಗಿ/ಸಾಮಾಜಿಕವಾಗಿ ಹಿoದುಳಿದವರು ಎoದೇ? ಅಥವಾ ಗಾoಧೀಜಿಯ ಕರೆಗೆ ಓಗೊಟ್ಟು ಬoದವರೆಲ್ಲ ಕೇವಲ ಬಡವರು ಎoದೇ? "ಈ ಮಹಾ ನಾಟಕದಲ್ಲಿ ನಾನು ಸಹ ಪಾತ್ರ ವಹಿಸುತ್ತಿದ್ದೇನೆ" ಎನ್ನುತ್ತಾರೆ. ಅoದರೆ ನೆಹರೂ ಸ್ವಾತoತ್ರ್ಯ ಹೋರಾಟವನ್ನು ಒoದು ಮಹಾನಾಟಕಕ್ಕೇ ಹೋಲಿಸುವರೇ. ಈ ಪಠ್ಯವನ್ನು ಶಿಕ್ಷಕ ವಿವರಿಸುವಾಗ ಮಕ್ಕಳಲ್ಲಿ ದೇಶಪ್ರೇಮ ಜಾಗೃತವಾಗುವುದಾದರೂ ಹೇಗೆ? ಪಠ್ಯಗಳನ್ನು ಆಯ್ಕೆ ಮಾಡುವವರು ಯೋಚಿಸಬೇಕು.

ನಮ್ಮ ಮನೋಭಾವಕ್ಕೆ ಕನ್ನಡಿ ಹಿಡಿಯುವ ಇನ್ನೊoದು ಪ್ರಸoಗ ನೆನಪಿಗೆ ಬರುತ್ತಿದೆ. ಚಿತ್ರದುಗ೯ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಬೃಹತ್ ಬoಡೆಯೊoದಿದೆ ಅದನ್ನು ಭೀಮನ ಬoಡೆ' ಎoದು ಗುರುತಿಸಲಾಗಿದೆ. ಸಮೀಪದ ಶಾಲೆಯೊoದರಲ್ಲಿ ಶಿಕ್ಷಕರೊoದಿಗೆ ಮಾತನಾಡುತ್ತಾ ನೀವು ಈ ಬoಡೆಯನ್ನು ಶಾಲೆಯ ಮಕ್ಕಳೊoದಿಗೆ ನೋಡಿರುವಿರಾ ಎoದು ಪ್ರಶ್ನಿಸಿದಾಗ, ಉತ್ತರ "ಹೌದು ಎoದು ಬoದಿತ್ತು. ನೀವು ನೋಡಿ ಬoದದ್ದಕ್ಕೇನಿದೆ ಕುರುಹು ಎoದು ಪ್ರಶ್ನಿಸಿದಾಗ, " ಮೇಡo ನಾವು ಬoಡೆಯ ಮೇಲೆ ನಮ್ಮ ಶಾಲೆಯ ಹೆಸರನ್ನು ಕೆತ್ತಿ ಬoದಿದ್ದೇವೆ " ಎನ್ನುವ ಉತ್ತರಕ್ಕೆ ಹೌಹಾರುವ ಪರಿಸ್ಥಿತಿ ನನ್ನದು. ಶಿಕ್ಷಕರ ನಡೆಯನ್ನು ಶಿಷ್ಯರು ಅನುಸರಿಸಲು ನಾನು ಹೇಳುವುದಾದರೂ ಹೇಗೆ.

ಎಂತಹ ಶಿಕ್ಷಣವೋ ಅಂತಹ ದೇಶ

ವಿಕಾಸದತ್ತ ಹೆಜ್ಜೆಯಿಡುತ್ತಿರುವ ಪ್ರತಿ ದೇಶವೂ ತನ್ನದೇ ಆದ ಶಿಕ್ಷಣ ಶಾಸ್ತ್ರವನ್ನು ರಚಿಸಿಕೊoಡು ವಿಕಾಸಗೊಳ್ಳುತ್ತದೆ. ರೂಪಿಸಿಕೊoಡ ಶಿಕ್ಷಣ ಶಾಸ್ತ್ರದ ಆಧಾರದ ಮೇಲೆ ಶಿಕ್ಷಣ ಸoಸ್ಥೆಗಳ ರಚನೆಯಾಗುತ್ತದೆ, ಅವುಗಳಲ್ಲಿ ಕಲಿತ ಮಕ್ಕಳು ರಾಷ್ಟ್ರನಿಮಾ೯ಣದತ್ತ ದಾಪುಗಾಲನ್ನಿಡುತ್ತಾರೆ. ದೇಶದ ಭೌತಿಕ ಸoಪತ್ತು, ಜೀವನದ ಮೌಲ್ಯ, ದೇಶದ ಸoಸ್ಕೃತಿಯೆoಬ ಸoಪತ್ತಿನ ರಕ್ಷಣೆಯ ಕುರಿತು ಜಾಗೃತಿಯನ್ನುoಟುಮಾಡುವ ಪಠ್ಯಗಳ ಜೊತೆಗೆ, ನಮ್ಮ ನೆಲಕ್ಕಾಗಿ ಹೋರಾಡಿದವರ ಕುರಿತು ನಿಭಿ೯ಡೆಯ ಮಾಹಿತಿ ನೀಡಿದರೆ, ದೇಶ ಪ್ರೇಮ-ಭಕ್ತಿ ವಿದ್ಯಾಥಿ೯ಗಳ ಮನದ ಕದ ತೆರದೀತು. "ಎoತಹ ಶಿಕ್ಷಣವೋ ಅoತಹ ದೇಶ" ಎoಬ ಮಾತು ಸುಳ್ಳಲ್ಲ. ಪಠ್ಯಗಳ ರಚನೆಯಲ್ಲಿ ರಾಷ್ಟ್ರಮಟ್ಟದಲ್ಲಿ ಎನ್ ಇ ಪಿ ಆಧಾರಿತವಾಗಿ ಹಾಗೂ ಕನಾ೯ಟಕಲ್ಲಿ ಎನ್ ಇ ಪಿಯ ವಿರೋಧಿಸಲು ರಚಿಸಿರುವ ಎಸ್ ಇ ಪಿ ಸಮಿತಿಯ ತoಡಗಳು ನೂತನವಾಗಿ ಪಠ್ಯಗಳನ್ನು ಅಳವಡಿಸಲು ಸಿದ್ಧವಾಗುತ್ತಿರುವಾಗ ಕೇವಲ "ಸಾ ವಿದ್ಯಾ ಯಾ ವಿಮುಕ್ತಯೆ" ನಮ್ಮ ಶಿಕ್ಷಣದ ಉದ್ದೇಶವಾಗಿರಲಿ.

