ಆಯುರ್ವೇದ vs ಆಲೊಪತಿ; ಈ ಎರಡರ ವ್ಯತ್ಯಾಸವೇನು, ಯಾವುದು ಹೆಚ್ಚು ಪರಿಣಾಮಕಾರಿ, ಮೂಲ ಯಾವುದು; ಇಲ್ಲಿದೆ ಸಮಗ್ರ ಮಾಹಿತಿ
ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿರುವ ಈ ದಿನಗಳಲ್ಲಿ ಜನರು ಆಯುರ್ವೇದ ಔಷಧಿಯ ಮೊರೆ ಹೋಗುವುದಾ, ಆಲೊಪಥಿ ಔಷಧಿ ಮಾಡುವುದಾ ಎನ್ನುವ ಗೊಂದಲದಲ್ಲಿದ್ದಾರೆ. ಹಲವರಿಗೆ ಆಯುರ್ವೇದ ಹಾಗೂ ಆಲೊಪಥಿ ನಡುವಿನ ವ್ಯತ್ಯಾಸವೂ ತಿಳಿದಿಲ್ಲ, ಹಾಗಾದರೆ ಎರಡಕ್ಕೂ ಇರುವ ವ್ಯತ್ಯಾಸವೇನು, ಇದರಲ್ಲಿ ಯಾವುದು ಪರಿಣಾಮಕಾರಿ, ಈ ವೈದ್ಯ ಪದ್ಧತಿಗಳ ಮೂಲ ಯಾವುದು, ಇಲ್ಲಿದೆ ವಿವರ.
ಕಳೆದೊಂದು ದಶಕದಿಂದ ಆರೋಗ್ಯ ಸಮಸ್ಯೆಗಳ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಜನರು ಬಳಲುತ್ತಿದ್ದಾರೆ. ಈ ಕಾಯಿಲೆಗಳು ದೀರ್ಘಾವಧಿಯವರೆಗೆ ಕಾಡುವ ಕಾರಣ ಔಷಧಿ ತೆಗೆದುಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಆಯುರ್ವೇದ ಔಷಧಿ ಮಾಡುವುದಾ ಅಥವಾ ಆಲೋಪಥಿ ಮಾಡುವುದಾ ಎನ್ನುವ ಗೊಂದಲ ಹಲವರಲ್ಲಿದೆ. ಹಾಗಾದರೆ ಆಯುರ್ವೇದ ಎಂದರೇನು, ಆಲೊಪಥಿ ಆಯುರ್ವೇದಕ್ಕಿಂತ ಹೇಗೆ ಭಿನ್ನ, ಈ ಎರಡಲ್ಲಿ ಯಾವುದು ಬೆಸ್ಟ್ ಎಂಬಿತ್ಯಾದಿ ವಿವರ ಇಲ್ಲಿದೆ.
ಭಾರತವು ಆಯುರ್ವೇದದ ತವರು ಎಂದು ಹೇಳಬಹುದು. ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿ ಆಯುರ್ವೇದ ವೈದ್ಯ ಪದ್ಧತಿ ಚಾಲ್ತಿಯಲ್ಲಿತ್ತು. ಆಲೊಪಥಿ ಎಂದರೆ ಆಧುನಿಕ ಔಷಧಿಗಳು ಎಂದರೆ ‘ಇಂಗ್ಲಿಷ್ ಮೆಡಿಸಿನ್‘ ಎಂದು ನಾವು ಕರೆಯುವ ವೈದ್ಯ ಪದ್ಧತಿ. ಆಲೊಪಥಿ ಭಾರತಕ್ಕೆ ಕಾಲಿಡುವ ಹಲವು ವರ್ಷಗಳ ಮುನ್ನವೇ ಆಯುರ್ವೇದ ವೈದ್ಯ ಪದ್ಧತಿ ಪ್ರಾಥಮಿಕ ಚಿಕಿತ್ಸೆಯ ಮೂಲವಾಗಿತ್ತು. ಆ ಕಾಲದಲ್ಲಿ ಆಯುರ್ವೇದ ಔಷಧಿಗಳನ್ನು