ಮನೆಯಲ್ಲಿ ಸೊಳ್ಳೆ ಕಾಟ ಜಾಸ್ತಿ ಆಗಿದ್ಯಾ, ಬಾಲ್ಕನಿಯಲ್ಲಿ ಈ ಗಿಡಗಳನ್ನು ನೆಟ್ಟು ನೋಡಿ, ಸೊಳ್ಳೆಗಳು ಮನೆ ಹತ್ತಿರವೂ ಸುಳಿಯೊಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆಯಲ್ಲಿ ಸೊಳ್ಳೆ ಕಾಟ ಜಾಸ್ತಿ ಆಗಿದ್ಯಾ, ಬಾಲ್ಕನಿಯಲ್ಲಿ ಈ ಗಿಡಗಳನ್ನು ನೆಟ್ಟು ನೋಡಿ, ಸೊಳ್ಳೆಗಳು ಮನೆ ಹತ್ತಿರವೂ ಸುಳಿಯೊಲ್ಲ

ಮನೆಯಲ್ಲಿ ಸೊಳ್ಳೆ ಕಾಟ ಜಾಸ್ತಿ ಆಗಿದ್ಯಾ, ಬಾಲ್ಕನಿಯಲ್ಲಿ ಈ ಗಿಡಗಳನ್ನು ನೆಟ್ಟು ನೋಡಿ, ಸೊಳ್ಳೆಗಳು ಮನೆ ಹತ್ತಿರವೂ ಸುಳಿಯೊಲ್ಲ

ಇತ್ತೀಚಿನ ವರ್ಷಗಳಲ್ಲಿ ವಾತಾವರಣವು ವಿಭಿನ್ನವಾಗಿದೆ. ಚಳಿಗಾಲದಲ್ಲಿ ಮಳೆ ಬರುತ್ತಿದೆ, ಅತಿಯಾದ ಮಳೆಯ ಕಾರಣದಿಂದ ಸೊಳ್ಳೆ ಕಾಟವು ಹೆಚ್ಚಾಗಿದೆ. ಸೊಳ್ಳೆ ಕಡಿಯುವುದರಿಂದ ಡೆಂಗ್ಯೂವಿನಂತಹ ಗಂಭೀರ ಸಮಸ್ಯೆಗಳು ಎದುರಾಗುವ ಕಾರಣ ಸೊಳ್ಳೆಗಳಿಂದ ದೂರ ಇರಬೇಕು. ಮನೆ ಬಳಿ ಸೊಳ್ಳೆಗಳು ಸುಳಿಯಲೇಬಾರದು ಎಂದರೆ ಈ ಗಿಡಗಳನ್ನ ನೆಟ್ಟು ನೋಡಿ.

ಸೊಳ್ಳೆ ನಿವಾರಕ ಗಿಡಗಳು
ಸೊಳ್ಳೆ ನಿವಾರಕ ಗಿಡಗಳು (PC: Canva)

ಇತ್ತೀಚಿನ ದಿನಗಳಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆ. ವಿಪರೀತ ಮಳೆ ಸೊಳ್ಳೆ ಹರಡಲು ಕಾರಣವಾಗಿದೆ. ಮನೆಯೊಳಗೆ ಸೊಳ್ಳೆ ಬಂದರೆ ಭಯವಾಗುತ್ತದೆ, ಯಾಕೆಂದರೆ ಇದರಿಂದ ಡೆಂಗ್ಯೂ, ಮಲೇರಿಯಾದಂತಹ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂಬ ಆತಂಕ ಎಲ್ಲರಲ್ಲೂ ಇರುತ್ತದೆ.

ಸೊಳ್ಳೆಗಳನ್ನು ದೂರವಿಡಲು ಕಾಯಿಲ್‌ಗಳು, ಸೊಳ್ಳೆ ನಿವಾರಕ ಕ್ರೀಮ್‌ಗಳು, ಯಂತ್ರಗಳು ಮುಂತಾದ ಅನೇಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಅವುಗಳ ಸುರಕ್ಷತೆಯ ಬಗ್ಗೆ ಅನೇಕ ಪ್ರಶ್ನೆಗಳು ಆಗಾಗ್ಗೆ ಉದ್ಭವಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚು ನೈಸರ್ಗಿಕ ವಿಧಾನವನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ. ಮನೆಯನ್ನು ಸರಿಯಾಗಿ ಸ್ವಚ್ಛ ಮಾಡುವುದು, ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚುವುದು ಮತ್ತು ಮನೆಯ ಬಾಲ್ಕನಿಯಲ್ಲಿ ಕೆಲವು ವಿಶೇಷ ಸಸ್ಯಗಳನ್ನು ನೆಡುವುದು ಈ ಎಲ್ಲವನ್ನೂ ಒಳಗೊಂಡಿರುತ್ತದೆ. ಇದರಲ್ಲಿ ಬೆಸ್ಟ್ ಎಂದರೆ ಮನೆಯ ಬಳಿ ಸೊಳ್ಳೆಗಳು ಬಾರದಂತೆ ಸೊಳ್ಳೆ ನಿವಾರಕ ಸಸ್ಯಗಳನ್ನು ನೆಡುವುದು. ಅಂತಹ ಕೆಲವು ಸಸ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ.

