ಏಸಿ ಆನ್ ಮಾಡ್ಕೊಂಡು ಮಲಗುವ ಅಭ್ಯಾಸ ನಿಮ್ಗೂ ಇದ್ಯಾ, ಇದ್ರಿಂದ ಖಂಡಿತ ಅಪಾಯವಿದೆ; ಟರ್ಕಿಯ ಮಹಿಳೆಗೆ ಆಗಿದ್ದೇನು ನೋಡಿ
ಟರ್ಕಿಯ ಮಹಿಳೆಯೊಬ್ಬರು ರಾತ್ರಿಯಿಡಿ ಏಸಿ ಆನ್ ಮಾಡ್ಕೊಂಡು ಮಲಗಿ, ಬೆಳಿಗ್ಗೆ ಎದ್ದಾಗ ಇಲ್ಲದ ಸಮಸ್ಯೆಗಳನ್ನು ಎದುರಿಸಿದ್ದಾರೆ. ಹಾಗಾಗಿ ಏಸಿ ಆನ್ ಮಾಡಿಕೊಂಡು ಮಲಗಬಾರದೇ, ಏಸಿಯಲ್ಲಿ ನಾವು ಎಷ್ಟು ಹೊತ್ತು ಸಮಯ ಕಳೆಯಬಹುದು, ಏಸಿ ಬಳಕೆಯ ಕುರಿತು ತಿಳಿಯಬೇಕಾದ ಮಾಹಿತಿಯಿದು.
ಬೇಸಿಗೆ ಕಾಲದಲ್ಲಿ ಏಸಿ ಇಲ್ಲದೇ ಇರುವುದು ಕಷ್ಟಸಾಧ್ಯ ಎನ್ನಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬಹುತೇಕರು ಏಸಿಗೆ ಅಡಿಕ್ಟ್ ಆಗಿರುವುದು ಸುಳ್ಳಲ್ಲ. ಹಲವರಿಗೆ ಏಸಿ ಇಲ್ಲ ಎಂದರೆ ರಾತ್ರಿ ನಿದ್ದೆ ಕೂಡ ಬರುವುದಿಲ್ಲ. ಏಸಿ ದೇಹವನ್ನು, ಮನೆಯವರ ವಾತಾವರಣ ಕೂಲ್ ಮಾಡುತ್ತೆ ನಿಜ, ಹಾಗಂತ ಇದು ಆರೋಗ್ಯಕ್ಕೆ ಖಂಡಿತ ಒಳ್ಳೆಯದಲ್ಲ.
ಟರ್ಕಿಯ ಅಂಟಲ್ಯದಲ್ಲಿ ಏಸಿ ಕೋಣೆಯಲ್ಲಿ ಮಲಗಿದ್ದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಅಸ್ವಥ್ಥರಾಗಿದ್ದಾರೆ. ಇಡೀ ರಾತ್ರಿ ಏಸಿಯಲ್ಲಿ ಮಲಗಿದ್ದ ಮಹಿಳೆ ಬೆಳಗೆದ್ದ ಕೂಡಲೇ ಇಲ್ಲದ ತೊಂದರೆಗಳನ್ನು ಅನುಭವಿಸಿದ್ದರು. ಈ ಸುದ್ದಿ ವೈರಲ್ ಆದಾಗಿನಿಂದ ಏಸಿ ಮಲಗುವುದು ಅಪಾಯವೇ ಎಂಬ ಯೋಚನೆ ಹಲವರ ತಲೆಯಲ್ಲಿ ಮೂಡುತ್ತಿದೆ.
ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ನಿರ್ದೇಶಕಿ ಡಾ ಮನಿಶಾ ಅರೋರಾ ಅವರ ಪ್ರಕಾರ, ರಾತ್ರಿಯ ಹವಾನಿಯಂತ್ರಣ ಕೊಠಡಿಯಲ್ಲಿ ಮಲಗುವುದು ನಮ್ಮ ದೇಹದ ಮೇಲೆ ಹಲವಾರು ಪರಿಣಾಮಗಳನ್ನು ಬೀರುತ್ತದೆ.