ಸಣ್ಣ ಪುಟ್ಟ ಕಾಯಿಲೆಗಳಿಗೆ ಮಾತ್ರವಲ್ಲ ದೊಡ್ಡ ಕಾಯಿಲೆಗಳಿಗೂ ನೀಡಲು ಬಳಸಲಾಗುತ್ತಿತ್ತು. ನಂತರ ಅಂದರೆ 1800ರ ದಶಕದಲ್ಲಿ ಆಲೊಪಥಿ ಔಷಧಿ ಬಳಕೆ ಚಾಲ್ತಿಗೆ ಬಂತು. ಅದೇನೇ ಇದ್ದರೂ ಈ ಎರಡು ಪದ್ಧತಿಗಳ ನಡುವೆ ವ್ಯತ್ಯಾಸ ಸಾಕಷ್ಟಿದೆ. ವಿಭಿನ್ನವಾಗಿ ಕಾರ್ಯನಿರ್ವಹಿಸುವ ಈ ಔಷಧಿಗಳನ್ನು ಯಾವುದು ಬೆಸ್ಟ್ ಯಾವುದು ವರ್ಸ್ಟ್ ಎಂದು ವಿಂಗಡಿಸಲು ಸಾಧ್ಯವಾದರೂ ಈ ಎರಡರ ನಡುವೆ ವ್ಯತ್ಯಾಸವಂತೂ ಖಂಡಿತ ಇದೆ.
ಆಯುರ್ವೇದ ವೈದ್ಯ ಪದ್ಧತಿ
ಆಯುರ್ವೇದವು ಪರ್ಯಾಯ ಸಮಗ್ರ ಔಷಧ ವ್ಯವಸ್ಥೆಯಾಗಿದ್ದು, ಅದು ಭಾರತದಲ್ಲಿ ಹಲವಾರು ವರ್ಷಗಳ ಹಿಂದಿಯೇ ಹುಟ್ಟಿಕೊಂಡಿತು. ಹಲವು ಆಧುನಿಕ ಔಷಧಿಗಳು ಹಾಗೂ ಚಿಕಿತ್ಸೆಗಳು ಆಯುರ್ವೇದದಿಂದಲೇ ಸ್ಪೂರ್ತಿ ಪಡೆದಿರುವಂಥದ್ದು. ಆಯುರ್ವೇದ ವ್ಯವಸ್ಥೆಯು ನಿಸರ್ಗದ ಮೇಲೆ ಅವಲಂಬಿತವಾಗಿದೆ, ಅಂದರೆ ನೈಸರ್ಗಿಕ ವಸ್ತುಗಳಿಂದ ತಯಾರಿಸುವ ಔಷಧ. ಈ ಪದ್ಧತಿಯು ರೋಗಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಮಾನವ ದೇಹದ ಒಟ್ಟಾರೆ ಯೋಗಕ್ಷೇಮದ ಮೇಲೆ ಇದು ಕೇಂದ್ರೀಕರಿಸುತ್ತದೆ. ದೈಹಿಕ ಸಮಸ್ಯೆಗಳನ್ನು ಸರಿಪಡಿಸಿ ಸಮತೋಲಿತ ಆಹಾರ ಸೇವನೆ ಹಾಗೂ ವ್ಯಾಯಾಮಗಳ ಮೂಲಕ ಸಮಸ್ಯೆಗಳನ್ನು ದೂರ ಮಾಡುವುದು ಆಯುರ್ವೇದ ವೈದ್ಯ ಪದ್ಧತಿಯ ಶೈಲಿಯಾಗಿದೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಮುಖ್ಯವಾಗಿ 5 ಅಂಶಗಳಲ್ಲಿ ಸಂಯೋಜಿಸಲಾಗುತ್ತದೆ. ಭೂಮಿ, ಗಾಳಿ, ನೀರು, ಬಾಹ್ಯಾಕಾಶ ಮತ್ತು ಬೆಂಕಿ. ಈ ಅಂಶಗಳು ದೋಷಗಳು, ವಾತ, ಕಫ ಮತ್ತು ಪಿತ್ತ ಎಂಬ ಮೂರು ಜೀವ ಶಕ್ತಿಗಳನ್ನು ರೂಪಿಸಲು ಕೆಲಸ ಮಾಡುತ್ತವೆ. ಈ ಅಂಶಗಳ ಮೇಲೆ ಆಯುರ್ವೇದ ವೈದ್ಯರು ಚಿಕಿತ್ಸೆಯನ್ನು ಶಿಫಾರಸು ಮಾಡುತ್ತಾರೆ.
