Weight Loss: ಪ್ರತಿದಿನ ರಾತ್ರಿ ಊಟದ ಹೊತ್ತು ಇದನ್ನು ತಿನ್ನುವ ಅಭ್ಯಾಸ ಮಾಡಿ, ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: ಪ್ರತಿದಿನ ರಾತ್ರಿ ಊಟದ ಹೊತ್ತು ಇದನ್ನು ತಿನ್ನುವ ಅಭ್ಯಾಸ ಮಾಡಿ, ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗುತ್ತೆ

Weight Loss: ಪ್ರತಿದಿನ ರಾತ್ರಿ ಊಟದ ಹೊತ್ತು ಇದನ್ನು ತಿನ್ನುವ ಅಭ್ಯಾಸ ಮಾಡಿ, ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗುತ್ತೆ

ತೂಕ ಇಳಿಸೋದು, ಹೊಟ್ಟೆಯ ಬೊಜ್ಜು ಕರಗಿಸೋದು ಇತ್ತೀಚಿನ ದಿನಗಳಲ್ಲಿ ಸವಾಲಾಗಿರುವುದು ಸುಳ್ಳಲ್ಲ. ಹಾಗಂತ ಇದೇನು ಅಸಾಧ್ಯ ಅಂತಲ್ಲ. ಈ ಒಂದು ರೆಸಿಪಿಯನ್ನು ನೀವು ರಾತ್ರಿ ಊಟ ಸಮಯದಲ್ಲಿ ತಿಂದ್ರೆ ವಾರಗಳಲ್ಲಿ ಬೊಜ್ಜು ಕರಗುತ್ತೆ, ಬೇಕಿದ್ರೆ ಟ್ರೈ ಮಾಡಿ.

ಪ್ರತಿದಿನ ರಾತ್ರಿ ಊಟಕ್ಕೆ ಇದನ್ನು ತಿನ್ನುವ ಅಭ್ಯಾಸ ಮಾಡಿ, ವಾರದಲ್ಲಿ ಹೊಟ್ಟೆ ಬೊಜ್ಜು ಕರಗಿಸಿ
ಪ್ರತಿದಿನ ರಾತ್ರಿ ಊಟಕ್ಕೆ ಇದನ್ನು ತಿನ್ನುವ ಅಭ್ಯಾಸ ಮಾಡಿ, ವಾರದಲ್ಲಿ ಹೊಟ್ಟೆ ಬೊಜ್ಜು ಕರಗಿಸಿ

ಇಂದಿನ ದಿನಮಾನದಲ್ಲಿ ತೂಕ ಹೆಚ್ಚಾಗುವುದು ಎಲ್ಲರಿಗೂ ತಲೆನೋವಾಗಿ ಪರಿಣಮಿಸಿದೆ. ಜಡ ಜೀವನಶೈಲಿ, ಅಸಮತೋಲಿತ ಆಹಾರ ಪದ್ಧತಿ, ಜಂಕ್ ಫುಡ್‌ಗಳ ಅತಿಯಾದ ಸೇವನೆ, ದಿನವಿಡೀ ಕುಳಿತು ಕೆಲಸ ಮಾಡುವುದು ಈ ಹಲವು ಕಾರಣದಿಂದ ದೇಹದಲ್ಲಿ ಬೊಜ್ಜು ಬೆಳೆಯುತ್ತಿದೆ, ಅಲ್ಲದೇ ಹಲವರು ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಹದಲ್ಲಿ ಬೊಜ್ಜು ಕಡಿಮೆಯಾಗಿ, ತೂಕ ಇಳಿಬೇಕು ಅಂದ್ರೆ ಗಂಟೆಗಟ್ಟಲೆ ಜಿಮ್‌ನಲ್ಲಿ ವರ್ಕೌಟ್‌ ಮಾಡಬೇಕು ಅಂತ ಹಲವರು ಭಾವಿಸುತ್ತಾರೆ. ಕೆಲವು ತೂಕ ಕಡಿಮೆಯಾಗಲು ದುಬಾರಿ ವೈಟ್‌ ಲಾಸ್‌ ಸಪ್ಲಿಮೆಂಟ್ಸ್‌ ಅನ್ನೂ ಸೇವಿಸುತ್ತಾರೆ. ಕೆಲವೊಮ್ಮೆ ಡಯೆಟ್‌ ಹೆಸರಿನಲ್ಲಿ ಹಸಿವಿನಿಂದ ಪರದಾಡುತ್ತಾರೆ. ಇಷ್ಟೆಲ್ಲಾ ಮಾಡಿದ್ರೂ ತೂಕ ಕಡಿಮೆ ಆಗುವ ಪ್ರಮಾಣ ಮಾತ್ರ ಇಷ್ಟೇ. ತೂಕ ಇಳಿಸಿಕೊಳ್ಳಲು ಬಯಸುವವರು ತುಂಬಾ ಆರೋಗ್ಯಕರ ರೀತಿಯಲ್ಲಿ ತೂಕ ಕಡಿಮೆ ಮಾಡಲು ಪ್ರಯತ್ನಿಸಬೇಕು. ಇಲ್ಲಿ ನಾವು ನಿಮಗೆ ತೂಕ ಇಳಿಸುವ ರೆಸಿಪಿಯೊಂದನ್ನು ಹೇಳುತ್ತಿದ್ದೇವೆ. ಅದು ಒಂದು ವಾರದೊಳಗೆ ಸಾಕಷ್ಟು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ತಯಾರಿಸುವುದು ಕೂಡ ತುಂಬಾ ಸುಲಭ. ಜೊತೆಗೆ ಇದು ಸಖತ್‌ ಟೇಸ್ಟಿ ರೆಸಿಪಿ ತೂಕ ಹೌದು. 