ʼಏಸಿ ಆನ್ ಇದ್ದಾಗ ಆರ್ದ್ರತೆ ಕಡಿಮೆ ಇರುತ್ತದೆ. ಇದರಿಂದ ಕಣ್ಣುಗಳು ಒಣಗುತ್ತವೆ. ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ. ಎಸಿಯಿಂದ ಉತ್ಪತ್ತಿಯಾಗುವ ತಂಪಾದ ಗಾಳಿಯು ಚರ್ಮದಿಂದ ತೇವಾಂಶವನ್ನು ತೆಗೆದುಹಾಕುತ್ತದೆ, ಶುಷ್ಕತೆಯನ್ನು ಉಂಟುಮಾಡುತ್ತದೆ. ಕಡಿಮೆ ಆರ್ದ್ರತೆ ಮತ್ತು ಪ್ರಸಾರವಾದ ಗಾಳಿಯಿಂದಾಗಿ ಉಸಿರಾಟದ ಸಮಸ್ಯೆಗಳ ಅಪಾಯವೂ ಹೆಚ್ಚಿದೆʼ ಎಂದು ಡಾ. ಮನೀಶಾ ಅರೋರಾ ಹೇಳುತ್ತಾರೆ.
ಹವಾನಿಯಂತ್ರಣಗಳು ಪರಿಸರಕ್ಕೆ ಹಾನಿಯನ್ನುಂಟುಮಾಡುತ್ತವೆ. ಏಸಿಯಿಂದ ಬಿಡುಗಡೆಯಾಗುವ ಹೈಡ್ರೋಫ್ಲೋರೋಕಾರ್ಬನ್‌ಗಳು, ಓಝೋನ್-ಸವಕಳಿಗೆ ಕಾರಣವಾಗುತ್ತಿರುವ ಮಾಲಿನ್ಯಕಾರಕಗಳು ಜಾಗತಿಕ ತಾಪಮಾನದ ಏರಿಕೆಗೆ ಕಾರಣವಾಗುತ್ತಿವೆ. ಇದು ಇದು ಹವಾಮಾನದ ಮೇಲೆ ಹೆಚ್ಚುವರಿ ಹೊರೆಯನ್ನು ಉಂಟುಮಾಡುತ್ತದೆ. ಹೈಡ್ರೋಫ್ಲೋರೋಕಾರ್ಬನ್‌ಗಳು ಪ್ರಬಲವಾದ ಹಸಿರುಮನೆ ಅನಿಲಗಳು ಮತ್ತು ಪರಿಸರ ಹಾನಿಗೆ ಕೊಡುಗೆ ನೀಡುತ್ತವೆ.
ಆರೋಗ್ಯಕ್ಕೆ ತೊಂದರೆ ಇರುವವರಿಗೆ ಇದರ ಪರಿಣಾಮ
ಅಸ್ತಮಾ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ) ಮತ್ತು ಬ್ರಾಂಕೈಟಿಸ್‌ನಂತಹ ಉಸಿರಾಟದ ತೊಂದರೆಗಳನ್ನು ಸಹ ಇದು ಉಲ್ಬಣಗೊಳಿಸಬಹುದು ಎಂದು ಡಾ ಅರೋರಾ ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ. ಫೈಬ್ರೊಮ್ಯಾಲಿಗಿಯ ಮತ್ತು ಸಂಧಿವಾತ ರೋಗಿಗಳಲ್ಲಿ, ಇದು ಸ್ನಾಯುಗಳ ಬಿಗಿತ ಮತ್ತು ಕೀಲು ನೋವುಗಳಿಗೆ ಕಾರಣವಾಗಬಹುದು. ಏಸಿ ಘಟಕಗಳನ್ನು ಸ್ವಚ್ಛ ಮಾಡದೇ ಇದ್ದರೆ ಧೂಳು ಸೇರಿದಂತೆ ಇತರ ಕಾರಣಗಳಿಂದ ಈಗಾಗಲೇ ತೊಂದರೆ ಹೊಂದಿರುವ ಜನರು ಇನ್ನಷ್ಟು ತೊಂದರೆ ಎದುರಿಸುತ್ತಾರೆ.