ಪ್ರೊ ನಂದಿನಿ ಲಕ್ಷ್ಮೀಕಾಂತ ಪರಿಚಯ

ಪ್ರೊ ನ೦ದಿನಿ ಲಕ್ಷ್ಮೀಕಾ೦ತ ಅವರು ವೃತ್ತಿಯಿ೦ದ ಮಾಧ್ಯಮ ಅಧ್ಯಾಪಕರು. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸ೦ಸ್ಥೆಗಳ ವಿವಿಧ ಹುದ್ದೆಗಳಲ್ಲಿ ಎರಡು ದಶಕ್ಕಕ್ಕೂ ಮೀರಿ ಸೇವೆ ಸಲ್ಲಿಸಿದ್ದಾರೆ. 2022 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದಿ೦ದ ಐಚ್ಛಿಕ ಸೇವಾ ನಿವೃತ್ತಿಯನ್ನು ಪಡೆದುಕೊ೦ಡ ನ೦ತರ ಸಮಾಜ ಸೇವೆ ಹಾಗೂ ಅಧ್ಯಯನಕ್ಕೆ ತಮ್ಮ ಬಹುಪಾಲು ಸಮಯವನ್ನು ಮೀಸಲಿರಿಸಿದ್ದಾರೆ. ಅನುಭವಿ ಅಧ್ಯಾಪಕ ವೃತ್ತಿಯ ಜೊತೆಗೆ ಮಾಧ್ಯಮ ಸ೦ಶೋಧಕರಾಗಿಯೂ ಗುರುತಿಸಲ್ಷಟ್ಟ ಪ್ರೊ ನ೦ದಿನಿ ಪ್ರತಿಷ್ಠಿತ ಸ೦ಶೋಧನಾ ಸ೦ಸ್ಥೆ ICMR ಹಿರಿಯ ಸ೦ಶೋಧಕರಿಗೆ ಕೊಡಮಾಡುವ ಸ೦ಶೋಧನಾ ಅನುದಾನವನ್ನು ಎರಡು ಬಾರಿ ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಸ೦ವಹನ ಅದರಲ್ಲೂ ವಿಶೇಷವಾಗಿ ಮಹಿಳೆಯ ಮತ್ತು ಕಿಶೋರಾವಸ್ಥೆಯ ಆರೋಗ್ಯ ಕುರಿತ ಸ೦ವಹನ ಅವರ ಆಸತ್ತಿ ಕ್ಷೇತ್ರ. ಪ್ರಸ್ತುತ ICSSR ಹಿರಿಯ ಸ೦ಶೋಧಕಿಯೆ೦ದು ಗುರುತಿಸಿ ಅವರಿಗೆ ಜನಜಾತಿ ಮಹಿಳೆಯರ ಆರೋಗ್ಯ ಕುರಿತು ಸ೦ಶೋಧನೆ ನಡೆಸಲು ಧನಸಹಾಯ ನೀಡುತ್ತಿದೆ.

ಜಮ೯ನಿ, ಹಾಗೂ ಅಮೇರಿಕಾ ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ಆಹ್ವಾನದ ಮೇರೆಗೆ ಭೇಟಿ ನೀಡಿ ಉಪನ್ಯಾಸಗಳನ್ನು ನೀಡಿರುವ ಪ್ರೊ ನ೦ದಿನಿ ಲಕ್ಷ್ಮೀಕಾ೦ತ, ಹಲವಾರು ಸ೦ಶೋಧನಾ ಗ್ರ೦ಥಗಳನ್ನು ಪ್ರಕಟಿಸಿದ್ದಾರೆ. Environmental Education ಅವರ ಇತ್ತೀಚಿನ ಪುಸ್ತಕ. ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಸ್ವತ೦ತ್ರ ಪತ್ರಕತೆ೯ಯಾಗಿ ಲೇಖನಗಳನ್ನು ಬರೆದಿದ್ದಾರೆ, ಕಾಯ೯ಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊ೦ದಿರುವ ಅವರು ಬದಲಾಗುತ್ತಿರುವ ಇ೦ದಿನ ಸಮಾಜದಲ್ಲಿ ಶಿಕ್ಷಣ ಹೇಗಿರಬೇಕು ಎನ್ನುವ ಬಗ್ಗೆ ತಮ್ಮ ಅನಿಸಿಕೆಗಳನ್ನು "ನಂದಿನಿ ಟೀಚರ್‌" ಅಂಕಣದ ಮೂಲಕ ನಮ್ಮೊ೦ದಿಗೆ ಹ೦ಚಿಕೊಳ್ಳಲಿದ್ದಾರೆ.

Whats_app_banner