Sunflower Seeds: ರೋಗನಿರೋಧಕ ಶಕ್ತಿ ಹೆಚ್ಚಳದಿಂದ ಕ್ಯಾನ್ಸರ್ ತಡೆಗಟ್ಟುವವರೆಗೆ: ಸೂರ್ಯಕಾಂತಿ ಬೀಜಗಳಿಂದ ಸಿಗುತ್ತದೆ ಹಲವು ಪ್ರಯೋಜನ-health tips from boosting immunity to preventing cancer sunflower seeds benefits ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Sunflower Seeds: ರೋಗನಿರೋಧಕ ಶಕ್ತಿ ಹೆಚ್ಚಳದಿಂದ ಕ್ಯಾನ್ಸರ್ ತಡೆಗಟ್ಟುವವರೆಗೆ: ಸೂರ್ಯಕಾಂತಿ ಬೀಜಗಳಿಂದ ಸಿಗುತ್ತದೆ ಹಲವು ಪ್ರಯೋಜನ

Sunflower Seeds: ರೋಗನಿರೋಧಕ ಶಕ್ತಿ ಹೆಚ್ಚಳದಿಂದ ಕ್ಯಾನ್ಸರ್ ತಡೆಗಟ್ಟುವವರೆಗೆ: ಸೂರ್ಯಕಾಂತಿ ಬೀಜಗಳಿಂದ ಸಿಗುತ್ತದೆ ಹಲವು ಪ್ರಯೋಜನ

ಸೂರ್ಯಕಾಂತಿಯಿಂದ ಎಣ್ಣೆಯನ್ನು ತಯಾರಿಸಲಾಗುತ್ತದೆ. ಅಷ್ಟೇ ಅಲ್ಲ ಸೂರ್ಯಕಾಂತಿ ಬೀಜಗಳು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ದೇಹಕ್ಕೆ ಶಕ್ತಿ ನೀಡುವುದಲ್ಲದೆ, ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಹಾಗಿದ್ದರೆ, ಸೂರ್ಯಕಾಂತಿ ಬೀಜದ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಯಿರಿ. (ಬರಹ: ಪ್ರಿಯಾಂಕ)

ಸೂರ್ಯಕಾಂತಿ ಬೀಜದ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಯಿರಿ.
ಸೂರ್ಯಕಾಂತಿ ಬೀಜದ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಯಿರಿ.

ಭಾರತದಲ್ಲಿ ಕೆಲವೆಡೆ ಸೂರ್ಯಕಾಂತಿ ಹೂವುಗಳನ್ನು ಬೆಳೆಯಲಾಗುತ್ತದೆ. ಕೆಲವರು ಸೂರ್ಯಕಾಂತಿ ಎಣ್ಣೆಗಾಗಿ ಬೆಳೆದರೆ ಇನ್ನೂ ಕೆಲವರು ಅದರ ಬೀಜಗಳಿಗಾಗಿ ಬೆಳೆಯುತ್ತಾರೆ. ಸೂರ್ಯಕಾಂತಿಯ ಹಿಂಭಾಗವು ಹಳದಿ ಬಣ್ಣಕ್ಕೆ ತಿರುಗಿದಾಗ, ಸೂರ್ಯಕಾಂತಿ ಬೀಜಗಳನ್ನು ಕೊಯ್ಲು ಮಾಡಲಾಗುತ್ತದೆ. ಆರೋಗ್ಯಕ್ಕೆ ಸೂರ್ಯಕಾಂತಿ ಬೀಜ ಬಹಳ ಉತ್ತಮ ಎಂದು ಪರಿಗಣಿಸಲ್ಪಟ್ಟಿದೆ. ಸೂರ್ಯಕಾಂತಿ ಬೀಜವು ಪೌಷ್ಠಿಕಾಂಶಗಳಲ್ಲಿ ಸಮೃದ್ಧವಾಗಿದೆ. ಆರೋಗ್ಯಕರ ದಿನವನ್ನು ಪ್ರಾರಂಭಿಸಲು ಸೂರ್ಯಕಾಂತಿ ಬೀಜಗಳು ಒಂದು ಪರಿಪೂರ್ಣ ಮಾರ್ಗವಾಗಿದೆ. ಬೆಳಗ್ಗಿನ ತಿಂಡಿಗೆ ಸೂರ್ಯಕಾಂತಿ ಬೀಜವನ್ನು ಸೇವಿಸುವುದರಿಂದ ದೇಹಕ್ಕೆ ಅಗಾಧ ಪೋಷಕಾಂಶಗಳು ದೊರಕುತ್ತವೆ. ಹಾಗಿದ್ದರೆ ಇವುಗಳ ಪ್ರಯೋಜನದ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ..

ಸೂರ್ಯಕಾಂತಿ ಬೀಜಗಳ ಪ್ರಯೋಜನಗಳು

ಆರೋಗ್ಯಕರ ಕೊಬ್ಬು: ಸೂರ್ಯಕಾಂತಿ ಬೀಜಗಳು ಆರೋಗ್ಯಕರ ಕೊಬ್ಬಿನ ಸಮೃದ್ಧ ಮೂಲವಾಗಿದೆ. ದೇಹಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳನ್ನು ಇದು ಹೊಂದಿವೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು, ಉರಿಯೂತ, ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ಜೀವಸತ್ವಗಳು ಮತ್ತು ಖನಿಜಗಳು: ಸೂರ್ಯಕಾಂತಿ ಬೀಜಗಳು ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿವೆ. ಅದರಲ್ಲೂ ವಿಶೇಷವಾಗಿ ವಿಟಮಿನ್ ಇ ಯಲ್ಲಿ ಸಮೃದ್ಧವಾಗಿರುವ ಸೂರ್ಯಕಾಂತಿ ಬೀಜವು ಉತ್ಕರ್ಷಣ ನಿರೋಧಕವಾಗಿದ್ದು, ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಾಗೆಯೇ ಪ್ರತಿರಕ್ಷಣಾ ಕಾರ್ಯವನ್ನು ಬೆಂಬಲಿಸುವುದು ಮಾತ್ರವಲ್ಲದೆ ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ. ಮೆದುಳಿನ ಬುದ್ಧಿಶಕ್ತಿ ಹೆಚ್ಚಾಗಲು ಮತ್ತು ಜ್ಞಾಪಕಶಕ್ತಿ ಅಧಿಕವಾಗಲು ಕೂಡ ಇದು ಸಹಕಾರಿಯಾಗಿದೆ.

ಜೀರ್ಣಕ್ರಿಯೆಗೆ ಸಹಕಾರಿ: ಸೂರ್ಯಕಾಂತಿ ಬೀಜಗಳು ಆಹಾರದ ಫೈಬರ್ ಅನ್ನು ಒದಗಿಸುತ್ತವೆ. ಇದು ಜೀರ್ಣಕಾರಿ ಆರೋಗ್ಯಕ್ಕೆ ಮುಖ್ಯವಾಗಿದೆ. ಫೈಬರ್ ಕರುಳಿನ ಚಲನೆಯನ್ನು ನಿಯಂತ್ರಿಸಲು, ಮಲಬದ್ಧತೆಯನ್ನು ತಡೆಯಲು ಮತ್ತು ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮಲಬದ್ಧತೆ ಸೇರಿದಂತೆ ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುವವರು ಸೂರ್ಯಕಾಂತಿ ಬೀಜವನ್ನು ಸೇವನೆ ಮಾಡಬಹುದು.

ರೋಗನಿರೋಧಕ ಶಕ್ತಿ ಹೆಚ್ಚಳ: ಸೂರ್ಯಕಾಂತಿ ಬೀಜಗಳಲ್ಲಿ ಜಿಂಕ್ ಅಂಶ ಇರುವುದರಿಂದ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅಲ್ಲದೆ, ಸೂರ್ಯಕಾಂತಿಯ ಬೀಜಗಳಲ್ಲಿ ಸೆಲೆನಿಯಮ್ ಮತ್ತು ಇನ್ನಿತರ ವಿಟಮಿನ್ ಅಂಶಗಳಿವೆ. ಇದು ದೇಹಕ್ಕೆ ಎದುರಾಗುವ ಸೋಂಕುಗಳನ್ನು ನಿವಾರಣೆ ಮಾಡುತ್ತದೆ. ಒಟ್ಟಾರೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಇದು ಸಹಕಾರಿಯಾಗಿದೆ.

ಕ್ಯಾನ್ಸರ್ ನಿಯಂತ್ರಣ: ಕ್ಯಾನ್ಸರ್ ಎಂಬ ಮಹಾಮಾರಿಯನ್ನು ತಡೆಗಟ್ಟಲು ಸೂರ್ಯಕಾಂತಿ ಬೀಜಗಳು ಸಹಕಾರಿಯಾಗಿದೆ. ಸೂರ್ಯಕಾಂತಿ ಬೀಜಗಳಲ್ಲಿ ಸ್ತನ ಕ್ಯಾನ್ಸರ್ ಸೇರಿದಂತೆ ಹಲವು ಬಗೆಯ ಕ್ಯಾನ್ಸರ್ ಸಮಸ್ಯೆಗಳನ್ನು ತಡೆಗಟ್ಟುವ ಅಂಶಗಳಿವೆ. ಇದು ದೇಹದ ಯಾವುದೇ ಭಾಗದಲ್ಲಿ ಗಡ್ಡೆ ಉಂಟಾಗದಂತೆ ತಡೆಯುತ್ತವೆ.

ಉಪಹಾರದಲ್ಲಿ ಸೂರ್ಯಕಾಂತಿ ಬೀಜಗಳನ್ನು ಸೇರಿಸುವುದು ಹೇಗೆ?

ಬೆಳಗ್ಗಿನ ದಿನಚರಿಯಲ್ಲಿ ಸೂರ್ಯಕಾಂತಿ ಬೀಜಗಳನ್ನು ಸೇರಿಸುವುದು ತುಂಬಾನೇ ಸಿಂಪಲ್. ಮೊಸರು ಅಥವಾ ಓಟ್‌ಮಿಲ್‌ನ ಮೇಲೆ ಸೂರ್ಯಕಾಂತಿ ಬೀಜಗಳನ್ನು ಹಾಕಿ ಸೇವಿಸಬಹುದು. ಅಥವಾ ಇವುಗಳನ್ನು ಸ್ಮೂಥಿಗಳಾಗಿ ಮಿಶ್ರಣ ಮಾಡಬಹುದು. ಕೇವಲ ಸೂರ್ಯಕಾಂತಿ ಬೀಜಗಳನ್ನಷ್ಟೇ ಸೇವಿಸಲೂಬಹುದು. ಡ್ರೈಫ್ರೂಟ್ಸ್, ಬಾದಾಮಿ ಹಾಲಿನ ಮಿಶ್ರಣದೊಂದಿಗೆ ಸೂರ್ಯಕಾಂತಿ ಬೀಜವನ್ನು ಸೇರಿಸಿ ಸವಿಯಬಹುದು.