ಲೆಮನ್ ಗ್ರಾಸ್

ನಿಂಬೆಹಲ್ಲು ಎಂದೂ ಕರೆಯುವ ಈ ಗಿಡವನ್ನ ನೆಡುವುದರಿಂದ ಮನೆಯ ಬಳಿ ಸೊಳ್ಳೆಗಳು ಬರುವುದಿಲ್ಲ, ಯಾಕೆಂದರೆ ಇದು ಆಹ್ಲಾದಕರ ಸುಗಂಧಕ್ಕೆ ಹೆಸರುವಾಸಿಯಾಗಿದೆ. ಇದನ್ನು ಅನೇಕ ನೈಸರ್ಗಿಕ ಸೊಳ್ಳೆ ನಿವಾರಕ ಉತ್ಪನ್ನಗಳಲ್ಲಿಯೂ ಬಳಸಲಾಗುತ್ತದೆ. ವಾಸ್ತವವಾಗಿ, ನಿಂಬೆ ಹುಲ್ಲಿನ ಸಹಾಯವು ನಿಮ್ಮ ಮನಸ್ಸನ್ನೂ ರಿಫ್ರೆಶ್ ಮಾಡುತ್ತದೆ. ಸೊಳ್ಳೆಗಳು ಅದರ ವಾಸನೆಯನ್ನು ಇಷ್ಟಪಡುವುದಿಲ್ಲ ಮತ್ತು ಅವು ಅದರಿಂದ ದೂರ ಓಡುತ್ತವೆ. ಹಾಗಾಗಿ ಬಾಲ್ಕನಿಯಲ್ಲಿ ಈ ಗಿಡಗಳನ್ನು ನೆಡುವುದರಿಂದ ಸೊಳ್ಳೆಗಳನ್ನು ಓಡಿಸಬಹುದು.

ಚೆಂಡು ಹೂ

ನಿಮ್ಮ ಬಾಲ್ಕನಿಯ ಸೌಂದರ್ಯವನ್ನು ಹೆಚ್ಚಿಸುವ ಮತ್ತು ಸೊಳ್ಳೆಗಳ ಬರುವುದನ್ನು ತಡೆಯಲು ಇದಕ್ಕಿಂತ ಉತ್ತಮ ಗಿಡ ಇನ್ನೊಂದಿಲ್ಲ ವಾಸ್ತವವಾಗಿ, ಸೊಳ್ಳೆಗಳು ಮಾರಿಗೋಲ್ಡ್ ಸಸ್ಯದ ವಾಸನೆಗೆ ಸ್ವಲ್ಪ ಅಲರ್ಜಿಯನ್ನು ಹೊಂದಿರುತ್ತವೆ ಮತ್ತು ಸೊಳ್ಳೆಗಳು ಮಾತ್ರವಲ್ಲದೆ ಅನೇಕ ಸಣ್ಣ ಕೀಟಗಳು ಸಹ ಮನೆಯ ಸುತ್ತಲೂ ಹಾರುವುದಿಲ್ಲ. ಇನ್ನೊಂದು ವಿಚಾರ ಎಂದರೆ ಚೆಂಡು ಹೂವಿನ ಗಿಡ ಸಾಕು, ಹೂ ಬಿಡುವವರೆಗೂ ಕಾಯಬೇಕು ಅಂತಿಲ್ಲ, ಗಿಡದ ವಾಸನೆಗೆ ಸೊಳ್ಳೆಗಳು ಹತ್ತಿರ ಬರುವುದಿಲ್ಲ.

ಲ್ಯಾವೆಂಡರ್ ಗಿಡ

ಮನಸ್ಸಿಗೆ ಉಲ್ಲಾಸವನ್ನು ನೀಡುವ ರಿಫ್ರೆಶ್ ವಾಸನೆಯನ್ನು ಹೊಂದಿರುವ ಲ್ಯಾವೆಂಡರ್ ಸಸ್ಯವು ಸೊಳ್ಳೆಗಳನ್ನು ಕೊಲ್ಲುವಲ್ಲಿ ಪರಿಪೂರ್ಣವಾಗಿದೆ. ಇದನ್ನು ಅನೇಕ ಸೊಳ್ಳೆ ನಿವಾರಕ ಉತ್ಪನ್ನಗಳಲ್ಲಿಯೂ ಬಳಸಲಾಗುತ್ತದೆ. ಹಾಗಾಗಿ ನೀವು ಬಾಲ್ಕನಿ ಅಥವಾ ಮನೆಯ ಗಾರ್ಡನ್‌ನಲ್ಲಿ ಲ್ಯಾವೆಂಡರ್ ಗಿಡ ನೆಡಬಹುದು. ಇದರ ಸುಗಂಧ ಆಹ್ಲಾದ ಭಾವ ನೀಡುವ ಜೊತೆಗೆ ಸೊಳ್ಳೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ.

ಪುದಿನ ಗಿಡ

ಪುದಿನ ಚಟ್ನಿ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತೆ, ಈ ಪುದಿನ ಗಿಡ ಕೂಡ ಸೊಳ್ಳೆ ನಿವಾರಕವಾಗಿದೆ. ಅದರ ರಿಫ್ರೆಶ್ ಪರಿಮಳವದ ಬಗ್ಗೆ ನಿಮಗೆ ತಿಳಿದಿರಬಹುದು. ಈ ಸಸ್ಯವನ್ನು ನಿಮ್ಮ ಬಾಲ್ಕನಿಯಲ್ಲಿ ನೆಡಬೇಕು. ಇದರಿಂದ ಬೇಕೆಂದಾಗ ಕಿತ್ತು ಚಟ್ನಿ ಮಾಡಬಹುದು, ಜೊತೆಗೆ ಸೊಳ್ಳೆಗಳು ಕೂಡ ಮನೆಯ ಬಳಿ ಸುಳಿಯುವುದಿಲ್ಲ.

Whats_app_banner