ಈ ಗಿಡಗಳನ್ನ ತಪ್ಪಿಯೂ ಮನೆಯೊಳಗೆ ಬೆಳೆಸಬೇಡಿ; ಇದರಿಂದ ನಕಾರಾತ್ಮಕ ಅಂಶ ಹರಡುವುದು ಮಾತ್ರವಲ್ಲ, ಮನೆಯವರ ನೆಮ್ಮದಿ ಕೆಡುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ಈ ಗಿಡಗಳನ್ನ ತಪ್ಪಿಯೂ ಮನೆಯೊಳಗೆ ಬೆಳೆಸಬೇಡಿ; ಇದರಿಂದ ನಕಾರಾತ್ಮಕ ಅಂಶ ಹರಡುವುದು ಮಾತ್ರವಲ್ಲ, ಮನೆಯವರ ನೆಮ್ಮದಿ ಕೆಡುತ್ತೆ

ಈ ಗಿಡಗಳನ್ನ ತಪ್ಪಿಯೂ ಮನೆಯೊಳಗೆ ಬೆಳೆಸಬೇಡಿ; ಇದರಿಂದ ನಕಾರಾತ್ಮಕ ಅಂಶ ಹರಡುವುದು ಮಾತ್ರವಲ್ಲ, ಮನೆಯವರ ನೆಮ್ಮದಿ ಕೆಡುತ್ತೆ

ಮನೆ ಅಲಂಕಾರಕ್ಕಾಗಿ ಕೆಲವು ಗಿಡಗಳನ್ನು ಬೆಳೆಸುವುದು ಸಾಮಾನ್ಯ. ಹಿತ್ತಲಿನಲ್ಲಿ, ಬಾಲ್ಕನಿಗಳಲ್ಲಿ ಗಿಡಗಳನ್ನು ಬೆಳೆಸಲಾಗುತ್ತದೆ. ಆದರೆ ಮನೆಗಳಲ್ಲಿ ನಾವು ಬೆಳೆಸುವ ಕೆಲವು ಗಿಡಗಳು ನಕಾರಾತ್ಮಕ ಅಂಶ ಹರಡುವಂತೆ ಮಾಡುತ್ತವೆ. ಇದರಿಂದ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಬಹುದು. ಹಾಗಾದರೆ ಯಾವೆಲ್ಲಾ ಗಿಡಗಳನ್ನು ಮನೆಯಲ್ಲಿ ಬೆಳೆಸಬಾರದು ನೋಡಿ.

ಮನೆಯಲ್ಲಿ ನಕಾರಾತ್ಮಕ ಅಂಶ ಹರಡುವ ಗಿಡಗಳು
ಮನೆಯಲ್ಲಿ ನಕಾರಾತ್ಮಕ ಅಂಶ ಹರಡುವ ಗಿಡಗಳು

ಹಸಿರು ಗಿಡಗಳು ಮನೆಯ ಅಂದವನ್ನು ಇಮ್ಮಡಿಗೊಳಿಸುತ್ತವೆ. ಅವು ಸುಂದರವಾಗಿ ಕಾಣುವುದಲ್ಲದೆ ಪರಿಸರವನ್ನು ಸ್ವಚ್ಛವಾಗಿಡುತ್ತವೆ. ಮನೆ ಆವರಣದಲ್ಲಿ ಅಥವಾ ಬಾಲ್ಕನಿಯಲ್ಲಿ ಗಿಡಗಳನ್ನು ನೆಡಲು ಎಲ್ಲರೂ ಇಷ್ಟಪಡುತ್ತಾರೆ. ಈಗ ಮನೆ ಮುಂದೆ ಗಿಡಗಳನ್ನು ಬೆಳೆಸುವುದು ಟ್ರೆಂಡ್ ಆಗಿಬಿಟ್ಟಿದೆ. ಗಿಡಗಳು ಮನೆ ಅಲಂಕಾರದ ಪ್ರಮುಖ ಭಾಗವಾಗಿದೆ.

