Belly Fat: ಹೊಟ್ಟೆಯ ಬೊಜ್ಜು ಕರಗಿಸಬೇಕಾ? ಹಾಗಾದ್ರೆ ಮನೆಯಲ್ಲಿಯೇ ಮಾಡಬಹುದಾದ 5 ಸುಲಭದ ವ್ಯಾಯಾಮಗಳು ಇಲ್ಲಿವೆ
Weight loss Exercises: ಹೊಟ್ಟೆಯ ಭಾಗದಲ್ಲಿನ ಬೊಜ್ಜು ಕರಗಿಸುವುದು ಸ್ವಲ್ಪ ಕಷ್ಟವೇ ಆದರೂ ಅಸಾಧ್ಯವಂತೂ ಅಲ್ಲ. ಇಲ್ಲಿ ಹೇಳಿರುವ ಸುಲಭದ ವ್ಯಾಯಾಮಗಳನ್ನು ತಪ್ಪದೇ ಮಾಡಿ. ಹೊಟ್ಟೆಯ ಸುತ್ತ ಬೆಳೆದಿರುವ ಬೊಜ್ಜನ್ನು ಸುಲಭವಾಗಿ ಕರಗಿಸಿಕೊಳ್ಳಿ.
ಇತ್ತೀಚಿನ ದಿನಗಳಲ್ಲಿ ಬೊಜ್ಜು ಎಲ್ಲ ವಯಸ್ಸಿನವರನ್ನು ಕಾಡುವ ಬಹು ದೊಡ್ಡಸಮಸ್ಯೆ ಎಂದರೂ ತಪ್ಪಾಗಲಾರದು. ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆ ಇವೆಲ್ಲವೂ ಅಧಿಕ ಪ್ರಮಾಣದಲ್ಲಿ ದೇಹಕ್ಕೆ ಸೇರಿ ಬೊಜ್ಜಿಗೆ ಕಾರಣವಾಗಿದೆ. ಸೂಕ್ಷ್ಮವಾಗಿ ಗಮನಿಸಿದರೆ ವ್ಯಾಯಾಮಗಳಲ್ಲಿದ, ಒತ್ತಡದಿಂದ ಕೂಡಿದ ಅನಾರೋಗ್ಯಕರ ಜೀವನಶೈಲಿಯೂ ಇದಕ್ಕೆ ಪ್ರಮುಖ ಕಾರಣ ಅನ್ನಬಹುದು. ಬೊಜ್ಜು ಸಾಮಾನ್ಯವಾಗಿ ಹೊಟ್ಟೆಯ ಸುತ್ತ ಹೆಚ್ಚಾಗಿ ಕಾಣಿಸುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯದ ಕಾಯಿಲೆಗಳಂತ ಅನೇಕ ರೋಗಗಳಿಗೆ ಬೊಜ್ಜು ಕಾರಣವಾಗಿದೆ. ಡಯಟ್ ಮಾಡಿಯೂ ಸಹ ಬೊಜ್ಜು ಕರಗಿಸಲು ಕಷ್ಟಪಡುವವರಿದ್ದಾರೆ. ಅದಕ್ಕೆ ದಿನಚರಿಯಲ್ಲಿ ದೈಹಿಕ ವ್ಯಾಯಾಮ ಮಾಡುವುದು ಅಷ್ಟೇ ಅಗತ್ಯವಾಗಿದೆ. ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ. ದಿನನಿತ್ಯ ನಿಯಮಿತವಾಗಿ ಸುಲಭದ ವ್ಯಾಯಾಮಗಳನ್ನು ಮಾಡುವುದರಿಂದಲೂ ಹೊಟ್ಟೆಯ ಸುತ್ತ ಬೆಳದಿರುವ ಕೊಬ್ಬನ್ನು ವೇಗವಾಗಿ ಕರಗಿಸಿಕೊಳ್ಳಬಹುದು. ಬೆಲ್ಲಿ ಫ್ಯಾಟ್ ಕರಗಿಸಲು ಸುಲಭದ ವ್ಯಾಯಾಮಗಳು ಇಲ್ಲಿವೆ. ಇವುಗಳನ್ನು ಖಂಡಿತ ಪ್ರಯತ್ನಿಸಿ, ಬೊಜ್ಜು ಕರಗಿಸಿಕೊಳ್ಳಿ.
ಬೊಜ್ಜು ಕರಗಿಸಲು ನೆರವಾಗುವ ಸುಲಭದ ವ್ಯಾಯಾಮಗಳು
ಈ ವ್ಯಾಯಾಮಗಳು ದೇಹದಲ್ಲಿ ಶೇಖರಣೆಗೊಂಡಿರುವ ಕ್ಯಾಲೋರಿಗಳನ್ನು ಕರಗಿಸಿ, ಹೊಟ್ಟೆಯ ಸುತ್ತ ಬೆಳೆದಿರುವ ಕೊಬ್ಬನ್ನು ಅಷ್ಟೇ ವೇಗವಾಗಿ ಕರಗಿಸಬಲ್ಲದು.
