Tomato Puree: ಟೊಮೆಟೊ ಬೆಲೆ ಕಡಿಮೆಯಿದ್ದಾಗ ಪ್ಯೂರಿ ಮಾಡಿದ್ರೆ ಎಷ್ಟೋ ದಿನ ಪ್ರಯೋಜನಕ್ಕೆ ಬರುತ್ತೆ, ಅಡುಗೆಯೂ ಬೇಗ ರೆಡಿಯಾಗುತ್ತೆ-food kitchen tips how to make tomato puree in home for storage rainy season veg recipe in kannada jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Tomato Puree: ಟೊಮೆಟೊ ಬೆಲೆ ಕಡಿಮೆಯಿದ್ದಾಗ ಪ್ಯೂರಿ ಮಾಡಿದ್ರೆ ಎಷ್ಟೋ ದಿನ ಪ್ರಯೋಜನಕ್ಕೆ ಬರುತ್ತೆ, ಅಡುಗೆಯೂ ಬೇಗ ರೆಡಿಯಾಗುತ್ತೆ

Tomato Puree: ಟೊಮೆಟೊ ಬೆಲೆ ಕಡಿಮೆಯಿದ್ದಾಗ ಪ್ಯೂರಿ ಮಾಡಿದ್ರೆ ಎಷ್ಟೋ ದಿನ ಪ್ರಯೋಜನಕ್ಕೆ ಬರುತ್ತೆ, ಅಡುಗೆಯೂ ಬೇಗ ರೆಡಿಯಾಗುತ್ತೆ

Kitchen Tips: ಮಳೆಗಾಲದಲ್ಲಿ ಟೊಮೆಟೊವನ್ನು ದೀರ್ಘಕಾಲ ಇಟ್ಟರೆ ಅವು ಹಾಳಾಗುತ್ತವೆ. ಹೀಗಾಗಿ ನೀವು ಟೊಮೆಟೊ ಪ್ಯೂರಿ ಮಾಡಿಟ್ಟರೆ ನಿಮ್ಮ ದೈನಂದಿನ ಅಡುಗೆ ವೇಗವಾಗಿ ಮಾಡಲು ಸಾಧ್ಯ. ಸುಲಭ ರೆಸಿಪಿ ಇಲ್ಲಿದೆ.

ಟೊಮೆಟೊ ಪ್ಯೂರಿ ಮಾಡುವ ಸುಲಭ ವಿಧಾನ
ಟೊಮೆಟೊ ಪ್ಯೂರಿ ಮಾಡುವ ಸುಲಭ ವಿಧಾನ (Pixabay)

ಗೃಹಿಣಿಯರಿಗೆ ನಿತ್ಯವೂ ಮನೆಯಲ್ಲಿ ಕೆಲಸಗಳಿರುತ್ತವೆ. ವಾರದಲ್ಲಿ ಒಂದು ದಿನವೂ ರಜೆಯಿಲ್ಲದೆ ಕೆಲಸ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಅಡುಗೆ ಮಾಡುವ ವಿಧಾನವನ್ನು ಸುಲಭವಾಗಿ ಮುಗಿಸುವ ಶಾರ್ಟ್‌ಕಟ್‌ ವಿಧಾನಗಳನ್ನು ಹುಡುಕಬೇಕಾಗುತ್ತದೆ. ಇದರಿಂದ ಸಮಯ ಹಾಗೂ ಹಣದೊಂದಿಗೆ ಶ್ರಮದ ಉಳಿತಾಯವೂ ಆಗುತ್ತದೆ. ಮನೆಯಲ್ಲಿ ಗೃಹಿಣಿಯರ ಶ್ರಮ ಉಳಿಸಲು ಒಂದೊಳ್ಳೆ ಸಲಹೆಯನ್ನು ನಾವು ಕೊಡುತ್ತೇವೆ. ಈ ಒಂದು ಕೆಲಸ ನೀವು ಮಾಡಿದರೆ, ನಿಮ್ಮ ಹಣದ ಜೊತೆಗೆ ಸಮಯವನ್ನೂ ಉಳಿಸಬಹುದು.

ಮಳೆಗಾಲ ಬಂತಂದ್ರೆ ಟೊಮೆಟೊ ಬಲು ದುಬಾರಿಯಾಗುತ್ತದೆ. ಹಾಗಂತಾ ಹೆಚ್ಚು ಟೊಮೆಟೊ ತಂದು ಮನೆಯಲ್ಲಿ ಇಟ್ಟುಕೊಂಡ್ರೆ ಅದು ಕೊಳೆಯುತ್ತದೆ. ಫ್ರಿಜ್‌ನಲ್ಲಿ ಇಟ್ಟರೂ ಹೆಚ್ಚು ದಿನ ಉಳಿಯಲ್ಲ. ಹೀಗಾಗಿ ದುಡ್ಡು ಕೊಟ್ಟು ತಂದ ವಸ್ತುವಿನಿಂದ ನಿಮಗೆ ನಷ್ಟವಾಗುತ್ತದೆ. ಇಂಥಾ ಸಮಯದಲ್ಲಿ ಟೊಮೆಟೊ ಪ್ಯೂರಿ ಮಾಡೋದು ಜಾಣತನ. ಈ ಟೊಮೆಟೊ ಪ್ಯೂರಿ (Tomato Puree) ಒಂದು ಬಾರಿ ಮಾಡಿಟ್ಟರೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ. ಒಮ್ಮೆ ಮಾಡಿಟ್ಟರೆ ಹಲವು ದಿನಗಳವರೆಗೆ ಇದನ್ನು ಸಂಗ್ರಹಿಸಿಡಬಹುದು.

  • ಪ್ಯೂರಿ ಮಾಡುವ ಮೂಲಕ ನಿತ್ಯದ ನಿಮ್ಮ ಅಡುಗೆ ಪ್ರಕ್ರಿಯೆ ಕೂಡಾ ಸಂಪೂರ್ಣವಾಗಿ ಸುಲಭವಾಗುತ್ತದೆ. ಹಣ ಕೂಡಾ ಉಳಿಸುತ್ತದೆ. ಶೆಫ್‌ ಆಗಿರುವ ಕುನಾಲ್ ಕಪೂರ್ ಅವರು ಟೊಮೆಟೊ ಪ್ಯೂರಿ ಮಾಡುವ ಸುಲಭ ವಿಧಾನ ಹೇಳಿದ್ದಾರೆ. ಅವರ ಪ್ರಕಾರ, ಟೊಮೆಟೊ ಪ್ಯೂರಿ ಮಾಡುವ ವಿಧಾನ ಹೀಗಿದೆ.
  • ಟೊಮೆಟೊ ಪ್ಯೂರಿ ತಯಾರಿಸಲು ಎಂಟರಿಂದ ಹತ್ತು ಟೊಮೆಟೊ ಬೇಕು. ಹೆಚ್ಚು ಪ್ರಮಾಣದಲ್ಲಿ ಮಾಡಬೇಕೆಂದು ಇದ್ದರೆ ಇನ್ನಷ್ಟು ಟೊಮೆಟೊ ಬಳಸಬಹುದು. ನಿಮಗೆ ಬೇಕಾದ ಪ್ಯೂರಿ ಪ್ರಮಾಣಕ್ಕೆ ಅನುಗುಣವಾಗಿ ಟೊಮೆಟೊಗಳನ್ನು ತೆಗೆದುಕೊಳ್ಳಿ.
  • ಟೊಮೆಟೊಗಳನ್ನು ಕತ್ತರಿಸಿ ಮಿಕ್ಸಿ ಗ್ರೈಂಡರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಟೊಮೆಟೊದಲ್ಲಿ ಸಾಕಷ್ಟು ಪ್ರಮಾಣದ ನೀರು ಇರುವುದರಿಂದ ಹೆಚ್ಚುವರಿ ನೀರನ್ನು ಸೇರಿಸುವ ಅಗತ್ಯವಿಲ್ಲ. ಬರೀ ಟೊಮೆಟೊಗಳನ್ನು ಮಾತ್ರ ಹಾಕಿ ರುಬ್ಬಿಕೊಳ್ಳಿ.
  • ರುಬ್ಬಿದ ಪೇಸ್ಟ್‌ ಅನ್ನು ಸ್ಟ್ರೈನರ್ ಸಹಾಯದಿಂದ ಸೋಸಿಕೊಳ್ಳಿ. ಆಗ ಟೊಮೆಟೊ ರಸ ಸಂಪೂರ್ಣವಾಗಿ ಫಿಲ್ಟರ್ ಆಗುತ್ತದೆ. ಸಿಪ್ಪೆ ಮತ್ತು ಬೀಜಗಳು ಸ್ಟ್ರೈನರ್ ನಲ್ಲಿ ಉಳಿಯುತ್ತವೆ. ನಮಗೆ ಬೇಕಿರುವುದು ಫಿಲ್ಟರ್‌ ಆಗಿರುವ ರಸ ಮಾತ್ರ.
  • ಒಲೆ ಮೇಲೆ ಬಾಣಲೆ ಇಟ್ಟು, ಅದಕ್ಕೆ ಸೋಸಿದ ಪ್ಯೂರಿಯನ್ನು ಹಾಕಿ. ಪ್ಯೂರಿ ಪ್ರಮಾಣಕ್ಕೆ ತಕ್ಕನಾಗಿ ರುಚಿಗೆ ತಕ್ಕಷ್ಟು ಸ್ವಲ್ಪ ಉಪ್ಪು ಸೇರಿಸಿ. ಈ ಮಿಶ್ರಣವು ದಪ್ಪವಾಗುವವರೆಗೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ.
  • ಕುದಿ ಬಂದ ನಂತರ ಮಿಶ್ರಣವನ್ನು ತಣ್ಣಗಾಗಲು ಬಿಡಿ. ಮಿಶ್ರಣದ ಬಿಸಿ ತಣ್ಣಗಾದ ನಂತರ ಪ್ಯೂರಿಯನ್ನು ಸೂಕ್ತ ಕಂಟೇನರ್‌ಗೆ ಹಾಕಿ ಫ್ರೀಜರ್‌ನಲ್ಲಿಡಿ. ಐಸ್‌ ಕ್ಯೂಬ್‌ ಆಗಿ ಮಾಡಿದರೆ ಇನ್ನೂ ಉತ್ತಮ.

ಇದನ್ನೂ ಓದಿ | ಭಾನುವಾರಕ್ಕೆ ಈ ತರಹ ಟೇಸ್ಟಿ ಚಿಕನ್ ಸಾಂಬಾರ್ ಟ್ರೈ ಮಾಡಿ: ಇದನ್ನು ಮಾಡುವುದು ಹೇಗೆ, ಇಲ್ಲಿದೆ ರೆಸಿಪಿ

ಟೊಮೆಟೊ ಪ್ಯೂರಿಯಿಂದ ತಯಾರಿಸಿದ ಐಸ್ ಕ್ಯೂಬ್ ಅನ್ನು ನೀವು ದೀರ್ಘಕಾಲದವರೆಗೆ ಇಡಬಹುದು. ಇದನ್ನು ಯಾವುದೇ ಸಾಂಬಾರ್‌ ಅಥವಾ ತರಕಾರಿ ಕರಿ ಮಾಡುವಾಗ ಬಳಸಬಹುದು. ಮಾಂಸಾಹಾರಕ್ಕೂ ಟೊಮೆಟೊ ಬದಲಿಗೆ ಬಳಸಬಹುದು.

ಟೊಮೆಟೊ ಬೆಲೆ ಗಗನಕ್ಕೇರಿದಾಗ ಈ ರೀತಿಯಲ್ಲಿ ತಯಾರಿಸಿದ ಪ್ಯೂರಿ ನಿಮ್ಮ ದೈನಂದಿನ ಬಳಕೆಗೆ ಬರುತ್ತದೆ. ದುಬಾರಿ ಬೆಲೆ ಕೊಟ್ಟು ಟೊಮೆಟೊ ಖರೀದಿಸುವ ಅಗತ್ಯ ಬರುವುದಿಲ್ಲ.

mysore-dasara_Entry_Point