Viral Video: ವೈರಲ್‌ ಆಯ್ತು ಲಂಡನ್‌ ಬೀದಿಯ ಲುಂಗಿ ಡಾನ್ಸ್‌; ಲುಂಗಿ ಕಟ್ಕೊಳ್ಳೊ ಮುನ್ನ ಇದರ ಇತಿಹಾಸವನ್ನೂ ತಿಳ್ಕೊಂಡ್‌ ಬಿಡಿ-fashion lungi fashion lungi dance viral from london learn more about this lungi garments history origin of lungi rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Viral Video: ವೈರಲ್‌ ಆಯ್ತು ಲಂಡನ್‌ ಬೀದಿಯ ಲುಂಗಿ ಡಾನ್ಸ್‌; ಲುಂಗಿ ಕಟ್ಕೊಳ್ಳೊ ಮುನ್ನ ಇದರ ಇತಿಹಾಸವನ್ನೂ ತಿಳ್ಕೊಂಡ್‌ ಬಿಡಿ

Viral Video: ವೈರಲ್‌ ಆಯ್ತು ಲಂಡನ್‌ ಬೀದಿಯ ಲುಂಗಿ ಡಾನ್ಸ್‌; ಲುಂಗಿ ಕಟ್ಕೊಳ್ಳೊ ಮುನ್ನ ಇದರ ಇತಿಹಾಸವನ್ನೂ ತಿಳ್ಕೊಂಡ್‌ ಬಿಡಿ

ಲುಂಗಿ ಭಾರತೀಯರ ಸಂಕೇತ. ಭಾರತದ ಬಹುತೇಕ ರಾಜ್ಯಗಳಲ್ಲಿ ಗಂಡಸರು ಲುಂಗಿ ಕಟ್ಟಿಕೊಳ್ಳುತ್ತಾರೆ. ಹಿಂದಿನ ಕಾಲದಿಂದಲೂ ಗಂಡಸರಿಗೆ ಲುಂಗಿ ಆರಾಮ ಎನ್ನಿಸುವ ಉಡುಪು ಎಂಬುದು ಸುಳ್ಳಲ್ಲ. ಇದೀಗ ಹೆಣ್ಣುಮಕ್ಕಳು ಲುಂಗಿ ಕಟ್ಟಿಕೊಂಡು ಡಾನ್ಸ್‌ ಮಾಡುವ ಮೂಲಕ ವೈರಲ್‌ ಆಗುತ್ತಿದ್ದಾರೆ. ನೀವು ಲುಂಗಿ ಪ್ರಿಯರಾಗಿದ್ದರೆ, ಲುಂಗಿ ಡಾನ್ಸ್‌ ಮಾಡುವ ಮುನ್ನ ಇದರ ಇತಿಹಾಸ ತಿಳಿಯಿರಿ.

ಲುಂಗಿ ಕಟ್ಕೊಳ್ಳೊ ಮುನ್ನ ಇದರ ಇತಿಹಾಸವನ್ನೂ ತಿಳ್ಕೊಂಡ್‌ ಬಿಡಿ
ಲುಂಗಿ ಕಟ್ಕೊಳ್ಳೊ ಮುನ್ನ ಇದರ ಇತಿಹಾಸವನ್ನೂ ತಿಳ್ಕೊಂಡ್‌ ಬಿಡಿ

ಲುಂಗಿ ಡಾನ್ಸ್‌, ಲುಂಗಿ ಡಾನ್ಸ್‌, ಲುಂಗಿ ಡಾನ್ಸ್‌... ಈ ಹಾಡು ಒಂದು ಕಾಲದಲ್ಲಿ ಸಖತ್‌ ಫೇಮಸ್ಸ್‌ ಆಗಿದ್ದು ಸುಳ್ಳಲ್ಲ. ಭಾರತೀಯರಿಗೂ ಲುಂಗಿಗೂ ಅವಿನಾಭಾವ ಸಂಬಂಧ. ಇದು ಬಹುಮುಖಿ ಉಡುಪು ಹೌದು. ಲುಂಗಿಯು ಭಾರತದ ಇತಿಹಾಸ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಭಾರತ ಮತ್ತು ಅದರಾಚೆಗೂ ವ್ಯಾಪಿಸಿದೆ.

ಲುಂಗಿ ಗಂಡಸರ ಉಡುಪು. ಪ್ಯಾಂಟ್‌ ಬದಲು ಲುಂಗಿ ಧರಿಸುವುದು ವಾಡಿಕೆ. ಇದು ಆರಾಮದ ಉಡುಪು ಕೂಡ ಹೌದು. ಇತ್ತೀಚಿನ ದಿನಗಳಲ್ಲಿ ಲುಂಗಿ ಗುಂಗು ಸ್ವಲ್ಪ ಕಡಿಮೆ ಆದ್ರೂ ಕೂಡ ಹಳ್ಳಿಗಳಲ್ಲಿ ಈಗಲೂ ಲುಂಗಿ ಧರಿಸುತ್ತಾರೆ.

