Tea History: ಚಾಯ್‌ ಪ್ರೇಮಿಗಳೇ, ಆಹಾ ಎಂದು ಹೀರುವ ಮುನ್ನ ಭಾರತಕ್ಕೆ ಟೀ ಬಂದ ಕಥೆಯನ್ನೊಮ್ಮೆ ತಿಳಿದುಕೊಳ್ಳಿ-food tea history chai how the opium trade introduced india to tea story with indian history british chinese rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Tea History: ಚಾಯ್‌ ಪ್ರೇಮಿಗಳೇ, ಆಹಾ ಎಂದು ಹೀರುವ ಮುನ್ನ ಭಾರತಕ್ಕೆ ಟೀ ಬಂದ ಕಥೆಯನ್ನೊಮ್ಮೆ ತಿಳಿದುಕೊಳ್ಳಿ

Tea History: ಚಾಯ್‌ ಪ್ರೇಮಿಗಳೇ, ಆಹಾ ಎಂದು ಹೀರುವ ಮುನ್ನ ಭಾರತಕ್ಕೆ ಟೀ ಬಂದ ಕಥೆಯನ್ನೊಮ್ಮೆ ತಿಳಿದುಕೊಳ್ಳಿ

ಭಾರತೀಯರಿಗೆ ಪ್ರತಿದಿನ ಬೆಳಗೆದ್ದ ತಕ್ಷಣ ಒಂದು ಕಪ್‌ ಟೀ ಕುಡಿದಿಲ್ಲ ಅಂದ್ರೆ ದಿನ ಆರಂಭ ಆಗೋದೇ ಕಷ್ಟ. ಕಡಕ್‌ ಚಹಾ ನಮ್ಮ ಬದುಕಿನ ಭಾಗವಾಗಿ ಬಿಟ್ಟಿದೆ. ಭಾರತೀಯ ಬದುಕಿನಲ್ಲಿ ಸಾಕಷ್ಟು ಪ್ರಾಮುಖ್ಯ ಹೊಂದಿರುವ ಟೀ ಭಾರತಕ್ಕೆ ಹೇಗೆ, ಯಾವಾಗ ಬಂತು ಅನ್ನುವ ಕುತೂಹಲ ಇದ್ರೆ ಮುಂದೆ ಓದಿ.

ಭಾರತಕ್ಕೆ ಟೀ ಬಂದ ಕಥೆ
ಭಾರತಕ್ಕೆ ಟೀ ಬಂದ ಕಥೆ

ಭಾರತೀಯರು ಚಹಾ ಪ್ರಿಯರು, ನಮಗೆ ಬೆಳಗೆದ್ದು ಏನಿಲ್ಲಾ ಅಂದ್ರು ಒಂದ್‌ ಕಪ್‌ ಟೀ ಅಂತೂ ಬೇಕೇ ಬೇಕು. ಇದು ದೇಹಕ್ಕೆ ಚೈತನ್ಯ ನೀಡುತ್ತದೆ. ದೇಹ, ಮನಸ್ಸನ್ನು ರಿಫ್ರೆಶ್‌ ಮಾಡುವ, ಭಾರತೀಯರ ಹಾಟ್‌ ಫೇವರಿಟ್‌ ಆಗಿರುವ ಚಹಾ ಭಾರತಕ್ಕೆ ಹೇಗೆ ಬಂತು ಎಂಬ ಬಗ್ಗೆ ನೀವು ಎಂದಾದ್ರೂ ಯೋಚಿಸಿದ್ದೀರಾ? ಭಾರತಕ್ಕೆ ಚಹಾ ಬಂದಿರುವ ಹಿಂದೆ ಕುತೂಹಲಕಾರಿ ಕಥೆಯಿದೆ. ಭಾರತಕ್ಕೆ ಚಹಾ ಬರವಲ್ಲೂ ಬ್ರಿಟಿಷರ ಕೊಡುಗೆ ಇದೆ ಎನ್ನುತ್ತದೆ ಇತಿಹಾಸ. 

ಚಹಾ ಬ್ರಿಟಿಷ್‌ ಹಾಗೂ ಚೀನಿ ಸಂಸ್ಕೃತಿಯ ಭಾಗವಾಗಿದೆ. ಚೀನಾದವರು 2000 ವರ್ಷಗಳಿಂದ ಚಹಾ ಕುಡಿಯುತ್ತಿದ್ದರು ಎನ್ನಲಾಗುತ್ತದೆ. ಆದರೆ ಕೆಲವು ಮೂಲಗಳ ಪ್ರಕಾರ 17ನೇ ಶತಮಾನದಲ್ಲಿ ಚಹಾ ಕಂಡುಹಿಡಿಯಲಾಯಿತು ಎನ್ನಲಾಗುತ್ತಿದೆ. ಅದೇನೇ ಇದ್ದರೂ ಭಾರತಕ್ಕೆ ಟೀ ಪರಿಚಯಿಸಿದ್ದು ಮಾತ್ರ ಬಿಟ್ರಿಷರು ಎಂಬುದು ಸುಳ್ಳಲ್ಲ. 

