Self Defense Techniques: ಹೆಣ್ಣು ಮಕ್ಕಳಿಗೆ ತಿಳಿದಿರಲೇಬೇಕಾದ ಸ್ವಯಂ ರಕ್ಷಣಾ ತಂತ್ರಗಳಿವು, ಅಪಾಯ ಬಂದಾಗ ಈ ರೀತಿ ಎದುರಿಸಿ-here are self defense techniques girls should know how to deal with danger situation smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Self Defense Techniques: ಹೆಣ್ಣು ಮಕ್ಕಳಿಗೆ ತಿಳಿದಿರಲೇಬೇಕಾದ ಸ್ವಯಂ ರಕ್ಷಣಾ ತಂತ್ರಗಳಿವು, ಅಪಾಯ ಬಂದಾಗ ಈ ರೀತಿ ಎದುರಿಸಿ

Self Defense Techniques: ಹೆಣ್ಣು ಮಕ್ಕಳಿಗೆ ತಿಳಿದಿರಲೇಬೇಕಾದ ಸ್ವಯಂ ರಕ್ಷಣಾ ತಂತ್ರಗಳಿವು, ಅಪಾಯ ಬಂದಾಗ ಈ ರೀತಿ ಎದುರಿಸಿ

Self Defense Techniques: ಹೆಣ್ಣುಮಕ್ಕಳಿಗೆ ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿದಿರಲೇಬೇಕು. ಯಾಕೆಂದರೆ ಇಂದಿನ ಸಮಾಜದಲ್ಲಿ ಹೆಚ್ಚಿನ ಆತಂಕ ಇರುವುದು ಹೆಣ್ಣುಮಕ್ಕಳಿಗೆ. ಅನಿರೀಕ್ಷಿತ ಅಟ್ಯಾಕ್ ಆದಾಗ ಏನು ಮಾಡಬೇಕು ಎಂಬುದು ಇಲ್ಲಿದೆ.

ಸ್ವಯಂ ರಕ್ಷಣಾ ತಂತ್ರ
ಸ್ವಯಂ ರಕ್ಷಣಾ ತಂತ್ರ

ನನಗೆ ಏನೂ ಆಗುವುದಿಲ್ಲ ಎಂದು ಧನಾತ್ಮಕವಾಗಿ ನೀವು ಆಲೋಚಿಸುತ್ತಾ ಇದ್ದರೆ ಅದು ಒಳ್ಳೆಯದೇ. ಆದರೆ ಅನಿರೀಕ್ಷತವಾಗಿ ನಿಮಗೆ ಯಾವುದಾದರೂ ಸವಾಲು ಬಂದರೆ ನೀವು ಅದನ್ನು ಎದುರಿಸಲು ರೆಡಿ ಇರಬೇಕು. ಹಾಗಾಗಿ ಕೆಲವು ಅಂಶಗಳನ್ನು ನೀವು ತಿಳಿದುಕೊಂಡಿರಲೇಬೇಕು. ಪ್ರತಿ ಹುಡುಗಿಯೂ ಅನಿರೀಕ್ಷಿತವಾಗಿ ಏನು ಬೇಕಾದರೂ ಎದುರಿಸಲು ಸಿದ್ಧವಾಗಿರಬೇಕು. ನೀವು ಯಾವುದೇ ದಾಳಿಯನ್ನು ಎದುರಿಸಲು ಶಕ್ತರಾಗಿರಬೇಕು. ಅಂತಹ ಸಮಯದಲ್ಲಿ ನಿಮ್ಮನ್ನು ಉಳಿಸುವ ಮತ್ತು ಸ್ವರಕ್ಷಣೆ ಮಾಡಿಕೊಳ್ಳುವ ತಂತ್ರಗಳ ಬಗ್ಗೆ ನಿಮಗೆ ತಿಳಿದಿದ್ದರೆ ಮಾತ್ರ ನೀವು ಅಲ್ಲಿಂದ ಬಚಾವ್ ಆಗಿ ಬರಲು ಸಾಧ್ಯವಾಗುತ್ತದೆ.

ತುರ್ತು ಪರಿಸ್ಥಿತಿಯಲ್ಲಿ ಆತ್ಮರಕ್ಷಣೆ

ಕಣ್ಣುಗಳನ್ನೇ ಟಾರ್ಗೆಟ್ ಮಾಡಿ:

ನಿಮ್ಮ ಮೇಲೆ ಯಾರಾದರೂ ದಾಳಿ ಮಾಡಿದರೆ ಅಂತಹ ಸಂದರ್ಭದಲ್ಲಿ ನೀವು ತಕ್ಷಣ ಅವರ ಕಣ್ಣುಗಳ ಮೇಲೆ ದಾಳಿ ಮಾಡಬೇಕು. ಕಣ್ಣಿಗೆ ಏನಾದರೂ ಕಾಣಿಸಿದರೆ ಮಾತ್ರ ಅವನು ದಾಳಿ ಮಾಡಲು ಸಾಧ್ಯವಾಗುತ್ತದೆ. ಆ ಕಾರಣಕ್ಕೆ ನೀವು ಆದಷ್ಟು ಮಾಡಿ ಅವನ ಕಣ್ಣುಗಳಿಗೆ ನಿಮ್ಮ ಬೆರಳನ್ನು ಹಾಕಿ ಏನಾದರೂ ಮಾಡಿ ಅವನಿಗೆ ನೋವಾಗುವ ರೀತಿ ಮಾಡಬೇಕು.

ಕಣ್ಣುಗಳ ಮೇಲೆ ದಾಳಿ ಮಾಡಬೇಕು.

ಕೈಗಳಿಂದ ದಾಳಿ ಮಾಡಲು ಅವಕಾಶವಿಲ್ಲದಿದ್ದರೆ ಅಂದರೆ ನಿಮ್ಮ ಕೈಗಳನ್ನು ಕಟ್ಟಿಹಾಕಿದ್ದರೆ, ಕಾಲುಗಳು ಅಥವಾ ಮೊಣಕಾಲುಗಳಿಂದ ಎರಡು ಕಾಲುಗಳ ನಡುವೆ ಬಲವಾಗಿ ಹೊಡೆಯಿರಿ. ಇದರಿಂದ ಅಪಾಯದಿಂದ ಪಾರಾಗಲು ಸಮಯ ಸಿಗುತ್ತದೆ.

ಗಂಟಲಿನ ಮೇಲೆ ಗಮನಕೊಡಿ

ಗಂಟಲಿನ ಮೇಲೆ ಬಲವಾಗಿ ಒತ್ತುವುದರಿಂದ ಅವರು ದುರ್ಬಲವಾಗುತ್ತಾರೆ. ತಪ್ಪಿಸಿಕೊಳ್ಳಲು ಅವಕಾಶ ಸಿಕ್ಕಂತಾಗುತ್ತದೆ. ನೀವು ಆಟೋ ಅಥವಾ ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಹಿಂದಿನ ಸೀಟಿನಲ್ಲಿದ್ದರೆ, ನಿಮಗೆ ಏನಾದರೂ ಅಪಾಯ ಅನಿಸಿದರೆ ನೀವು ಚಾಲಕನನ್ನು ನಿಲ್ಲಿಸಲು ಬಯಸಿದರೆ. ಅವರ ಶರ್ಟ್ ಕಾಲರ್ ಅನ್ನು ಹಿಡಿದು ಹಿಂದಕ್ಕೆ ಎಳೆಯಿರಿ. ಕಾಲರ್ ಗಂಟಲನ್ನು ಬಿಗಿಗೊಳಿಸುತ್ತದೆ ಮತ್ತು ಉಸಿರುಗಟ್ಟಿದಂತಾಗಿ ಗಾಡಿ ನಿಲ್ಲಿಸುತ್ತಾರೆ. ಕೂಡಲೇ ವಾಹನ ನಿಂತಾಗ ನೀವು ಅಲ್ಲಿಂದ ಓಡಿ ಹೋಗಿ ತಪ್ಪಿಸಿಕೊಳ್ಳಬಹುದು.

ಮೊಣಕೈ ಬಳಸಿ

ನಿಮ್ಮ ಆಕ್ರಮಣಕಾರನ ಮುಖ, ಮೂಗು ಮತ್ತು ದವಡೆಗಳನ್ನು ಮೊಣಕೈಗಳಿಂದ ಹೊಡೆಯಿರಿ. ಹೊಟ್ಟೆಯಲ್ಲಿ, ಪಕ್ಕೆಲುಬುಗಳ ಮೇಲೆ ಬಲವಾಗಿ ಹೊಡೆಯಿರಿ. ಇದು ನಿಮ್ಮನ್ನು ರಕ್ಷಿಸಿಕೊಳ್ಳಲು ಸಮಯಾವಕಾಶ ಮಾಡಿಕೊಡುತ್ತದೆ.

ಆತ್ಮ ವಿಶ್ವಾಸ

ನೀವು ಅಪಾಯದಲ್ಲಿದ್ದೀರಿ ಎಂದು ತಿಳಿದಿದ್ದರೆ, ನಿಮ್ಮ ಆತ್ಮ ವಿಶ್ವಾಸವು ನಿಮ್ಮನ್ನು ರಕ್ಷಿಸುತ್ತದೆ. ಧೈರ್ಯವಾಗಿ ನಿಲ್ಲಬೇಕು. ನಿಮ್ಮ ಕಣ್ಣುಗಳಲ್ಲಿ ಭಯವನ್ನು ತೋರಿಸಬೇಡಿ. ನಿಮ್ಮ ಮಾತುಗಳಲ್ಲಿ ನಡುಕ ಬೇಡ. ದೂರ ಹೋಗುವಂತೆ ಬಲವಾಗಿ ಖಂಡಿಸಿ. ನಿಮ್ಮ ಧೈರ್ಯವು ಇತರ ವ್ಯಕ್ತಿಯನ್ನು ಹೆದರಿಸುತ್ತದೆ.

ಯಾರಿಗಾದರೂ ಕಾಲ್ ಮಾಡಿ

ನಿಮಗೆ ಆ ಕ್ಷಣಕ್ಕೆ ಯಾರಿಗೆ ಕಾಲ್ ಮಾಡಬೇಕು ಎಂದು ತಿಳಿಯದೇ ಇದ್ದರೂ ಸಹ ಒಮ್ಮೆ ಸುಳ್ಳಾದರೂ ಯಾರೊಂದಿಗಾದರೂ ಮಾತನಾಡಿದಂತೆ ಮಾಡಿ. ನಿಮ್ಮ ಬಗ್ಗೆ ಎಲ್ಲಾ ಮಾಹಿತಿಯನ್ನು ಇತರ ವ್ಯಕ್ತಿಗೆ ನೀಡಿ. ನೀವು ಎಲ್ಲಿ ನಿಂತಿದ್ದೀರಿ ಎಂದು ಹೇಳಿ. ಯಾರಾದರೂ ನಿಮ್ಮೊಂದಿಗೆ ಇದ್ದಾರೆ ಎಂದು ಅವರಿಗೆ ತಿಳಿಸಿದರೆ ಅವರು ನಿಮ್ಮ ತಂಟೆಗೆ ಬರೋದಿಲ್ಲ. ವಾಹನದಲ್ಲಿ ಪ್ರಯಾಣಿಸುತ್ತಿದ್ದರೆ, ಗಾಡಿಯ ಸಂಖ್ಯೆಯನ್ನು ನೇರವಾಗಿ ಚಾಲಕನನ್ನು ಕೇಳಿ. ಫೋನ್‌ನಲ್ಲಿ ಯಾರಿಗಾದರೂ ಆ ಸಂಖ್ಯೆಯನ್ನು ಹೇಳಿ ಇದರಿಂದ ಅವರು ಹೆಚ್ಚಿನ ಅಪಾಯವನ್ನು ಉಂಟುಮಾಡುವುದಿಲ್ಲ. ಇದೆಲ್ಲವೂ ನಿಮ್ಮ ಮಾಹಿತಿಯನ್ನು ಯಾರಿಗಾದರೂ ನೀಡಲಾಗಿದೆ ಎಂದು ಇನ್ನೊಬ್ಬ ವ್ಯಕ್ತಿಗೆ ತಿಳಿಸುವ ಪರಿಯಾಗಿದೆ.

ಸುರಕ್ಷಿತ ಪ್ರದೇಶವನ್ನು ತಲುಪುವುದು ಹೇಗೆ?

ನಿಮಗೆ ಎರಡನೇ ಅವಕಾಶ ಸಿಕ್ಕರೆ, ಅಲ್ಲಿಂದ ಮುಂದೆ ಓಡಿ. ನಿಮ್ಮನ್ನು ರಕ್ಷಿಸಿಕೊಳ್ಳಲು, ಜನಸಂದಣಿ ಇರುವ ಸ್ಥಳಕ್ಕೆ, ಸಿಸಿಟಿವಿ ಕ್ಯಾಮೆರಾಗಳಿರುವ ಸ್ಥಳಕ್ಕೆ ಅಥವಾ ಪೊಲೀಸ್ ಅಥವಾ ಕಾವಲುಗಾರರಿರುವ ಸುರಕ್ಷಿತ ಸ್ಥಳಕ್ಕೆ ಹೋಗಿ. ಅದು ನಿಮ್ಮನ್ನು ರಕ್ಷಿಸಿಕೊಳ್ಳಲು ಸುಲಭವಾಗುತ್ತದೆ. ಪೆಟ್ರೋಲ್ ಬಂಕ್‌ಗಳು, ಎಟಿಎಂಗಳು ಇತ್ಯಾದಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹೊಂದಿರಬೇಕು. ಮುಂದೆ ಈ ಬಗ್ಗೆ ಸಾಕ್ಷಿ ಸಿಗುತ್ತದೆ ಎಂದಾದರೂ ಅವನಿಗೆ ಅನಿಸಬೇಕು.