Job Interview: ಉದ್ಯೋಗ ಸಂದರ್ಶನಕ್ಕೆ ಸಿದ್ಧತೆ ನಡೆಸುತ್ತಿದ್ದೀರಾ, ಜಾಬ್‌ ಇಂಟರ್‌ವ್ಯೂನಲ್ಲಿ ಸಾಮಾನ್ಯವಾಗಿ ಕೇಳುವ 37 ಪ್ರಶ್ನೆಗಳು ಇಲ್ಲಿವೆ
ಕನ್ನಡ ಸುದ್ದಿ  /  ಜೀವನಶೈಲಿ  /  Job Interview: ಉದ್ಯೋಗ ಸಂದರ್ಶನಕ್ಕೆ ಸಿದ್ಧತೆ ನಡೆಸುತ್ತಿದ್ದೀರಾ, ಜಾಬ್‌ ಇಂಟರ್‌ವ್ಯೂನಲ್ಲಿ ಸಾಮಾನ್ಯವಾಗಿ ಕೇಳುವ 37 ಪ್ರಶ್ನೆಗಳು ಇಲ್ಲಿವೆ

Job Interview: ಉದ್ಯೋಗ ಸಂದರ್ಶನಕ್ಕೆ ಸಿದ್ಧತೆ ನಡೆಸುತ್ತಿದ್ದೀರಾ, ಜಾಬ್‌ ಇಂಟರ್‌ವ್ಯೂನಲ್ಲಿ ಸಾಮಾನ್ಯವಾಗಿ ಕೇಳುವ 37 ಪ್ರಶ್ನೆಗಳು ಇಲ್ಲಿವೆ

job interview questions: ಉದ್ಯೋಗ ಸಂದರ್ಶನದಲ್ಲಿ ಸಾಮಾನ್ಯವಾಗಿ ಸಂದರ್ಶನಕರು ಕೇಳುವ ಪ್ರಶ್ನೆಗಳು ಇಲ್ಲಿವೆ. ನೀವು ಜಾಬ್‌ ಇಂಟರ್‌ವ್ಯೂಗೆ ಹೋಗುವಾಗಲೂ ಈ ಪ್ರಶ್ನೆಗಳನ್ನು ಕೇಳಬಹುದು. ಹೀಗಾಗಿ ಉತ್ತರಿಸಲು ಸಿದ್ಧರಾಗಿರಿ.

ಜಾಬ್‌ ಇಂಟರ್‌ವ್ಯೂನಲ್ಲಿ ಸಾಮಾನ್ಯವಾಗಿ ಕೇಳುವ 37 ಪ್ರಶ್ನೆಗಳು
ಜಾಬ್‌ ಇಂಟರ್‌ವ್ಯೂನಲ್ಲಿ ಸಾಮಾನ್ಯವಾಗಿ ಕೇಳುವ 37 ಪ್ರಶ್ನೆಗಳು

ಉದ್ಯೋಗ ಸಂದರ್ಶನ ಎಂದರೆ ಕೆಲವರಿಗೆ ಭಯ ಆರಂಭವಾಗುತ್ತದೆ. ಯಾವ ಪ್ರಶ್ನೆ ಕೇಳುತ್ತಾರೆ, ಹೇಗೆ ಉತ್ತರಿಸಲಿ, ನನ್ನ ಉತ್ತರ ಅವರಿಗೆ ಇಷ್ಟವಾಗುತ್ತ, ನನಗೆ ಉದ್ಯೋಗ ದೊರಕುತ್ತದೆಯೇ ಇತ್ಯಾದಿ ಪ್ರಶ್ನೆಗಳು, ಆತಂಕಗಳು ಅಭ್ಯರ್ಥಿಗಳಲ್ಲಿ ಇರುತ್ತದೆ. ಉದ್ಯೋಗ ಸಂದರ್ಶನಕ್ಕೆ ಯಾವತ್ತೂ ಸಿದ್ಧತೆ ಇಲ್ಲದೆ ಹೋಗಬಾರದು. ಸಾಕಷ್ಟು ತಯಾರಿ ನಡೆಸಿಕೊಂಡು ಹೋಗಬೇಕು. ಉದ್ಯೋಗ ಸಂದರ್ಶನದಲ್ಲಿ ಸಾಮಾನ್ಯವಾಗಿ ಕೇಳಬಹುದಾದ ಕೆಲವು ಪ್ರಶ್ನೆಗಳನ್ನು ಇಲ್ಲಿ ನೀಡಲಾಗಿದೆ. ಈ ಪ್ರಶ್ನೆಗಳಿಗೆ ನೀವು ಹೇಗೆ ಉತ್ತರಿಸಬಹುದು ಎಂದು ಯೋಚಿಸಿ. ಕೇವಲ ಯೋಚಿಸಿದರೆ ಸಾಲದು, ಕನ್ನಡಿ ಮುಂದೆ ನಿಂತು ನೀವು ಸಂದರ್ಶನಕರ ಮುಂದೆ ಉತ್ತರಿಸುವಂತೆ ಅಭ್ಯಾಸ ಮಾಡಿ.

ಟೆಲ್‌ ಮಿ ಅಬೌಟ್‌ ಯುವರ್‌ಸೆಲ್ಫ್‌

ನಿಮ್ಮ ಬಗ್ಗೆ ಹೇಳಿ ಎಂದು ಬಹುತೇಕ ಸಂದರ್ಶಕರು ಕೇಳುತ್ತಾರೆ. ಇದು ಅಂದುಕೊಂಡಷ್ಟು ಸರಳ ಪ್ರಶ್ನೆಯಲ್ಲ. ನಿಮ್ಮನ್ನು ಮೌಲ್ಯಮಾಪನ ಮಾಡಲು ಇರುವ ಕಠಿಣ ಪ್ರಶ್ನೆ ಇದಾಗಿದೆ. ಹೀಗಾಗಿ ಈ ಪ್ರಶ್ನೆಗೆ ಮೈ ನೇಮ್‌ ಈಸ್‌... ಎಂದು ಆರಂಭಿಸಿ ಹೇಳಬೇಡಿ. ರೆಸ್ಯುಮೆಯಲ್ಲಿ ಇಲ್ಲದ ಹಲವು ಸಂಗತಿಗಳನ್ನು ತಿಳಿಸಿ. ನಿಮ್ಮ ವೃತ್ತಿ ಕೌಶಲ, ಕಂಪನಿಗೆ ಅಗತ್ಯವಿರುವ ಸ್ಕಿಲ್‌ಗಳು ನಿಮ್ಮಲ್ಲಿ ಇರುವುದನ್ನು ತಿಳಿಸಿ.