ಆಲೊಪತಿ ವೈದ್ಯ ಪದ್ಧತಿ
ಎಲ್ಲಾ ಆಧುನಿಕ ಮತ್ತು ವೈಜ್ಞಾನಿಕ ಔಷಧಗಳು ಮತ್ತು ಚಿಕಿತ್ಸೆಗಳನ್ನು ಉಲ್ಲೇಖಿಸಲು ಬಳಸುವ ಪದ ಅಲೋಪತಿ. ಅಲೋಪತಿ ಅಡಿಯಲ್ಲಿ ಬರುವ ಎಲ್ಲಾ ಔಷಧಿಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗಿದ್ದು, ಸೇವಿಸಿದಾಗ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ಮೊದಲೇ ಖಚಿತಪಡಿಸಿಕೊಳ್ಳಲಾಗುತ್ತದೆ. ರೋಗಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುವ ಸೂಕ್ತವಾದ ಔಷಧದೊಂದಿಗೆ ಯಾವುದೇ ನಿರ್ದಿಷ್ಟ ಕಾಯಿಲೆಗೆ ಚಿಕಿತ್ಸೆ ನೀಡುವುದು ಅಲೋಪತಿ ಪದದ ಗುರಿಯಾಗಿದೆ. ವೈದ್ಯಕೀಯದಲ್ಲಿ ಪ್ರಗತಿಯೊಂದಿಗೆ, ಅಲೋಪತಿ ನಿರಂತರವಾಗಿ ವಿಕಸನಗೊಳ್ಳುತ್ತಿದೆ ಮತ್ತು ಬದಲಾಗುತ್ತಿದೆ. ಅಲೋಪತಿ ಎಂಬ ಪದವನ್ನು ಈಗ ಹೆಚ್ಚು ಬಳಸಲಾಗುವುದಿಲ್ಲ. ಈಗ ಆಲೊಪತಿಗೆ ಇಂಗ್ಲಿಷ್ ಮೆಡಿಸಿನ್ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಸದ್ಯ ನಮ್ಮಲ್ಲಿ ಬಹುತೇಕರು ಆಲೊಪಥಿ ಔಷಧಿಯ ಮೊರೆ ಹೋಗುತ್ತಾರೆ. ಇದಕ್ಕೆ ತಕ್ಷಣಕ್ಕೆ ಪರಿಹಾರ ನೀಡುತ್ತದೆ. ಆಯುರ್ವೇದ ಪರಿಣಾಮಕಾರಿಯಾದ್ರೂ ಇದು ನಿಧಾನಕ್ಕೆ ವಾಸಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.
ಇದನ್ನೂ ಓದಿ: ಆಯುರ್ವೇದದಲ್ಲಿ ಅಮೃತ ಎಂದೇ ಕರೆಸಿಕೊಳ್ಳುವ ಪದಾರ್ಥಗಳಿವು
ಆಯುರ್ವೇದ ಮತ್ತು ಅಲೊಪತಿ ನಡುವಿನ ವ್ಯತ್ಯಾಸಗಳು
ಮೇಲ್ನೋಟದಲ್ಲೇ ಆಯುರ್ವೇದ ಮತ್ತು ಆಲೊಪಥಿ ನಡುವಿನ ವ್ಯತ್ಯಾಸವನ್ನು ಗುರುತಿಸಬಹುದು. ಅದಾಗ್ಯೂ ಈ ಎರಡರ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಅದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು.
ಅರ್ಥ: ಆಯುರ್ವೇದವು ಎರಡು ಪದಗಳಿಂದ ಕೂಡಿದೆ. 'ಆಯುಸ್' ಎಂದರೆ ಜೀವನ ಮತ್ತು 'ವೇದ' ಎಂದರೆ ವಿಜ್ಞಾನ ಅಥವಾ ಬುದ್ಧಿವಂತಿಕೆ, ಆಯುರ್ವೇದವನ್ನು 'ಬುದ್ಧಿವಂತಿಕೆ ಅಥವಾ ಜೀವನದ ಜ್ಞಾನ' ಎಂಬ ಅರ್ಥದಲ್ಲಿ ಹೆಸರಿಸಲಾಗಿದೆ. ಅಲೋಪತಿ ಪದವು ಗ್ರೀಕ್ ಮೂಲವನ್ನು ಹೊಂದಿದೆ. 'ಅಲೋಸ್' ಹಾಗೂ 'ಪಾಥೋಸ್' ಎನ್ನುವ ಎರಡು ಪದಗಳನ್ನು ಸೇರಿ ಆಲೊಪಥಿ ಎಂಬ ಹೆಸರು ಬಂದಿದೆ. ಇದರ ಅರ್ಥ ಅನಾರೋಗ್ಯವಲ್ಲ ಅಥವಾ ಅನಾರೋಗ್ಯವನ್ನು ದೂರ ಮಾಡುವ ಔಷಧಿ ಎಂದು ಪರಿಗಣಿಸಬಹುದು.
ಗಮನ ಹರಿಸುವ ಕ್ರಮ: ಆಯುರ್ವೇದವು ದೇಹದ ಎಲ್ಲಾ ರೋಗಗಳನ್ನು ನೈಸರ್ಗಿಕವಾಗಿ ಗುಣಪಡಿಸಲು ಕೇಂದ್ರೀಕರಿಸುತ್ತದೆ. ಆಯುರ್ವೇದ ವೈದ್ಯರು ಕೇವಲ ದೈಹಿಕ ಆರೋಗ್ಯವನ್ನು ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಸಹ ಗಣನೆಗೆ ತೆಗೆದುಕೊಳ್ಳುತ್ತಾರೆ. ಅಲೋಪತಿಯನ್ನು ವಿಜ್ಞಾನವು ಬೆಂಬಲಿಸುತ್ತದೆ. ಅಲೋಪತಿಯಲ್ಲಿ ಬಳಸಲಾಗುವ ಎಲ್ಲಾ ಔಷಧಿಗಳು ಮತ್ತು ಚಿಕಿತ್ಸೆಗಳು ಕಾಯಿಲೆಗಳು ಮತ್ತು ರೋಗಗಳನ್ನು ಗುಣಪಡಿಸಲು ಪ್ರಾಯೋಗಿಕವಾಗಿ ಪರೀಕ್ಷಿಸಲ್ಪಡುತ್ತವೆ.
ಚಿಕಿತ್ಸೆಯ ವಿಧಾನ: ಆಯುರ್ವೇದದ ವಿಧಾನವು ಹೆಚ್ಚು ಸಮಗ್ರವಾಗಿದೆ. ಆಯುರ್ವೇದ ವೈದ್ಯರು ಸಮಸ್ಯೆಯ ಮೂಲ ಕಾರಣಕ್ಕೆ ಹೋಗುತ್ತಾರೆ ಮತ್ತು ನಂತರ ರೋಗದ ಮೂಲ ಕಾರಣವನ್ನು ತೆಗೆದುಹಾಕಲು ಯೋಜನೆಯನ್ನು ರಚಿಸಲಾಗುತ್ತದೆ. ಈ ಚಿಕಿತ್ಸೆಯು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಕಾಳಜಿಯನ್ನು ಒಳಗೊಂಡಿರುತ್ತದೆ. ಅದರ ನಂತರ, ಅಲೋಪತಿಯ ವಿಧಾನವು ಸಮಗ್ರವಾಗಿಲ್ಲ. ಅಲೋಪತಿ ವೈದ್ಯರು ರೋಗಗಳು ಮತ್ತು ಸಮಸ್ಯೆಗಳನ್ನು ಗುರುತಿಸುತ್ತಾರೆ. ಅಲೋಪತಿಯ ಉದ್ದೇಶವು ಯಾವುದೇ ದೈಹಿಕ ಕಾಯಿಲೆಗೆ ತ್ವರಿತ ಚಿಕಿತ್ಸೆ ನೀಡುವುದು. ಮೊದಲೇ ಹೇಳಿದಂತೆ ಇದು ತಕ್ಷಣಕ್ಕೆ ಪರಿಹಾರ ನೀಡುವ ವೈದ್ಯ ಪದ್ಧತಿಯಾಗಿದೆ.
