Recipe: ಗಣಪತಿಗೆ ಪ್ರಿಯವಾದ ಕಡಲೆ ಕಾಳಿನ ಉಸುಳಿ ಮಾಡುವ ವಿಧಾನ ಇಲ್ಲಿದೆ, ಚೌತಿಯಂದು ನೀವೂ ಗಣಪನಿಗೆ ನೈವೇದ್ಯ ಮಾಡಿ-how to make kadle usli recipe at home which called channa sundal cooking tips smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Recipe: ಗಣಪತಿಗೆ ಪ್ರಿಯವಾದ ಕಡಲೆ ಕಾಳಿನ ಉಸುಳಿ ಮಾಡುವ ವಿಧಾನ ಇಲ್ಲಿದೆ, ಚೌತಿಯಂದು ನೀವೂ ಗಣಪನಿಗೆ ನೈವೇದ್ಯ ಮಾಡಿ

Recipe: ಗಣಪತಿಗೆ ಪ್ರಿಯವಾದ ಕಡಲೆ ಕಾಳಿನ ಉಸುಳಿ ಮಾಡುವ ವಿಧಾನ ಇಲ್ಲಿದೆ, ಚೌತಿಯಂದು ನೀವೂ ಗಣಪನಿಗೆ ನೈವೇದ್ಯ ಮಾಡಿ

Kadle Usli Recipe: ನೀವು ಚೌತಿಯ ದಿನದಂದು ಗಣಪನಿಗೆ ನೈವೇದ್ಯ ಮಾಡಲು ಕಡಲೆ ಉಸುಳಿ ಮಾಡಿ. ಗಣಪತಿಗೆ ಪ್ರಿಯವಾದ ಕಡಲೆ ಕಾಳಿನ ಉಸುಳಿ ಮಾಡುವ ವಿಧಾನವನ್ನು ನಾವು ನಿಮಗಿಲ್ಲಿ ತಿಳಿಸಿದ್ದೇವೆ ಗಮನಿಸಿ. ಇದೇ ವಿಧಾನವನ್ನು ಅನುಸರಿಸಿ ನೀವೂ ಟ್ರೈ ಮಾಡಿ.

ಕಡಲೆ ಉಸುಳಿ
ಕಡಲೆ ಉಸುಳಿ

ನೀವು ಹಸಿ ಕಡಲೆ ಅಥವಾ ಬೀಸಿದ ಕಡಲೆಯಿಂದ ಉಸುಳಿ ಮಾಡಬಹುದು. ಇದನ್ನು ಮಾಡುವುದು ತುಂಬಾ ಸುಲಭ. ಹಾಗೂ ಚೌತಿಯ ದಿನದಂದು ನೀವು ಇದನ್ನು ಮಾಡಿ ಗಣಪನಿಗೆ ನೈವೇದ್ಯಕ್ಕಿಟ್ಟರೆ ಇನ್ನು ಒಳ್ಳೆಯದು. ಯಾಕೆಂದರೆ ಕಡಲೆ ಗಣಪತಿಗೆ ಇಷ್ಟವಾದ ಕಾಳು. ಹಾಗಾಗಿ ಈ ಚೌತಿಯನ್ನು ನಿಮ್ಮ ಮನೆಯಲ್ಲಿ ನೀವು ಕಡಲೆ ಉಸುಳಿ ಮಾಡಿ ದೇವರ ಮುಂದೆ ಇಟ್ಟು ನಂತರ ಪ್ರಸಾದ ರೂಪದಲ್ಲಿ ಸ್ವೀಕರಿಸಿ.

ಕಡಲೆ ಉಸುಳಿ ಮಾಡಲು ಬೇಕಾಗುವ ಸಾಮಗ್ರಿಗಳು

ಬೇಯಿಸಿದ ಕಡಲೆ ಕಾಳು

ಕೊತ್ತಂಬರಿ ಬೀಜ

ಸಾಸಿವೆ

ಜೀರಿಗೆ

ಕರಿಬೇವು

ಹಸಿಮೆಣಸಿನಕಾಯಿ

ಶುಂಠಿ

ಕಾಯಿತುರಿ

ಇವುಗಳೆಲ್ಲವೂ ರೆಡಿ ಇಟ್ಟುಕೊಳ್ಳಿ.

ಮಾಡುವ ವಿಧಾನ

ಮೊದಲಿಗೆ ನೀವು ಕುಕ್ಕರ್ ನಲ್ಲಿ ಕಡಲೆಕಾಳುಗಳನ್ನು ಹಾಕಿ ನಾಲ್ಕು ವಿಷಲ್ ಆಗುವವರೆಗೆ ಕೂಗಿಸಿಕೊಳ್ಳಿ. ನಂತರ ಅದು ಚೆನ್ನಾಗಿ ಬೆಂದಿದೆಯೇ ಎಂದು ಚೆಕ್ ಮಾಡಿ. ಅದು ಸರಿಯಾಗಿ ಬೆಂದಿದ್ದರೆ ಮಾತ್ರ ಕುಕ್ಕರ್ ಇಳಿಸಿ, ಇಲ್ಲವೆಂದರೆ ಇನ್ನೊಂದು ಸೀಟಿ ಕೂಗಿಸಿ. ಆನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ ಸಾಸಿವೆ, ಅರಿಶಿಣ,ಜೀರಿಗೆ, ಕರಿಬೇವಿನ ಸೊಪ್ಪು ಇವೆಲ್ಲವನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಬೇಕಿದ್ರೆ ಉದ್ದಿನ ಬೇಳೆಯನ್ನು ಹಾಕಬಹುದು ಅಗತ್ಯವಿಲ್ಲ. ನಂತರ ಬೇಯಿಸಿದ ಕಾಳುಗಳನ್ನೆಲ್ಲ ಅದಕ್ಕೆ ಹಾಕಿ ಮೇಲಿನಿಂದ ತೆಂಗಿನ ತುರಿಯನ್ನು ಉದುರಿಸಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ಚೆನ್ನಾಗಿ ಮಿಕ್ಸ್ ಆದ ನಂತರ ಇದು ರೆಡಿಯಾಗಿರುತ್ತದೆ.

ನೀವು ಇದಕ್ಕೆ ಬೆಲ್ಲ ಸೇರಿಸಿ ಬೆಲ್ಲದ ಉಸುಳಿಯನ್ನು ಸಹ ಮಾಡಿಕೊಳ್ಳಬಹುದು. ನಿಮಗೆ ಖಾರ ಬೇಡ ಎಂದಾದರೆ ನೀವು ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಲ್ಲವನ್ನು ಸೇರಿಸಿಕೊಂಡು ನಂತರ ಅದನ್ನು ಚೆನ್ನಾಗಿ ಬೇಯಿಸಿ. ಇದರ ಸ್ವಾದವೂ ತುಂಬಾ ಚೆನ್ನಾಗಿರುತ್ತದೆ.

ಇದನ್ನು ಮಾಡಲು ಕಾಬುಲ್ ಕಡಲೆ ಬಳಸಬಹುದೇ ಎಂಬ ಪ್ರಶ್ನೆ ನಿಮಗೆ ಬಂದಿರಬಹುದು. ಇದನ್ನು ಮಾಡಲು ನೀವು ಕಾಬುಲ್ ಕಡಲೆಯನ್ನೂ ಸಹ ಬಳಕೆ ಮಾಡಬಹುದು. ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಆದರೆ ಸ್ವಲ್ಪ ಬೇರೆ ರೀತಿಯ ರುಚಿಯನ್ನು ಇದು ನೀಡುತ್ತದೆ. ಆದರೆ ಎರಡೂ ಕಡಲೆಯಲ್ಲೂ ತುಂಬಾ ಚೆನ್ನಾಗಿಯೇ ಇದು ಬರುತ್ತದೆ. ಇನ್ನು ಚಿಕ್ಕ ಕಡಲೆ ಆಗಿದ್ದಲ್ಲಿ ಅದಕ್ಕೆ ಕಾಯಿತುರಿ ಮತ್ತು ಸಕ್ಕರೆ ಇಷ್ಟನ್ನೇ ಸೇರಿಸಿಕೊಡ ತಿನ್ನಬಹುದು.

ಕಡಲೆ ಕಾಳಿನ ಪಾಯಸ
ಕಡಲೆಕಾಳಿನ ಪಾಯಸವನ್ನು ಮಾಡುವ ವಿಧಾನ ಹೀಗಿದೆ.

ಬೇಕಾಗುವ ಸಾಮಗ್ರಿಗಳು:

ಕಡಲೆಕಾಳು

ಬೆಲ್ಲ

ಉಪ್ಪು

ಏಲಕ್ಕಿ ಪುಡಿ

ಕಾಯಿತುರಿ

ಹಾಲು

ಮಾಡುವ ವಿಧಾನ:

1. ಕಡಲೆಕಾಳನ್ನು ಬೇಯಿಸಿ.

2. ಬೆಲ್ಲ, ಉಪ್ಪು, ಏಲಕ್ಕಿ ಪುಡಿ, ಮತ್ತು ಕಾಯಿತುರಿಯನ್ನು ಹಾಕಿ ಕುದಿಸಿ.

3. ಹಾಲನ್ನು ಹಾಕಿ ಕುದಿಸಿ.

4. ಹಾಲನ್ನು ಹಾಕಿ ಕುದಿಸಿದಾಗ ಮಾತ್ರ ಅದರ ಸ್ವಾದ ಹೆಚ್ಚಾಗುತ್ತದೆ ಹಾಗಾಗಿ ನೀರನ್ನು ಅಷ್ಟಾಗಿ ಆಮೇಲೆ ಹಾಕಬೇಡಿ.

5. ಒಂದು ಅರ್ಧ ಚಿಟಿಕೆ ಉಪ್ಪನ್ನು ಸೇರಿಸಿ ಸವಿಯಿರಿ