1. ರಷ್ಯನ್ ಟ್ವಿಸ್ಟ್
ಇದು ಹೊಟ್ಟೆಯ ಬೊಜ್ಜು ಕರಗಿಸಲು ಬಹಳ ಸುಲಭದ ವ್ಯಾಯಾಮವಾಗಿದೆ. ಭುಜ ಮತ್ತು ಹೊಟ್ಟೆಯನ್ನು ತಿರುಗಿಸುವ ವ್ಯಾಯಾಮವಾದ್ದರಿಂದ ಹೊಟ್ಟೆಯ ಸುತ್ತ ಬೆಳೆದಿರುವ ಬೊಜ್ಜನ್ನು ಕರಗಿಸುತ್ತದೆ. ನಿರಂತರವಾಗಿ ಕೆಲವು ಸಮಯದವರೆಗೆ ಹೊಟ್ಟೆಯ ಸ್ನಾಯುಗಳನ್ನು ತಿರುಗಿಸುವುದರಿಂದ ಚಲನೆ ದೊರೆತು ಕ್ಯಾಲೋರಿ ಕರಗುತ್ತದೆ.
2. ಬರ್ಪೀಸ್
ಈ ವ್ಯಾಯಾಮ ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಕೊಬ್ಬು ಕರಗಿಸಲು ಬೆಸ್ಟ್ ವ್ಯಾಯಾಮ ಇದಾಗಿದೆ. ಇದರಲ್ಲಿ 4 ಹಂತಗಳಿದ್ದು, ಕಾಲುಗಳ ಮೇಲೆ ಕುಳಿತುಕೊಳ್ಳುವುದು, ಪುಶ್ ಅಪ್ ರೀತಿಯ ಭಂಗಿ, ಕೈ ಮತ್ತು ಕಾಲುಗಳನ್ನು ಬಾಗಿಸುವುದು, ನಂತರ ನೇರವಾಗಿ ನಿಲ್ಲುವುದಾಗಿದೆ. ಈ ವ್ಯಾಯಾಮದಿಂದ ಬಹಳ ಬೇಗ ತೂಕ ಕಡಿಮೆ ಮಾಡಿಕೊಳ್ಳಬಹುದಾಗಿದೆ.
3. ಟರ್ಕಿಶ್ ಗೆಟ್–ಅಪ್
ಇದು ತೂಕ ಕಳೆದುಕೊಳ್ಳಲು ಬೆಸ್ಟ್ ವ್ಯಾಯಾಮ ಎಂದೇ ಹೆಸರು ಪಡೆದುಕೊಂಡಿದೆ. ಒಂದು ಕೈಯಲ್ಲಿ ವೇಟ್ ಹಿಡಿದುಕೊಂಡು ಮತ್ತೊಂದು ಕೈಯನ್ನು ನೆಲಕ್ಕೆ ಆಧಾರವಾಗಿರಿಸಿ ಮೇಲಕ್ಕೆ ಏಳಲು ಪ್ರಯತ್ನಿಸುವ ರೀತಿಯಲ್ಲಿ ಮಾಡುವ ವ್ಯಾಯಾಮವಾಗಿದೆ. ಇದರಲ್ಲಿ ಸಂಪೂರ್ಣ ದೇಹ ಭಾಗಿಯಾಗುವುದರಿಂದ ಬೇಗನೆ ಬೊಜ್ಜು ಕರಗಿಸಿಬಹುದು.
4. ಯೋಗ
ಯೋಗಾಸನಗಳು ಪುರಾತನ ಕಾಲದಿಂದಲೂ ಸುರಕ್ಷಿತ ಮತ್ತು ಪರಿಣಾಮಕಾರಿಯಾದ ವ್ಯಾಯಾಮವಾಗಿದ್ದು, ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಲು ಉತ್ತಮವಾಗಿದೆ.
5. ವಾಕಿಂಗ್
ಇದೊಂದು ಏರೋಬಿಕ್ ವ್ಯಾಯಾಮವಾಗಿದ್ದು, ಸೊಂಟ ಮತ್ತು ಕೆಳಹೊಟ್ಟೆಯ ಸುತ್ತ ಬೆಳೆದಿರುವ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ತೂಕ ಕಡಿಮೆಯಾಗುವುದರ ಜೊತೆಗೆ ಅನೇಕ ರೋಗಗಳಿಂದಲೂ ದೂರವಿರಬಹುದು.