ದೀರ್ಘಕಾಲಿನ ಪರಿಣಾಮ: ಆಯುರ್ವೇದ ಚಿಕಿತ್ಸೆಗಳು ಹೆಚ್ಚು ದೀರ್ಘಕಾಲೀನವಾಗಿವೆ. ಇದು ಯಾವುದೇ ಕಾಯಿಲೆಗೆ ತಕ್ಷಣದ ಚಿಕಿತ್ಸೆ ಮತ್ತು ತ್ವರಿತ ಪರಿಹಾರ ನೀಡುವುದಕ್ಕೆ ಸೀಮಿತವಾಗಿಲ್ಲ. ಇದು ಸಮಸ್ಯೆಯ ಮೂಲವನ್ನು ಹುಡುಕಿ ಅದಕ್ಕೆ ಪರಿಹಾರ ನೀಡುವ ಪದ್ಧತಿಯಾಗಿದೆ, ಇದು ಒಟ್ಟಾರೆ ರೋಗಿಯ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ಅಲೋಪತಿಯು ಪ್ರಸ್ತುತ ಸಮಸ್ಯೆಯನ್ನು ನಿವಾರಿಸುತ್ತದೆ ಆದರೆ ಚಿಕಿತ್ಸೆಯು ಶಾಶ್ವತವಲ್ಲ. ಮುಂದೆ ಯಾವುದೇ ಸಮಸ್ಯೆಗಳು ಉದ್ಭವಿಸಿದರೆ, ಅವರನ್ನು ಅದೇ ರೀತಿಯಲ್ಲಿ ಸಂಪರ್ಕಿಸಲಾಗುತ್ತದೆ. ಬ್ಯಾಕ್ಟೀರಿಯಾದ ವಿಷಯವು ಇದನ್ನು ಅರ್ಥಮಾಡಿಕೊಳ್ಳುವ ಒಂದು ವಿಧಾನ. ಆಯುರ್ವೇದವು ವ್ಯವಸ್ಥೆಯಿಂದ ಬ್ಯಾಕ್ಟೀರಿಯಾವನ್ನು ಶಾಶ್ವತವಾಗಿ ತೆಗೆದುಹಾಕುಬಹುದು. ಅಲೋಪತಿ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ, ಆದರೆ ಅದರ ಕುರುಹುಗಳು ದೇಹದಲ್ಲಿ ಹಾಗೇ ಉಳಿದುಬಿಡಬಹುದು ಹಾಗೂ ಇದು ನಂತರ ಬೆಳೆಯಬಹುದು.
ಚಿಕಿತ್ಸಾ ವೆಚ್ಚ: ಸಾಮಾನ್ಯವಾಗಿ ಚಿಕಿತ್ಸಾ ವೆಚ್ಚ ಎರಡಕ್ಕೂ ಒಂದೇ ರೀತಿಯಲ್ಲಿ ಇದ್ದರೂ ಕೆಲವೊಂದು ನಿರ್ದಿಷ್ಟ ಕಾಯಿಲೆಗಳ ಔಷಧಿಗೆ ಹೋಲಿಸಿದರೆ ಆಯುರ್ವೇದ ಔಷಧಿಯ ಬೆಲೆ ಕೊಂಡ ಕಡಿಮೆ ಎನ್ನಿಸುವುದು ಸುಳ್ಳಲ್ಲ. ಆದರೆ ಗಂಭೀರ ಸಮಸ್ಯೆಗಳ ಸಂದರ್ಭದಲ್ಲಿ ಆಲೊಪಥಿ ವೈದ್ಯ ಪದ್ಧತಿಯಿಂದ ಸಾಕಷ್ಟು ಹಣ ಖರ್ಚಾಗುತ್ತದೆ.
ಅಡ್ಡಪರಿಣಾಮ ಹಾಗೂ ಗುಣವಾಗುವ ಸಮಯ: ಆಯುರ್ವೇದವು ರೋಗಿಗಳನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಸಂಪೂರ್ಣವಾಗಿ ನೈಸರ್ಗಿಕ ವಿಧಾನವಾಗಿದೆ. ಅದರಂತೆ ಅಡ್ಡಪರಿಣಾಮಗಳು ತೀರಾ ಕಡಿಮೆ ಮತ್ತು ಧನಾತ್ಮಕ ಪರಿಣಾಮಗಳು ದೀರ್ಘಕಾಲದವರೆಗೆ ಇರುತ್ತದೆ. ಅದರ ಸ್ವಭಾವದಿಂದಾಗಿ, ಆಯುರ್ವೇದವು ಅಲೊಪತಿಗೆ ವಿರುದ್ಧವಾಗಿ ಗುಣಪಡಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ, ಅಲ್ಲಿ ಗುಣಪಡಿಸುವ ಸಮಯ ಕಡಿಮೆ ಮತ್ತು ಅದರ ಪರಿಣಾಮಗಳನ್ನು ತ್ವರಿತವಾಗಿ ಅನುಭವಿಸುತ್ತದೆ. ಅಲೊಪತಿಯಲ್ಲಿ, ರಾಸಾಯನಿಕ ಆಧಾರಿತ ಔಷಧಿಗಳ ಬಳಕೆಯನ್ನು ಒಳಗೊಂಡಿರುವುದರಿಂದ ಅಡ್ಡಪರಿಣಾಮಗಳು ಹೆಚ್ಚು ಪ್ರತಿಕೂಲವಾಗಬಹುದು. ಆದರೆ ಕೆಲವೊಮ್ಮೆ ಆಯುರ್ವೇದ ವೈದ್ಯ ಪದ್ಧತಿಯು ಕೆಲವರಿಗೆ ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು. ಅದು ಅವರವರ ದೇಹಸ್ಥಿತಿಗೆ ಅನುಗುಣವಾಗಿ ನಿರ್ಧಾರವಾಗುತ್ತದೆ.
ಆಯುರ್ವೇದ ಹಾಗೂ ಆಲೊಪಥಿಯ ನಡುವೆ ಹಲವು ವ್ಯತ್ಯಾಸಗಳಿದ್ದು ಈ ಎರಡದಲ್ಲಿ ಯಾವುದು ಉತ್ತಮ ಎಂಬ ನಿರ್ಧಾರ ಅವರವರ ವೈಯಕ್ತಿಕ ನಿಲುವುಗಳಿಗೆ ಸಂಬಂಧಿಸಿದ್ದು. ಜೊತೆಗೆ ನಿಮ್ಮ ದೇಹಕ್ಕೆ ಹೊಂದುವ ವೈದ್ಯ ಪದ್ಧತಿಯನ್ನು ನೀವು ಅನುಸರಿಸಬೇಕು. ಕೆಲವೊಂದು ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ ಆಯುರ್ವೇದ ವೈದ್ಯ ಪದ್ಥತಿ ಅನುಸರಿಸುವ ಮೂಲಕ ಸಮಸ್ಯೆ ಗಂಭೀರವಾದ ಉದಾಹರಣೆಗಳೂ ಇವೆ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಹಿಂದೂಸ್ತಾನ್ ಟೈಮ್ಸ್ ಕನ್ನಡ ಇದನ್ನು ಪುಷ್ಟೀಕರಿಸುವುದಿಲ್ಲ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ನೀವು ತಜ್ಞರನ್ನು ಸಂಪರ್ಕಿಸಿ ಅವರಿಂದ ಅಭಿಪ್ರಾಯ ಪಡೆಯುವುದು ಬಹಳ ಮುಖ್ಯ ಹಾಗೂ ಯಾವ ಔಷಧಿ ಬಳಸಬೇಕು ಎನ್ನುವುದು ನಿಮ್ಮ ಸ್ವಂತ ವಿವೇಚನೆಗೆ ಬಿಟ್ಟಿದ್ದು.)
ವಿಭಾಗ