ಉದ್ಯೋಗ ಸಂದರ್ಶನದಲ್ಲಿ ಕೇಳಬಹುದಾದ ಪ್ರಶ್ನೆಗಳ ಪಟ್ಟಿ

  1. ನಿಮ್ಮ ಬಗ್ಗೆ ತಿಳಿಸಿ
  2. ವಾಕ್‌ ಥ್ರೋ ಮಿ ಯುವರ್‌ ರೆಸ್ಯುಮೆ (ನಿಮ್ಮ ರೆಸ್ಯುಮ್‌ನಲ್ಲಿ ನೀವು ನಿಮ್ಮ ಬಗ್ಗೆ ತಿಳಿಸಿರುವ ಪ್ರಮುಖ ವಿವರ ತಿಳಿಸಿ, ವೃತ್ತಿಗೆ ಸಂಬಂಧಪಟ್ಟ ವಿವರ)
  3. ಈ ಹುದ್ದೆಯ ಬಗ್ಗೆ ಹೇಗೆ ತಿಳಿಯಿತು?
  4. ಈ ಕಂಪನಿಯಲ್ಲಿ ಯಾಕೆ ಕೆಲಸ ಮಾಡಲು ಬಯಸುವಿರಿ?
  5. ಈ ಉದ್ಯೋಗ ನಿಮಗೆ ಏಕೆ ಬೇಕು?
  6. ಈ ಕಂಪನಿಗೆ ಏನು ನೀಡುವಿರಿ?
  7. ನಿಮ್ಮ ಪ್ರಮುಖ ಸ್ಟ್ರೆಂಥ್‌ ಏನು?
  8. ನಿಮ್ಮ ವೀಕ್‌ನೆಸ್‌ ಏನು?
  9. ವೃತ್ತಿಪರವಾಗಿ ನಿಮ್ಮ ಪ್ರಮುಖ ಸಾಧನೆಗಳೇನು?
  10. ನಿಮ್ಮ ಹಿಂದಿನ ಉದ್ಯೋಗದಲ್ಲಿ ನೀವು ಎದುರಿಸಿದ ಪ್ರಮುಖ ಸವಾಲು ಯಾವುದು, ಅದನ್ನು ಹೇಗೆ ನಿಭಾಯಿಸಿದ್ದೀರಿ?
  11. ನಿಮ್ಮ ನಾಯಕತ್ವ ಕೌಶಲವನ್ನು ತೋರ್ಪಡಿಸಿದ ಪ್ರಮುಖ ಸಂದರ್ಭವನ್ನು ಉದಾಹರಣೆ ಸಹಿತ ತಿಳಿಸಿ.
  12. ನೀವು ಮಾಡಿರುವ ತಪ್ಪಿನ ಕುರಿತು ತಿಳಿಸಿ.
  13. ನೀವು ವಿಫಲವಾದ ಸಮಯದ ಬಗ್ಗೆ ತಿಳಿಸಿ.
  14. ನಿಮ್ಮನ್ನು ಉದ್ಯೋಗದಿಂದ ಏಕೆ ತೆಗೆಯಲಾಯಿತು.
  15. ಈಗಿನ ಉದ್ಯೋಗವನ್ನು ಏಕೆ ಬಿಡುವಿರಿ
  16. ನಿಮ್ಮ ಈಗಿನ ವೇತನ ಎಷ್ಟು?
  17. ಹೊಸ ಹುದ್ದೆಯಲ್ಲಿ ನೀವು ಏನು ನಿರೀಕ್ಷಿಸುವಿರಿ?
  18. ನೀವು ಯಾವ ರೀತಿಯ ಕೆಲಸದ ಪರಿಸರ ಬಯಸುವಿರಿ?
  19. ನಿಮ್ಮ ಕೆಲಸದ ಸ್ಟೈಲ್‌ ಯಾವುದು?
  20. ನಿಮ್ಮ ಕುರಿತು ನಿಮ್ಮ ಬಾಸ್‌ ಮತ್ತು ಸಹೋದ್ಯೋಗಿಗಳ ಅಭಿಪ್ರಾಯವೇನು?
  21. ಒತ್ತಡದ ಸ್ಥಿತಿಯನ್ನು ನೀವು ಹೇಗೆ ನಿಭಾಯಿಸುವಿರಿ?
  22. ಕೆಲಸ ಹೊರತುಪಡಿಸಿ ನೀವು ಏನು ಇಷ್ಟಪಡುವಿರಿ?
  23. ನೀವು ಕೆಲಸವನ್ನು ಹೇಗೆ ಸಂಘಟಿಸುವಿರಿ?
  24. ನಿಮ್ಮ ಪ್ಯಾಷನ್‌ ಏನು?
  25. ಯಾವ ವಿಷಯ ನಿಮಗೆ ಸ್ಪೂರ್ತಿ ತುಂಬುತ್ತದೆ?
  26. ನೀವು ನಿಮ್ಮನ್ನು ಯಶಸ್ವಿ ಎಂದು ಹೇಗೆ ಪರಿಗಣಿಸುವಿರಿ?
  27. ಮುಂದಿನ 5 ವರ್ಷದಲ್ಲಿ ನಿಮ್ಮನ್ನು ನೀವು ಎಲ್ಲಿ ನೋಡಲು ಬಯಸುವಿರಿ?
  28. ನಿಮ್ಮ ಕೆರಿಯರ್‌ ಗೋಲ್‌ ಈಡೇರಿಸಲು ಏನು ಯೋಜನೆ ಹೊಂದಿರುವಿರಿ?
  29. ನಿಮ್ಮ ಪ್ರಕಾರ ಕನಸಿನ ಉದ್ಯೋಗ ಎಂದರೆ ಏನು?
  30. ಬೇರೆ ಯಾವ ಕಂಪನಿಯಲ್ಲಿ ಉದ್ಯೋಗ ಸಂದರ್ಶನ ಎದುರಿಸಿದ್ದೀರಿ?
  31. ನೀವು ಏಕೆ ವಿಶೇಷ? ಏನು ನಿಮ್ಮ ಯೂನಿಕ್‌ ಫೀಚರ್‌?
  32. ರೆಸ್ಯುಮೆಯಲ್ಲಿ ಇರದ ನಿಮ್ಮ ವಿಚಾರಗಳನ್ನು ತಿಳಿಸಿ
  33. ಈ ಹುದ್ದೆಯಲ್ಲಿ ಆರಂಭದ ಕೆಲವು ತಿಂಗಳು ಏನು ಮಾಡುವಿರಿ?
  34. ನಿಮ್ಮ ವೇತನದ ನಿರೀಕ್ಷೆಗಳೇನು?
  35. ನೀವು ಪ್ರಾಣಿಯಾಗಿದ್ದರೆ ಯಾವ ಪ್ರಾಣಿಯಾಗಲು ಬಯಸುವಿರಿ?
  36. ಈ ಪೆನ್‌ ಅನ್ನು ನನಗೆ ಮಾರಾಟ ಮಾಡಿ.
  37. ನಮ್ಮ ಕುರಿತು ಏನಾದರೂ ಪ್ರಶ್ನೆಗಳು ನಿಮ್ಮ ಬಳಿ ಇರುವುದೇ?

ಈ ರೀತಿ ಹಲವು ಪ್ರಶ್ನೆಗಳಲ್ಲಿ ಕೆಲವು ಪ್ರಶ್ನೆಗಳನ್ನು ನಿಮ್ಮಲ್ಲಿ ಕೇಳಬಹುದು. ಇದರ ಜತೆಗೆ ನಿಮ್ಮ ವೃತ್ತಿಕ್ಷೇತ್ರ, ಜ್ಞಾನಕ್ಕೆ ಸಂಬಂಧಪಟ್ಟ ಹಲವು ಪ್ರಶ್ನೆಗಳೂ ಕೇಳಬಹುದು. ಎಲ್ಲದಕ್ಕೂ ಸಿದ್ಧರಾಗಿರಿ. ಯಾವುದೇ ಟೆನ್ಷನ್‌ ಇಲ್ಲದೆ ಆರಾಮವಾಗಿ ಪ್ರಶ್ನೆಗಳಿಗೆ ಉತ್ತರಿಸಿ.

Whats_app_banner