ಸಹಜವಾಗಿ, ಸಸ್ಯಗಳು ಶಕ್ತಿಗೆ ಸಂಬಂಧಿಸಿವೆ. ಕೆಲವು ಸಸ್ಯಗಳು ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಲು ಸಹಾಯ ಮಾಡಿದರೆ, ಕೆಲವು ಸಸ್ಯಗಳು ಮನೆಯಲ್ಲಿ ನಕಾರಾತ್ಮಕ ಅಂಶ ಹರಡುವಂತೆ ಮಾಡುತ್ತವೆ. ಆ ಕಾರಣಕ್ಕೆ ಕೆಲವೊಂದು ಗಿಡಗಳನ್ನು ಮನೆಯಲ್ಲಿ ಬೆಳೆಸಬಾರದು ಎಂದು ಹೇಳಲಾಗುತ್ತದೆ. ಈ ಗಿಡಗಳು ನಿಮ್ಮ ಬಾಲ್ಕನಿ ಅಥವಾ ಅಂಗಳದಲ್ಲಿದ್ದರೆ ಕೂಡಲೇ ಕಿತ್ತು ಹಾಕಿ. ಹಾಗಾದರೆ ಯಾವೆಲ್ಲಾ ಗಿಡಗಳನ್ನು ಮನೆಯಲ್ಲಿ ಅದರಲ್ಲೂ ವಿಶೇಷವಾಗಿ ಮನೆಯ ಒಳಗೆ ಬೆಳೆಸಬಾರದು ನೋಡಿ. 

ಬೋನ್ಸಾಯ್‌ ಸಸ್ಯಗಳು

ಮನೆಗಳಲ್ಲಿ ಬೋನ್ಸಾಯ್ ಗಿಡಗಳನ್ನು ನೆಡುವ ಪ್ರವೃತ್ತಿ ಹೆಚ್ಚಾಗಿದೆ. ಈ ಗಿಡಗಳು ತುಂಬಾ ಸುಂದರವಾಗಿ ಕಾಣುತ್ತದೆ. ಇದರಿಂದ ಮನೆಯ ಪರಿಸರ ಸುಂದರವಾಗುತ್ತದೆ. ಆ ಕಾರಣಕ್ಕೆ ಹಲವರು ತಮ್ಮ ಹಿತ್ತಲಿನಲ್ಲಿ ಮತ್ತು ಬಾಲ್ಕನಿಗಳಲ್ಲಿ ಅವುಗಳನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಆದರೆ ಬೋನ್ಸಾಯ್ ಗಿಡಗಳನ್ನು ನಿಮ್ಮ ಮನೆಯ ಬಾಲ್ಕನಿ ಅಥವಾ ಅಂಗಳದಲ್ಲಿ ಬೆಳೆಸಬಾರದು. ಏಕೆಂದರೆ ಅವು ಮನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಈ ಸಸ್ಯಗಳು ಮನೆಯ ಅಭಿವೃದ್ಧಿಯನ್ನು ತಡೆಯುತ್ತದೆ. ಈ ಸಸ್ಯಗಳ ನಕಾರಾತ್ಮಕ ಶಕ್ತಿಯು ಇಡೀ ಕುಟುಂಬದ ಪ್ರಗತಿಯನ್ನು ತಡೆಯುತ್ತದೆ, ಆದ್ದರಿಂದ ಅವುಗಳನ್ನು ಬೆಳೆಯದಿರುವುದು ಉತ್ತಮ.

ಹತ್ತಿ ಗಿಡ

ಕೆಲವರು ತಮ್ಮ ಮನೆಯಲ್ಲಿ ಹತ್ತಿ ಗಿಡವನ್ನೂ ನೆಡುತ್ತಾರೆ. ಈ ಸಸ್ಯವು ಸುಂದರವಾಗಿ ಕಾಣುತ್ತದೆ. ಹತ್ತಿ ಗಿಡಗಳು ಅನೇಕ ಮನೆ ತೋಟಗಳಲ್ಲಿ ಬಹಳ ಸಾಮಾನ್ಯವಾಗಿದೆ. ಆದರೆ ಧಾರ್ಮಿಕ ಹಿನ್ನೆಲೆಯಲ್ಲಿ ನೋಡುವುದಾದರೆ ಮನೆಯಲ್ಲಿ ಹತ್ತಿ ಗಿಡವನ್ನು ನೆಡುವುದು ಸೂಕ್ತವಲ್ಲ. ಹತ್ತಿ ಗಿಡ ನೆಟ್ಟ ಮನೆಯಲ್ಲಿ ಸದಾ ಆರ್ಥಿಕ ಮುಗ್ಗಟ್ಟು ಇದ್ದೇ ಇರುತ್ತದೆ ಎಂದು ಹೇಳಲಾಗುತ್ತದೆ.