ಬೊಜ್ಜು ಕರಗಿಸುವ ರೆಸಿಪಿ ತಯಾರಿಸುವುದು 

ಈ ತೂಕ ಇಳಿಸುವ ರೆಸಿಪಿಯನ್ನು ತಯಾರಿಸಲು ಒಂದು ಈರುಳ್ಳಿ, ಎರಡು ಟೊಮೆಟೊ, ಎಲೆಕೋಸು, ಕ್ಯಾಪ್ಸಿಕಂ, ಕ್ಯಾರೆಟ್ ಅಗತ್ಯವಿದೆ. ಅವುಗಳಲ್ಲಿ ಎಲೆಕೋಸು ಪ್ರಮುಖವಾಗಿದೆ. ಬೇರೆ ಯಾವುದೇ ತರಕಾರಿಗಳು ಇಲ್ಲದಿದ್ದರೂ ಎಲೆಕೋಸು ಖಂಡಿತವಾಗಿ ಇರಲೇಬೇಕು. ಈಗ ಈ ಎಲ್ಲಾ ತರಕಾರಿಗಳನ್ನು ತೊಳೆದು ಚಿಕ್ಕದಾಗಿ ಕತ್ತರಿಸಿ. ಕುಕ್ಕರ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ. ಸ್ವಲ್ಪ ಬಿಸಿಯಾದ ನಂತರ ಅದಕ್ಕೆ ಈರುಳ್ಳಿ ಸೇರಿಸಿ. ಈರುಳ್ಳಿಯನ್ನು ಒಂದೆರಡು ನಿಮಿಷಗಳ ಕಾಲ ಫ್ರೈ ಮಾಡಿ ಮತ್ತು ನಂತರ ಕ್ರಮೇಣ ಉಳಿದ ತರಕಾರಿಗಳನ್ನು ಸೇರಿಸಿ. ಈಗ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಹಾಕಿ. ನಂತರ ನೀರು ಸೇರಿಸಿ. ಇದನ್ನು 15 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ. ಈಗ ನಿಮ್ಮ ಮುಂದೆ ರುಚಿಕರವಾದ ರೆಸಿಪಿ ಸಿದ್ಧ. ಇದು ಸೂಪ್‌ ರೀತಿಯ ರೆಸಿಪಿ. ಇದನ್ನು ಬೆಚ್ಚಗಿರುವಾಗಲೇ ಸೇವಿಸಬೇಕು. ಪ್ರತಿದಿನ ರಾತ್ರಿಯ ಊಟಕ್ಕೆ ಇದನ್ನೇ ತಿನ್ನಲು ಪ್ರಯತ್ನಿಸಿ. ಒಂದು ವಾರದಲ್ಲಿ ನೀವು ಉತ್ತಮ ಬದಲಾವಣೆಯನ್ನು ನೋಡುತ್ತೀರಿ. ಏಳು ದಿನಗಳಲ್ಲಿ ಸಾಕಷ್ಟು ತೂಕ ಕಡಿಮೆಯಾಗುವುದು ಖಚಿತ. ರುಚಿಗೆ ಬದಲಾಗಿ ಆರೋಗ್ಯಕರ ಆಹಾರಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳಿ.

ಈ ರೆಸಿಪಿಯ ಇನ್ನಿತರ ಪ್ರಯೋಜನಗಳು 

ಈ ಪಾಕವಿಧಾನವನ್ನು ನಿಮ್ಮ ಊಟದೊಂದಿಗೆ ಸೇರಿಸಿಕೊಳ್ಳಬಹುದು. ಆದರೆ ಊಟದ ಹೊತ್ತಿಗೆ ಇದನ್ನೇ ತಿನ್ನುವುದು ಹೆಚ್ಚು ಪರಿಣಾಮಕಾರಿ. ನೀವು ವೇಗವಾಗಿ ತೂಕ ಇಳಿಸಿಕೊಳ್ಳಲು ಯೋಜಿಸುತ್ತಿದ್ದರೆ, ಒಂದು ವಾರದವರೆಗೆ ರಾತ್ರಿಯ ಊಟಕ್ಕೆ ಈ ತೂಕ ಕಡಿಮೆ ಮಾಡುವ ಈ ರೆಸಿಪಿಯನ್ನು ಸೇವಿಸಿ ನೋಡಿ. ನೀವು ಎಷ್ಟು ಬೇಕಾದರೂ ತಿನ್ನಬಹುದು. ಇದು ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಸುಡುತ್ತದೆ.

ಒಂದು ವಾರಗಳ ಕಾಲ ಈ ರೆಸಿಪಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ನಿಮಗೆ ಹಲವಾರು ಪ್ರಯೋಜನಗಳು ಸಿಗುತ್ತವೆ. ಇದು ತೂಕ ಇಳಿಕೆಯ ಜೊತೆಗೆ ಹೊಟ್ಟೆಯ ಸುತ್ತಲಿನ ಬೊಜ್ಜ ಕರಗಲು ಕೂಡ ಸಹಾಯ ಮಾಡುತ್ತದೆ. ಈ ತರಕಾರಿಯಲ್ಲಿರುವ ಉತ್ಕರ್ಷಣ ನಿರೋಧಕಗಳ ಕಾರಣದಿಂದಾಗಿ, ನಿಮ್ಮ ಚರ್ಮವು ಹೊಳೆಯಲು ಪ್ರಾರಂಭಿಸುತ್ತದೆ. ದೇಹದ ಒಟ್ಟಾರೆ ಆರೋಗ್ಯಕ್ಕೆ ಇದು ತುಂಬಾ ಪ್ರಯೋಜನಕಾರಿ.

Whats_app_banner