Lemon Pickle: ಅರ್ಧಗಂಟೆಯಲ್ಲಿ ರೆಡಿಯಾಗುತ್ತೆ ನಿಂಬೆಹಣ್ಣಿನ ಈ ದಿಢೀರ್ ಉಪ್ಪಿನಕಾಯಿ; ಒಂದೇ ಭಾರಿ ಅನುಭವಿಸಿ ಸಿಹಿ-ಹುಳಿ ಸ್ವಾದ!-how to make sweet and sour lemon pickle at home easy recipe in kannada smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Lemon Pickle: ಅರ್ಧಗಂಟೆಯಲ್ಲಿ ರೆಡಿಯಾಗುತ್ತೆ ನಿಂಬೆಹಣ್ಣಿನ ಈ ದಿಢೀರ್ ಉಪ್ಪಿನಕಾಯಿ; ಒಂದೇ ಭಾರಿ ಅನುಭವಿಸಿ ಸಿಹಿ-ಹುಳಿ ಸ್ವಾದ!

Lemon Pickle: ಅರ್ಧಗಂಟೆಯಲ್ಲಿ ರೆಡಿಯಾಗುತ್ತೆ ನಿಂಬೆಹಣ್ಣಿನ ಈ ದಿಢೀರ್ ಉಪ್ಪಿನಕಾಯಿ; ಒಂದೇ ಭಾರಿ ಅನುಭವಿಸಿ ಸಿಹಿ-ಹುಳಿ ಸ್ವಾದ!

Instant lemon pickle: ಮನೆಯಲ್ಲಿ ಉಪ್ಪಿನಕಾಯಿ ಖಾಲಿಯಾಗಿದೆ, ಅಥವಾ ದಿನ ಒಂದೇ ರೀತಿಯ ಉಪ್ಪಿನಕಾಯಿ ತಿಂದು ಬೋರಾಗಿದೆ ಎಂದರೆ ಅರ್ಧಗಂಟೆಯಲ್ಲಿ ರೆಡಿಯಾಗುತ್ತೆ ನಿಂಬೆಹಣ್ಣಿನ ಈ ದಿಢೀರ್ ಉಪ್ಪಿನಕಾಯಿ; ಒಂದೇ ಭಾರಿ ಅನುಭವಿಸಿ ಸಿಹಿ-ಹುಳಿ ಸ್ವಾದ! ಉತ್ತಮ ರುಚಿ ಹಾಗೂ ಸರಳ ವಿಧಾನದೊಂದಿಗೆ ಹೇಗೆ ಇದನ್ನು ತಯಾರಿಸುವುದು ಎಂಬುದನ್ನು ನಾವಿಲ್ಲಿ ತಿಳಿಸಿಕೊಟ್ಟಿದ್ದೇವೆ.

ನಿಂಬೆಹಣ್ಣಿನ ಉಪ್ಪಿನಕಾಯಿ
ನಿಂಬೆಹಣ್ಣಿನ ಉಪ್ಪಿನಕಾಯಿ

ಮನೆಯಲ್ಲಿ ಉಪ್ಪಿನಕಾಯಿ ಖಾಲಿಯಾಗಿದೆ, ಅಥವಾ ದಿನ ಒಂದೇ ರೀತಿಯ ಉಪ್ಪಿನಕಾಯಿ ತಿಂದು ಬೋರಾಗಿದೆ ಎಂದರೆ ನೀವು ಈ ರೀತಿಯಾಗಿ ದಿಢೀರ್‌f ಉಪ್ಪಿನಕಾಯಿ ಮಾಡಿಕೊಳ್ಳಬಹುದು. ನಿಂಬೆಹಣ್ಣಿನ ದಿಢೀರ್ ಉಪ್ಪಿನಕಾಯಿ ಮಾಡಲು ಕೆಲವೇ ಕೆಲವು ಸಾಮಗ್ರಿಗಳು ಹಾಗೂ ಸ್ವಲ್ಪವೇ ಸಮಯ ಸಾಕು. ನೀವು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ. ಉತ್ತಮ ರುಚಿ ಹಾಗೂ ಸರಳ ವಿಧಾನದೊಂದಿಗೆ ಹೇಗೆ ಇದನ್ನು ತಯಾರಿಸುವುದು ಎಂಬುದನ್ನು ನಾವಿಲ್ಲಿ ತಿಳಿಸಿಕೊಟ್ಟಿದ್ದೇವೆ.

ಇದಕ್ಕೆ ಬೇಕಾಗುವ ಪದಾರ್ಥಗಳು

ಲಿಂಬು
ಉಪ್ಪು
ಬೆಲ್ಲ ಅಥವಾ ಸಕ್ಕರೆ
ಖಾರದಪುಡಿ (ಗುಂಟೂರು ಖಾರ ಬೆಸ್ಟ್)

ನಿಂಬೆಹಣ್ಣಿನ ಉಪ್ಪಿನ ಕಾಯಿ ಮಾಡುವ ವಿಧಾನ

ಮೊದಲಿಗೆ ನೀವು ನಿಂಬೆಹಣ್ಣುಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ಚೆನ್ನಾಗಿ ತೊಳೆದು ನಂತರ ಅದನ್ನು ಕಟ್ ಮಾಡಬೇಕು. ಒಂದು ಲಿಂಬೆಯಲ್ಲಿ ಎಂಟು ಹೋಳುಗಳನ್ನು ಮಾಡಬೇಕು.