ಲುಂಗಿ ಡಾನ್ಸ್‌ ಬಂದ ಮೇಲೆ ಗಂಡಸರು ಬಿಡಿ ಹೆಣ್ಮಕ್ಕಳು ಲುಂಗಿ ಕಟ್ಟಿಕೊಂಡು ಡಾನ್ಸ್‌ ಮಾಡಲು ಆರಂಭಿಸಿದ್ದಾರೆ. ಇದೀಗ ಲುಂಗಿ ಭಾರತದಲೆಲ್ಲಾ ಮೆರೆದು ದೂರದ ಲಂಡನ್‌ನಲ್ಲೂ ಫೇಮಸ್‌ ಆಗಿದೆ. ಹಾಗಂತ ಇದನ್ನು ವೈರಲ್‌ ಮಾಡಿದ್ದು ಗಂಡಸರಲ್ಲ, ಒಬ್ಬಳು ಹುಡುಗಿ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೊವೊಂದರಲ್ಲಿ ಲಂಡನ್‌ನ ಬೀದಿಯೊಂದರಲ್ಲಿ ಹುಡುಗಿಯೊಬ್ಬಳು ಲುಂಗಿ ಕಟ್ಟಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಆ ಮೂಲಕ ಭಾರತದ ಪರಂಪರೆಯನ್ನು ಎತ್ತಿ ಹಿಡಿಯವ ಕೆಲಸ ಮಾಡಿದ್ದಾಳೆ ಆ ಹುಡುಗಿ.

ಹಲವು ವರ್ಷಗಳಿಂದ ಲಂಡನ್‌ನಲ್ಲಿ ವಾಸಿಸುತ್ತಿರುವ ವಾಲೆರಿ ಲುಂಗಿ ಜೊತೆ ಬಿಳಿ ಟೀ ಶರ್ಟ್‌ ಧರಿಸಿರುವುದನ್ನು ಕಾಣಬಹುದು. ಜೊತೆಗೆ ಆಕೆ ಸನ್‌ಗ್ಲಾನ್‌ ಕೂಡ ಧರಿಸಿದ್ದಾಳೆ.

ಆಕೆ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಅಪ್‌ಲೋಡ್‌ ಮಾಡಿದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಹಲವರು ಆಕೆಯ ಆತ್ಮವಿಶ್ವಾಸ ಹಾಗೂ ಭಾರತೀಯ ಪರಂಪರೆಯನ್ನು ಲಂಡನ್‌ನಲ್ಲಿ ತೋರಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹೊತ್ತಿನಲ್ಲಿ ಲುಂಗಿ ಇತಿಹಾಸನೂ ಸ್ವಲ್ಪ ತಿಳ್‌ಕೊಂಡ್‌ ಬಿಡಿ.

ಲುಂಗಿ ಇತಿಹಾಸ ಹೀಗಿದೆ

ಲುಂಗಿಯು ದಕ್ಷಿಣ ಏಷ್ಯಾ ಭಾಗದಲ್ಲಿ ಜನಪ್ರಿಯವಾಗಿರುವ ಉಡುಪು. ಇದು ಸೊಂಟದ ಸುತ್ತಲೂ ಸುತ್ತಿಕೊಳ್ಳುವ ಸುತ್ತಲೂ ಹೊಲಿಗೆ ಇಲ್ಲದ ಬಟ್ಟೆ. ಭಾರತೀಯ ಪುರುಷರ ಫೇವರಿಟ್‌ ಉಡುಪುಗಳಲ್ಲಿ ಒಂದಾಗಿರುವ ಲುಂಗಿ ಮೂಲ ಯಾವುದು ಎಂದು ಕೇಳಿದಾಗ ಇದರ ಮೂಲವು ಶತಶತಮಾನಗಳ ಹಿಂದೆ ಹೋಗುತ್ತದೆ. ಮಾನವ ನಾಗರೀಕತೆಯ ಆರಂಭದಿಂದಲೇ ಮಾನ ಮುಚ್ಚಿಕೊಳ್ಳಲು ಬಳಸುತ್ತಿದ್ದ ಉಡುಪಿನ ಮುಂದುವರಿದ ಭಾಗ ಲುಂಗಿ ಎಂದು ಭಾರತೀಯ ಕರಕುಶಲ ಕ್ಯುರೇಟರ್‌ ಜಯಾ ಜೇಟ್ಲಿ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳುತ್ತಾರೆ.

ಬಟ್ಟೆಗಳನ್ನು ಹೊಲಿದು ವಿವಿಧ ಡಿಸೈನ್‌ ಮಾಡುವ ಮುನ್ನ ಪ್ರಪಂಚದಾದ್ಯಂತ ಜನರು ಸೊಂಟಕ್ಕೆ ಸುತ್ತಿಕೊಳ್ಳುವ ಬಟ್ಟೆಯನ್ನು ಧರಿಸುತ್ತಿದ್ದರು. ಆಫ್ರಿಕನ್ನರು, ರೆಡ್‌ ಇಂಡಿಯನ್‌ರು ಎಲ್ಲರೂ ತಮ್ಮ ಮಾನ ಮುಚ್ಚಿಕೊಳ್ಳುವ ಸಲುವಾಗಿ ಸಣ್ಣ ಚರ್ಮದ ತುಂಡನ್ನು ಸೊಂಟದ ಸುತ್ತಲೂ ಸುತ್ತಿಕೊಳ್ಳುತ್ತಿದ್ದರು. ನೇಯ್ಗೆ ಅಭಿವೃದ್ಧಿಯಾದಂತೆ ಜನರು ಹುಲ್ಲು, ಮರದ ತೊಗಟೆ ಮತ್ತು ಅಂತಿಮವಾಗಿ ಹೊಲಿಯದ ನೂಲಿನ ಬಟ್ಟೆಗಳನ್ನು ಬಳಸಲು ಆರಂಭಿಸಿದರು.

ಭಾರತದಲ್ಲಿ ಲುಂಗಿ

ಮೊಘಲರು ಭಾರತಕ್ಕೆ ಬಂದಾಗ ಪೈಜಾಮಾದಂತಹ ಹೊಲಿದ ಉಡುಪುಗಳು ಬಂದವು, ಅಂತಹ ಸಂದರ್ಭದಲ್ಲಿ ಅನೌಪಚಾರಿಕ ಉಡುಪಾಗಿ ಲುಂಗಿಯ ಬಳಕೆಯು ಶುರುವಾಯಿತು. ಮನೆಯಲ್ಲಿ ಧರಿಸಲು, ಅನೌಪಚಾರಿಕ ಸಂದರ್ಭಗಳಲ್ಲಿ, ಹೊಲದಲ್ಲಿ ಕೆಲಸ ಮಾಡಲು ಲುಂಗಿಯನ್ನು ಧರಿಸುತ್ತಿದ್ದರು. ಪ್ರದೇಶ ಹಾಗೂ ಪದ್ಧತಿಯ ಆಧಾರದ ಮೇಲೆ ಲುಂಗಿಯು ವಿಭಿನ್ನ ರೂಪಗಳನ್ನು ಪಡೆದುಕೊಂಡಿತು. ದಕ್ಷಿಣ ಭಾರತದಲ್ಲಿ ಪುರುಷರು ಮುಂಡು ಲುಂಗಿ ಧರಿಸುತ್ತಾರೆ. ಕೆಲವರು ಇದನ್ನು ಪ್ಯಾಂಟ್‌ನಂತೆ ಧರಿಸುತ್ತಾರೆ. ಮಹಿಳೆಯರು ಕೂಡ ಹೊಲಿದ ಸರೋಂಗ್‌ ರೂಪದಲ್ಲಿ ಲುಂಗಿಯನ್ನು ಧರಿಸುತ್ತಾರೆ.

ಭಾರತದಲ್ಲಿ ಲುಂಗಿಯು ಅನೌಪಚಾರಿಕ ಉಡುಪಾದ್ರೂ ಕೂಡ ವಿಶೇಷ ಸಮಾರಂಭದಲ್ಲಿ ಬಿಳಿ ಪಂಚೆ ಧರಿಸುತ್ತಾರೆ. ಭಾರತದಲ್ಲಿ ಮಾತ್ರವಲ್ಲ ನೈಜೀರಿಯಾದಲ್ಲೂ ಲುಂಗಿ ಬಳಕೆ ಇದೆ.

ಮದ್ರಾಸ್‌ ಚೆಕ್‌ ಲುಂಗಿ

ಲುಂಗಿಯ ಹಿಂದಿನ ಸಾಂಪ್ರದಾಯಿಕ ಸಂಗತಿಯಂದರೆ ಲುಂಗಿಗಳಲ್ಲಿ ಆಗಾಗ್ಗೆ ಕಂಡುಬರುವ ಸಾಂಪ್ರದಾಯಿಕ "ಮದ್ರಾಸ್ ಚೆಕ್" ಮಾದರಿಯ ಮೂಲ. 1800 ರ ದಶಕದ ಆರಂಭದಲ್ಲಿ, ಕಂಪನಿಯು ಲುಂಗಿಗಳನ್ನು ಉತ್ಪಾದಿಸಲು ಪ್ರಾರಂಭಿಸಿತು, ಅದರ ಬಣ್ಣವು ತೊಳೆಯುವ ಸಮಯದಲ್ಲಿ ಸಂಪೂರ್ಣ ಕದಡಿ ಹೋಯಿತು. ಆದರೂ ಅದೇ ಟ್ರೆಂಡ್‌ ಆಯ್ತು. ಸದ್ಯ ಲುಂಗಿಯು ವಿವಿಧ ಬಣ್ಣದಲ್ಲಿ ಲಭ್ಯವಿದ್ದರೂ ತನ್ನ ಮೂಲ ರೂಪವನ್ನು ಹಾಗೆಯೇ ಉಳಿಸಿಕೊಂಡು ಮುಂದೆ ಸಾಗುತ್ತಿದೆ.