ʼಏಸಿಯಿಂದ ವ್ಯಕ್ತಿಗಳಲ್ಲಿ ಸೋಂಕುಗಳು ಮತ್ತು ಅಲರ್ಜಿಯ ಅಪಾಯವು ಹೆಚ್ಚಾಗಬಹುದು. ಏಸಿಯಲ್ಲಿ ಮಲಗಿದ ನಂತರ ತಲೆಭಾರ, ತಲೆನೋವು, ವಾಕರಿಕೆ ಮತ್ತು ಆಯಾಸವನ್ನು ಅನುಭವಿಸಬಹುದು. ಹವಾನಿಯಂತ್ರಣಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಸಾಮಾನ್ಯ ಸಮಸ್ಯೆಗಳಿಂದ ಕೆಲವೊಮ್ಮೆ ಹೃದಯರಕ್ತನಾಳದ ಸಮಸ್ಯೆಗಳು ಕೂಡ ಉಂಟುಮಾಡಬಹುದು. ಅದರಲ್ಲೂ ವಯಸ್ಸಾದವರು ಹಾಗೂ ಮಕ್ಕಳಲ್ಲಿ ಹೆಚ್ಚಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
ಹವಾನಿಯಂತ್ರಿತ ಕೋಣೆಯಲ್ಲಿ ಎಷ್ಟು ಸಮಯ ಕಳೆಯಬಹುದು
ಏಸಿ ಕೋಣೆಯಲ್ಲಿ ಒಂದು ನಿರ್ದಿಷ್ಟ ಸಮಯ ಕಳೆಯಬಹುದು. ಏಸಿಯಲ್ಲಿ ಅತಿ ಕಡಿಮೆ ಇರಿಸಿಕೊಳ್ಳುವುದು ಸರಿಯಲ್ಲ.
ಪರಿಸರದ ಪ್ರಭಾವವನ್ನು ಸಹ ನಾವು ಪರಿಗಣಿಸಬೇಕು, ಏಕೆಂದರೆ ಅತಿಯಾಗಿ ಏಸಿ ಬಳಸುವುದರಿಂದ ಹೆಚ್ಚು ವಿದ್ಯುತ್ ಬಳಕೆಗೆ ಕಾರಣವಾಗುತ್ತದೆ. ಇದು ಹೆಚ್ಚು ಹಸಿರುಮನೆ ಅನಿಲಗಳನ್ನು ಬಿಡುಗಡೆ ಮಾಡುತ್ತದೆ, ಭೂಮಿ ಬಿಸಿಯಾಗಲು ಕಾರಣವಾಗುತ್ತದೆ.
ಏಸಿ ಪರಿಣಾಮ ಕಡಿಮೆ ಮಾಡಲು ಆಗಾಗ ಏಸಿ ಇರುವ ಕೋಣೆಯಿಂದ ಹೊರ ಬರುವುದು, ನೈಸರ್ಗಿಕ ಗಾಳಿ ಹಾಗೂ ತಾಪಮಾನಕ್ಕೆ ಒಡ್ಡಿಕೊಳ್ಳುವುದು ಸೂಕ್ತವಾಗಿದೆ. ಹವಾನಿಯಂತ್ರಿತ ಕೋಣೆಯಲ್ಲಿ 2 ರಿಂದ 3 ಗಂಟೆಗಳ ಕಾಲ ಕಳೆದರೆ ಸಾಕು. ರಾತ್ರಿಯಲ್ಲಿ, ನೀವು 2 ರಿಂದ 3 ಗಂಟೆಗಳ ನಂತರ ಆಟೊಮೆಟಿಕ್ ಆಫ್ ಆಗುವಂತೆ ಸೆಟ್ಟಿಂಗ್ ಮಾಡಬಹುದು. 22 ರಿಂದ 26 ಡಿಗ್ರಿ ಸೆಲ್ಸಿಯಸ್‌ನಂತಹ ಆರಾಮದಾಯಕ ವ್ಯಾಪ್ತಿಯಲ್ಲಿ ತಾಪಮಾನವನ್ನು ನಿರ್ವಹಿಸುವುದು ಮತ್ತು ಆರ್ದ್ರತೆ(humidity levels) ಯ ಮಟ್ಟವನ್ನು ಶೇ 40 ರಿಂದ 60 ರ ನಡುವೆ ಇಡುವುದು ಸೂಕ್ತವಾಗಿದೆ. ಎಸಿಗಳಲ್ಲಿ HEPA ಫಿಲ್ಟರ್‌ಗಳನ್ನು ಬಳಸುವುದರಿಂದ ಧೂಳು ಮತ್ತು ಅಲರ್ಜಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವಿಭಾಗ