Mosquitoes: ಬಾಳೆಹಣ್ಣಿನ ಸಿಪ್ಪೆ ಬಳಸಿ ಮನೆಯಲ್ಲಿರುವ ಸೊಳ್ಳೆಗಳನ್ನು ಓಡಿಸಿ, ಸೊಳ್ಳೆಕಾಟದಿಂದ ಬೇಸತ್ತವರಿಗೆ ಸಾವಯವ ಉಪಾಯ
ಕನ್ನಡ ಸುದ್ದಿ  /  ಜೀವನಶೈಲಿ  /  Mosquitoes: ಬಾಳೆಹಣ್ಣಿನ ಸಿಪ್ಪೆ ಬಳಸಿ ಮನೆಯಲ್ಲಿರುವ ಸೊಳ್ಳೆಗಳನ್ನು ಓಡಿಸಿ, ಸೊಳ್ಳೆಕಾಟದಿಂದ ಬೇಸತ್ತವರಿಗೆ ಸಾವಯವ ಉಪಾಯ

Mosquitoes: ಬಾಳೆಹಣ್ಣಿನ ಸಿಪ್ಪೆ ಬಳಸಿ ಮನೆಯಲ್ಲಿರುವ ಸೊಳ್ಳೆಗಳನ್ನು ಓಡಿಸಿ, ಸೊಳ್ಳೆಕಾಟದಿಂದ ಬೇಸತ್ತವರಿಗೆ ಸಾವಯವ ಉಪಾಯ

Mosquitoes: ಮನೆಯಲ್ಲಿ ತುಂಬುವ ಸೊಳ್ಳೆಗಳನ್ನು ಓಡಿಸಲು ನಾವೆಲ್ಲ ಸುರಕ್ಷಿತವಲ್ಲದ ರಾಸಾಯನಿಕ ಆಧರಿತ ಉತ್ಪನ್ನಗಳನ್ನು (mosquito repellent) ಬಳಸುತ್ತೇವೆ. ಇದರ ಬದಲು ನಾವು ಇಂದು ಬಾಳೆಹಣ್ಣಿನ ಸಹಾಯದಿಂದ ಸೊಳ್ಳೆಗಳನ್ನು ಹೇಗೆ ಹಿಮ್ಮೆಟ್ಟಿಸಬಹುದು ಎಂಬ ತಂತ್ರವನ್ನು ಹೇಳುತ್ತಿದ್ದೇವೆ.

Mosquitoes: ಬಾಳೆಹಣ್ಣಿನ ಸಿಪ್ಪೆ ಬಳಸಿ ಮನೆಯಲ್ಲಿರುವ ಸೊಳ್ಳೆಗಳನ್ನು ಓಡಿಸಿ
Mosquitoes: ಬಾಳೆಹಣ್ಣಿನ ಸಿಪ್ಪೆ ಬಳಸಿ ಮನೆಯಲ್ಲಿರುವ ಸೊಳ್ಳೆಗಳನ್ನು ಓಡಿಸಿ (Shutterstock)

Mosquito repellent: ಬಡವರ ಮನೆಯಿರಲಿ, ಶ್ರೀಮಂತರ ಮನೆಯಿರಲಿ, ಸೊಳ್ಳೆ ಕಾಟ ಎಲ್ಲರಿಗೂ ಒಂದೇ ರೀತಿ ಇರುತ್ತದೆ. ಈಗಿನ ವೈರಲ್‌ ಫಿವರ್‌, ಡೆಂಗೆ, ಚಿಕನ್‌ ಗುನ್ಯಾ ಕಾಲದಲ್ಲಿ ಸೊಳ್ಳೆಯೆಂದರೆ ಭಯಪಡುವಂತೆ ಇದೆ. ಶಾಲೆಗೆ ನಗುತ್ತಾ ಹೋದ ಮಕ್ಕಳು ಬರುವಾಗ ಜ್ವರದಲ್ಲಿ ಕಾದು ಬರಲು ಇದೇ ಸೊಳ್ಳೆಗಳು ಕಾರಣವಾಗುತ್ತವೆ. ಜ್ವರವು ಒಬ್ಬರಿಂದ ಒಬ್ಬರಿಗೆ ಹರಡಲು ಸೊಳ್ಳೆಗಳು ಪ್ರಮುಖ ಕಾರಣವಾಗಿವೆ. ಆದರೆ, ಸೊಳ್ಳೆಗಳನ್ನು ಓಡಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಎಷ್ಟೇ ಕ್ವಾಯಿಲ್‌ ಸುಟ್ಟರೂ ಹೊಗೆಯ ಮೇಲೆಯೇ ಸೊಳ್ಳೆಗಳು ಹಾಡುಹಾಡುತ್ತ ಸಾಗುತ್ತ ಇರುತ್ತವೆ. ದುಬಾರಿ ಲಿಕ್ವಿಡ್‌ ಮಸ್ಕಿಟೊ ರೆಪ್ಲೆಂಟ್‌ ತಂದರೂ ಸೊಳ್ಳೆಗಳು ಅಡಗಿ ಮತ್ತೆ ಬರುತ್ತವೆ. ಮಲೇರಿಯಾದಂತಹ ಜ್ವರ ಹರಡದಂತೆ ನೋಡಲು, ಇಂತಹ ಜ್ವರಗಳಿಂದ ನಿಮ್ಮನ್ನು ಮತ್ತು ಕುಟುಂಬದವರನ್ನು ರಕ್ಷಿಸಲು ಸೊಳ್ಳೆಯನ್ನು ಓಡಿಸುವುದು ಅನಿವಾರ್ಯ. ಸೊಳ್ಳೆ ನಿವಾರಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹೆಚ್ಚುತ್ತಿವೆ. ಆದರೆ ಅವುಗಳನ್ನು ಬಳಸುವುದರಿಂದ ಗಾಳಿಯಲ್ಲಿ ಅನೇಕ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಅವು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾವುದೇ ರಾಸಾಯನಿಕಗಳನ್ನು ಬಳಸದೆ ಕೇವಲ ಬಾಳೆಹಣ್ಣಿನಿಂದ ಸೊಳ್ಳೆಗಳನ್ನು ಹಿಮ್ಮೆಟ್ಟಿಸಬಹುದು. ಬಾಳೆಹಣ್ಣಿನ ಸಿಪ್ಪೆ ನಿಷ್ಪ್ರಯೋಜಕ ಎಂದುಕೊಳ್ಳಬೇಡಿ. ಸೊಳ್ಳೆ ಓಡಿಸಲು ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಬಹುದು. ಆದರೆ, ಇದು ವೈಜ್ಞಾನಿಕವಾಗಿ ಸಾಬೀತಾಗದೆ ಇದ್ದರೂ ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಸಹಕಾರಿ ಎನ್ನುವುದು ಈಗಾಗಲೇ ಸಾಬೀತಾಗಿದೆ.

ವಿಧಾನ 1: ಬಾಳೆಹಣ್ಣು ಸಿಪ್ಪೆ ಬಳಸಿ ಸೊಳ್ಳೆಗಳನ್ನು ಓಡಿಸಿ

ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಬಾಳೆಹಣ್ಣು ತುಂಬಾ ಉಪಯುಕ್ತವಾಗಿದೆ. ಇದಕ್ಕಾಗಿ ನೀವು ಕಷ್ಟಪಡುವ ಅಗತ್ಯವಿಲ್ಲ. ಮಲಗುವ ಒಂದು ಗಂಟೆ ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ಕೋಣೆಯ ನಾಲ್ಕು ಮೂಲೆಗಳಲ್ಲಿ ಇಡಬೇಕು. ಬಾಳೆಹಣ್ಣಿನ ಸಿಪ್ಪೆಯ ವಾಸನೆಯು ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ. ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದರೆ ಅಥವಾ ಉಸಿರಾಟದ ತೊಂದರೆ ಅಥವಾ ಆಸ್ತಮಾ ಹೊಂದಿರುವ ಯಾರಾದರೂ ಇದ್ದರೆ, ನೀವು ರಾಸಾಯನಿಕ ಆಧಾರಿತ ಉತ್ಪನ್ನಗಳ ಬದಲಿಗೆ ಈ ವಿಧಾನವನ್ನು ಪ್ರಯತ್ನಿಸಿ ನೋಡಬಹುದು.

ವಿಧಾನ 2:  ಬಾಳೆಹಣ್ಣಿನ ಸಿಪ್ಪೆಯ ಪೇಸ್ಟ್‌

ಬಾಳೆಹಣ್ಣಿನ ಸಿಪ್ಪೆಯ ಪೇಸ್ಟ್‌ ಅನ್ನು ಕೂಡ ಸೊಳ್ಳೆ ಓಡಿಸಲು ಬಳಸಬಹುದು. ಇದಕ್ಕಾಗಿ ಬಾಳೆಹಣ್ಣಿನ ಸಿಪ್ಪೆಗಳನ್ನು ಸುಳಿದು ಮಿಕ್ಸಿಗೆ ಹಾಕಿ ಪೇಸ್ಟ್‌ ಮಾಡಿಕೊಳ್ಳಿ. ಈ ಪೇಸ್ಟ್‌ ಅನ್ನು ಮನೆಯ ಮೂಲೆಮೂಲೆಗಳಿಗೆ ಹಚ್ಚಿ. ಇದರ ವಾಸನೆಯು ಸೊಳ್ಳೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನ ಸಿಪ್ಪೆಯ ವಾಸನೆ ಸೊಳ್ಳೆಗಳಿಗೆ ಇಷ್ಟವಿಲ್ಲ. ಬಾಳೆಹಣ್ಣು ಇರುವ ಕಡೆ ಸೊಳ್ಳೆಗಳು ಬರುವುದು ಕಡಿಮೆ. ಬೇರೆ ಸಣ್ಣ ಹುಳಗಳು, ಕೀಟಗಳು ಬರಬಹುದು!

ವಿಧಾನ 3: ಬಾಳೆಹಣ್ಣಿನ ಸಿಪ್ಪೆಯ ಹೊಗೆ

ಬಾಳೆಹಣ್ಣಿನ ಸಿಪ್ಪೆಯನ್ನು ಸುಡುವುದರಿಂದಲೂ ಸೊಳ್ಳೆಗಳನ್ನು ಓಡಿಸಬಹುದು. ಇದಕ್ಕಾಗಿ ಬಾಳೆಹಣ್ಣಿನ ಸಿಪ್ಪೆಗಳನ್ನು ಒಣಗಿಸಿ ಇಟ್ಟುಕೊಳ್ಳಿ. ಇದನ್ನು ಧೂಪದಂತೆ ಹೊಗೆಬರಿಸಿ. ಸೊಳ್ಳೆಗಳು ಈ ಹೊಗೆಯನ್ನು ಇಷ್ಟಪಡುವುದಿಲ್ಲ. ಈ ವಾಸನೆ ಮತ್ತು ಹೊಗೆಯು ನಿಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆ ಮಾಡುವುದಿದಿಲ್ಲ. ಇದನ್ನು ಸಾವಯವ ಸೊಳ್ಳೆ ನಿವಾರಕ ಎಂದರೂ ತಪ್ಪಾಗದು.

ಸೊಳ್ಳೆಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ವಿಶೇಷವಾಗಿ ಡೆಂಗ್ಯೂ ಮಾರಣಾಂತಿಕವಾಗಬಹುದು. ಇತ್ತೀಚೆಗೆ ಮಳೆ ಹೆಚ್ಚಾಗಿತ್ತು. ಮಳೆ ಬಿಟ್ಟ ನಂತರ ಸೊಳ್ಳೆಗಳ ಉಪಟಳ ಹೆಚ್ಚಾಗಿದೆ. ಮಲೇರಿಯಾ, ಡೆಂಗ್ಯೂನಂತಹ ಜ್ವರಗಳಿಂದ ನೀವು ಮತ್ತು ನಿಮ್ಮ ಕುಟುಂಬದವರು ಪಾರಾಗಲು ಬಾಳೆಹಣ್ಣಿನ ಸಿಪ್ಪೆಯನ್ನು ಮಸ್ಕಿಟೊ ರೆಪೆಲಂಟ್‌ ಆಗಿ ಬಳಸಿ ನೋಡಿ.

Whats_app_banner