ಕಳ್ಳಿ ಅಥವಾ ಮುಳ್ಳಿನ ಸಸ್ಯಗಳು

ಅನೇಕ ಜನರು ತಮ್ಮ ಮನೆಯ ತೋಟಗಳು ಮತ್ತು ಬಾಲ್ಕನಿಗಳಲ್ಲಿ ಕಳ್ಳಿ ಗಿಡಗಳನ್ನು ಬೆಳೆಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಲಂಕಾರಕ್ಕಾಗಿ ಈ ಗಿಡಗಳು ಬಹಳ ಜನಪ್ರಿಯವಾಗಿದೆ. ಆದಾಗ್ಯೂ ಕಳ್ಳಿ ಅಥವಾ ಯಾವುದೇ ಮುಳ್ಳಿನ ಗಿಡವನ್ನು ಮನೆಯೊಳಗೆ ಬೆಳೆಸಬಾರದು. ವಾಸ್ತವವಾಗಿ ಈ ಮುಳ್ಳಿನ ಗಿಡಗಳು ಮನೆಗೆ ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಕಳ್ಳಿ ಇರುವ ಮನೆಯಲ್ಲಿ ಕುಟುಂಬ ಸದಸ್ಯರು ಸಂಕಷ್ಟಕ್ಕೆ ಸಿಲುಕುತ್ತಾರೆ. ನೀವು ಕ್ಯಾಕ್ಟಸ್ ಸಸ್ಯವನ್ನು ಇರಿಸಬೇಕು ಎಂಬ ಆಸೆ ಹೊಂದಿದ್ದರೆ ಮನೆಯ ಒಳಗಡೆ ಇಡಬೇಡಿ.

ಎಕ್ಕದ ಗಿಡ

ಬಿಳಿ ಹೂವುಗಳೊಂದಿಗೆ ಎಕ್ಕದ ಗಿಡ ತುಂಬಾ ಸುಂದರವಾಗಿ ಕಾಣುತ್ತದೆ. ಇದರ ಹೂವುಗಳನ್ನು ಶಿವನ ಪೂಜೆಯಲ್ಲಿಯೂ ಬಳಸಲಾಗುತ್ತದೆ. ಆದಾಗ್ಯೂ, ಈ ಸಸ್ಯವನ್ನು ಮನೆಯಲ್ಲಿ ನೆಡುವುದು ಸೂಕ್ತವಲ್ಲ, ಈ ಸಸ್ಯದಿಂದ ಹೊರಹೊಮ್ಮುವ ನಕಾರಾತ್ಮಕ ಶಕ್ತಿಯು ಕುಟುಂಬಕ್ಕೆ ಹಾನಿಕಾರಕವಾಗಿದೆ. ವಾಸ್ತವವಾಗಿ, ಎಕ್ಕದ ಸಸ್ಯವು ಬಿಳಿ ದ್ರವವನ್ನು ಹೊರಸೂಸುತ್ತದೆ, ಇದು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ.

ನಿಂಬೆ ಗಿಡ

ಕಿಚನ್ ಗಾರ್ಡನಿಂಗ್ ಅನ್ನು ಇಷ್ಟಪಡುವವರು ಹೆಚ್ಚಾಗಿ ಮನೆಯಲ್ಲಿ ವಿವಿಧ ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸುತ್ತಾರೆ. ಮನೆಯೊಳಗೆ ನಿಂಬೆ ಗಿಡವನ್ನು ಬೆಳೆಸಬೇಡಿ. ಈ ಸಿಟ್ರಸ್ ಹಣ್ಣಿನ ಗಿಡವನ್ನು ಮನೆಯಲ್ಲಿ ನೆಟ್ಟರೆ ಕುಟುಂಬದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ ಮತ್ತು ಮನೆಯ ಸದಸ್ಯರಿಗೆ ಒಬ್ಬರನ್ನೊಬ್ಬರು ಇಷ್ಟಪಡುವುದಿಲ್ಲ ಎಂದು ಹೇಳಲಾಗುತ್ತದೆ.

Whats_app_banner