ಈ ರೀತಿ ಮಾಡಿದ ನಂತರ ಅದಕ್ಕೆ ಗುಂಟೂರು ಖಾರದಪುಡಿಯನ್ನು ಬೆರೆಸಬೇಕು. ಸ್ವಲ್ಪ ಜಾಸ್ತಿ ಪ್ರಮಾಣದಲ್ಲಿ ಬೆರೆಸಿದರೆ ರುಚಿ ಹೆಚ್ಚಾಗಿ ಬರುತ್ತದೆ. ನಂತರ ಇದಕ್ಕೆ ಸಾಕಷ್ಟು ಉಪ್ಪು ಹಾಕಬೇಕು. ಅದಾದ ನಂತರ ಒಂದು ಬಟ್ಟಲು ಸಕ್ಕರೆಯನ್ನು ಇದಕ್ಕೆ ಸೇರಿಸಿ. ಇಷ್ಟೆಲ್ಲಾ ಆದ ನಂತರ ನೀವು ಇದನ್ನ ಬೇಯಿಸಬೇಕಾಗುತ್ತದೆ. ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಒಂದು ಕುಕ್ಕರ್‌ನ ತಳದಲ್ಲಿ ಸ್ವಲ್ಪವೇ ಸ್ವಲ್ಪ ನೀರು ಹಾಕಿ, ಅದರ ಮೇಲೆ ಎಲ್ಲಾ ಮಿಶ್ರಣಗಳನ್ನು ಹಾಕಿ ಪಾತ್ರೆ ಇಡಿ. ಆ ಪಾತ್ರೆ ಒಳಗಡೆ ನೀರು ಹೋಗದಂತೆ ಮೇಲಿನಿಂದ ಪ್ಲೇಟ್ ಮುಚ್ಚಿ. ನಂತರ ಒಂದೆರಡು ವಿಷಲ್ ಕೂಗಿಸಿ.

ಇದಾದ ನಂತರ ತೆಳುವಾದ ದ್ರವ ನಿಮಗೆ ಕಾಣಿಸುತ್ತದೆ. ಉಪ್ಪಿನಕಾಯಿ ಯಾಕೆ ಇಷ್ಟು ತೆಳುವಾಗಿದೆ? ಎಂದು ನೀವು ಅಂದುಕೊಳ್ಳಬಹುದು. ಆದರೆ ನಂತರದಲ್ಲಿ ಇದನ್ನು ಎರಡು ಕುದಿ ಬರುವವರೆಗೆ ಕಾಯಿಸಿಕೊಳ್ಳಬೇಕು. ಹೇಗೆ ಕಾಯಿಸಿದಾಗ ಇದು ಮಂದವಾದ ಮಿಶ್ರಣವಾಗುತ್ತದೆ. ಮತ್ತೊಮ್ಮೆ ಕುದಿಸುವ ಸಂದರ್ಭದಲ್ಲಿ ನೀವು ಇದರ ರುಚಿಯನ್ನು ನೋಡಿ ಇದಕ್ಕೆ ಉಪ್ಪು ಸಕ್ಕರೆ ಇವುಗಳೆಲ್ಲ ಸರಿಯಾಗಿ ಇದೆ ಎಂದು ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ. ಎಲ್ಲಾ ಸರಿಯಾಗಿದೆ ಎಂದರೆ ಹಾಗೆ ಕುದಿಸಿ. ಏನಾದರೂ ಕಡಿಮೆ ಆಗಿದ್ದರೆ ಅದಕ್ಕೆ ಮತ್ತೆ ಎಲ್ಲವನ್ನು ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿಕೊಳ್ಳಿ.

ಎಷ್ಟು ದಿನ ಇಡಬಹುದು?

ಕೇವಲ ಅರ್ಧ ಗಂಟೆ ಒಳಗಡೆ ಉಪ್ಪಿನಕಾಯಿ ರೆಡಿ ಆಗುತ್ತದೆ. ತುಂಬಾ ರುಚಿಯಾಗಿರುತ್ತದೆ. ನೀವು ಕೂಡ ನಿಮ್ಮ ಮನೆಯಲ್ಲಿ ಇದನ್ನು ಟ್ರೈ ಮಾಡಿ. ಇನ್ನು ಇದನ್ನು ಎಷ್ಟು ದಿನಗಳವರೆಗೆ ಇಡಬಹುದು ಎಂಬ ಅನುಮಾನ ನಿಮಗೆ ಇದ್ದರೆ ಇದನ್ನು ಫ್ರಿಜ್ನಲ್ಲಿ ಇಟ್ಟರೆ ಒಂದು ತಿಂಗಳುಗಳ ಕಾಲ ಬಳಸಬಹುದು. ಆದರೆ ಇದಕ್ಕೆ ಯಾವುದೇ ನೀರನ್ನು ಮಿಶ್ರಣ ಮಾಡಬೇಡಿ. ಅಥವಾ ಪದೇ ಪದೇ ಇದನ್ನು ಓಪನ್ ಮಾಡಬೇಡಿ. ನೋಡಿದ್ರಲ್ಲ ಎಷ್ಟು ಸುಲಭವಾಗಿ ಇದನ್ನ ಮಾಡಬಹುದು ಅಂತ ಇನ್ಯಾಕೆ ತಡ? ನೀವು ನಿಮ್ಮ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ.

mysore-dasara_Entry_Point