ಚೀನಾದಿಂದ ಭಾರತಕ್ಕೆ ಬಂದ ಟೀ 

ಬ್ರಿಟಿಷರು ಭಾರತದಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದಾಗ, ಬ್ರಿಟಿಷ್‌ ಆಡಳಿತಗಾರರು ಚೀನಿಯರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಆಗ ಅವರಿಗೆ ಚೀನಿಯರು ಚಹಾ ಕುಡಿಯವ ಬಗ್ಗೆ ತಿಳಿಯುತ್ತದೆ. ಚಹಾ ತಯಾರಿಸುವುದು ಹೇಗೆ ಎಂದು ಬ್ರಿಟಿಷರು  ಉತ್ಸುಕರಾಗುತ್ತಾರೆ. ಆದರೆ ವ್ಯವಹಾರಿಕ ಕಾರಣದಿಂದ ಚೀನಿಯರು ಬ್ರಿಟಿಷರಿಗೆ ಚಹಾ ತಯಾರಿಸುವುದನ್ನು ಕಲಿಸಲು ನಿರಾಕರಿಸಿರುತ್ತಾರೆ. ಆಗ ಬಿಟ್ರಿಷ್‌ ವಸಾಹತುಶಾಹಿಗಳು ಚೀನಾಕ್ಕೆ ಅಫೀಮು ಸಾಗಿಸಲು ಬಂಗಾಳವನ್ನು ತಮ್ಮ ನೆಲೆಯಾಗಿ ಬಳಸಿಕೊಳ್ಳುತ್ತಾರೆ. ಬಂಗಾಳದಲ್ಲಿ ವ್ಯಾಪಕವಾಗಿ ಅಫೀಮುಗಳನ್ನು ಬೆಳೆಯಲಾಯಿತು. ಅಲ್ಲಿಂದ ಚೀನಾಕ್ಕೆ ಮಾದಕ ಪದಾರ್ಥಗಳನ್ನು ರಫ್ತು ಮಾಡುತ್ತಾರೆ. ಆಗ ಕೆಲವು ಮನಸ್ತಾಪ ಉಂಟಾಗುತ್ತದೆ. ಆ ಸಂದರ್ಭದಲ್ಲಿ ಬ್ರಿಟಿಷರು ಚೀನಾದ ವಿರುದ್ಧ ಯುದ್ಧ ಸಾರುತ್ತಾರೆ. ಆ ಯುದ್ಧದಲ್ಲಿ ವಹಸಾಹುಶಾಹಿಗಳು ಎಂದರೆ ಬ್ರಿಟಿಷರು ಗೆಲುವು ಸಾಧಿಸುತ್ತಾರೆ. ಈ ಗೆಲುವು ಚೀನಿಯರು ಚಹಾ ಮತ್ತು ಆಫೀಮಿಗಾಗಿ ವ್ಯಾಪಾರ ಮಾರ್ಗ ತೆರೆಯಲು ಒತ್ತಾಯಿಸಲು ಸಾಧ್ಯವಾಯಿತು.

1906ರಲ್ಲಿ ಚೀನಿಯರ ಒಟ್ಟು ಜನಸಂಖ್ಯೆ ಶೇ 24ರಷ್ಟು ಜನರು ಅಫೀಮಿಗೆ ವ್ಯಸನಿಯಾಗಿದ್ದರು ಎಂಬುದನ್ನು ಘೋಷಿಸಲಾಗುತ್ತದೆ. ಆಗ ಆಂಗ್ಲರಿಗೆ ಅಫೀಮು ಬೇಡಿಕೆ ಚೀನಾದಲ್ಲಿ ಎಷ್ಟಿದೆ ಎಂಬುದು ಅರಿವಾಗುತ್ತದೆ. ಆಗ ಬ್ರಿಟಿಷರು ತಾವೇ ಚಹಾ ಗಿಡಗಳನ್ನು ಬೆಳೆಯಲು ನಿರ್ಧಾರ ಮಾಡುತ್ತಾರೆ. ಆದರೆ ಇದನ್ನು ಬೆಳೆಸುವ ರೀತಿ, ಇದರ ಹಿಂದಿನ ಶ್ರಮದ ಬಗ್ಗೆ ಅವರಿಗೆ ಅರಿವಿರಲಿಲ್ಲ.

ಭಾರತದಲ್ಲಿ ಚಹಾ ಇತಿಹಾಸವು ಆರಂಭವಾಗುವುದು ಅಸ್ಸಾಂನ ಸಿಂಗ್ಪೋ ಬುಡಕಟ್ಟಿನವರಿಂದ. ಇವರು ಚಹಾವನ್ನು ಔಷಧ ರೂಪದಲ್ಲಿ ಸೇವಿಸಲು ಆರಂಭಿಸಿದರು ಎನ್ನಲಾಗುತ್ತದೆ.

ಭಾರತದಲ್ಲಿ ಟೀ ಬೆಳೆದಿದ್ದು 

1833ರಲ್ಲಿ ಇಂಗ್ಲೆಡ್‌ನಲ್ಲಿ ನಿಷೇಧಿಸಲ್ಪಟ್ಟ ಗುಲಾಮಗಿರಿ ಪದ್ಧತಿ, ಅಗ್ಗದ ಕಾರ್ಮಿಕರು ಹಾಗೂ ಕೆಲಸದ ಪರಿಸ್ಥಿತಿಯ ಹೊರತಾಗಿಯೂ ಬ್ರಿಟಿಷರು ಬೃಹತ್‌ ಪ್ರಮಾಣದಲ್ಲಿ ಚಹಾ ಗಿಡಗಳ ಕೃಷಿಯನ್ನು ಆರಂಭಿಸಿದರು. ಭಾರತವನ್ನು ವಿಶ್ವದ ಅತಿದೊಡ್ಡ ಚಹಾ ಪೂರೈಕೆ ರಾಷ್ಟ್ರಗಳಲ್ಲಿ ಒಂದನ್ನಾಗಿಸಿದರು. ಭಾರತದ ನೆಲದಲ್ಲಿ ಬೆಳೆಯುವ ಚಹಾದ ಸುವಾಸನೆಯು ಚೈನೀಸ್ ಚಹಾಕ್ಕಿಂತ ಹೆಚ್ಚು ಸ್ವಾದಭರಿತವಾಗಿತ್ತು. ಜೊತೆಗೆ ಆಗ ಪಾನೀಯವನ್ನು ರುಚಿಕರವಾಗಿಸುವ ಸಲುವಾಗಿ ಹಾಲು ಮತ್ತು ಸಕ್ಕರೆಯನ್ನು ಪಾನೀಯಕ್ಕೆ ಸೇರಿಸಲಾಯಿತು. ಚಾಯ್‌ನ ಕೆಲವು ಆರಂಭಿಕ ಆವೃತ್ತಿಗಳು ಪುಡಿಮಾಡಿದ ಶುಂಠಿ, ದಾಲ್ಚಿನ್ನಿ ಮತ್ತು ಮೆಣಸುಗಳಿಂದ ಸುವಾಸನೆಗಳನ್ನು ಹೊಂದಿದ್ದವು, ಹೀಗೆ ಚಹಾದಲ್ಲಿ ಬದಲಾವಣೆಯ ಪರಿವರ್ತನೆ ಆರಂಭವಾಯಿತು. ಕೊನೆಗೆ ಭಾರತವು ವಿಶ್ವದಲ್ಲೇ ಅತಿ ದೊಡ್ಡ ಚಹಾ ಬೆಳೆಯುವ ರಾಷ್ಟ್ರವಾಗಿ ಬೆಳೆಯುತ್ತದೆ. 

ಹೀಗೆ ಚೀನಿಯರಿಂದ ಬಿಟ್ರಿಷರಿಗೆ ಸಿಕ್ಕು, ಬ್ರಿಟಿಷರು ಭಾರತದಲ್ಲಿ ಚಹಾ ಗಿಡಗಳನ್ನು ಬೆಳೆಸಿದರು. ಮುಂದೆ ಅದೇ ಮುಂದುವರಿದು ಭಾರತವು ಪ್ರಪಂಚದಲ್ಲೇ ಹೆಚ್ಚು ಚಹಾ ಗಿಡಗಳನ್ನು ಬೆಳೆಯುವ ರಾಷ್ಟ್ರವಾಯ್ತು ಎಂದು ಇತಿಹಾಸ ಹೇಳುತ್ತದೆ.

mysore-dasara_Entry_Point